AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮದಗಜ’ ನಿರ್ದೇಶಕ ಮಹೇಶ್​ಗೆ ‘ರಾಬರ್ಟ್’​ ನಿರ್ಮಾಪಕ ಉಮಾಪತಿಯಿಂದ ದುಬಾರಿ ಕಾರ್ ಗಿಫ್ಟ್​!

ಮದಗಜ ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್​ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು ಚಿತ್ರದಲ್ಲಿ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ.

'ಮದಗಜ' ನಿರ್ದೇಶಕ ಮಹೇಶ್​ಗೆ 'ರಾಬರ್ಟ್'​ ನಿರ್ಮಾಪಕ ಉಮಾಪತಿಯಿಂದ ದುಬಾರಿ ಕಾರ್ ಗಿಫ್ಟ್​!
ಮಹೇಶ್​ ಕುಮಾರ್​ಗೆ ಕಾರ್​ ಗಿಫ್ಟ್​ ಮಾಡಿದ ಉಮಾಪತಿ ಶ್ರೀನಿವಾಸ್
ರಾಜೇಶ್ ದುಗ್ಗುಮನೆ
|

Updated on: Mar 24, 2021 | 9:18 PM

Share

ರಾಬರ್ಟ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡುತ್ತಿದೆ. ಈ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಇದೇ ಖುಷಿಗೆ ಚಿತ್ರತಂಡ ಸಕ್ಸಸ್​ ಮೀಟ್​ ಕೂಡ ಮಾಡಿತ್ತು. ಅಚ್ಚರಿ ಎಂದರೆ, ಮದಗಜ ನಿರ್ದೇಶಕ ಮಹೇಶ್​ ಕುಮಾರ್​​ಗೆ ‘ರಾಬರ್ಟ್​’ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಕಾರ್ ಗಿಫ್ಟ್ ಮಾಡಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ‘ರಾಬರ್ಟ್​’ ಸಿನಿಮಾ ನಿರ್ಮಾಣ ಮಾಡಿ ಯಶಸ್ಸು ಕಂಡಿರುವ ಉಮಾಪತಿ ಶ್ರೀನಿವಾಸ್​ ಅವರೇ ಶ್ರೀಮುರುಳಿ ನಟನೆಯ ‘ಮದಗಜ’ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರದ ಡಬ್ಬಿಂಗ್​ ರೈಟ್ಸ್​ ಸೇರಿ ಅನೇಕ ವಿಚಾರದಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಇದೇ ಖುಷಿಗೆ ಉಮಾಪತಿ ಅವರು ಮಹೇಶ್​ಗೆ ಹ್ಯುಂಡೈ ವೆನ್ಯು ಕಾರನ್ನು ಗಿಫ್ಟ್​ ಆಗಿ ನೀಡಿದ್ದಾರೆ.

ಮಹೇಶ್​ ಅವರಿಗೆ ಕಾರ್ ಗಿಫ್ಟ್​ ನೀಡೋಕೆ ಮತ್ತೊಂದು ಕಾರಣವಿದೆ. ರಾಬರ್ಟ್​ ಸಿನಿಮಾ ಸಂದರ್ಭದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ಮಹೇಶ್​ ತಾವೇ ತೆಗೆದುಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ರಾಬರ್ಟ್​ ಸಕ್ಸಸ್​ ಮೀಟ್​ನ ವೇದಿಕೆಯಲ್ಲಿ ಈ ಬಗ್ಗೆ ದರ್ಶನ್​ ಹಾಗೂ ಉಮಾಪತಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಮಹೇಶ್​ಗೆ ಕಾರನ್ನು ಗಿಫ್ಟ್​ ನೀಡೋಕೆ ಇದು ಕೂಡ ಒಂದು ಕಾರಣವಾಗಿದೆ. ಸದ್ಯ, ಕಾರನ್ನು ಗಿಫ್ಟ್​ ಪಡೆದಿರುವ ಮಹೇಶ್​ ಸಖತ್​ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ, ಉಮಾಪತಿ ಅವರಿಗೆ ಧನ್ಯವಾದ ಕೂಡ ಹೇಳಿದ್ದಾರೆ.

ಮದಗಜ ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್​ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು ಚಿತ್ರದಲ್ಲಿ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರ್​ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ನವೀನ್​ ಕುಮಾರ್​ ಕ್ಯಾಮರಾ ಕೈಚಳಕ ಈ ಸಿನಿಮಾಗೆ ಇರಲಿದೆ.

ರಾಬರ್ಟ್​ ವಿಜಯ ಯಾತ್ರೆ

ರಾಬರ್ಟ್​ ಸಿನಿಮಾ ಗೆದ್ದರೆ ರಾಜ್ಯಾದ್ಯಂತ ಸಂಚರಿಸಿ ವಿಜಯ ಯಾತ್ರೆ ಮಾಡಬೇಕು ಎಂಬ ಆಲೋಚನೆ ಚಿತ್ರತಂಡಕ್ಕಿತ್ತು. ಆ ಬಗ್ಗೆ ಆಲೋಚನೆ ಮಾಡುವುದಾಗಿ ಚಿತ್ರದ ಸಕ್ಸಸ್​ ಮೀಟ್​ನಲ್ಲಿ ದರ್ಶನ್​ ಕೂಡ ಹೇಳಿದ್ದರು. ಆ ಕುರಿತು ತಂಡ ನಿರ್ಧಾರ ತೆಗೆದುಕೊಂಡಿದ್ದು, ಈಗ ವಿಜಯ ಯಾತ್ರೆಯ ವೇಳಾಪಟ್ಟಿಯನ್ನು ಹಂಚಿಕೊಂಡಿದೆ. ಮಾ.29ರಿಂದ ದರ್ಶನ್​ ರಾಜ್ಯ ಸಂಚಾರ ಶುರು ಮಾಡಲಿದ್ದಾರೆ.

ಮಾ.29ರಂದು ತುಮಕೂರು, ಚಿತ್ರದುರ್ಗ, ದಾವಣಗೆರೆಗೆ ರಾಬರ್ಟ್​ ತಂಡದ ಜೊತೆ ದರ್ಶನ್​ ತೆರಳಲಿದ್ದಾರೆ. ಮಾ.30ರಂದು ಧಾರವಾಡ, ಹುಬ್ಬಳ್ಳಿ, ಹಾವೇರಿಗೆ ಭೇಟಿ ನೀಡಲಿದ್ದಾರೆ. ಮಾ.31ರಂದು ತಿಪಟೂರು, ಹಾಸನ ಹಾಗೂ ಶಿವಮೊಗ್ಗದ ಅಭಿಮಾನಿಗಳನ್ನು ದರ್ಶನ್​ ಭೇಟಿ ಆಗಲಿದ್ದಾರೆ. ಏ.1ರಂದು ಗಂಡ್ಲುಪೇಟೆ, ಮಂಡ್ಯ, ಮೈಸೂರು ಹಾಗೂ ಮದ್ದೂರಿಗೆ ಡಿ ಬಾಸ್​ ಭೇಟಿ ನೀಡಿದ್ದಾರೆ.

ರಾಜ್ಯಾದ್ಯಂತ ದರ್ಶನ್​ಗೆ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಪ್ರತಿ ವರ್ಷ ತಮ್ಮ ನೆಚ್ಚಿನ ನಟನ ಬರ್ತ್​ಡೇ ಆಚರಿಸಲು ಬೆಂಗಳೂರಿಗೆ ಬರುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಈ ಬಾರಿ ಸಾಧ್ಯವಾಗಿರಲಿಲ್ಲ. ಈಗ ಸ್ವತಃ ದರ್ಶನ್​ ಅವರೇ ಎಲ್ಲ ಜಿಲ್ಲೆಗಳಿಗೂ ತೆರಳಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುತ್ತಿರುವುದು ವಿಶೇಷ. ರಾಬರ್ಟ್​ ಸಿನಿಮಾದ ಅಭೂತಪೂರ್ವ ಗೆಲುವಿಗೆ ಕಾರಣರಾದ ತಮ್ಮ ಎಲ್ಲ ಅಭಿಮಾನಿಗಳಿಗೆ ಈ ವೇಳೆ ದರ್ಶನ್​ ಧನ್ಯವಾದ ತಿಳಿಸಲಿದ್ದಾರೆ.

ಇದನ್ನೂ ಓದಿ: ‘ರಾಬರ್ಟ್​’ ಸೂಪರ್​ ಹಿಟ್​ ಆದಮೇಲೂ ಚಿತ್ರತಂಡದಿಂದ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​! ಏನದು?

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ