ಅಧಿಕಪ್ರಸಂಗ ನಂಗೆ ಇಷ್ಟ ಆಗಲ್ಲ; ತಮ್ಮದೇ ಟೀಂನವರಿಗೆ ಎಚ್ಚರಿಕೆ ಕೊಟ್ಟ ನಿಧಿ ಸುಬ್ಬಯ್ಯ

ಮೊದಲ ಗೇಮ್​ನಲ್ಲಿ ಎದುರಾಳಿಯಾಗಿ ರಘು ಅವರನ್ನು ಬಿಳಿ ತಂಡದವರು ಆಯ್ಕೆ ಮಾಡಿಕೊಂಡಿದ್ದರು. ರಘುಗೆ ದೈಹಿಕ ಸಾಮರ್ಥ್ಯದ ಟಾಸ್ಕ್​ ನೀಡಲಾಗಿತ್ತು. ಈ ವೇಳೆ ರಘು ಸೋತು ಬಿಟ್ಟರು.

ಅಧಿಕಪ್ರಸಂಗ ನಂಗೆ ಇಷ್ಟ ಆಗಲ್ಲ; ತಮ್ಮದೇ ಟೀಂನವರಿಗೆ ಎಚ್ಚರಿಕೆ ಕೊಟ್ಟ ನಿಧಿ ಸುಬ್ಬಯ್ಯ
ನಿಧಿ ಸುಬ್ಬಯ್ಯ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on:Mar 23, 2021 | 7:06 AM

ಬಿಗ್​ ಬಾಸ್ ಮನೆಯಲ್ಲಿ ನಾಲ್ಕನೇ ವಾರ ಚದುರಂಗದಾಟ ಎನ್ನುವ ಹೊಸ ಟಾಸ್ಕ್​ ನೀಡಲಾಗಿದೆ. ಈ ಟಾಸ್ಕ್​ನಲ್ಲಿ ಎರಡು ತಂಡವನ್ನು ಬಿಗ್​ ಬಾಸ್ ಆಯ್ಕೆ ಮಾಡಿತ್ತು. ಸಾಮಾನ್ಯವಾಗಿ ಸ್ಪರ್ಧಿಗಳು ವಿರೋಧಿ ತಂಡದವರ ಮೇಲೆ ತಿರುಗಿ ಬೀಳೋದು ಸಾಮಾನ್ಯ. ಆದರೆ, ನಿಧಿ ತಮ್ಮದೇ ಟೀಂ ವಿರುದ್ಧ ತಿರುಗಿ ಬಿದ್ದಿದೆ. ಆಟದ ನಿಯಮದ ಪ್ರಕಾರ ಎರಡು ತಂಡಗಳಿರುತ್ತವೆ. ಒಂದು ತಂಡದ ಬಣ್ಣ ಕಪ್ಪು, ಮತ್ತೊಂದು ತಂಡದ ಬಣ್ಣ ಬಿಳಿ. ಪ್ರತೀ ತಂಡದಲ್ಲೂ ರಾಜ, ರಾಣಿ, ಕುದುರೆ, ಆನೆ, ಸೈನಿಕ, ಇರುತ್ತಾರೆ. ಅಷ್ಟೇ ಅಲ್ಲ ಪ್ರತಿ ತಂಡದ ರಾಜ ಎದುರಾಳಿಯನ್ನು ಆಯ್ಕೆ ಮಾಡಿಕೊಂಡು ಅವರಿಗೆ ಟಾಸ್ಕ್​ ನೀಡಬೇಕು.

ಮೊದಲ ಗೇಮ್​ನಲ್ಲಿ ಎದುರಾಳಿಯಾಗಿ ರಘು ಅವರನ್ನು ಬಿಳಿ ತಂಡದವರು ಆಯ್ಕೆ ಮಾಡಿಕೊಂಡಿದ್ದರು. ರಘುಗೆ ದೈಹಿಕ ಸಾಮರ್ಥ್ಯದ ಟಾಸ್ಕ್​ ನೀಡಲಾಗಿತ್ತು. ಈ ವೇಳೆ ರಘು ಸೋತು ಬಿಟ್ಟರು.

ಮುಂದಿನ ಟಾಸ್ಕ್​ ವಿಚಾರದ ಬಗ್ಗೆ ಬಿಳಿ ತಂಡದವರು ಚರ್ಚೆ ಮಾಡುತ್ತಿದ್ದರು. ಎದುರಾಳಿಗಳು ನಮ್ಮ ಟೀಂನಲ್ಲಿ ನಿಧಿ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು. ಅವರು ನಮ್ಮ ಟೀಂನಲ್ಲಿ ಸ್ವಲ್ಪ ವೀಕ್​ ಎಂದು ಪ್ರಶಾಂತ್​ ಸಂಬರಗಿ ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲ, ಟಾಸ್ಕ್​ ಬಂದಾಗ ಏನೇನು ಮಾಡಬೇಕು ಎಂಬುದನ್ನೂ ಬಿಳಿ ತಂಡದ ಸದಸ್ಯರೆಲ್ಲರೂ ಚರ್ಚಿಸಿದ್ದರು. ಈ ವಿಚಾರ ನಿಧಿಗೆ ಇಷ್ಟವಾಗಿಲ್ಲ.

ಎಲ್ಲರೂ ತಮ್ಮನ್ನು ದಡ್ಡನಂತೆ ನೋಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಅಂತ ನಿಧಿ ಎಂದುಕೊಂಡರು. ಅಷ್ಟೇ ಅಲ್ಲ, ಚಿಕ್ಕ ವಿಚಾರವನ್ನು ದೊಡ್ಡದು ಮಾಡಿ ಹೇಳುವ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡು ಒಮ್ಮೆಲೇ ಸಿಟ್ಟಾದರು.

ನಾನು ದಡ್ಡಿಯಲ್ಲ. ಅಧಿಕಪ್ರಸಂಗ ಮಾಡುವುದು ನಂಗೆ ಇಷ್ಟ ಆಗುವುದೇ ಇಲ್ಲ. ಇಷ್ಟು ಸಣ್ಣ ಸಣ್ಣ ವಿಚಾರ ಹೇಳಿ ನಂಗೆ ಇರಿಟೇಟ್​ ಮಾಡಬೇಡಿ ಎಂದು ಸಿಟ್ಟಾದರು ನಿಧಿ. ಅಷ್ಟೇ ಅಲ್ಲ, ತಮ್ಮದೇ ಟೀಂಗೆ ಆವಾಜ್​ ಹಾಕಿ ಹೋದರು. ಇದು ಬಿಳಿ ಟೀಂನ ಕೆಲ ಸದಸ್ಯರಿಗೆ ಇಷ್ಟವಾಗಿಲ್ಲ.

ಇದನ್ನೂ ಓದಿ: ಈ ಸಲ ಕಪ್​ ನಮ್ಮದೇ ಎಂದ ಬಿಗ್​ ಬಾಸ್​ ಸ್ಪರ್ಧಿಗೆ ಕಾದಿತ್ತು ಶಿಕ್ಷೆ!

Published On - 7:05 am, Tue, 23 March 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್