AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸಲ ಕಪ್​ ನಮ್ಮದೇ ಎಂದ ಬಿಗ್​ ಬಾಸ್​ ಸ್ಪರ್ಧಿಗೆ ಕಾದಿತ್ತು ಶಿಕ್ಷೆ!

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಯೋರ್ವ ಈ ಸಲ ಕಪ್​ ನಮ್ದೇ ಎಂದು ಹೇಳಿದ್ದಾರೆ. ಇದಕ್ಕೆ ಬಿಗ್​ ಬಾಸ್​ ಆ ಸ್ಪರ್ಧಿಗೆ ಶಾಕ್​ ನೀಡಿದೆ.

ಈ ಸಲ ಕಪ್​ ನಮ್ಮದೇ ಎಂದ ಬಿಗ್​ ಬಾಸ್​ ಸ್ಪರ್ಧಿಗೆ ಕಾದಿತ್ತು ಶಿಕ್ಷೆ!
ಬಿಗ್ ಬಾಸ್ ಕನ್ನಡ ಸೀಸನ್​ 8
ರಾಜೇಶ್ ದುಗ್ಗುಮನೆ
|

Updated on: Mar 22, 2021 | 10:02 PM

Share

ಈ ಸಲ ಕಪ್​ ನಮ್ಮದೇ ಅನ್ನೋ ವಾಕ್ಯವನ್ನು ಆರ್​ಸಿಬಿ ಫ್ಯಾನ್ಸ್​ ಹಲವು ವರ್ಷಗಳಿಂದ ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಅದು ಈವರೆಗೆ ಸಾಧ್ಯವಾಗಿಲ್ಲ. ಪ್ರತಿ ಬಾರಿ ಈ ಸಲ ಕಪ್​ ನಮ್ಮದೇ ಎಂದವರಿಗೆ ಕೇವಲ ನಿರಾಶೆ ಆಗುತ್ತಿತ್ತು. ಆದರೆ, ಈ ಬಾರಿ ಈ ಸಲ ಕಪ್​ ನಮ್ಮದೇ ಎಂದವರಿಗೆ ಶಾಕ್​ ಸಿಕ್ಕಿದೆ! ನಾವು ಹೇಳುತ್ತಿರುವ ಕತೆ ಬಿಗ್​ ಬಾಸ್​ ಮನೆಯದ್ದು. ಈ ಸಲ ಕಪ್​ ನಮ್ಮದೇ ಎಂದ ಮಂಜುಗೆ ಬಿಗ್ ಬಾಸ್​ ಮನೆಯಲ್ಲಿ ಶಿಕ್ಷೆ ಸಿಕ್ಕಿದೆ. 

ಕಳೆದ ವಾರ ದಿವ್ಯಾ ಸುರೇಶ್​ ಹಾಗೂ ಮಂಜು ಹರಟೆ ಹೊಡೆಯುತ್ತಿದ್ದರು. ಆಗ ಮಂಜು ಕಾಫಿ ಕಪ್​ ಇಡೋಕೆ ಹೋಗಿ ಕೆಳಕ್ಕೆ ಬೀಳಿಸಿದ್ದರು. ಆ ಕಪ್​ ಬಿದ್ದ ರಭಸಕ್ಕೆ ಒಡೆದೇ ಹೋಗಿತ್ತು. ಬಿಗ್​ ಬಾಸ್​ ಕೊಟ್ಟ ಕಪ್​ಅನ್ನು ಒಡೆದ ನಂತರ ಮಂಜುಗೆ ಅತೀವವಾಗಿ ಅಪರಾಧ ಮನೋಭಾವನೆ ಕಾಡಿತ್ತು. ಕಪ್​ ಒಡೆದು ಹಾಕಿದ್ದಕ್ಕೆ ಸಾರಿ ಬಿಗ್​ ಬಾಸ್​. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಗ್​ ಬಾಸ್​ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದರು. ನಾನು ಬೇಕಂತಲೇ ಇದನ್ನು ಒಡೆದಿಲ್ಲ. ಮಿಸ್​ ಆಗಿ ಬಿದ್ದು ಹೋಗಿದೆ. ಯಾರಿಗೂ ಗೊತ್ತಾಗದಂತೆ ಇದನ್ನು ಬಚ್ಚಿಡುತ್ತೇನೆ. ಆಮೇಲೆ ಸ್ಪರ್ಧಿಗಳ ಬಳಿ ನನ್ನ ಕಪ್​ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದ್ದರು ಮಂಜು.

ಈ ತಪ್ಪಿಗೆ ಮಂಜುಗೆ ಬಿಗ್​ ಬಾಸ್​ ಶಿಕ್ಷೆ ನೀಡಿದ್ದಾರೆ. ಮಂಜುಗೆ ಪುಟಾಣಿ ಕಪ್​ ಒಂದನ್ನು ನೀಡಲಾಗಿದೆ. ಈ ಕಪ್​ ನೀಡಿದ್ದು ಏಕೆ ಎಂಬುದನ್ನು ಹೇಳಿ ಎಂದು ಬಿಗ್​ ಬಾಸ್ ಮಂಜುಗೆ​ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಮಂಜು, ಈ ಸಲ ಆರ್​ಸಿಬಿ ಕಪ್​ ಗೆಲ್ಲಲಿದೆ. ಅದಕ್ಕೆ ಮುಂಚಿತವಾಗಿಯೇ ಕಪ್​ ಕಳಿಸಿದ್ದೀರಿ. ಈ ಸಲ ಕಪ್​ ನಮ್ಮದೇ ಎಂದು ಮಂಜು ಕೂಗಿದ್ದಾರೆ.

ಇದಕ್ಕೆ ಉತ್ತರಿಸಿರುವ ಬಿಗ್​ ಬಾಸ್​, ನೀವು ಬಿಗ್​ ಬಾಸ್​ ಕಪ್​ ಮುರಿದು ಹಾಕಿದ್ದೀರಾ. ಹೀಗಾಗಿ, ಬಿಗ್​ ಬಾಸ್ ಮುಂದಿನ ಆದೇಶದವರೆಗೂ ನೀರು, ಟೀ-ಕಾಫಿ ಕುಡಿಯೋಕೆ ಇದೇ ಕಪ್ ಬಳಕೆ ಮಾಡಬೇಕು ಎಂದು ಬಿಗ್​ ಬಾಸ್​ ಆದೇಶಿಸಿದೆ. ಬಿಗ್​ ಬಾಸ್​ ನೀಡಿರೋ ಹೊಸಾ ಕಪ್​ ತುಂಬಾನೇ ಸಣ್ಣದಾಗಿದೆ. ಅದರಲ್ಲಿ ಬರೋದು ಒಂದು ಸಿಪ್​ ಮಾತ್ರ. ಇದನ್ನು ನೋಡಿ ಮಂಜು ಕಂಗಾಲಾಗಿದ್ದಾರೆ. ಮನೆ ಮಂದಿ ಮಂಜುಗೆ ಇನ್ಮುಂದೆ ಕಷ್ಟವಿದೆ ಎಂದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ಕೂದಲಿಗೆ ಕತ್ತರಿ! ಇದು ಹೊಸಾ ಪನಿಶ್​ಮೆಂಟ್​?

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More