ಜ್ವಾಲಾ ಗುಟ್ಟಾ ಜತೆ ಮದುವೆ ಯಾವಾಗ ಎನ್ನುವ ಗುಟ್ಟು ಬಿಟ್ಟುಕೊಟ್ಟ ವಿಷ್ಣು ವಿಶಾಲ್

ಜ್ವಾಲಾ ಆರನೇ ವಯಸ್ಸಿನಿಂದಲೇ ಬ್ಯಾಡ್ಮಿಂಟನ್ ಆಡಲು ಶುರು ಮಾಡಿದ್ದರು. ವಿಷ್ಣಯ ಸುಮಾರು 15 ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ವಿಷ್ಣು ಅವರು ಜ್ವಾಲಾಗಿಂತ ಎರಡು ವರ್ಷ ಚಿಕ್ಕವರು.

ಜ್ವಾಲಾ ಗುಟ್ಟಾ ಜತೆ ಮದುವೆ ಯಾವಾಗ ಎನ್ನುವ ಗುಟ್ಟು ಬಿಟ್ಟುಕೊಟ್ಟ ವಿಷ್ಣು ವಿಶಾಲ್
ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್​
Follow us
ರಾಜೇಶ್ ದುಗ್ಗುಮನೆ
|

Updated on: Mar 22, 2021 | 7:45 PM

ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರೊಂದಿಗೆ ನಿಶ್ವಿತಾರ್ಥ ಮಾಡಿಕೊಂಡಿರುವುದಾಗಿ ತಮಿಳು ನಟ ಮತ್ತು ನಿರ್ಮಾಪಕ ವಿಷ್ಣು ವಿಶಾಲ್ ಕಳೆದ ವರ್ಷ ಹೇಳಿದ್ದರು. ಆದರೆ, ಮದುವೆ ಯಾವಾಗ ಎನ್ನುವ ಗುಟ್ಟನ್ನು ಈ ಜೋಡಿ ಬಿಟ್ಟುಕೊಟ್ಟಿರಲಿಲ್ಲ. ಈಗ ಇವರು ಶೀಘ್ರವೇ ಮದುವೆ ಆಗಲಿದ್ದಾರಂತೆ. ಮದುವೆ ಬಗ್ಗೆ ಮಾತನಾಡಿರುವ ವಿಶಾಲ್, ನಾವು ಶೀಘ್ರದಲ್ಲೇ ಮದುವೆ ಆಗುತ್ತಿದ್ದೇವೆ. ನಾನು ಈಗ ತೆಲುಗು ಅಳಿಯನಾಗಲಿದ್ದೇನೆ. ಇದರ ಬಗ್ಗೆ ನನಗೆ ತುಂಬಾ ಸಂತೋಷ ಇದೆ. ಮದುವೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುತ್ತೇನೆ ಎಂದು ವಿಶಾಲ್ ಹೇಳಿದ್ದಾರೆ.  ಜ್ವಾಲಾ ಮತ್ತು ವಿಷ್ಣು ಇಬ್ಬರಿಗೂ ಇದು ಎರಡನೇ ವೈವಾಹಿಕ ಸಂಬಂಧವಾಗಿದೆ.

ಜ್ವಾಲಾ, ಮಾಜಿ ರಾಷ್ಟ್ರೀಯ ಚಾಂಪಿಯನ್ ಚೇತನ್ ಆನಂದ್ ಅವರನ್ನು 2005ರಲ್ಲಿ ಮದುವೆಯಾಗಿದ್ದರು. ಆದರೆ ಆರು ವರ್ಷಗಳ ನಂತರ ಕಾನೂನುಬದ್ಧವಾಗಿ ವಿಚ್ಛೇದನ ಪಡೆದು ಬೇರೆಯಾದರು. ನಾಲ್ಕು ಬಾರಿ ಪುರುಷರ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಚೇತನ್ ಡಿವೋರ್ಸ್ ಪಡೆದ ಕೆಲ ತಿಂಗಳುಗಳ ನಂತರ ಸಾರದಾ ಗೋವರ್ಧಿನಿ ಜಸ್ಟಿ ಹೆಸರಿನ ಮಹಿಳಾ ಉದ್ಯಮಿಯನ್ನು ಮದುವೆಯಾಗಿ ಹೆಣ್ಣುಮಗುವೊಂದರ ತಂದೆ ಕೂಡ ಆಗಿದ್ದಾರೆ.

ಜ್ವಾಲಾ ಆರನೇ ವಯಸ್ಸಿನಿಂದಲೇ ಬ್ಯಾಡ್ಮಿಂಟನ್ ಆಡುವುದನ್ನು ಶುರು ಮಾಡಿದ್ದರು. ಆಕೆಯ ತಾಯಿ ಯೆಲೆನ್ ಗುಟ್ಟಾ ಭಾರತೀಯರಲ್ಲ, ಚೀನಾ ಮೂಲದವರು. ಯೆಲೆನ್​ರ ತಾತಾ, ತ್ಸೆಂಗ್ ನಮ್ಮ ರಾಷ್ಟ್ರಪಿತ ಮಹಾತ್ಮಾ ಅವರಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದರೆ, 1971 ರಲ್ಲಿ ಭಾರತಕ್ಕೆ ಬಂದಿದ್ದವರು, ಗಾಂಧಿಯವರ ಆತ್ಮಚರಿತ್ರೆಯನ್ನು ತಮ್ಮೊಂದಿಗೆ ಕೊಂಡೊಯ್ದು ಚೀನಾ ಭಾಷೆಗೆ ಅನುವಾದಿಸಿದರು.

ವಿಷ್ಣು ಅವರ ಮೊದಲನೇ ಹೆಂಡತಿಯಿಂದ ಒಬ್ಬ ಮಗನಿದ್ದಾನೆ. ಅಚ್ಚರಿ ಎಂದರೆ, ವಯಸ್ಸಿನಲ್ಲಿ ವಿಷ್ಣು ಅವರು ಜ್ವಾಲಾಗಿಂತ ಎರಡು ವರ್ಷ ಚಿಕ್ಕವರು. ಸುಮಾರು 15 ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

ಇದನ್ನೂ ಓದಿ: Jwala Gutta: ಟ್ರೋಲಿಗರಿಗೆ ಝಾಡಿಸಿದ ಜ್ವಾಲಾ ಗುಟ್ಟಾ, ಎರಡು ವರ್ಷಗಳ ನಂತರ ಮತ್ತೆ ವೈರಲ್​ ಆದ ವಿಡಿಯೋ