AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಕೈತಪ್ಪಿತಾ ಏರೋಸ್ಪೇಸ್ ಘಟಕ ಯೋಜನೆ?; ಬೆಳಗಾವಿ ಮೂಲದ ಏಕಸ್ ಗ್ರೂಪ್​ನಿಂದ ತಮಿಳುನಾಡಿನಲ್ಲಿ ಕ್ಲಸ್ಟರ್ ನಿರ್ಮಾಣ

Aequs Group of Belagavi to develop Aerospace and Defence cluster in Tamil Nadu's Hosur: ಬೆಳಗಾವಿ ಮೂಲದ ಏಕಸ್ ಗ್ರೂಪ್ ಸಂಸ್ಥೆಯು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್ ಅನ್ನು ನಿರ್ಮಿಸಲಿದೆ. ಇದಕ್ಕಾಗಿ ಒಟ್ಟು 4,000 ಕೋಟಿ ರೂ ಹೂಡಿಕೆ ಆಗಲಿದೆ. ಏಕಸ್​ನಿಂದ ಸ್ವತಃ 1,900 ಕೋಟಿ ರೂ, ಹಾಗೂ ಅದರ ಪಾರ್ಟ್ನರ್ ಕಂಪನಿಗಳಿಂದ ಉಳಿದ ಹಣದ ಹೂಡಿಕೆ ಆಗಲಿದೆ.

ಕರ್ನಾಟಕದ ಕೈತಪ್ಪಿತಾ ಏರೋಸ್ಪೇಸ್ ಘಟಕ ಯೋಜನೆ?; ಬೆಳಗಾವಿ ಮೂಲದ ಏಕಸ್ ಗ್ರೂಪ್​ನಿಂದ ತಮಿಳುನಾಡಿನಲ್ಲಿ ಕ್ಲಸ್ಟರ್ ನಿರ್ಮಾಣ
ಏಕಸ್ ಗ್ರೂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 20, 2026 | 1:16 PM

Share

ಬೆಂಗಳೂರು, ಫೆಬ್ರುವರಿ 20: ಬೆಳಗಾವಿ ಮೂಲದ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯಾದ ಏಕಸ್ ಗ್ರೂಪ್ (Aequs Group) ತಮಿಳುನಾಡಿನಲ್ಲಿ ಬೃಹತ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್​ವೊಂದನ್ನು (Aerospace and Defence manufacturing cluster) ನಿರ್ಮಿಸಲಿದೆ. ಬೆಂಗಳೂರು ಪಕ್ಕದ ಹೊಸೂರಿನ ಶೂಲಗಿರಿಯಲ್ಲಿರುವ ಸಿಪ್ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುವ ಈ ಘಟಕಕ್ಕೆ 4,000 ಕೋಟಿ ರೂ ಹೂಡಿಕೆ ಆಗಲಿದೆ. ಏಕಸ್ ಕಂಪನಿ ತಾನೇ ಕೈಯಿಂದ 1,900 ಕೋಟಿ ರೂ ಹೂಡಿಕೆ ಮಾಡಲಿದೆ. ಉಳಿದ 2,100 ಕೋಟಿ ರೂ ಅನ್ನು ಅದರ ಪಾರ್ಟ್ನರ್ ಕಂಪನಿಗಳು ಹೂಡಿಕೆ ಮಾಡಲಿವೆ.

ಕರ್ನಾಟಕ ಮೂಲದ ಏಕಸ್ ಗ್ರೂಪ್ ಸಂಸ್ಥೆ ತಮಿಳುನಾಡಿನಲ್ಲಿ ಏರೋಸ್ಪೇಸ್ ಘಟಕ ನಿರ್ಮಿಸುತ್ತಿರುವುದು ಕುತೂಹಲದ ಸಂಗತಿಗಳಲ್ಲಿ ಒಂದೆನಿಸಬಹುದು. ಕೃಷ್ಣಗಿರಿ ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ಈ ಕ್ಲಸ್ಟರ್​ನಲ್ಲಿ ಭಾರತದ ಮೊದಲ ಪೂರ್ಣ ಅಂತರ್ನಿಮಿತ (Vertically Integrated) ಏರ್​ಕ್ರಾಫ್ಟ್ ಎಂಜಿನ್ ಮ್ಯಾನುಫ್ಯಾಕ್ಚರಿಂಗ್ ಪ್ರಾಜೆಕ್ಟ್ ಕೂಡ ಸೇರಿರುತ್ತದೆ. ಇದರಲ್ಲಿ ಮ್ಯಾನುಫ್ಯಾಕ್ಚರಿಂಗ್ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಯಾವುದೇ ಪೂರೈಕೆಗೂ ಬಾಹ್ಯ ಕಂಪನಿಗಳ ಮೇಲೆ ಅವಲಂಬನೆ ಇರುವುದಿಲ್ಲ. ಈ ವ್ಯವಸ್ಥೆಯಲ್ಲಿ ಎಂಜಿನ್ ಮ್ಯಾನುಫ್ಯಾಕ್ಚರಿಂಗ್ ನಡೆಯುತ್ತಿರುವುದು ಭಾರತದಲ್ಲಿ ಇದೇ ಮೊದಲು ಎನ್ನಲಾಗಿದೆ.

ಇದನ್ನೂ ಓದಿ: ಪ್ಯಾಕ್ಸ್ ಸಿಲಿಕಾಗೆ ಭಾರತ ಸೇರ್ಪಡೆ; ಅಮೆರಿಕ ಸಂತಸ; ಏನಿದು ಹೊಸ ಒಪ್ಪಂದ?

ಏಕಸ್ ಗ್ರೂಪ್ ಹೊಸೂರಿನಲ್ಲಿ ನಿರ್ಮಿಸಲಿರುವ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್​ನಲ್ಲಿ ವಿಮಾನ ಎಂಜಿನ್ ಬಿಡಿಭಾಗಗಳು, ಲ್ಯಾಂಡಿಂಗ್ ಗೇರ್ ಸಿಸ್ಟಂಗಳು, ಅಲ್ಟ್ರಾ ಪ್ರಿಸಿಶನ್ ಮೆಷಿನಿಂಗ್, ಅಡ್ವಾನ್ಸ್ಡ್ ಏರೋಸ್ಪೇಸ್ ಸಿಸ್ಟಂ ಮತ್ತು ಸಬ್-ಅಸೆಂಬ್ಲಿಗಳ ಘಟಕಗಳು ಇರಲಿವೆ.

ಈ ಪ್ರಸ್ತಾವಿತ ಕ್ಲಸ್ಟರ್ ನಿರ್ಮಾಣದಿಂದ ಜಾಗತಿಕ ಏರೋ ಎಂಜಿನ್ ಸಪ್ಲೈ ಚೈನ್​ನಲ್ಲಿ ಒಂದು ಭಾಗವಾಗಿರಲು ಸಾಧ್ಯವಾಗುತ್ತದೆ. ತಾಂತ್ರಿಕ ಪ್ರಾವೀಣ್ಯತೆ ಬೇಡುವ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ.

ಇದನ್ನೂ ಓದಿ: ಬೆಂಗಳೂರಿನ ‘ಪರಮ್’ ಗೆ ಪ್ರಧಾನಿ ಮೋದಿ ಫಿದಾ! ಇದು ಭಾರತದ ಅತ್ಯಂತ ಶಕ್ತಿಶಾಲಿ ರೋಬೋಟ್ ನಾಯಿ

ತಮಿಳುನಾಡಿನಲ್ಲಿ ಏರ್​ಕ್ರಾಫ್ಟ್ ಉದ್ಯಮ ಗಮನಾರ್ಹವಾಗಿ ಹೆಚ್ಚುತ್ತಿದೆ. ತಿರುಪ್ಪೂರ್​ನಲ್ಲಿ ಶಕ್ತಿ ಏರ್​ಕ್ರಾಫ್ಟ್ ಇಂಡಸ್ಟ್ರಿ ಪ್ರೈ ಲಿ ಸಂಸ್ಥೆಯು ನಾಲ್ಕು ಸೀಟ್​ಗಳ ಟ್ರೈನರ್ ಏರ್​ಕ್ರಾಫ್ಟ್ ಅನ್ನು ಅಸೆಂಬ್ಲಿಂಗ್ ಮಾಡುವ ಘಟಕ ಸ್ಥಾಪನೆ ಮಾಡಲಿದೆ. ಜಪಾನ್​ನ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಮೈನ್​ಬೀ ಮಿಟ್ಸುಮಿ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ ಐಜಿಬಿಟಿ ಮಾಡ್ಯೂಲ್ ಮತ್ತು ಹೈಪ್ರಿಸಿಶನ್ ಕಾಂಪೊನೆಂಟ್​ಗಳನ್ನು ತಯಾರಿಸುವ ಘಟಕ ಸ್ಥಾಪಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು