ಆ.13ರ ಕರ್ನಾಟಕ ಬಂದ್‌ಗೆ ಕ್ಯಾಮ್ಸ್ನಿಂದ ನೈತಿಕ ಬೆಂಬಲ ಮಾತ್ರ: ಖಾಸಗಿ ಶಾಲೆಗಳಿಗಿಲ್ಲ ರಜೆ!
ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಸಂಬಂಧಿಸಿದಂತೆ ಬೆಂಗಳೂರಿನ ಖಾಸಗಿ ಶಾಲೆಗಳಿಗೆ ರಜೆ ಇರುವುದಿಲ್ಲ ಎಂದು ಕ್ಯಾಮ್ಸ್ ಸಂಘಟನೆ ಸ್ಪಷ್ಟಪಡಿಸಿದೆ. ಮಕ್ಕಳ ಹಿತದೃಷ್ಟಿಯಿಂದ ಬಂದ್‌ನಿಂದ ಹೊರಗುಳಿದಿರುವ ಖಾಸಗಿ ಶಾಲೆಗಳು ನೈತಿಕ ಬೆಂಬಲ ಮಾತ್ರ ನೀಡಲಿವೆ. ಶಿಕ್ಷಕರು ಮತ್ತು ಸಿಬ್ಬಂದಿ ಕಪ್ಪು ಪಟ್ಟಿ ಧರಿಸುವ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಕ್ಯಾಮ್ಸ್ ತಿಳಿಸಿದೆ.
ಬೆಂಗಳೂರು, ಆಗಸ್ಟ್ 11: ಕಾವೇರಿ ಜಲವಿವಾದ ಸಂಬಂಧ ಕನ್ನಡಪರ ಸಂಘಟನೆಗಳು ಗುರುವಾರ, ಅಂದರೆ ಆಗಸ್ಟ್ 13ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಆರಂಭದಲ್ಲಿ ಬೆಂಬಲ ಸೂಚಿಸಿದ್ದ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆ (ಕ್ಯಾಮ್ಸ್) ಈಗ ತನ್ನ ನಿರ್ಧಾರವನ್ನು ಬದಲಾಯಿಸಿದ್ದು, ಕೇವಲ ನೈತಿಕ ಬೆಂಬಲ ನೀಡಲು ಮುಂದಾಗಿದೆ. ಹೀಗಾಗಿ ಅಂದು ಬೆಂಗಳೂರಿನ ಖಾಸಗಿ ಶಾಲೆಗಳಿಗೆ ರಜೆ ಇರುವುದಿಲ್ಲ ಎಂದು ಕ್ಯಾಮ್ಸ್ ಸ್ಪಷ್ಟಪಡಿಸಿದೆ. ಮಕ್ಕಳ ಹಿತದೃಷ್ಟಿಯಿಂದ ಬಂದ್‌ಗೆ ಬೆಂಬಲದಿಂದ ಹಿಂದೆ ಸರಿಯಲಾಗಿದೆ. ಶಿಕ್ಷಕರು ಮತ್ತು ಸಿಬ್ಬಂದಿ ಕಪ್ಪು ಪಟ್ಟಿ ಧರಿಸುವ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಕ್ಯಾಮ್ಸ್ ತಿಳಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Aug 11, 2026 01:10 PM
Follow Us
Latest Videos

