Video: ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಖ್ಯಾತ ಶಿಕ್ಷಣ ತಜ್ಞರಾದ ಡಾ. ಗುರುರಾಜ್ ಕರಜಗಿ ಅವರು ವಿದ್ಯಾರ್ಥಿಗಳು ಓದುವಾಗ ನಿದ್ರೆ ಮತ್ತು ಗಮನ ಭಂಗವನ್ನು ತಪ್ಪಿಸಲು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಮೆದುಳಿಗೆ ಆಮ್ಲಜನಕ ಒದಗಿಸಲು ವ್ಯಾಯಾಮ, ಉತ್ತಮ ನಿದ್ದೆಯ ಅಭ್ಯಾಸಗಳು, ಮತ್ತು ಗೊಂದಲವಿಲ್ಲದ ಅಧ್ಯಯನ ಪರಿಸರವನ್ನು ಕಾಯ್ದುಕೊಳ್ಳುವುದು ಮುಖ್ಯ ಎಂದು ಅವರು ವಿವರಿಸುತ್ತಾರೆ.
ಖ್ಯಾತ ಶಿಕ್ಷಣತಜ್ಞರಾದ ಡಾ.ಗುರುರಾಜ ಕರ್ಜಗಿ ಯವರು ಟಿವಿ9ನ ವಿಶೇಷ ಪಾಡ್‌ಕಾಸ್ಟ್‌ನಲ್ಲಿ ಏಕಾಗ್ರತೆಯಿಂದ ಓದುವುದು ಹೇಗೆ ಎಂಬುದರ ಕುರಿತು ಸಲಹೆ ನೀಡಿದ್ದಾರೆ. ದಾವಣಗೆರೆಯ ಶಿವಸಾಗರ್ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಕರಜಗಿ ಅವರು, ಆಕಳಿಕೆ ಮತ್ತು ನಿದ್ರೆ ಮೆದುಳಿನ ಆಯಾಸದ ಸಂಕೇತಗಳಾಗಿವೆ. ಈ ಆಯಾಸವನ್ನು ಹೋಗಲಾಡಿಸಲು, ನಿಯಮಿತ ವ್ಯಾಯಾಮ ಬಹಳ ಮುಖ್ಯ. ಸ್ಪಾಟ್ ಜಾಗಿಂಗ್ ಅಥವಾ ಹೊರಗೆ 5-10 ನಿಮಿಷ ಓಡುವುದರಿಂದ ಮೆದುಳಿಗೆ ಸಾಕಷ್ಟು ಆಮ್ಲಜನಕ ತಲುಪಿ ಚೈತನ್ಯ ಬರುತ್ತದೆ. ಇದು ನೆನಪಿನ ಶಕ್ತಿಯನ್ನು ಸುಧಾರಿಸಿ ನಿದ್ರೆಯನ್ನು ದೂರವಿಡುತ್ತದೆ. ಹಾಸಿಗೆಯ ಮೇಲೆ ಕುಳಿತು ಓದುವುದು, ಟಿವಿ ನೋಡುತ್ತಾ ಅಥವಾ ಸಂಗೀತ ಕೇಳುತ್ತಾ ಓದುವುದು ತಪ್ಪು. ಮನಸ್ಸು ಒಂದೇ ಕೆಲಸದ ಮೇಲೆ ಕೇಂದ್ರೀಕರಿಸಿದಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿವರಿಸಿದರು. ಹೀಗಾಗಿ, ಶಾಂತ ಮತ್ತು ಏಕಾಗ್ರತೆಗೆ ಸೂಕ್ತವಾದ ಸ್ಥಳದಲ್ಲಿ ಕುಳಿತು ಓದುವುದು ಯಶಸ್ಸಿಗೆ ಮುಖ್ಯವಾಗಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕಿಗೆ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ
ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

