India vs England | ಸ್ಟೋಕ್ಸ್ ಆಡುವ ಉತ್ಸುಕತೆ ತೋರಿದ್ದರಿಂದ ಅವರಿಗೆ ವಿಶ್ರಾಂತಿ ನೀಡಿಲ್ಲ: ಅಯಾನ್ ಮೊರ್ಗನ್
ಪುಣೆ: ಕ್ರಿಕೆಟ್ ಸಮುದಾಯದ ಹಲವಾರು ತಜ್ಞರು ಮತ್ತು ಮಾಜಿ ಆಟಗಾರರ ವಿರೋಧ ಮತ್ತು ಟೀಕೆಯ ಹೊರತಾಗಿಯೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಈಸಿಬಿ) ಇತ್ತೀಚಿಗೆ ಭಾರತದ ವಿರುದ್ಧ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ರೋಟೇಶನ್ ಪಾಲಿಸಿಯನ್ನು ಅನೂಚಾನಾಗಿ ಪಾಲಿಸಿತು. ಜಾನಿ ಬೇರ್ಸ್ಟೋ, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಮೊಯೀನ್ ಅಲಿ ಮತ್ತು ಜೊಸ್ ಬಟ್ಲರ್ ಅವರನ್ನು ಟೆಸ್ಟ್ ಪಂದ್ಯಗಳು ನಡೆಯುವಾಗ ರೆಸ್ಟ್ ನೀಡಲಾಯಿತು. ಆದರೆ, ಇಂಗ್ಲೆಂಡ್ನ ಅಲ್ರೌಂಡರ್ ಬೆನ್ ಸ್ಟೋಕ್ಸ್ ಮಾತ್ರ ಎಲ್ಲ 4 ಟೆಸ್ಟ್ ಮತ್ತು […]
ಪುಣೆ: ಕ್ರಿಕೆಟ್ ಸಮುದಾಯದ ಹಲವಾರು ತಜ್ಞರು ಮತ್ತು ಮಾಜಿ ಆಟಗಾರರ ವಿರೋಧ ಮತ್ತು ಟೀಕೆಯ ಹೊರತಾಗಿಯೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಈಸಿಬಿ) ಇತ್ತೀಚಿಗೆ ಭಾರತದ ವಿರುದ್ಧ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ರೋಟೇಶನ್ ಪಾಲಿಸಿಯನ್ನು ಅನೂಚಾನಾಗಿ ಪಾಲಿಸಿತು. ಜಾನಿ ಬೇರ್ಸ್ಟೋ, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಮೊಯೀನ್ ಅಲಿ ಮತ್ತು ಜೊಸ್ ಬಟ್ಲರ್ ಅವರನ್ನು ಟೆಸ್ಟ್ ಪಂದ್ಯಗಳು ನಡೆಯುವಾಗ ರೆಸ್ಟ್ ನೀಡಲಾಯಿತು.
ಆದರೆ, ಇಂಗ್ಲೆಂಡ್ನ ಅಲ್ರೌಂಡರ್ ಬೆನ್ ಸ್ಟೋಕ್ಸ್ ಮಾತ್ರ ಎಲ್ಲ 4 ಟೆಸ್ಟ್ ಮತ್ತು ಟಿ20ಐ ಸರಣಿಯ 5 ಪಂದ್ಯಗಳಲ್ಲೂ ಅಡಿದರು. ಅಷ್ಟು ಮಾತ್ರವಲ್ಲ ನಾಳೆಯಿಂದ ಆರಂಭವಾಗಲಿರುವ 3-ಪಂದ್ಯಗಳ ಒಡಿಐ ಸರಣಿಗೂ ಅವರಿಗೆ ವಿಶ್ರಾಂತಿ ನೀಡಿಲ್ಲ. ಸೋಮವಾರದಂದು ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ, ಸ್ಟೋಕ್ಸ್ಗೆ ಒಂದು ದಿನದ ಪಂದ್ಯಗಳಿಗೆ ಯಾಕೆ ರೆಸ್ಟ್ ನೀಡುತ್ತಿಲ್ಲ ಎಂದು ಮಾಧ್ಯಮವೊಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಂಗ್ಲೆಂಡ್ ಟೀಮಿನ ಸೀಮಿತ ಓವರ್ಗಳ ತಂಡದ ನಾಯಕ ಅಯಾನ್ ಮೊರ್ಗನ್, ಸ್ಟೋಕ್ಸ್ ಒಡಿಐಗಳಲ್ಲೂ ಆಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರಿಂದ ಅವರಿಗೆ ರೆಸ್ಟ್ ಒದಗಿಸುವ ಅಂಶವನ್ನು ಪರಿಗಣಿಸಿಲಿಲ್ಲ ಎಂದು ಹೇಳಿದರು.
‘ಬೇರೆಬೇರೆ ಹಂತಗಳಲ್ಲಿ ನಾವು ಬೆನ್ಗೆ ರೆಸ್ಟ್ ನೀಡುವ ಆಯಾಮದ ಬಗ್ಗೆ ಯೋಚಿಸಿದೆವು. ಆದರೆ ಒಂದು ದಿನದ ಪಂದ್ಯಗಳಿಗೆ ಅದನ್ನು ಪರಿಗಣಿಸಲಿಲ್ಲ ಯಾಕೆಂದರೆ ಅವರು ಈ ಸರಣಿಯಲ್ಲೂ ಆಡಲು ಉತ್ಸುಕರಾಗಿದ್ದಾರೆ. ನಾವು ಈ ಪ್ರವಾಸದ ನಂತರ ಸ್ವದೇಶಕ್ಕೆ ವಾಪಸ್ಸು ಹೋದ ನಂತರವೇ ಅವರು ವಿಶ್ರಾಂತಿ ಪಡೆಯಲಿದ್ದಾರೆ. ರೆಸ್ಟ್ ವಿಷಯ ಬಯೊ-ಬಬಲ್ ಮತ್ತು ಅವರು ಯಾವಾಗ ತಮ್ಮ ಕುಟುಂಬವನ್ನು ನೋಡಲು ಇಚ್ಛಿಸುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿದೆ,’ ಎಂದು ಮೊರ್ಗನ್ ಹೇಳಿದರು.
‘ನಾವು ಮುಂದಿನ 5 ದಿನಗಳಲ್ಲಿ 3 ಪಂದ್ಯಗಳನ್ನು ಆಡಬೇಕಿದೆ, ಬೆನ್ಗೆ ವಿಶ್ರಾಂತ ನೀಡಿದರೆ ಇಷ್ಟರಲ್ಲೇ ಐಪಿಎಲ್ ಶುರುವಾಗಲಿರುವುದರಿಂದ ಮುಂಬಯಿ ಅಥವಾ ಪುಣೆಯ ಹೋಟೆಲ್ ರೂಮಿನಲ್ಲಿ ಅವರನ್ನು ಅಕ್ಷರಶ: ಕೂಡಿಹಾಕಿದಂತಾಗುತಿತ್ತು. ಆದರೆ ಬೆನ್ ಒಂದು ದಿನದ ಪಂದ್ಯಗಳಲ್ಲಿ ಆಡಲು ಇಚ್ಛಿಸಿದ್ದರಿಂದ ರೆಸ್ಟ್ ನೀಡುವ ಆಪ್ಷನ್ ಪರಿಗಣಿಸಲಿಲ್ಲ’ ಎಂದು ಮೊರ್ಗನ್ ಹೇಳಿದರು.
ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ನಾಯಕನಾಗಿರುವ ಜೋ ರೂಟ್ ಅವರಿಗೆ ಒಡಿಐ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ, ವಿಶ್ವದ ಅತ್ಯುತ್ತಮ ಆಟಗಾರರರಲ್ಲಿ ಒಬ್ಬರಾಗಿರುವ ರೂಟ್ ಅವರನ್ನು ತಂಡ ಮಿಸ್ ಮಾಡಿಕೊಳ್ಳಲಿದೆ ಎಂದು ಮೊರ್ಗನ್ ಹೇಳಿದರು. ‘ಪ್ರತಿಬಾಲಿಗೆ ಒಂದು ರನ್ನಂತೆ ಸ್ಕೋರ್ ಮಾಡುವ ಮತ್ತು ಈ ಆವೃತ್ತ್ತಿಯಲ್ಲಿ 50ರಷ್ಟು ಸರಾಸರಿ ಹೊಂದಿರುವ ರೂಟ್ ಅವರ ಸೇವೆಯನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ. ಅವರ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಯಾರನ್ನು ಆಡಿಸುವುದು ಎಂಬ ಯೋಚನೆ ನಮ್ಮನ್ನು ಕಾಡುತ್ತಿದೆ,’ ಎಂದು ಮೊರ್ಗನ್ ಹೇಳಿದರು.
ಟೆಸ್ಟ್ ಮತ್ತು ಟಿ20ಐ ಸರಣಿಗಳೆರಡನ್ನೂ ಸೋತಿರುವ ಇಂಗ್ಲೆಂಡ್ ತಂಡಕ್ಕೆ ಭಾರತ ಪ್ರವಾಸವನ್ನು ಪಾಸಿಟಿವ್ ನೋಟ್ನೊಂದಿಗೆ ಮುಗಿಸಬೇಕಾದರೆ, ನಾಳೆಯಿಂದ ಶುರುವಾಗಲಿರುವ ಒಡಿಐ ಸರಣಿ ಕೊನೆಯ ಅವಕಾಶ.
ಇದನ್ನೂ ಓದಿ: India vs England: T20 ಸರಣಿಯಲ್ಲಿದ್ದ ಉಭಯ ತಂಡಗಳ ಈ ಐದು ಆಟಗಾರರು ಮುಂಬರುವ T20 ವಿಶ್ವಕಪ್ನಲ್ಲಿ ಆಡುವುದು ಡೌಟ್
Published On - 9:50 pm, Mon, 22 March 21