India vs England | ಮಧ್ಯಮ ಕ್ರಮಾಂಕವನ್ನು ಅಂತಿಮಗೊಳಿಸುವುದು ಭಾರತಕ್ಕೆ ಜಟಿಲವಾಗಲಿದೆ: ಆಕಾಶ್ ಚೋಪ್ರಾ

ಭಾರತದ ಮಾಜಿ ಆರಂಭ ಅಟಗಾರ ಮತ್ತು ಕ್ರಿಕೆಟ್ ಅನಾಲಿಸ್ಟ್ ಆಕಾಶ್ ಚೋಪ್ರಾ, ಮೊದಲ ಪಂದ್ಯಕ್ಕೆ ಮಧ್ಯಮ ಕ್ರಮಾಂಕವನ್ನು ಅಂತಿಮಗೊಳಿಸುವುದು ಗೊಂದಲ ಹುಟ್ಟಿಸಲಿದೆ ಎಂದು ಹೇಳಿದ್ದಾರೆ.

India vs England | ಮಧ್ಯಮ ಕ್ರಮಾಂಕವನ್ನು ಅಂತಿಮಗೊಳಿಸುವುದು ಭಾರತಕ್ಕೆ ಜಟಿಲವಾಗಲಿದೆ: ಆಕಾಶ್ ಚೋಪ್ರಾ
ಕೆ ಎಲ್ ರಾಹುಲ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Mar 22, 2021 | 11:23 PM

ಪುಣೆ: ತೀವ್ರ ಸ್ವರೂಪದ ಜಿದ್ದಾಜಿದ್ದಿನ ನಂತರ ಪ್ರವಾಸಿ ಇಂಗ್ಲೆಂಡ್​ ಟೀಮನ್ನು 3-2 ಅಂತರದಿಂದ ಸೋಲಿಸಿ ಟಿ20ಐ ಸರಣಿಯನ್ನು ತನ್ನದಾಗಿಸಿಕೊಂಡ ಭಾರತ ನಾಳೆ ಪುಂಣೆಯಲ್ಲಿ ಆರಂಭವಾಗಲಿರುವ ಮೂರು ಒಂದು ದಿನದ ಪಂದ್ಯಗಳ ಸರಣಿಯಲ್ಲಿ ಗೆಲುವಿನ ಓಟವನ್ನು ಮುಂದುವರಿಸುವ ನಿರೀಕ್ಷೆಯನ್ನು ಭಾರತದ ಕ್ರಿಕೆಟ್ ಪ್ರೇಮಿ ಇಟ್ಟುಕೊಂಡಿದ್ದಾನೆ. ಭಾರತ ಇನ್ನಿಂಗ್​ ಇನ್-ಫಾರ್ಮ್ ರೊಹಿತ್ ಶರ್ಮ ಮತ್ತು ಶಿಖರ್ ಧವನ್ ಆರಂಭಿಸಲಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹೇಳಿದ್ದಾರೆ, ಅದೆನೋ ಸರಿ, ಟೀಮಿನ ಮಧ್ಯಮ ಕ್ರಮಾಂಕವನ್ನು ಅಂತಿಮಗೊಳಿಸುವುದು ಟೀಮ್ ಮ್ಯಾನೇಜ್ಮೆಂಟ್​ಗೆ ಜಟಿಲವಾಗಲಿದೆ.

ಭಾರತದ ಮಾಜಿ ಆರಂಭ ಅಟಗಾರ ಮತ್ತು ಕ್ರಿಕೆಟ್ ಅನಾಲಿಸ್ಟ್ ಆಕಾಶ್ ಚೋಪ್ರಾ, ಮೊದಲ ಪಂದ್ಯಕ್ಕೆ ಮಧ್ಯಮ ಕ್ರಮಾಂಕವನ್ನು ಅಂತಿಮಗೊಳಿಸುವುದು ಗೊಂದಲ ಹುಟ್ಟಿಸಲಿದೆ ಎಂದು ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್​ ನೆಟ್​ವರ್ಕ್ ನಡೆಸುವ ಕ್ರಿಕೆಟ್​ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಆಕಾಶ್, ಕೆ ಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರನ್ನು ಒಟ್ಟಿಗೆ ಆಡಿಸುವುದು ಟೀಮ್ ಇಂಡಿಯಾಗೆ ಕಷ್ಟವಾಗಲಿದೆ ಎಂದು ಹೇಳಿದ್ದಾರೆ.

‘ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಹಾಗಾದರೆ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಕೆ ಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರನ್ನು ಯಾವ ಕ್ರಮಾಂಕದಲ್ಲಿ ಫಿಟ್ ಮಾಡಲಿದೆ? ಅದು ಸಾಧ್ಯವಿದ್ದರೆ ಮಾಡಲಿ, ನಾನು ಆ ಕುರಿತು ಹೆಚ್ಚು ಮಾತಾಡಲಾರೆ, ನನ್ನ ಏಕಮಾತ್ರ ಆಸೆಯೆಂದರೆ ಎಂದರೆ ಭಾರತ ಈ ಸರಣಿಯನ್ನೂ ಗೆಲ್ಲಬೇಕು,’ ಎಂದು ಆಕಾಶ್ ಹೇಳಿದರು.

Akash Chopra

ಆಕಾಶ್ ಚೋಪ್ರಾ

ಅಕಾಶ್ ಚೋಪ್ರಾ ಅವರಂತೆ ಬೇರೆ ಕ್ರಿಕೆಟ್ ಪರಿಣಿತರು ಸಹ ಭಾರತದ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಮತ್ತು ಪಂತ್ ಇಬ್ಬರನ್ನು ಆಡಿಸಲು ಸಾಧ್ಯವಾಗಬಹುದೇ ಅಂತ ಪ್ರಶ್ನೆಯೆತ್ತಿದ್ದಾರೆ. ಕೆಲವರು ರಾಹುಲ್ ಅವರನ್ನು ವಿಕೆಟ್​-ಕೀಪರ್ ಬ್ಯಾಟ್ಸ್​ಮನ್ ಆಗಿ ಆಡಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಕನ್ನಡಿಗ ಫಾರ್ಮ್​ನಲ್ಲಿ ಇಲ್ಲದಿರುವುದರಿಂದ ಅವರನ್ನು ಆಡಿಸಿ ರಿಸ್ಕ್ ತೆಗೆದುಕೊಳ್ಳುವ ಬದಲು ಉತ್ತಮ ಸ್ಪರ್ಶದಲ್ಲಿರುವ ಪಂತ್ ಅವರನ್ನು ಆಡಿಸುವುದು ಬೆಟರ್ ಆಪ್ಷನ್  ಎಂದಿದ್ದಾರೆ.

ಧವನ್ ಅವರನ್ನು ಆರಂಭ ಆಟಗಾರನಾಗಿ ಆಡಿಸುವ ನಿರ್ಧಾರಕ್ಕೆ ಆಕಾಶ್ ಬೆಂಬಲ ಸೂಚಿಸಿದ್ದಾರೆ. ಅವರು ವಿಫಲರಾದರೂ ಎಲ್ಲ 3ಪಂದ್ಯಗಳಲ್ಲಿ ಆಡಿಸಬೇಕು ಎಂದು ಅವರು ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಡಿ ರನ್ ಗಳಿಸಲು ವಿಫಲರಾದ ಧವನ್​ ಅವರನ್ನು ಮಿಕ್ಕಿದ 4 ಪಂದ್ಯಗಳಿಗೆ ಕೈಬಿಡಲಾಗಿತ್ತು.

‘ನನ್ನ ಅಭಿಪ್ರಾಯ ಕೇಳುವುದಾದರೆ ಶಿಖರ್ ಧವನ್ ಎಲ್ಲ ಮೂರು ಪಂದ್ಯಗಳಲ್ಲೂ ಇನ್ನಿಂಗ್ಸ್ ಆರಂಭಿಸಬೇಕು. ಯಾಕೆಂದರೆ ಅವರೀಗ ಈಗ ಕೇವಲ ಸೀಮಿತ ಓವರ್​ಗಳ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ. ಹಾಗಾಗಿ ಆರಂಭ ಆಟಗಾರನಾಗಿ ಆಡುವ ಅವಕಾಶವನ್ನು ಅವರಿಗೆ ನೀಡಬೇಕು,’ ಎಂದು ಆಕಾಶ್ ಹೇಳಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಒಂದು ದಿನದ ಪಂದ್ಯಗಳ ಸರಣಿ ಮಂಗಳವಾರದಿಂದ ಪುಣೆಯಲ್ಲಿ ಆರಂಭವಾಗಲಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮತ್ತೆ ಭಾರಿ ಪ್ರಮಾಣದಲದಲಿ ಹೆಚ್ಚುತ್ತಿರುವುದರಿಂದ ಪ್ರೇಕ್ಷಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಪಂದ್ಯ ಮಧ್ಯಹ್ನ 1.30ಕ್ಕೆ ಆರಂಭವಾಗಲಿದೆ.

ಇದನ್ನೂ ಓದಿ:India vs England | ಸ್ಟೋಕ್ಸ್ ಆಡುವ ಉತ್ಸುಕತೆ ತೋರಿದ್ದರಿಂದ ಅವರಿಗೆ ವಿಶ್ರಾಂತಿ ನೀಡಿಲ್ಲ: ಅಯಾನ್ ಮೊರ್ಗನ್

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು