IND vs ENG 1st ODI Live: ಭಾರತಕ್ಕೆ 66 ರನ್ಗಳ ಸುಲಭ ಜಯ
India vs England Score LIVE Updates: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 66 ರನ್ಗಳ ವಿಜಯ ದಾಖಲಿಸಿದೆ. ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಗೆಲುವು ದಾಖಲಿಸಿದ್ದ ಭಾರತ ಈ ಮೂಲಕ ಏಕದಿನ ಸರಣಿಯನ್ನೂ ಗೆಲ್ಲುವ ಭರವಸೆ ನೀಡಿದೆ.
LIVE Cricket Score & Updates
-
ಭಾರತಕ್ಕೆ 66 ರನ್ ಜಯ
ಭಾರತದ ಗೆಲುವಿನ ಓಟ ಒಂದು ದಿನದ ಪಂದ್ಯಗಳಲ್ಲೂ ಮುಂದುವರಿದಿದೆ, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸುಲಭವಾಗಿ 66 ರನ್ಗಳಿಂದ ಸೋಲಿಸಿದೆ. ನಾಲ್ಕನೇ ಸ್ಪೆಲ್ಗೆ ವಾಪಸ್ಸು ಬಂದ ಪ್ರಸಿಧ್ ಕ್ರಿಷ್ಣ ಟಾಮ್ ಕರನ್ ಅವರನ್ನು ಔಟ್ ಮಾಡಿ ತಮ್ಮ 4ನೇ ವಿಕೆಟ್ ಪಡೆದರು, ಅವರ ಬೌಲಿಂಗ್ ಅನಾಲಿಸಿಸ್ 8.1 -1-54-4
ಅಂತಿಮ ಸ್ಕೋರ್:
ಭಾರತ: 317/5 (50 ಓವರ್ಗಳಲ್ಲಿ)
ಇಂಗ್ಲೆಂಡ್: 251/10 (42.1 ಓವರ್ಗಳಲ್ಲಿ)
-
ಟಾಮ್ ಕರನ್ಗೆ 4
ಕುಲ್ದೀಪ್ ಯಾದವ್ ಅವರ ಎಸೆತವೊಂದನ್ನು ಟಾಮ್ ಕರನ್ ಬೌಂಡರಿಗಟ್ಟಿದ್ದಾರೆ, ಇಂಗ್ಲೆಂಡ್ 248/9
-
ರಾಶಿದ್ ಸಹ ಔಟ್!
ಇಂಗ್ಲೆಂಡ್ ತನ್ನ 9 ನೇ ವಿಕೆಟ್ ಕಳೆದುಕೊಂಡಿದೆ, ಆದಿಲ್ ರಾಶಿದ್ ವಿಕೆಟ್ ಕೀಪರ್ ರಾಹುಲ್ಗೆ ಕ್ಯಾಚಿತ್ತು ಔಟಾಗಿದ್ದಾರೆ, ವಿಕೆಟ್ ಪಡೆದ ಬೌಲರ್ ಭುವನೇಶ್ವರ್ ಕುಮಾರ್
8ನೇ ವಿಕೆಟ್ ಪತನ
ಬ್ಯಾಟಿಂಗ್ನಲ್ಲಿ ಮಿಂಚಿದ್ದ ಕೃಣಾಲ್ ಪಾಂಡ್ಯ ವಿಕೆಟ್ ಸಹ ಪಡೆದಿದ್ದಾರೆ. ಸ್ಯಾಮ್ ಕರನ್, ಡೀಪ್ನಲ್ಲಿದ್ದ (ಸಬ್) ಫೀಲ್ಡರ್ ಶುಭಮನ್ ಗಿಲ್ಗೆ ಕ್ಯಾಚ್ ನೀಡಿ ಔಟಾಗಿದ್ದಾರೆ, ಇಂಗ್ಲೆಂಡ್ ಸ್ಕೋರ್ 240/8
ಮೊಯೀನ್ ಔಟ್
ಭುವನೇಶ್ವರ್ ಕುಮಾರ್ ತಮ್ಮ ಎರಡನೇ ಸ್ಪೆಲ್ನ ಎರಡನೇ ಓವರ್ನಲ್ಲಿ ಮೊಯೀನ್ ಅವರನ್ನು ಔಟ್ ಮಾಡಿದ್ದಾರೆ, ಇಂಗ್ಲೆಂಡ್ 237/7
ಮೊಯೀನ್ಗೆ 4
ಕೃಣಾಲ್ ಪಾಂಡ್ಯ ಎಸೆತವನ್ನು ನೇರವಾಗಿ ಬಾರಿಸಿ ಮೊಯೀನ್ ಅಲಿ ಬೌಂಡರಿ ಗಿಟ್ಟಿಸಿದ್ದಾರೆ,ಇಂಗ್ಲೆಂಡ್ ಸ್ಕೋರ್ 237/6
ಕರನ್ಗೆ ಬೌಂಡರಿ
ಭುವನೇಶ್ವರ್ ಎಸೆತವೊಂದನ್ನು ಸ್ಯಾಮ್ ಕರನ್ ಮಿಡ್ವಿಕೆಟ್ ಬೌಂಡರಿ ಕಡೆ ಪುಲ್ ಮಾಡಿ 4 ರನ್ ಗಳಿಸಿದ್ದಾರೆ, ಇಂಗ್ಲೆಂಡ್ ಮೊತ್ತ 231/6
ಕ್ರಿಷ್ಣನಿಗೆ ಮತ್ತೊಂದು
ಪ್ರಸಿಧ್ ಕ್ರಿಷ್ಣ ತಮ್ಮ ಮೂರನೇ ಸ್ಪೆಲ್ನಲ್ಲಿ ಮತ್ತೊಂದು ವಿಕೆಟ್ ಪಡೆದಿದ್ದಾರೆ, ಸ್ಯಾಮ್ ಬಿಲ್ಲಿಂಗ್ಸ್ ಭಾರತದ ನಾಯಕ ಕೊಹ್ಲಿಗೆ ಕ್ಯಾಚ್ ನೀಡಿ ಔಟಾಗಿದ್ದಾರೆ, ಇಂಗ್ಲೆಂಡ್ 218/6
ಅಲಿಗೆ 4
ಮೊಯೀನ್ ಅಲಿ, ಕುಲ್ದೀಪ್ ಯಾದವ್ ಅವರ ಎಸೆತವನ್ನು ಬೌಂಡರಿಗಟ್ಟಿದ್ದಾರೆ, ಅವರ ಸ್ಕೋರ್ 12, ಇಂಗ್ಲೆಂಡ್ 206/4
ಇದೇ ಓವರ್ನಲ್ಲಿ ಮೊಯೀನ್ ಮತ್ತೊಂದು ಬೌಂಡರಿ ಬಾರಿಸಿದ್ದಾರೆ
ಬಿಲ್ಲಿಂಗ್ಸ್ಗೆ 4
ಕುಲ್ದೀಪ್ ಯಾದವ್ ಅವರ ಎಸೆತವನ್ನು ಸ್ಯಾಮ್ ಬಿಲ್ಲಿಂಗ್ಸ್ ಬೌಂಡರಿಗಟ್ಟಿ 4 ರನ್ ಗಳಿಸಿದ್ದಾರೆ, ಇಂಗ್ಲೆಂಡ್ 30 ಓವರ್ಗಳಲ್ಲಿ 199/5
ಶಾರ್ದುಲ್ಗೆ ಮತ್ತೊಂದು!
ಇದೇ ಓವರ್ನಲ್ಲಿ ಶಾರ್ದುಲ್ ಅಪಾಯಕಾರಿ ಬ್ಯಾಟ್ಸ್ಮನ್ ಜೊಸ್ ಬಟ್ಲರ್ ಅವರನ್ನು ಎಲ್ ಬಿ ಬಲೆಗೆ ಕೆಡವಿದ್ದಾರೆ, ಇಂಗ್ಲೆಂಡ್ ಸ್ಕೋರ್ 176/5, ಶಾರ್ದುಲ್ ಬೌಲಿಂಗ್ ಅನಾಲಿಸಿಸ್ 5-0-33-3
ಮೊರ್ಗನ್ ಔಟ್!
ನಾಯಕ ಅಯಾನ್ ಮೊರ್ಗನ್ ರೂಪದಲ್ಲಿ ಇಂಗ್ಲೆಂಡ್ 4ನೇ ವಿಕೆಟ್ ಕಳೆದುಕೊಂಡಿದೆ, ಮೊರ್ಗನ್ 22 ರನ್ ಗಳಿಸಿದರು, ಸ್ಕೋರ್ 175/4, ವಿಕೆಟ್ ಪಡೆದಿರೋದು ಶಾರ್ದುಲ್
ಬಟ್ಲರ್ ಆಗಮನ
ಬೇರ್ಸ್ಟೋ ಸ್ಥಾನದಲ್ಲಿ ಜೊಸ್ ಬಟ್ಲರ್ ಆಡಲು ಬಂದಿದ್ದಾರೆ,ಇಂಗ್ಲೆಂಡ್ ಸ್ಕೋರ್ 24ನೇ ಓವರಿನಲ್ಲಿ 174/3, ಮೊರ್ಗನ್ 22
ಬೇರ್ಸ್ಟೋ ಸಹ ಶತಕ ದಾಖಲಿಸಲಿಲ್ಲ!
ಜಾನಿ ಬೇರ್ಸ್ಟೋ ಸಹ ಭಾರತದ ಶಿಖರ್ ಧವನ್ ಅವರಂತೆ ಶತಕ ದಾಖಲಿಸಲು ವಿಫಲರಾಗಿದ್ದಾರೆ, ಅವರು 66 ಎಸೆತಗಳಲ್ಲಿ 94 ರನ್ ಬಾರಿಸಿ ಶಾರ್ದುಲ್ಗೆ ವಿಕೆಟ್ ಒಪ್ಪಿಸಿದ್ದಾರೆ, ಇಂಗ್ಲೆಂಡ್ 169/3
ಬೇರ್ಸ್ಟೋಗೆ ಬೌಂಡರಿ
ಜಾನಿ ಬೇರ್ಸ್ಟೋ ಮತ್ತೊಂದು 4 ಬಾರಿಸಿ ತಮ್ಮ ಸ್ಕೋರನ್ನು 91 ಕ್ಕೆ ಒಯ್ದಿದ್ದಾರೆ, ಇಂಗ್ಲೆಂಡ್ ಸ್ಕೋರ್ 158/2
ಮೊರ್ಗನ್ಗೆ 6
ಇಂಗ್ಲೆಂಡ್ ಟೀಮಿನ ನಾಯಕ ಅಯಾನ್ ಮೊರ್ಗನ್ ಕುಲ್ದೀಪ್ ಅವರ ಎಸೆತವೊಂದನ್ನು ಸ್ವೀಪ್ ಮಾಡಿ ಸಿಕ್ಸರ್ಗೆ ಎತ್ತಿದ್ದಾರೆ, ಸ್ಕೋರ್ 150/2
19 ಓವರ್ಗಳಲ್ಲಿ 145/2
ಇಂಗ್ಲೆಂಡ್ 19 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದೆ, ಬೇರ್ಸ್ಟೋ 86 ರನ್ ಗಳಿಸಿ ಆಡುತ್ತಿದ್ದಾರೆ
ಬೇರ್ಸ್ಟೋ ಬಿರುಗಾಳಿ ವೇಗದ ಬ್ಯಾಟಿಂಗ್
ಆರಂಭ ಆಟಗಾರ ಜಾನಿ ಬೇರ್ಸ್ಟೋ ಮಿಂಚಿನ ವೇಗದಲ್ಲಿ ರನ್ ಗಳಿಸುತ್ತಿದ್ದಾರೆ, ಅವರ 83 ರನ್ಗಳು ಕೇವಲ 55 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್ನೊಂದಿಗೆ ಬಂದಿವೆ
ಕ್ರಿಷ್ಣನಿಗೆ ಮತ್ತೊಂದು ವಿಕೆಟ್
ಪ್ರಸಿಧ್ ಕ್ರಿಷ್ಣ ಮತ್ತೊಂದು ವಿಕೆಟ್ ಪಡೆದಿದ್ದಾರೆ, ಸ್ಟೋಕ್ಸ್ ನೀಡಿದ ಕ್ಯಾಚನ್ನು ಸಬ್ ಫೀಲ್ಡರ್ ಶುಭ್ಮನ್ ಗಿಲ್ ಹಿಡಿದಿದ್ದಾರೆ, ಇಂಗ್ಲಂಡ್ ಸ್ಕೋರ್ 138/2 (18 ನೇ ಓವರ್)
Prasidh Krishna strikes again!
Ben Stokes departs.
Live – https://t.co/MiuL1livUt #INDvENG @Paytm pic.twitter.com/0OIDtFohFm
— BCCI (@BCCI) March 23, 2021
ಬೇರ್ಸ್ಟೋ ಬ್ಯಾಟ್ನಿಂದ 4
ಶಾರ್ದುಲ್ ಅವರ ಎಸೆತವೊಂದನ್ನು ಬೇರ್ಸ್ಟೋ ಬೌಂಡರಿಗಟ್ಟಿದ್ದಾರೆ, ಇಂಗ್ಲೆಂಡ್ ಸ್ಕೋರ್ 93/0 (11 ನೇ ಓವರ್)
ಬೇರ್ಸ್ಟೋ ಬ್ಯಾಟ್ನಿಂದ 6
ಶಾರ್ದುಕ್ ಠಾಕೂರ್ ಅವರ ಎಸೆತವೊಂದರಲ್ಲಿ ಜಾನಿ ಬೇರ್ಸ್ಟೋ ಸಿಕ್ಸ್ ಬಾರಿಸಿದ್ದಾರೆ. ಇಂಗ್ಲೆಂಡ್ ಸ್ಕೋರ್ 85/0
ಮತ್ತೊಂದು 4 ಹಾಗೂ 6
ಕೃಣಾಲ್ ಪಾಂಡ್ಯ ಓವರ್ನಲ್ಲಿ ರಾಯ್ ಮತ್ತೊಂದು ಸಿಕ್ಸ್ ಹಾಗೂ ಬೌಂಡರಿ ಬಾರಿಸಿದ್ದಾರೆ, ಇಂಗ್ಲೆಂಡ್ 77/0
ಕೃಣಾಲ್ ದಾಳಿಗೆ
ಮೊದಲ ಪಂದ್ಯ ಆಡುತ್ತಿರುವ ಕೃಣಾಲ್ ಪಾಂಡ್ಯ ದಾಳಿಗಳಿದಿದ್ದಾರೆ, ಅವರ ಒಂದು ಎಸೆತವನ್ನು ಜೇಸನ್ ರಾಯ್ ಬೌಂಡರಿಗಟ್ಟಿದ್ದಾರೆ, ಇಂಗ್ಲೆಂಡ್ ಸ್ಕೋರ್ 71/0
ಇಂಗ್ಲೆಂಡ್ 50
ಪ್ರವಾಸಿ ತಂಡದ ಮೊದಲ 50 ರನ್ 6ನೇ ಓವರ್ನಲ್ಲಿ ಬಂದಿವೆ, 7ನೇ ಓವರ್ ಭುವಿ ಬೌಲ್ ಮಾಡುತ್ತಿದ್ದಾರೆ
ಮತ್ತೊಂದು ಸಿಕ್ಸ್
ಜಾನಿ ಬೇರ್ಸ್ಟೋ, ಕ್ರಿಷ್ಣ ಅವರ ಈ ಓವರಿನಲ್ಲಿ ಮತ್ತೊಂದು ಸಿಕ್ಸ್ ಹಾಗೂ ಎರಡು ಬೌಂಡರಿ ಬಾರಿಸಿದ್ದಾರೆ. ಅವರ ಸ್ಕೋರ್ 28, ಇಂಗ್ಲೆಂಡ್ 46/0, ಈ ಓವರ್ನಲ್ಲಿ ಕ್ರಿಷ್ಣ 22 ರನ್ ನೀಡಿದರು
ಬೇರ್ಸ್ಟೋಗೆ 6
ಪ್ರಸಿಧ್ ಕ್ರಿಷ್ಣ ಅವರ ಓವರ್ಪಿಚ್ ಎಸೆತವನ್ನು ಜಾನಿ ಬೇರ್ಸ್ಟೋ ನೇರವಾಗಿ ಎತ್ತಿ ಬಾರಿಸಿ 6 ರನ್ ಗಳಿಸಿದ್ದಾರೆ, ಇಂಗ್ಲೆಂಡ್ 30/0
ರಾಯ್ಗೆ 4
ಜೇಸನ್ ರಾಯ್ ಅವರು ಕ್ರಿಷ್ಣಅವರ ಓವರ್ಪಿಚ್ ಎಸೆತವನ್ನು ಸ್ಟ್ರೇಟ್ ಡ್ರೈವ್ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಸ್ಕೋರ್ 21/0 (4 ಓವರ್ಗಳು)
ಭಾವುಕರಾದ ಪಾಂಡ್ಯ ಸಹೋದರರು
ತಾನಾಡಿದ ಮೊದಲ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲೇ ಭರ್ಜರಿ ಅರ್ಧ ಶತಕ ಬಾರಿಸಿದ ಕೃಣಾಲ್ ಪಾಂಡ್ಯ ಮೈದಾನದಲ್ಲಿ ತಮ್ಮ ಸಹೋದರ ಹಾರ್ದಿಕ್ ಅವರನ್ನು ತಬ್ಬಿಕೊಂಡು ತೀವ್ರ ಭಾವುಕರಾದರು
This is all heart ??
A teary moment for ODI debutant @krunalpandya24 post his brilliant quick-fire half-century??@hardikpandya7 #TeamIndia #INDvENG @Paytm pic.twitter.com/w3x8pj18CD
— BCCI (@BCCI) March 23, 2021
ಪ್ರಸಿಧ್ ಕ್ರಿಷ್ಣ ಓವರ್ನಲ್ಲಿ 7 ರನ್
ಪ್ರಸಿಧ್ ಕ್ರಿಷ್ಣ ತಮ್ಮ ಅಂತರರಾಷ್ಟ್ರೀಯ ಕರೀಯರ್ನ ಮೊದಲ ಓವರ್ನಲ್ಲಿ 7 ರನ್ ನೀಡಿದರು, ಸ್ಕೋರ್ 9/0
ಕ್ರಿಷ್ಣನಿಗೆ ಚೆಂಡೆಸದ ಕೊಹ್ಲಿ
ಭಾರತದ ಪರ ಎರಡನೇ ಓವರ್ ಕನ್ನಡಿಗ ಪ್ರಸಿಧ್ ಕ್ರಿಷ್ಣ ಎಸೆಯುತ್ತಿದ್ದಾರೆ, ಇಂಗ್ಲೆಂಡ್ ಸ್ಕೋರ್ 2/0
ಮೊದಲ ಓವರ್ನಲ್ಲಿ 2 ರನ್
ಭುವನೇಶ್ವರ್ ಕುಮಾರ ತಮ್ಮ ಮೊದಲ ಓವರ್ನಲ್ಲಿ 2 ರನ್ ನೀಡಿದರು, ಇಂಗ್ಲೆಂಡ್ ಸ್ಕೋರ್ 2/0
ಇಂಗ್ಲೆಂಡ್ ಇನ್ನಿಂಗ್ಸ್ ಆರಂಭವಾಗಿದೆ
ಇಂಗ್ಲೆಂಡ್ ಇನ್ನಿಂಗ್ಸ್ ಆರಂಭಿಸಲು ಜೇಸನ್ ರಾಯ್ ಮತ್ತು ಜಾನಿ ಬೇರ್ಸ್ಟೋ ಬಂದಿದ್ದಾರೆ, ಭಾರತದ ದಾಳಿಯನ್ನು ಭುವನೇಶ್ವರ್ ಕುಮಾರ್ ಶುರುಮಾಡಿದ್ದಾರೆ
ಕೊನೆ ಎಸೆತದಲ್ಲಿ ಸಹ 4
ಇನ್ನಿಂಗ್ಸ್ ಕೊನೆಯ ಎಸೆತವನ್ನು ರಾಹುಲ್ ಫೈನ್ಲೆಗ್ ಬೌಂಡರಿ ಕಡೆ ಸ್ವಿಂಗ್ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಭಾರತದ ಆಂತಿಮ ಸ್ಕೋರ್ 317/5, ರಾಹುಲ್ ಅಜೇಯ 62 (4 ಬೌಂಡರಿ, 4 ಸಿಕ್ಸ್ ), ಕೃಣಾಲ್ ಅಜೇಯ 58 (7 ಬೌಂಡರಿ, 2 ಸಿಕ್ಸ್ )
ಪಾಂಡ್ಯಗೆ ಇನ್ನೊಂದು 4
ಮಾರ್ಕ್ ವುಡ್ ಎಸೆಯುತ್ತಿರುವ ಕೊನೆ ಓವರನಲ್ಲಿ ಪಾಂಡ್ಯ ಮತ್ತೊಂದು 4 ಬಾರಿಸಿದ್ದಾರೆ, ಭಾರತದ ಸ್ಕೋರ್ 308/5
ಜೊತೆಯಾಟ 100!
ರಾಹುಲ್ ಮತ್ತು ಪಾಂಡ್ಯ ನಡುವೆ 6ನೇ ವಿಕೆಟ್ಗೆ ಕೇವಲ 52 ಎಸೆತಗಳಲ್ಲಿ 100 ರನ್ಗಳ ಜೊತೆಯಾಟ ಬಂದಿದೆ
ರಾಹುಲ್ ಸಿಕ್ಸ್, ಭಾರತ 300+
ರಾಹುಲ್ ಅವರ ಭರ್ಜರಿ ಸಿಕ್ಸ್ನೊಂದಿಗೆ ಭಾರತದ ಸ್ಕೋರ್ 304/5 ಆಗಿದೆ, ಕೊನೆಯ ಓವರ್ ಬಾಕಿಯುಳಿದಿದೆ
ರಾಹುಲ್ಗೂ ಅರ್ಧ ಶತಕ
ರಾಹುಲ್ ಸಹ ತಮ್ಮ ಅರ್ಧ ಶತಕ ಕೇವಲ 39 ಎಸೆತಗಳಲ್ಲಿ (3 ಬೌಂಡರಿ 3 ಸಿಕ್ಸ್) ಗಳಿಸಿದ್ದಾರೆ, ಭಾರತದ ಸ್ಕೋರ್ 298/5
ಪಾಂಡ್ಯ 50
ಕೃಣಾಲ್ ಪಂಡ್ಯ ತಾನಾಡಿದ ಮೊದಲ ಒಡಿಐ ಪಂದ್ಯದಲ್ಲೇ ಮಿಂಚಿನ ಅರ್ಧ ಶತಕ ಬಾರಿಸಿದ್ದಾರೆ, ಅವರ 50 ರನ್ ಕೇವಲ 26 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸ್ನೊಂದಿಗೆ ಬಂದಿವೆ
ಪಾಂಡ್ಯಗೆ 4 ಮತ್ತು 6
ಕೃಣಾಲ್ ಪಾಂಡ್ಯ ಅವರು ವುಡ್ ದಾಳಿಯಲ್ಲಿ ಒಂದು 4 ಮತ್ತೊಂದು ಸಿಕ್ಸ್ ಬಾರಿಸಿ ತಮ್ಮ ಸ್ಕೋರನ್ನು 48ಕ್ಕೆ ಒಯ್ದಿದ್ದಾರೆ (24 ಎಸೆತಗಳು), ಭಾರತ 290/5
ರಾಹುಲ್ಗೆ ಸಿಕ್ಸ್
ರಾಹುಲ್ ಅವರು ವುಡ್ ಎಸೆತವನ್ನು ಮಿಡ್ವಿಕೆಟ್ ಮೇಲಿಂದ ಎತ್ತಿ ಬಾರಿಸಿ 6 ರನ್ ಗಿಟ್ಟಿಸಿದ್ದಾರೆ, ಅವರ ಸ್ಖೋರ್ 45, ಭಾರತ 278/5
ಪಾಂಡ್ಯಗೆ 6
ಕೃಣಾಲ್ ಪಾಂಡ್ಯ ಟಾಮ್ ಕರನ್ ಎಸೆತವನ್ನು ಮಿಡ್ವಿಕೆಟ್ ಮೇಲಿಂದ ಸಿಕ್ಸರ್ಗೆ ಬಾರಿಸಿದ್ದಾರೆ, ಅವರ ಸ್ಕೋರ್ 36, ಭಾರತ 269/5 ರಾಹುಲ್ 39 ಭಾರತ 271/5 (47 ಓವರ್)
ರಾಹುಲ್ಗೆ ಇನ್ನೊಂದು ಬೌಂಡರಿ
ರಾಶಿದ್ ಎಸೆತವನ್ನು ರಾಹುಲ್ ಸ್ವೀಪ್ ಮಾಡಿ ಬೌಂಡರಿ ಗಿಟ್ಟಿಸಿದ್ದಾರೆ, ಅವರ ಸ್ಕೋರ್ 36, ಭಾರತ 259/5 (46ನೇ ಓವರ್)
ರಾಹುಲ್ಗೆ ಬೌಂಡರಿ
ರಾಹುಲ್ ಅವರು ಕರನ್ ಎಸೆತವನ್ನು ಕವರ್ ಬೌಂಡರಿ ಮೇಲಿಂದ ಬಾರಿಸಿ 4 ರನ್ ಗಿಟ್ಟಿಸಿದ್ದಾರೆ, ಅವರ ಸ್ಕೋರ್ 31, ಭಾರತ 251/5
ಪಾಂಡ್ಯಗೆ 4
ಕೃಣಾಲ್ ಪಾಂಡ್ಯ ಮತ್ತೊಂದಿ 4 ಬಾರಿಸಿದ್ದಾರೆ, ಅವರ ಸ್ಕೋರ್ 24, ಭಾರತದ ಸ್ಕೋರ್ 245/5, ರಾಹುಲ್ 27
44 ಓವರ್ಗಳ ನಂತರ 238/5
44 ಓವರ್ಗಳ ನಂತರ ಭಾರತದ ಸ್ಕೋರ್ 238/5, ರಾಹುಲ್ 25 , ಕೃಣಾಲ್ 19, ಟಾಮ್ ಕರನ್ ಆಕ್ರಮಣ ನಡೆಸಲು ಬಂದಿದ್ದಾರೆ.
ರಾಹುಲ್ಗೆ ಸಿಕ್ಸ್
ರಾಹುಲ್ ಅವರು ರಾಶಿದ್ ಎಸೆತವನ್ನು ನೇರವಾಗಿ ಎತ್ತಿ ಬಾರಿಸಿ 6 ರನ್ ಗಳಿಸಿದ್ದಾರೆ, ಅವರ ಸ್ಕೋರ್ 22, ಭಾರತ 233/5
ಪಾಂಡ್ಯಗೆ ಮತ್ತೊಂದು 3
ಬೆನ್ಸ್ ಸ್ಟೋಕ್ಸ್ ಎಸೆತವನ್ನು ಪಾಂಡ್ಯ ಬೌಂಡರಿಗಟ್ಟಿದ್ದಾರೆ, ಅವರ ಸ್ಕೋರ್ 19, ಭಾರತ 227/5
ಒಂದು ಓವರ್ನಲ್ಲಿ ಪಾಂಡ್ಯಗೆ 3 ಫೋರ್
ಸ್ಯಾಮ್ ಕರನ್ ಅವರ ಓವರನಲ್ಲಿ ಕೃಣಾಲ್ ಪಾಂಡ್ಯ 3 ಬೌಂಡರಿಗಳನ್ನು ಬಾರಿಸಿದ್ದಾರೆ, ಭಾರತದ ಸ್ಕೊರ್ 218/4
ಕೃಣಾಲ್ ಮೊದಲ 4
ಕೃಣಾಲ್ ಪಾಂಡ್ಯ ಒಡಿಐಗಳಲ್ಲಿ ತಮ್ಮ ಮೊದಲ 4 ಬಾರಿಸಿದ್ದಾರೆ, ನಂತರದ ಎಸೆತವನ್ನೂ ಬೌಂಡಿಗಟ್ಟಿದ್ದಾರೆ, ಅವರ ಸ್ಕೋರ್ 9, ಭಾರತ 214/5 (42ನೇ ಓವರ್)
ಪಾಂಡ್ಯ ಔಟ್
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಿರಾಶೆಗೊಳಿಸಿದ್ದಾರೆ, ಕೇವಲ 1 ರನ್ ಗಳಿಸಿ ಪೆವಿಲಿಯನ್ಗೆ ಮರಳಿದ್ದಾರೆ, ಅವರ ಸ್ಥಾನದಲ್ಲಿ ಆಡಲು ಸಹೋದರ ಕೃಣಾಲ್ ಪಾಂಡ್ಯ ಬಂದಿದ್ದಾರೆ, ಭಾರತದ ಸ್ಕೋರ್ 206/5
ರಾಹುಲ್ಗೆ 6
ರಾಹುಲ್ ಅವರು ಸ್ಯಾಮ್ ಕರನ್ ಎಸೆತವನ್ನು ಮಿಡ್ವಿಕೆಟ್ ಮೇಲೆ 6 ರನ್ಗಳಿಗೆ ಪುಲ್ ಮಾಡಿದ್ದಾರೆ, ಅವರ ಸ್ಕೋರ್ 13,
40 ನೇ ಓವರ್ನಲ್ಲಿ ಭಾರತದ ಸ್ಕೋರ್ 205/ 4
ಧವನ್ ಔಟ್
ಶಿಖರ್ ಧವನ್ ಶತಕದಂಚಿನಲ್ಲಿ ಔಟಾಗಿದ್ದಾರೆ, ಅವರ 98 ರನ್ 106 ಎಸೆತಗಳಲ್ಲಿ ಬಂದಿವೆ, ಇದರಲ್ಲಿ 11 ಬೌಂಡರಿ ಮತ್ತು 2 ಸಿಕ್ಸ್ ಸೇರಿವೆ, ಬಾರತದ ಸ್ಕೋರ್ 197/4 (39 ನೇ ಓವರ್ ಜಾರಿಯಲ್ಲಿದೆ)
ಧವನ್ 98
ಧವನ್ ಶತಕಕ್ಕೆ ಹತ್ತಿರವಾಗಿದ್ದಾರೆ, ಅವರ ಸ್ಕೋರ್ 98 ಆಗಿದೆ, ಭಾರತದ ಸ್ಕೋರ್ 197/3, 38ನೇ ಓವರ್ ಜಾರಿಯಲ್ಲಿದೆ
ಇದು ಇಂಗ್ಲೆಂಡ್ ವಿರುದ್ಧ ಅವರ ಗರಿಷ್ಠ ಸ್ಕೋರ್ ಆಗಿದೆ
ರಾಹುಲ್ಗೆ ಮೊದಲ 4
ರಾಹುಲ್ ಸ್ಯಾಮ್ ಕರನ್ ಅವರ ಎಸೆತವನ್ನು ಥರ್ಡ್ಮ್ಯಾನ್ ಬೌಂಡರಿಗೆ ಗೈಡ್ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಭಾರತದ ಸ್ಕೋರ್ 193/3, ಧವನ್ 95
ಅಯ್ಯರ್ ಔಟ್
ಶ್ರೇಯಸ್ ಅಯ್ಯರ್ 6ರನ್ ಗಳಿಸಿ ಔಟಾಗಿದ್ದಾರೆ, ವುಡ್ಗೆ ಅವರು ವಿಕೆಟ್ ಒಪ್ಪಿಸಿದ್ದಾರೆ, ಭಾರತದ ಸ್ಕೋರ್ 187/3 (35ನೇ ಓವರ್)
ಅಯ್ಯರ್ ಸ್ಥಾನದಲ್ಲಿ ಕೆ ಎಲ್ ರಾಹುಲ್ ಆಡಲು ಬಂದಿದ್ದಾರೆ
ಅಯ್ಯರ್ಗೆ ಮೊದಲ 4
ಅಯ್ಯರ್ ಅವರಿ ವುಡ್ ಎಸೆತವನ್ನು ಪುಲ್ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಅವರ ಸ್ಕೋರ್ 6, ಭಾರತ 187/2 (35ನೇ ಓವರ್)
ಧವನ್ಗೆ ಇನ್ನೊಂದು 4
ಧವನ್ ಇನ್ನೊಂದು ಬೌಂಡರಿ ಬಾರಿಸಿ ತಮ್ಮ ಸ್ಕೋರನ್ನು 95ಕ್ಕೆ ಏರಿಸಿಕೊಂಡಿದ್ದಾರೆ, ಭಾರತದ ಸ್ಕೋರ್ 183/2ಮ ಅಯ್ಯರ್ 2
ಧವನ್ಗೆ 4
ಶಿಖರ್ ಧವನ್ ಮತ್ತೊಂದು 4 ಬಾರಿಸಿ 90ರಲ್ಲಿ ಪ್ರವೇಶಿಸಿದ್ದಾರೆ, ಅವರ ಸ್ಕೋರ್ 91, ಭಾರತ 178/2, ಕೊಹ್ಲಿ ಜಾಗದಲ್ಲಿ ಶ್ರೇಯಸ್ ಅಯ್ಯರ್ ಆಡಲು ಬಂದಿದ್ದಾರೆ
ಕೊಹ್ಲಿ ಔಟ್!
ನಾಯಕ ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ 56 ರನ್ ಬಾರಿಸಿ ಔಟಾಗಿದ್ದಾರೆ, ಅವರ ಸ್ಕೋರಿನಲ್ಲಿ 6 ಬೌಂಡರಿಗಳಿದ್ದವು, ಭಾರತದ ಸ್ಕೋರ್ 169/2
Big wicket for England!
Mark Wood picks up the prized scalp of Virat Kohli, sending him back for 56.#INDvENG | https://t.co/8Dw1dxYDEK pic.twitter.com/46o6d0LVZz
— ICC (@ICC) March 23, 2021
100 ರನ್ ಜೊತೆಯಾಟ
ಶಿಖರ್ ಧವನ್ (81) ಮತ್ತು ವಿರಾಟ್ ಕೊಹ್ಲಿ (54) ಅವರ ನಡುವೆ ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 100 ರನ್ ಬಂದಿವೆ, ಭಾರತದ ಸ್ಕೋರ್ 166/1
1⃣0⃣0⃣-run partnership! ??@SDhawan25 & captain @imVkohli complete a century stand in 95 balls. ??#TeamIndia 164/1 after 31 overs. @Paytm #INDvENG
Follow the match ? https://t.co/MiuL1livUt pic.twitter.com/MoEumKtGJG
— BCCI (@BCCI) March 23, 2021
ಧವನ್ಗೆ 4
ಧವನ್ ಅವರು ವುಡ್ ಎಎತವನ್ನು ಬೌಂಡರಿಗಟ್ಟಿ 4 ರನ್ ಗಳಿಸಿದ್ದಾರೆ, ಅವರ ಸ್ಕೋರ್ 81, ಭಾರತ 164/1, ಕೊಹ್ಲಿ 53
ಕೊಹ್ಲಿ 50
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಅರ್ಧ ಶತಕ ಪೂರೈಸಿದ್ದಾರೆ, ಅವರ 50 ರನ್ 50 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ ಬಂದಿವೆ, ಭಾರತದ ಸ್ಕೋರ್ 153/1, ಕೊಹ್ಲಿ-ಶಿಖರ್ ಜೊತೆಯಾಟ ಶತಕದ ಗಡಿ ಸಮೀಪಿಸಿದೆ
Leading from the front ?
India skipper @imVkohli brings up his 61st ODI fifty!#INDvENG | https://t.co/8Dw1dxYDEK pic.twitter.com/9qVk4192d7
— ICC (@ICC) March 23, 2021
ಧವನ್ಗೆ ಸಿಕ್ಸ್ ಮತ್ತು ಬೌಂಡರಿ
ಮೊಯೀನ್ ಅವರ ಈ ಓವರ್ನಲ್ಲಿ ಧವನ್ 1 ಸಿಕ್ಸ್ ಮತ್ತು 1 ಫೋರ್ ಬಾರಿಸಿದ್ದಾರೆ, ಭಾರತದ ಸ್ಕೋರ್ 150/1, ಕೊಹ್ಲಿ 49
ಮೊಯೀನ್ ಓವರ್ನಲ್ಲಿ 5 ರನ್
ಮೊಯೀನ್ ಅವರ ಓವರ್ನಲ್ಲಿ 5 ರನ್ ಬಂದಿವೆ, ಭಾರತದ ಸ್ಕೋರ್ 129/1, ಕೊಹ್ಲಿ 42, ಧವನ್ 59, 28ನೇ ಓವರ್ ಜಾರಿಯಲ್ಲಿದೆ
ಕೊಹ್ಲಿಗೆ ಬೌಂಡರಿ
ವಿರಾಟ್ ಕೊಹ್ಲಿ ಅವರು ರಾಶಿದ್ ಎಸೆತವನ್ನು ಬೌಂಡಿರಿಗಟ್ಟಿದ್ದಾರೆ, ಅವರ ಸ್ಕೋರ್ 38, ಭಾರತ 125/1, ಧವನ್ 57, 26 ಓವರ್ಗಳ ಆಟ ಮುಗಿದಿದೆ
ಧವನ್ ಅರ್ಧ ಶತಕ
ಶಿಖರ್ ಧವನ್ ಅರ್ಧ ಶತಕ ಪೂರೈಸಿದ್ದಾರೆ, ಅವರ 50 ರನ್ಗಳು 70 ಎಸೆತಗಳಲ್ಲಿ ಬಂದಿವೆ, ಧವನ್ ಸ್ಕೋರ್ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸ್ಗಳಿವೆ
1⃣0⃣0⃣ up for #TeamIndia! ?
3⃣1⃣st ODI fifty for @SDhawan25! ?@Paytm #INDvENG
Follow the match ? https://t.co/MiuL1livUt pic.twitter.com/4HMc138SVc
— BCCI (@BCCI) March 23, 2021
ಕೊಹ್ಲಿಗೆ ಮೊದಲ ಬೌಂಡರಿ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಮೊದಲ ಬೌಂಡರಿ ಬಾರಿಸಿದ್ದಾರೆ. ಆದಿಲ್ ರಾಶಿದ್ ಅವರ ಎಸೆತವನ್ನು ಎಕ್ಸ್ಟ್ರಾ ಕವರ್ ಡ್ರೈವ್ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಭಾರತದ ಸ್ಕೋರ್ 88/1
17 ಓವರ್ಗಳಲ್ಲಿ ಭಾರತ 75/1
17 ಓವರ್ಗಳ ನಂತರ ಭಾರತದ ಸ್ಕೋರ್ 75/1, ಶಿಖರ್ ಧವನ್ 41, ಕೊಹ್ಲಿ 5, ಈ ಪಂದ್ಯದಲ್ಲಿ ಮೊದಲ ಬಾರಿಗೆ ಸ್ಪಿನ್ನರ್ ದಾಳಿಗಿಳಿದಿದ್ದಾರೆ, ಆದಿಲ್ ರಾಶಿದ್ರನ್ನು ದಾಳಿಗಿಳಿಸಲಾಗಿದೆ
ಧವನ್ಗೆ ಬೌಂಡರಿ
ಬೆನ್ ಸ್ಟೋಕ್ಸ್ ಅವರ ಓವರ್ನ ಕೊನೆಯ ಎಸೆತವನ್ನು ಧವನ್ ಬೌಂಡರಿಗಟ್ಟಿ 4 ರನ್ ಗಿಟ್ಟಿಸಿದ್ದಾರೆ, ಅವರ ಸ್ಕೋರ್ 39, ಭಾರತ 71/1, ಕೊಹ್ಲಿ 2
ರೋಹಿತ್ ಔಟ್
ಆರಂಭ ಆಟಗಾರ ರೋಹಿತ್ ಶರ್ಮ 42ಎಸೆತಗಳಲ್ಲಿ 28 ರನ್ ಗಳಿಸಿ (4 ಬೌಂಡರಿ) ಬೆನ್ ಸ್ಟೋಕ್ಸ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ, ಭಾರತದ ಸ್ಕೋರ್ 65/1, ಅವರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಆಡಲು ಬಂದಿದ್ದಾರೆ
15ನೇ ಓವರ್ ಆರಂಭ
ಇಂಗ್ಲೆಂಡ್ ಪರ ಟಾಮ್ ಕರನ್ 15 ನೇ ಓವರ್ ಆರಂಭಿಸಿದ್ದಾರೆ, ಭಾರತದ ಸ್ಕೋರ್ 58/0, ರೋಹಿತ್ 23, ಧವನ್ 33. ಕರನ್ ಅವರ ಮೂರನೇ ಎಸೆತವನ್ನು ರೋಹಿತ್ ಬೌಂಡರಿಟ್ಟಿದ್ದಾರೆ, ಅವರ ಸ್ಕೋರ್ 27, ಭಾರತ 63/0
ಶಿಖರ್ಗೆ ಬೌಂಡರಿ
ಬೆನ್ ಸ್ಟೋಕ್ಸ್ ಅವರ ಶಾರ್ಟ್ ಎಸೆತವನ್ನು ಫೈನಲೆಗ್ ಬೌಂಡರಿಗೆ ಹುಕ್ ಮಾಡಿ ಧವನ್ 4 ರನ್ ಗಿಟ್ಟಿಸಿದ್ದಾರೆ, ಅವರ ಸ್ಕೊರ್ 33, ರೋಹಿತ್ 23, ಭಾರತ 57/0, 13ನೇ ಓವರ್ ಜಾರಿಯಲ್ಲಿದೆ
ಭಾರತದ 50
13ನೇ ಓವರ್ನಲ್ಲಿ ಭಾರತದ 50 ರನ್ ಪೂರ್ತಿಗೊಂಡಿವೆ
ಬೌಲಿಂಗ್ನಲ್ಲಿ ಮೊದಲ ಬದಲಾವಣೆ
ಮೊದಲ ಬೌಲಿಂಗ್ ಪರಿವರ್ತನೆಯಾಗಿ ಸ್ಯಾಮ್ ಅವರ ಸಹೋದರ ಟಾಮ್ ಕರನ್ ದಾಳಿಗಿಳಿದಿದ್ದಾರೆ
10 ಓವರ್ 39 ರನ್
ಮೊದಲ 10 ಓವರ್ಗಳಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೆ 39 ರನ್ ಗಳಿಸಿದೆ, ಧವನ್ 20, ರೋಹಿತ್ 19
ರೋಹಿತ್ ಮತ್ತೊಂದು ಆಕರ್ಷಕ ಹೊಡೆತ
ಈ ಬಾರಿ ರೋಹಿತ್ ಅಷ್ಟೇ ಮನಮೋಹಕವಾಗಿ ಚೆಂಡನ್ನು ಸ್ಟ್ರೇಟ್ ಡ್ರೈವ್ ಮಾಡಿ 4 ರನ್ ಗಿಟ್ಟಿಸಿದ್ದಾರೆ, ಭಾರತದ ಸ್ಕೋರ್ 34/0
ರೋಹಿತ್ ಭರ್ಜರಿ ಹೊಡೆತ
ರೋಹಿತ ಬ್ಯಾಟ್ನಿಂದ ಇಂದಿನ ಮೊದಲ ಅಕ್ರಮಣಕಾರಿ ಮತ್ತು ಅಧಿಕಾರಯುತ ಹೊಡೆ್ತ, ಕವರ್ ಫೀಲ್ಡರ್ ತಲೆ ಮೇಲಿಂದ ಬೌಂಡರಿಗೆ ಚಿಮ್ಮಿದ ಚೆಂಡು, ಭಾರತ 30/0
ಧವನ್ಗೆ ಜೀವದಾನ
ಧವನ್ ಅವರ ಶಕ್ತಿಯುತವಾಗಿ ಗಾಳಿಯಲ್ಲಿ ಬಾರಿಸಿದ ಚೆಂಡನ್ನು ಪಾಯಿಂಟ್ನಲ್ಲಿದ್ದ ಫೀಲ್ಡರ್ ಕ್ಯಾಚ್ ಮಾಡಲು ವಿಫಲರಾದರು, ಭಾರತದ ಸ್ಕೋರ್ 25/0 (8ನೇ ಓವರ್)
ಧವನ್ಗೆ ಮತ್ತೊಂದು ಬೌಂಡರಿ
ವುಡ್ ಅವರ ಓವರ್ಪಿಚ್ ಎಸೆತವನ್ನು ಕವರ್ ಡ್ರೈವ್ ಮಾಡಿ ಧವನ್ ಈ ಓವರ್ನಲ್ಲಿ ಮತ್ತೊಂದು 4 ಗಿಟ್ಟಿಸಿದ್ದಾರೆ, ಅವರ ಸ್ಕೋರ್ 16, ಭಾರತ 24/0
ಧವನ್ಗೆ ಬೌಂಡರಿ
ಧವನ್ ಅವರು ವುಡ್ ಎಸೆತವನ್ನು ಮತ್ತೊಮ್ಮೆ ಪಾಯಿಂಟ್ ಬೌಂಡರಿಗೆ ಅಟ್ಟಿ 4 ರನ್ ಪಡೆದಿದ್ದಾರೆ
ರೋಹಿತ್ಗೆ ಮೊದಲ 4
ಕರನ್ ಅವರ ಎಸೆತವನ್ನು ಫೈನ್ಲೆಗ್ಗೆ ಫ್ಲಿಕ್ ಮಾಡಿ ರೋಹಿತ್ ತಮ್ಮ ಮೊದಲ ಬೌಂಡರಿ ಗಿಟ್ಟಿಸಿದ್ದಾರೆ, ಭಾರತದ ಸ್ಕೋರ್ 15/0 (6 ಓವರ್)
ರನ್ ಗಳಿಸಲು ಪರದಾಟ
ಭಾರತದ ಆರಂಭ ಆಟಗಾರರು ರನ್ ಗಳಿಸಲು ಪರದಾಡುತ್ತಿದ್ದಾರೆ
ಭಾವುಕ ಕ್ಷಣ
ಒಂದು ದಿನದ ಪಂದ್ಯಗಳಿಗೆ ಇಂದು ಪದಾರ್ಪಣೆ ಮಾಡಿದ ಅಣ್ಣ ಕೃಣಾಲ್ ಪಾಂಡ್ಯ ಅವರನ್ನು ಸಂತಸದಿಂದ ತಬ್ಬಿಕೊಂಡಿರುವ ಹಾರ್ದಿಕ್ ಪಾಂಡ್ಯ!
Some brotherly love ??
A moment to cherish for the duo ?#TeamIndia #INDvENG @Paytm pic.twitter.com/UYwt5lmlQq
— BCCI (@BCCI) March 23, 2021
ರೋಹಿತ್ ಮೊಣಕೈಗೆ ಪೆಟ್ಟು
ವುಡ್ ಅವರ 148 ಕಿ ಮೀ ವೇಗದ ಎಸೆತವೊಂದು ರೋಹಿತ್ ಅವರ ಮೊಣಕೈಗೆ ಅಪ್ಪಳಿಸಿದೆ, ಅವರಿಗೆ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ
ಸ್ಯಾಮ್ ಮೇಡನ್ ಓವರ್
ಸ್ಯಾಮ್ ಕರನ್ ಎರಡನೇ ಓವರ್ ಮೇಡನ್ ಆಗಿದೆ, ಭಾರತ 10/0
ಸ್ಯಾಮ್ ದಾಳಿ ಮುಂದುವರಿಸಿದ್ದಾರೆ
ಮತ್ತೊಂದು ತುದಿಯಿಂದ ಸ್ಯಾಮ್ ಕರನ್ ತಮ್ಮ ಎರಡನೇ ಓವರ್ ಬೌಲ್ ಮಾಡುತ್ತಿದ್ದಾರೆ, ಭಾರತ 10/0
ಚೆಂಡಿನ ಆಕಾರ ಬದಲು
ಶಿಖರ್ ಅವರ ಹೊಡೆತಕ್ಕೆ ಚೆಂಡಿನ ಆಕಾರ ಬದಲಾಗಿದ್ದರಿಂದ ಅದನ್ನು ಬದಲಾಯಿಸಲಾಗಿದೆ, 3ನೇ ಓವರ್ ಮುಗಿದಿದೆ, ಭಾರತ 10/0
ಶಿಖರ್ಗೆ ಮೊದಲ 4
ಮಾರ್ಕ್ ವುಡ್ ಶಾರ್ಟ್ ಎಸೆತವನ್ನು ಪಾಂಯಿಂಟ್ ಬೌಂಡರಿ ಕಡೆ ಸ್ಕ್ವೇರ್ ಡ್ರೈವ್ ಮಾಡಿ ಶಿಖರ್ 4 ರನ್ ಗಿಟ್ಟಿಸಿದ್ದಾರೆ, ಭಾರತ 9/0
ಭಾರತ 5/0
ಎರಡು ಓವರ್ಗಳ ನಂತರ ಭಾರತದ ಸ್ಖೋರ್ 5/0, ಶಿಖರ್ ಧವನ್ 1, ರೋಹಿತ್ ಶರ್ಮ 4
ಶಿಖರ್- ಶರ್ಮ ಓಪನರ್ಸ್
ಭಾರತದ ಪರ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಇನ್ನಿಂಗ್ಸ್ ಆರಂಭಿಸಲು ಬಂದಿದ್ದಾರೆ. ಮಾರ್ಕ್ ವುಡ್ ಬೌಲಿಂಗ್ ದಾಳಿ ಆರಂಭಿಸಿದ್ದಾರೆ
ಟಾಸ್ ಗೆದ್ದ ಇಂಗ್ಲೆಂಡ್
ಮೊದಲ ಒಡಿಐನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡ್ ಮಾಡುವ ನಿರ್ಣಯ ತೆಗೆದುಕೊಂಡಿದೆ
Toss Update:
England have won the toss & elected to bowl against #TeamIndia in the first @Paytm #INDvENG ODI.
Follow the match ? https://t.co/MiuL1livUt pic.twitter.com/5k5Z5yb8rr
— BCCI (@BCCI) March 23, 2021
ಪುಣೆ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 66 ರನ್ಗಳ ವಿಜಯ ದಾಖಲಿಸಿದೆ. ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಗೆಲುವು ದಾಖಲಿಸಿದ್ದ ಭಾರತ ಈ ಮೂಲಕ ಏಕದಿನ ಸರಣಿಯನ್ನೂ ಗೆಲ್ಲುವ ಭರವಸೆ ನೀಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಭಾರತ ಗೆಲುವಿನ ದಾಪುಗಾಲು ಇಟ್ಟಿದೆ. 318 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 251 ರನ್ ಗಳಿಸುವಷ್ಟರಲ್ಲಿ ಸುಸ್ತಾಗಿದೆ. ಆರಂಭಿಕರಾದ ಜೇಸನ್ ರಾಯ್, ಬೇರ್ಸ್ಟೋ ಹೊರತುಪಡಿಸಿ ಉಳಿದ ಆಟಗಾರರು 30 ರನ್ ಗಡಿ ದಾಟಲು ಕೂಡ ವಿಫಲರಾಗಿದ್ದಾರೆ. ಭಾರತದ ಪರ ಪ್ರಸಿದ್ಧ್ ಕೃಷ್ಣ 4, ಶಾರ್ದುಲ್ ಠಾಕುರ್ 3 ಹಾಗೂ ಭುವನೇಶ್ವರ್ ಕುಮಾರ್ 2 ವಿಕೆಟ್ ಕಬಳಿಸಿ ಗೆಲುವಿಗೆ ನೆರವಾಗಿದ್ದಾರೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಒಂದು ದಿನದ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅತಿಥೇಯರು ನಿಗದಿತ 50 ಓವರ್ಗಳಲ್ಲಿ ಭಾರಿ ಎನ್ನಬಹುದಾದ 317/5 ಮೊತ್ತ ಗಳಿಸಿದರು. ಆರಂಭ ಆಟಗಾರ ಶಿಖರ್ ಧವನ್ ಕೇವಲ 2 ರನ್ಗಳಿಂದ ಶತಕ ಬಾರಿಸುವುದನ್ನು ತಪ್ಪಿಸಿಕೊಂಡರು.
ಆದರೆ ಭಾರತದ ಮೊತ್ತ 300 ಗಡಿ ದಾಟಲು, ಕೆ ಎಲ್ ರಾಹುಲ್ ರಾಹುಲ್ ಅಜೇಯ 62 (4 ಬೌಂಡರಿ, 4 ಸಿಕ್ಸ್ ) ಮತ್ತು ಡೆಬ್ಯುಟಂಟ್ ಕೃಣಾಲ್ ಪಾಂಡೆ ಅಜೇಯ 58 (7 ಬೌಂಡರಿ, 2 ಸಿಕ್ಸ್ ) ಅವರು 6ನೇ ವಿಕೆಟ್ಗೆ ಕೇವಲ 57 ಎಸೆತಗಳಲ್ಲಿ 112 ರನ್ ಸೇರಿಸಿದ್ದು ಪ್ರಮುಖ ಕಾರಣವಾಯಿತು. ಮೊದಲ ಪಂದ್ಯವಾಡುತ್ತಿದ್ದರೂ ಮೈ ಚಳಿ ಬಿಟ್ಟವರಂತೆ ಆಡಿದ ಕೃಣಾಲ್ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದರು.
Superb bowling display by #TeamIndia ?? after ??????? got off to a rollicking start ??
India win by 6️⃣6️⃣ runs and take a 1-0 lead in the 3-match ODI series #INDvENG @Paytm
Scorecard ? https://t.co/MiuL1livUt pic.twitter.com/0m58T6SdKq
— BCCI (@BCCI) March 23, 2021
ಭಾರತಕ್ಕೆ ಧವನ್ ಮತ್ತು ರೋಹಿತ್ ಶರ್ಮ ಮೊದಲ ವಿಕೆಟ್ಗೆ 64 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ರೋಹಿತ್ 42 ಎಸೆತಗಳಲ್ಲಿ 28 ರನ್ (4 ಬೌಂಡರಿ) ಬಾರಿಸಿ ಔಟಾದರು.
ನಂತರ ಧವನ್ ಮತ್ತು ನಾಯಕ ವಿರಾಟ್ ಕೊಹ್ಲಿ ಎರಡನೇ ವಿಕೆಟ್ಗೆ ಸುಮಾರು 16 ಓವರ್ಗಳಲ್ಲಿ 105 ರನ್ ಸೇರಿಸಿದರು. 60 ಎಸೆತಗಳಲ್ಲಿ 56 ರನ್ (6 ಬೌಂಡರಿ) ಬಾರಿಸಿದ ಕೊಹ್ಲಿ ಮಾರ್ಕ್ ವುಡ್ಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅವರ ಬ್ಯಾಟ್ನಿಂದ ಉತ್ತಮ ಕಾಣಿಕೆ ಬರಲಿಲ್ಲ.
ಧವನ್ (98, 106 ಎಸೆತ, 11 ಬೌಂಡರಿ, 2 ಸಿಕ್ಸ್ ) ಶತಕ ಬಾರಿಸಿಸುವುದು ಖಚಿತ ಅನ್ನೋ ಸಂದರ್ಭದಲ್ಲಿ ವಿಕೆಟ್ ಚೆಲ್ಲಿದರು. ಅವರು ಔಟಾದಾಗ ಭಾರತದ ಸ್ಕೋರ್ 197/4 ಆಗಿತ್ತು. ಪಾಂಡ್ಯ ಸಹೋದರರಲ್ಲಿ ಕಿರಿಯರಾಗಿರುವ ಹಾರ್ದಿಕ್ ಇವತ್ತು ಕಮಾಲ್ ತೋರಿಸದೆ ಔಟಾದರು. ಆದರೆ ಆ ಕೊರತೆಯನ್ನು ಅಣ್ಣ ಕೃಣಾಲ್ ನೀಗಿದರು.
ಕೃಣಾಲ್ ಮತ್ತು ರಾಹುಲ್ ಆಂಗ್ಲ ಬೌಲರ್ಗಳನ್ನು ನಿರ್ದಯತೆಯಿಂದ ಚಚ್ಚಿದರು.
ಇಂಗ್ಲೆಂಡ್ ಪರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಬೆನ್ ಸ್ಟೋಕ್ಸ್ 8 ಓವರ್ಗಳಲ್ಲಿ ಕೇವಲ 34 ರನ್ ನೋಡಿ 3 ವಿಕೆಟ್ ಪಡೆದರು. ಮಾರ್ಕ್ ವುಡ್ 75 ರನ್ಗೆ 2 ವಿಕೆಟ್ ಪಡೆದರು.
ಕೃಣಾಲ್ ಪಾಂಡ್ಯ ಜೊತೆ ಕರ್ನಾಟಕದ ಪ್ರಸಿಧ್ ಕ್ರಿಷ್ಣ ಅವರು ಈ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ: Ind vs Eng 1st ODI: ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಕೃನಾಲ್ ಪಾಂಡ್ಯ ಭಾವುಕರಾಗಿ ಅತ್ತುಬಿಟ್ಟರು!
Published On - Mar 23,2021 9:35 PM