AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಟ್ ಆಕಾಂಕ್ಷಿ ಮೇಲೆ ಅತ್ಯಾಚಾರ, ಆಕೆ ಗರ್ಭಿಣಿ ಎಂದು ಗೊತ್ತಾದ್ಮೇಲೆ ಮದುವೆ, ಮಗಳು ಹುಟ್ಟಿದಾಕ್ಷಣ ಮನೆ ಬಿಟ್ಟು ಪರಾರಿ

ಮಾದಕದ್ರವ್ಯ ಕೊಟ್ಟು ನೀಟ್ ಆಕಾಂಕ್ಷಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದ ಘಟನೆ 2023ರಲ್ಲಿ ನಡೆದಿತ್ತು. ಆಕೆ ಗರ್ಭಿಣಿ(Pregnant) ಎಂದು ತಿಳಿದ ಬಳಿಕ ಇಬ್ಬರು ಸ್ನೇಹಿತರನ್ನು ದೇವಸ್ಥಾನಕ್ಕೆ ಕರೆದೊಯ್ದು ಅವರ ಎದುರು ಮದುವೆಯಾಗಿದ್ದರು. ಬಳಿಕ ಪತ್ನಿಗೆ ಹೆರಿಗೆಯಾಗಿ ಮಗಳು ಹುಟ್ಟಿದ ತಕ್ಷಣ ಮನೆಯಿಂದ ಪರಾರಿಯಾಗಿದ್ದಾರೆ. ಆಕೆ ನೀಟ್ ಪರೀಕ್ಷೆಗಾಗಿ ಲಕ್ನೋಗೆ ಬಂದಾಗ ಗೋಮತಿ ನಗರದಲ್ಲಿ ಉಳಿದುಕೊಂಡಿದ್ದಳು, ತರಬೇತಿ ಕೇಂದ್ರಕ್ಕೆ ಹಾಜರಾಗಿದ್ದಳು.

ನೀಟ್ ಆಕಾಂಕ್ಷಿ ಮೇಲೆ ಅತ್ಯಾಚಾರ, ಆಕೆ ಗರ್ಭಿಣಿ ಎಂದು ಗೊತ್ತಾದ್ಮೇಲೆ ಮದುವೆ, ಮಗಳು ಹುಟ್ಟಿದಾಕ್ಷಣ ಮನೆ ಬಿಟ್ಟು ಪರಾರಿ
ಕ್ರೈಂ Image Credit source: Shutterstock
ನಯನಾ ರಾಜೀವ್
|

Updated on: Feb 20, 2026 | 11:05 AM

Share

ಲಕ್ನೋ, ಫೆಬ್ರವರಿ 20: ಮಾದಕದ್ರವ್ಯ ಕೊಟ್ಟು ನೀಟ್ ಆಕಾಂಕ್ಷಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದ ಘಟನೆ 2023ರಲ್ಲಿ ನಡೆದಿತ್ತು. ಆಕೆ ಗರ್ಭಿಣಿ(Pregnant) ಎಂದು ತಿಳಿದ ಬಳಿಕ ಇಬ್ಬರು ಸ್ನೇಹಿತರನ್ನು ದೇವಸ್ಥಾನಕ್ಕೆ ಕರೆದೊಯ್ದು ಅವರ ಎದುರು ಮದುವೆಯಾಗಿದ್ದರು. ಬಳಿಕ ಪತ್ನಿಗೆ ಹೆರಿಗೆಯಾಗಿ ಮಗಳು ಹುಟ್ಟಿದ ತಕ್ಷಣ ಮನೆಯಿಂದ ಪರಾರಿಯಾಗಿದ್ದಾರೆ. ಆಕೆ ನೀಟ್ ಪರೀಕ್ಷೆಗಾಗಿ ಲಕ್ನೋಗೆ ಬಂದಾಗ ಗೋಮತಿ ನಗರದಲ್ಲಿ ಉಳಿದುಕೊಂಡಿದ್ದಳು, ತರಬೇತಿ ಕೇಂದ್ರಕ್ಕೆ ಹಾಜರಾಗಿದ್ದಳು.

ಆಗ ಕ್ಯಾಬ್ ಚಾಲಕನಾಗಿದ್ದ ಆದಿತ್ಯ ಯಾದವ್ ಎಂಬುವವನನ್ನು ಭೇಟಿಯಾಗಿದ್ದಳು. ಅದು ಕ್ರಮೇಣ ಪ್ರೇಮಕ್ಕೆ ತಿರುಗಿತ್ತು. ಒಂದು ದಿನ, ಯಾದವ್ ಪ್ರಿಯಾಳನ್ನು ಹೋಟೆಲ್ ಕೋಣೆಗೆ ಕರೆದೊಯ್ದು, ಚಹಾದಲ್ಲಿ ಮಾದಕ ದ್ರವ್ಯ ಬೆರೆಸಿ, ಅತ್ಯಾಚಾರ ಮಾಡಿದ್ದ, ಪರಿಣಾಮವಾಗಿ, ಆಕೆ ಗರ್ಭಿಣಿಯಾದಳು.

ಆಕೆ ಗರ್ಭಿಣಿಯಾಗಿರುವ ಸುದ್ದಿ ತಿಳಿದ ಯಾದವ್ ಮೊದಲು ಮದುವೆಯ ಪ್ರಸ್ತಾಪ ಮಾಡಿದ್ದ, ನಂತರ ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ತನ್ನ ಇಬ್ಬರು ಸ್ನೇಹಿತರ ಸಮ್ಮುಖದಲ್ಲಿ ದೇವಾಲಯದ ಮದುವೆ ಮಾಡಿಕೊಳ್ಳೋಣ ಎಂದು ಮನವೊಲಿಸಿದ್ದ. ಆದರೆ, ಆತ ಆಕೆಯನ್ನು ತಮ್ಮ ಕುಟುಂಬ ಸದಸ್ಯರಿಗೆ ಎಂದಿಗೂ ಪರಿಚಯಿಸಲೇ ಇಲ್ಲ.

ಮತ್ತಷ್ಟು ಓದಿ: Viral News: ಗರ್ಭಿಣಿ ಪ್ರೇಯಸಿಯನ್ನು ಚಲಿಸುವ ಕಾರಿನಿಂದ ತಳ್ಳಿದ ಯುವಕ

ದಂಪತಿಗೆ ಮಗಳು ಜನಿಸಿದಾಗ, ಯಾದವ್ ಆಕೆಯನ್ನು ಬಾಡಿಗೆ ಮನೆಗೆ ಕರೆದೊಯ್ದು ಮೂರು ದಿನಗಳ ಕಾಲ ಗಂಡನಾಗಿ ಅವಳೊಂದಿಗೆ ಇದ್ದ. ಆದರೆ, ಯಾದವ್ ಔಷಧಿಗಳನ್ನು ತರುವುದಾಗಿ ಹೇಳಿ ಹೋದವನು ವಾಪಸ್ ಬರಲೇ ಇಲ್ಲ. ಸಂಬಂಧ ಮುರಿದುಬಿದ್ದಿತ್ತು, ಆತ ಕೂಡಲೇ ತನ್ನ ಫೋನ್ ನಂಬರ್ ಬದಲಾಯಿಸಿದ್ದ, ಮಹಿಳೆ ತನ್ನ ಸ್ನೇಹಿತರ ಮೂಲಕ ಅವನನ್ನು ಸಂಪರ್ಕಿಸಿದಾಗ, ಯಾದವ್ ನೀನು ಮತ್ತು ನಿನ್ನ ಮಗಳು ಇಬ್ಬರು ಬದುಕಲು ಅರ್ಹರಲ್ಲ ಎಂದು ಆತ ಹೇಳಿದ್ದಾನೆಂದು ಆರೋಪಿಸಲಾಗಿದೆ.

ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ