ಬಾಯ್​ಫ್ರೆಂಡ್​​ ಸುಮಂತ್​ ಮೇಲೆ ಶುಭಾ ಪೂಂಜಾಗೆ ಶುರುವಾಗಿದೆ ಅನುಮಾನ; ಡೌಟ್​ ಡಬಲ್​ ಮಾಡಿದ ಸುದೀಪ್​

ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆಗೆ ಬಂದಿದೆ. ಈ ವೇಳೆ ಮಾತನಾಡಿದ್ದ ಶುಭಾ, ಸುಮಂತ್​ ನನ್ನನ್ನು ತುಂಬಾನೇ ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗನ್ನಿಸುತ್ತದೆ ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ಸುದೀಪ್​, ಓ ಭ್ರಮ ಎಂದರು.

ಬಾಯ್​ಫ್ರೆಂಡ್​​ ಸುಮಂತ್​ ಮೇಲೆ ಶುಭಾ ಪೂಂಜಾಗೆ ಶುರುವಾಗಿದೆ ಅನುಮಾನ; ಡೌಟ್​ ಡಬಲ್​ ಮಾಡಿದ ಸುದೀಪ್​
Follow us
ರಾಜೇಶ್ ದುಗ್ಗುಮನೆ
|

Updated on: Mar 21, 2021 | 9:33 PM

ಶುಭಾ ಅವರು ಸುಮಂತ್​ ಎಂಬುವವರನ್ನು ವಿವಾಹವಾಗುತ್ತಿದ್ದಾರೆ. ಅವರು ಹೇಳಿದ್ದಕ್ಕೇ ಬಿಗ್​ ಬಾಸ್​ ಮನೆಗೆ ಬಂದಿರುವುದಾಗಿ ಶುಭಾ ಹೇಳಿಕೊಂಡಿದ್ದರು. ಈಗ ಶುಭಾಗೆ ಸುಮಂತ್​ ಮೇಲೆ ಒಂದು ಸಣ್ಣ ಅನುಮಾನ ಶುರುವಾಗಿದೆ. ಅಷ್ಟೇ ಅಲ್ಲ, ಈ ಅನುಮಾನವನ್ನು ಕಿಚ್ಚ ಸುದೀಪ್​ ಡಬಲ್​ ಮಾಡಿದ್ದಾರೆ. ಇತ್ತೀಚೆಗೆ ಶುಭಾ ಕನಸಲ್ಲಿ ಸುಮಂತ್​ ಬಂದಿದ್ದರು ಎನ್ನುವ ವಿಚಾರ ಹೇಳಿಕೊಂಡಿದ್ದರು. ಈ ಬಗ್ಗೆ ಮನೆ ಮಂದಿ ಜತೆ ಮಾತನಾಡಿದ್ದ ಶುಭಾ, ನನಗೆ ನಿನ್ನೆ ಒಂದು ಕನಸು ಬಿದ್ದಿತ್ತು. ಆ ಕನಸಲ್ಲಿ ಸುಮಂತ್​ ಬಂದಿದ್ದರು. ಅವರು ಬಿಗ್​ ಬಾಸ್​ ಮನೆಗೆ ಬಂದಿದ್ದರು. ಮನೆಯಲ್ಲಿ ಅವರನ್ನು ಸುತ್ತಾಡಿಸಿದ್ದೆ. ಆದರೆ, ನೋಡಿದ್ರೆ ಒಂದೇ ಕ್ಷಣಕ್ಕೆ ಅದು ಹಳ್ಳಿ ಮನೆಯಾಗಿಬಿಟ್ಟಿತ್ತು. ಎಲ್ಲಾ ಸ್ಪರ್ಧಿಗಳು ಸಣ್ಣ ಸಣ್ಣ ಗೂಡಲ್ಲಿ ಅಡಗಿ ಕೂತಿದ್ದರು ಎಂದು ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆ ಮಂಜು ಪಾವಗಡ, ನಾವು ಯಾರನ್ನು ಹೆಚ್ಚು ನೆನಪಿಸಿಕೊಳ್ಳುತ್ತೇವೋ ಅವರೇ ಕನಸಲ್ಲಿ ಬರುತ್ತಾರೆ ಎಂದಿದ್ದರು.

ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆಗೆ ಬಂದಿದೆ. ಈ ವೇಳೆ ಮಾತನಾಡಿದ್ದ ಶುಭಾ, ಸುಮಂತ್​ ನನ್ನನ್ನು ತುಂಬಾನೇ ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗನ್ನಿಸುತ್ತದೆ ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ಸುದೀಪ್​, ಓ ಭ್ರಮ ಎಂದರು.

ನಾವು ಏನೆ ನಡೆದರೂ ನಿಮಗೆ ಹೇಳಲ್ಲ ಬಿಡಿ. ನಮಗೆ ನಿಮ್ಮ ನಂಬಿಕೆ ಮುರಿದು ಹೋಗಬಾರದು ಅಷ್ಟೇ ಎಂದು ಶುಭಾ ತಲೆಯಲ್ಲಿ ಹುಳ ಬಿಟ್ಟರು ಸುದೀಪ್​. ಅವನು ಬೈಕ್​ನಲ್ಲಿ ಯಾರನ್ನಾದರೂ ಕೂರಿಸಿಕೊಂಡು ಹೋಗುತ್ತಿದ್ದರೇ ಎಂದು ಪ್ರಶ್ನೆ ಮಾಡಿದರು ಶುಭಾ. ಈ ವಿಚಾರ ತುಂಬಾನೇ ಚರ್ಚೆ ಆಗಿದೆ. ನಂತರ ಕೊನೆಯಲ್ಲಿ ಶುಭಾ, ಅವನು ಹಾಗೆಲ್ಲ ಮಾಡುವನಲ್ಲ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada: ಮನೆಯೊಳಗಿನ ಕಷ್ಟ ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತ ನಿಧಿ ಸುಬ್ಬಯ್ಯ, ಶುಭಾ ಪೂಂಜಾ!