AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಮನೆಯೊಳಗಿನ ಕಷ್ಟ ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತ ನಿಧಿ ಸುಬ್ಬಯ್ಯ, ಶುಭಾ ಪೂಂಜಾ!

ಬಿಗ್​ ಬಾಸ್​ ಎಂದರೆ ಬರೀ ಮೋಜು ಮಸ್ತಿ ಅಲ್ಲ. ಅಪರಿಚಿತರ ಜೊತೆ ಕಾಲ ಕಳೆಯುವುದು ಸುಲಭವೇ ಅಲ್ಲ. ನಿಧಿ ಸುಬ್ಬಯ್ಯ ಮತ್ತು ಶುಭಾ ಪೂಂಜಾ ಕಣ್ಣೀರು ಹಾಕುವಂತಹ ಸ್ಥಿತಿ ನಿರ್ಮಾಣ ಆಗಿದೆ.

Bigg Boss Kannada: ಮನೆಯೊಳಗಿನ ಕಷ್ಟ ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತ ನಿಧಿ ಸುಬ್ಬಯ್ಯ, ಶುಭಾ ಪೂಂಜಾ!
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
ಮದನ್​ ಕುಮಾರ್​
|

Updated on:Mar 17, 2021 | 6:24 PM

Share

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಒಂದು ಕಠಿಣ ಶಿಕ್ಷೆ ನೀಡಿದ್ದಾರೆ. ಶಮಂತ್ ಬ್ರೋ ಗೌಡ ಅವರನ್ನು ಸೇವ್​ ಮಾಡಿದ್ದಕ್ಕೆ ಪ್ರತಿಯಾಗಿ ಎಲ್ಲ ಸದಸ್ಯರು ಬೆಡ್​ ರೂಮ್​ ಬಿಟ್ಟುಕೊಡಬೇಕಾಯಿತು. ಅದರಿಂದ ಯಾರಿಗೂ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ನಿಧಿ ಸುಬ್ಬಯ್ಯ ಮತ್ತು ಶುಭಾ ಪೂಂಜಾ ಕಣ್ಣೀರು ಹಾಕಿ ಗೋಗರೆದಿದ್ದಾರೆ.

ಹಾಸಿಗೆ, ಹೊದಿಕೆ ಮತ್ತು ದಿಂಬು ಇಲ್ಲದೆ ಮಲಗಲು ಸಾಧ್ಯವೇ ಇಲ್ಲ ಎಂಬುದು ಈಗಾಗಲೇ ಮನೆಯ ಸದಸ್ಯರ ಅನುಭವಕ್ಕೆ ಬಂದಿದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ತುಂಬ ಕಷ್ಟ ಆಗುತ್ತಿದೆ. ಹಾಗಾಗಿ ಸಮಯ ಸಿಕ್ಕಾಗಲೆಲ್ಲ ಕ್ಯಾಮರಾ ಮುಂದೆ ಬಂದು ‘ಪ್ಲೀಸ್​ ಬಿಗ್​ ಬಾಸ್​.. ನಮಗೆ ಬೆಡ್​ ರೂಮ್​ ಕೊಡಿಸಿ..’ ಎಂದು ಅಂಗಲಾಚಿದ್ದಾರೆ. ಅದನ್ನು ಪರಿಗಣಿಸಿದ ಬಿಗ್​ ಬಾಸ್ ಒಂದು ಆಯ್ಕೆ ನೀಡಿದರು. ಆದರೆ ಅದರಲ್ಲಿಯೂ ಮನೆಯ ಸದಸ್ಯರಿಗೆ ತೀವ್ರ ನಿರಾಸೆ ಆಯಿತು.

ಏನದು ಆಯ್ಕೆ? ಟಾಸ್ಕ್​ವೊಂದರಲ್ಲಿ ಗೆದ್ದ ಅರವಿಂದ್​-ದಿವ್ಯಾ ಉರುಡುಗ ಜೋಡಿಗೆ ವಿಶೇಷವಾದ ಚಾರ್ಜರ್​ ಸಿಕ್ಕಿತು. ಅದನ್ನು ಅವರೇ ಇಟ್ಟುಕೊಳ್ಳಬಹುದು ಅಥವಾ ಅದನ್ನು ತ್ಯಾಗ ಮಾಡಿ ಮನೆಯ ಎಲ್ಲರಿಗೂ ಬೆಡ್​ ರೂಮ್​ ಕೊಡಿಸಬಹುದು. ಈ ಎರಡು ಅವಕಾಶಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ದಿವ್ಯಾ ಮತ್ತು ಅರವಿಂದ್​ 10 ನಿಮಿಷ ಸಮಯಾವಕಾಶ ಕೇಳಿದರು. ಖಂಡಿತವಾಗಿಯೂ ಅವರು ಆ ಚಾರ್ಜರ್​ ತ್ಯಾಗ ಮಾಡಿ, ಮನೆಯ ಸದಸ್ಯರಿಗೆ ಬೆಡ್​ ರೂಮ್​ ಕೊಡಿಸುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅವರ ಊಹೆ ತಪ್ಪಾಯಿತು.

ಇದು ಒಂದು ಗೇಮ್​. ಇಲ್ಲಿ ಭಾವನೆಗಳಿಗೆ ಬಲಿ ಆಗಬಾರದು ಎಂಬ ಕಾರಣಕ್ಕೆ ದಿವ್ಯಾ ಮತ್ತು ಅರವಿಂದ್​ ಚಾರ್ಜರ್​ ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ನಿರ್ಧರಿಸಿದರು. ಹಾಗಾಗಿ ಮನೆಯ ಎಲ್ಲ ಸದಸ್ಯರಿಗೂ ಬೆಡ್​ ರೂಮ್​ ಇಲ್ಲದೆ ಗಾರ್ಡನ್​ ಏರಿಯಾದಲ್ಲಿ ಮಲಗುವ ಶಿಕ್ಷೆ ಮುಂದುವರಿಯಿತು. ಭಾರಿ ಆಸೆ ಇಟ್ಟುಕೊಂಡಿದ್ದ ಶುಭಾ ಪೂಂಜಾ ಮತ್ತು ನಿಧಿ ಸುಬ್ಬಯ್ಯ ಅವರಿಗೆ ಸಿಕ್ಕಾಪಟ್ಟೆ ನಿರಾಸೆ ಆಯಿತು. ಅಲ್ಲದೆ, ದಿವ್ಯಾ-ಅರವಿಂದ್​ ಕಿಂಚಿತ್ತೂ ಮಾನವೀಯತೆ ತೋರಿಸಲಿಲ್ಲ ಎಂದು ಶುಭಾ ಹಾಗೂ ನಿಧಿ ನೊಂದುಕೊಂಡರು. ಹಾಗಾಗಿ ಇಬ್ಬರೂ ಬಿಕ್ಕಿ ಬಿಕ್ಕಿ ಅತ್ತರು.

ದಿವ್ಯಾ-ಅರವಿಂದ್​ ತೆಗೆದುಕೊಂಡ ನಿರ್ಧಾರದ ಬಗ್ಗೆ ಮನೆಯ ಸದಸ್ಯರಲ್ಲಿಯೇ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಅವರಿಬ್ಬರ ಪರವಾಗಿ ದಿವ್ಯಾ ಸುರೇಶ್​ ಮಾತನಾಡಿದ್ದಾರೆ. ಕ್ಯಾಪ್ಟನ್​ ರಾಜೀವ್​ ಕೂಡ ಅವರಿಬ್ಬರ ನಿರ್ಧಾರಕ್ಕೆ ಗೌರವ ನೀಡಿದ್ದಾರೆ.

ಇದನ್ನೂ ಓದಿ: ರಹಸ್ಯವಾಗಿ ಮೊಬೈಲ್​ ಬಳಸ್ತಿದ್ದಾರಾ ಬಿಗ್​ ಬಾಸ್​ ಸ್ಪರ್ಧಿಗಳು? ಜನರ ಅನುಮಾನಕ್ಕೆ ಇಲ್ಲಿದೆ ಉತ್ತರ!

ಶಮಂತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ; ಬಿಗ್​ ಬಾಸ್​ ಎದುರು ಸ್ಪರ್ಧಿಗಳ ಹೊಸ ಬೇಡಿಕೆ

Published On - 4:03 pm, Wed, 17 March 21

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ