AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಮಂತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ; ಬಿಗ್​ ಬಾಸ್​ ಎದುರು ಸ್ಪರ್ಧಿಗಳ ಹೊಸ ಬೇಡಿಕೆ

ಇಂದು ಬಿಗ್​ ಬಾಸ್​ ಎದುರು ಮನೆ ಮಂದಿ ಹೊಸ ಬೇಡಿಕೆ ಇಟ್ಟಿದ್ದಾರೆ. ಶಮಂತ್​ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ ಎಂದಿದ್ದಾರೆ ಮನೆ ಮಂದಿ.

ಶಮಂತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ; ಬಿಗ್​ ಬಾಸ್​ ಎದುರು ಸ್ಪರ್ಧಿಗಳ ಹೊಸ ಬೇಡಿಕೆ
ಬಿಗ್​ ಬಾಸ್​ ಕನ್ನಡ ಸೀಸನ್​ 8
ರಾಜೇಶ್ ದುಗ್ಗುಮನೆ
|

Updated on: Mar 15, 2021 | 10:21 PM

Share

ಬಿಗ್​ ಬಾಸ್​ ಮನೆಯಲ್ಲಿ ಎಲ್ಲರದ್ದೂ ಒಂದೇ ಬೇಡಿಕೆ. ಶಮಂತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಬೇಕು! ಅಷ್ಟಕ್ಕೂ ಎಲ್ಲರೂ ಈ ಬೇಡಿಕೆ ಇಟ್ಟಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ಶಮಂತ್​ ಅಲಿಯಾಸ್​ ಬ್ರೋ ಗೌಡ ಅವರ ಸ್ವಾರ್ಥ! ಮೈಕ್​ ಇದ್ದ ಹೊರತಾಗಿಯೂ ಬ್ರೋ ಗೌಡ ಎಲ್ಲರ ಕಿವಿಯಲ್ಲಿ ಹೋಗಿ ಮಾತನಾಡುತ್ತಿದ್ದರು. ಇದಕ್ಕೆ ಸುದೀಪ್​ ಸಿಟ್ಟಾಗಿದ್ದರು. ಲಕ್ಷಾಂತರ ರೂಪಾಯಿ ಖರ್ಚುಮಾಡಿ ಮೈಕ್​ ನೀಡುತ್ತೇವೆ. ಆದರೆ, ಕಿವಿಯಲ್ಲಿ ಹೋಗಿ ಮಾತನಾಡುವ ಮೂಲಕ ಶಮಂತ್​  ಅವರು ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದಿದ್ದ ಸುದೀಪ್​, ಇದಕ್ಕೆ ಶಿಕ್ಷೆ ನೀಡುವುದಾಗಿಯೂ ಹೇಳಿದರು.

ಬಿಗ್​ ಬಾಸ್​ ಮೂರನೇ ವಾರದ ಎಲಿಮಿನೇಷನ್​ಗೆ ಶಮಂತ್​ ನೇರವಾಗಿ ನಾಮಿನೇಟ್​ ಆಗಬೇಕು ಅಥವಾ ಮನೆಯವರೆಲ್ಲರೂ ಬೆಡ್​ರೂಂ ಏರಿಯಾವನ್ನು ಬಿಟ್ಟುಕೊಡಬೇಕು ಎನ್ನುವ ಕಂಡೀಷನ್​ ಹಾಕಿದರು ಸುದೀಪ್​. ಬ್ರೋ ಗೌಡ ಅವರನ್ನು ಉಳಿಸಲು ಮನೆಯಲ್ಲಿ ಕೆಲವರು ಸಮ್ಮತಿ ಸೂಚಿಸಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೆ, ಶಮಂತ್​ ಎಮೋಷನಲ್​ ಆಗಿ ಡೈಲಾಗ್​ ಹೊಡೆದರು. ನನ್ನ ಅಪ್ಪ-ಅಮ್ಮ ಉಸಿರಾಡ್ತಿರೋದು ನನ್ನ ಹೆಸರಿಂದ ಎಂದು ಹೇಳಿ ಭಾವುಕರಾದರು. ಹೀಗಾಗಿ ಮನೆಯವರೆಲ್ಲರೂ ಬೆಡ್​ ರೂಂ ಬಿಡೋಕೆ ಒಪ್ಪಿಕೊಂಡರು. ಈ ಮೂಲಕ ಶಮಂತ್​ ಸೇಫ್​ ಆದರು.

ಶಮಂತ್​ ಅವರನ್ನು ಉಳಿಸೋಕೆ ಹೋಗಿ ಈಗ ಮನೆಮಂದಿಯೆಲ್ಲ ಲಿವಿಂಗ್ ಏರಿಯಾದಲ್ಲಿ ಉಳಿದುಕೊಳ್ಳುವಂತಾಗಿದೆ. ಯಾರಿಗೂ ನಿದ್ರೆ ಕೂಡ ಬರುತ್ತಿಲ್ಲ. ಇದು ಮನೆಯವರ ಕೋಪಕ್ಕೆ ಕಾರಣವಾಗಿದೆ. ಎಲ್ಲರೂ ಶಮಂತ್​ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಷ್ಟೇ ಅಲ್ಲ ಶಮಂತ್​ ಸ್ವಾರ್ಥ ಜೀವಿ ಎಂದು ಕಿಡಿಕಾರುತ್ತಿದ್ದಾರೆ. ಇಂದು ಬಿಗ್​ ಬಾಸ್​ ಎದುರು ಮನೆ ಮಂದಿ ಹೊಸ ಬೇಡಿಕೆ ಇಟ್ಟಿದ್ದಾರೆ. ಶಮಂತ್​ ಅವರನ್ನು ಬೇಕಿದ್ದರೆ ಮನೆಯಿಂದ ಹೊರಗೆ ಕಳುಹಿಸಿ. ನಮಗೆ ನಮ್ಮ ಬೆಡ್​ ರೂಂ ಮತ್ತೆ ಬೇಕು ಎಂದಿದ್ದಾರೆ.

ಇದನ್ನೂ ಓದಿ: BBK8: ‘ದಿವ್ಯಾನ ಬಿಟ್ಟು ಕೊಡು ಗುರೂ’ ಅಂತ ಮಂಜುಗೆ ಮನವಿ ಮಾಡಿದ ಶಮಂತ್​! ಕಿಚ್ಚನ ಎದುರಲ್ಲೇ ರಹಸ್ಯ ಬಯಲು

ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?