AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oscars 2021 Nominations: ಆಸ್ಕರ್​ನಿಂದ ಹೊರಬಿದ್ದ ಸೂರಾರೈ ಪೋಟ್ರು, ಸಿನಿಮಾ ಅಭಿಮಾನಿಗಳಿಗೆ ನಿರಾಸೆ

Oscar 2021: ಏರ್ ಡೆಕ್ಕನ್ ಸ್ಥಾಪಕ ಜಿ.ಆರ್. ಗೋಪಿನಾಥ್ ಅವರ ನಿಜ ಜೀವನದ ಕಥೆಯನ್ನು ಆಧರಿಸಿದ ಸಿನಿಮಾ ಸೂರಾರೈ ಪೋಟ್ರು, ಕಳೆದ ನವೆಂಬರ್​ನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತೆರೆಕಂಡಿತ್ತು. ಸಿನಿರಸಿಕರು ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

Oscars 2021 Nominations: ಆಸ್ಕರ್​ನಿಂದ ಹೊರಬಿದ್ದ ಸೂರಾರೈ ಪೋಟ್ರು, ಸಿನಿಮಾ ಅಭಿಮಾನಿಗಳಿಗೆ ನಿರಾಸೆ
ಸೂರಾರೈ ಪೋಟ್ರು ಸಿನಿಮಾ
TV9 Web
| Edited By: |

Updated on:Apr 06, 2022 | 7:06 PM

Share

ಭಾರತೀಯ ಸಿನಿಮಾ ಪ್ರೇಮಿಗಳಿಗೆ ಆಸ್ಕರ್ ಅಂಗಳದಿಂದ ಬೇಸರದ ಸಂಗತಿಯೊಂದು ಹೊರಬಂದಿದೆ. ಸೂರ್ಯ ಅಭಿನಯದ ಸೂರಾರೈ ಪೋಟ್ರು ಸಿನಿಮಾ ಆಸ್ಕರ್ ರೇಸ್​ನಿಂದ ಹೊರಬಿದ್ದಿದೆ. ಸುಧಾ ಕೊಂಗಾರ ನಿರ್ದೇಶನದ ಈ ತಮಿಳು ಭಾಷಾ ಸಿನಿಮಾ 93ನೇ ಅಕಾಡೆಮಿ ಅವಾರ್ಡ್​ಗೆ ಸಾಮಾನ್ಯ ಕ್ಯಾಟಗರಿಯ ಅಡಿಯಲ್ಲಿ ಹಣ ಪಾವತಿಸುವ ಮೂಲಕ ಪ್ರವೇಶ ಪಡೆದಿತ್ತು. ಕೆಲವು ಹಂತಗಳ ಸ್ಕ್ರೀನಿಂಗ್ ಎದುರಿಸಿ, ಬಳಿಕ ಮುಂದಿನ ಹಂತಕ್ಕೆ ಪ್ರವೇಶ ಪಡೆಯಬೇಕಿತ್ತು. ನಂತರವಷ್ಟೇ ನಾಮನಿರ್ದೇಶನದ ಪಟ್ಟಿ ಸೇರಬೇಕಿತ್ತು. ಆದರೆ, ದುರಾದೃಷ್ಟವಷಾತ್ ಸಿನಿಮಾ ಆಸ್ಕರ್ ನಾಗಾಲೋಟದಲ್ಲಿ ಮುನ್ನುಗ್ಗಲು ವಿಫಲವಾಗಿದೆ.

ಏರ್ ಡೆಕ್ಕನ್ ಸ್ಥಾಪಕ ಜಿ.ಆರ್. ಗೋಪಿನಾಥ್ ಅವರ ನಿಜ ಜೀವನದ ಕಥೆಯನ್ನು ಆಧರಿಸಿದ ಸಿನಿಮಾ ಸೂರಾರೈ ಪೋಟ್ರು, ಕಳೆದ ನವೆಂಬರ್​ನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತೆರೆಕಂಡಿತ್ತು. ಸಿನಿರಸಿಕರು ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಸೂರ್ಯ ಅಭಿನಯದ ಚಿತ್ರವನ್ನು ಸ್ವತಃ ನಟ ಸೂರ್ಯ ತಮ್ಮ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದರು. 2D ಎಂಟರ್​ಟೈನ್ಮೆಂಟ್ ಮತ್ತು ಸಿಖ್ಯಾ ಎಂಟರ್​ಟೈನ್ಮೆಂಟ್ ಮೂಲಕ ಸಿನಿಮಾ ತೆರೆಕಂಡಿತ್ತು. ಅಪರ್ಣಾ ಬಾಲಮುರಳಿ, ಮೋಹನ್ ಬಾಬು, ಪರೇಶ್ ರಾವಲ್, ಊರ್ವಶಿ ಹಾಗೂ ಕರುಣಾಸ್ ಸಿನಿಮಾದಲ್ಲಿ ಅಭಿನಯಿಸಿದ್ದರು.

ಜಲ್ಲಿಕಟ್ಟು ಕೂಡ ಆಸ್ಕರ್ ವಂಚಿತವಾಗಿತ್ತು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ, ಉತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ ಲಿಜೋ ಜೋಸ್ ಪೆಲ್ಲಿಶ್ಶೆರಿ ನಿರ್ದೇಶನದ ‘ಜಲ್ಲಿಕಟ್ಟು’ ಸಿನಿಮಾ ಕೂಡ ಅಂತಿಮ ಹಂತದಲ್ಲಿ ಆಸ್ಕರ್ ಓಟದಿಂದ ಹೊರಬಿದ್ದಿತ್ತು. ಭಾರತೀಯ ಸಿನಿಮಾ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಜಲ್ಲಿಕಟ್ಟು (Jallikattu) 93ನೇ ಅಕಾಡೆಮಿ ಅವಾರ್ಡ್ಸ್ ಸಾಲಿನಿಂದ ಹೊರಗುಳಿಯುವಂತಾಗಿತ್ತು.

ಅಂತಿಮ ಸುತ್ತಿಗೂ ಮೊದಲು ಪರಿಷ್ಕರಣೆಗೊಂಡ 15 ಸಿನಿಮಾಗಳ ಪಟ್ಟಿಯಲ್ಲಿ ಮಲಯಾಳಂ ಸಿನಿಮಾ ಜಲ್ಲಿಕಟ್ಟು ಆಯ್ಕೆಯಾಗಿರಲಿಲ್ಲ. ಈ 15 ಸಿನಿಮಾಗಳಲ್ಲಿ ಬಳಿಕ, 5 ಚಲನಚಿತ್ರಗಳು ಅಂತಿಮ ಸುತ್ತಿನಲ್ಲಿ ಭಾಗವಹಿಸಲಿವೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ & ಸೈಯನ್ಸಸ್ (AMPAS) ಫೆ.10ರಂದು ಮಾಹಿತಿ ನೀಡಿತ್ತು.

ಲಿಜೋ ಜೋಸ್ ಪೆಲ್ಲಿಶ್ಶೆರಿ ನಿರ್ದೇಶನದ ‘ಜಲ್ಲಿಕಟ್ಟು’ ಮಲಯಾಳಿ ಕಥೆಗಾರ ಹರೀಶ್​ರ ‘ಮಾವೊಯಿಸ್ಟ್’ ಕಥೆ ಆಧಾರಿತ ಸಿನಿಮಾವಾಗಿತ್ತು. ಆಂಟನಿ ವರ್ಗೀಸ್, ಚೆಂಬನ್ ವಿನೋದ್ ಜೋಸ್, ಸಬುಮನ್ ಅಬ್ದುಸಮದ್, ಸಂತಿ ಬಾಲಚಂದ್ರನ್ ಚಿತ್ರದ ತಾರಾಗಣದಲ್ಲಿದ್ದರು.

ಸಪ್ಟೆಂಬರ್ 6, 2019ರಂದು ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಜಲ್ಲಿಕಟ್ಟು’ ಭಾಗವಹಿಸಿತ್ತು. ಉತ್ತಮ ವಿಮರ್ಶೆ, ಅಭಿಪ್ರಾಯಗಳನ್ನು ಕೂಡ ಸಿನಿಮಾ ಪಡೆದಿತ್ತು. 50ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಲಿಜೋ ಜೋಸ್ ಪೆಲ್ಲಿಶ್ಶೆರಿ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.

ಇದನ್ನೂ ಓದಿ: Oscars 2021: ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೊನಾಸ್​ ಮಾಡಲಿದ್ದಾರೆ ಆಸ್ಕರ್​ ನಾಮನಿರ್ದೇಶನ ಪ್ರಕಟಣೆ

Oscar Awards 2021: ಆಸ್ಕರ್ ಪ್ರಶಸ್ತಿ ಓಟದಿಂದ ಹೊರಗೆ ಬಿದ್ದ ಮಲಯಾಳಂ ‘ಜಲ್ಲಿಕಟ್ಟು’ ಸಿನಿಮಾ

Published On - 10:52 pm, Mon, 15 March 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ