Oscars 2021: ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೊನಾಸ್​ ಮಾಡಲಿದ್ದಾರೆ ಆಸ್ಕರ್​ ನಾಮನಿರ್ದೇಶನ ಪ್ರಕಟಣೆ

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅವಳ ಗಂಡ ನಿಕ್​ ಜೊನಾಸ್​ ಈ ಬಾರಿಯ ಆಸ್ಕರ್​ ನಾಮನಿರ್ದೇಶನ ಪ್ರಕಟಣೆ ಮಾಡುವ ಗೌರವ ಪಡಿದಿದ್ದಾರೆ. ಈ ಕಾರ್ಯಕ್ರಮ ಮಾರ್ಚ್​ 15 ರಂದು ಬೆಳಿಗ್ಗೆ 5.15 ಕ್ಕೆ ಶುರುವಾಗಲಿದೆ.

Oscars 2021: ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೊನಾಸ್​ ಮಾಡಲಿದ್ದಾರೆ ಆಸ್ಕರ್​ ನಾಮನಿರ್ದೇಶನ ಪ್ರಕಟಣೆ
ಪ್ರಿಯಾಂಕಾ ಚೋಪ್ರಾ
Follow us
ಡಾ. ಭಾಸ್ಕರ ಹೆಗಡೆ
| Updated By: Skanda

Updated on:Mar 11, 2021 | 7:57 PM

ವಿಶ್ವದ ಸಿನಿಮಾ ಪ್ರಿಯರು ಕಾಯುವ ಗಳಿಗೆಯೊಂದಿದೆ. ಅದೇ ಆಸ್ಕರ್​ ನಾಮನಿರ್ದೇಶನ ಪ್ರಕಟಣೆ. ಇದನ್ನು ಇಂಗ್ಲಿಷಿನಲ್ಲಿ Oscar Nomination Announcement ಎಂದು ಕರೆಯುತ್ತಾರೆ. ಎಂಬತ್ತರ ದಶಕದಲ್ಲಿ ಕಳೆದು ಹೋದವರ ಮಾಹಿತಿಯನ್ನು ಕೊಡುತ್ತಿದ್ದ ದೂರದರ್ಶನದ ಬೋರಿಂಗ್​ ಕಾರ್ಯಕ್ರಮದಂತೆ ಇರುವುದಿಲ್ಲ.  ಆಸ್ಕರ್​ ನಾಮನಿರ್ದೇಶನ ಪ್ರಕಟಣೆಯೇ ಒಂದು ಹಬ್ಬ. ಈ ಕಾರ್ಯಕ್ರಮ ನಡೆಸಿಕೊಡುವುದನ್ನು ವಿಶ್ವಾದ್ಯಂತ ಕೋಟ್ಯಾಂತರ ಜನ ನೋಡಿ ಆನಂದಿಸುತ್ತಾರೆ. ಸಾಕರ್​ ಪಂದ್ಯದಲ್ಲಿ ತಮ್ಮ ನೆಚ್ಚಿನ ಆಟಗಾರ ಗೋಲು ಹೊಡೆದಾಗ ಹುಚ್ಚೆದ್ದು ಕುಣಿವಂತೆ, ಟಿವಿ ಪರದೆ ಮುಂದೆ ಕುಳಿತ ಜನ ಈ  ಆಸ್ಕರ್​ ನಾಮನಿರ್ದೇಶನ ಪ್ರಕಟಣೆಯನ್ನು ನೋಡುತ್ತ ಹುಚ್ಚೆದ್ದು ಕುಣಿಯುತ್ತಾರೆ. ಈ ಬಾರಿ ಆಸ್ಕರ್​ ನಾಮನಿರ್ದೇಶನ ಪ್ರಕಟಣೆಯನ್ನು ಮಾಡುವ ಗೌರವ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅವಳ ಗಂಡ ನಿಕ್​ ಜೊನಾಸ್​ ಅವರ ಪಾಲಾಗಿದೆ. ಈ ಬಾರಿ ಮಾರ್ಚ್​ 15 ರ ಬೆಳಿಗ್ಗೆ 5.15 (ಭಾರತೀಯ ಕಾಲಮಾನ) ಗಂಟೆಗೆ ಸರಿಯಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಿಯಾಂಕಾ ಚೋಪ್ರಾ ತಮ್ಮ ಟ್ವಿಟರ್​ ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ.

ಅಕಾಡೆಮಿ ಅವಾರ್ಡ್​ ಎಂದು ಕರೆಯಲ್ಪಡುವ ಈ ಕಾರ್ಯಕ್ರಮವನ್ನು ನಾನೊಬ್ಬನೇ ನಡೆಸಿಕೊಡುವೆ ಎಂದು ತಮಾಷೆ ಮಾಡಿದ್ದಾರೆ ಪ್ರಿಯಾಂಕಾ.

ಪ್ರತಿವರ್ಷ ಫೆಬ್ರುವರಿ ಕೊನೆಯ ವಾರ ನಡೆಯುತ್ತಿದ್ದ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಕೊವಿಡ್​ನಿಂದಾಗಿ ಮುಂದಕ್ಕೆ ಹೋಗಿ ಏಪ್ರಿಲ್​ 25 ಕ್ಕೆ ನಿಶ್ಚಯವಾಗಿದೆ. ಇದಕ್ಕೆ ಮೊದಲು ಮಾರ್ಚ್ 15 ಪ್ರಕಟಣೆ ಹೊರಬೀಳಲಿದೆ.  ಈ ಕಾರ್ಯಕ್ರಮವನ್ನು ಲೈವ್​ಸ್ಟ್ರೀಮ್​ ಮೂಲಕ Oscar.org ಯಲ್ಲಿ ನೋಡಬಹುದಾಗಿದೆ. 93ನೇ ಆಸ್ಕರ್​ ಅಂದರೆ ಅಕಾಡೆಮಿ ಅವಾರ್ಡ್ ನಾಮನಿರ್ದೇಶನಕ್ಕೆ ಕಾಯ್ದಿರುವ ಚಲನಚಿತ್ರಗಳೆಂದರೆ ಕ್ಲೋ ಝಾವೋ ಅವರ ನೋಮಾಡ್​ಲ್ಯಾಂಡ್​ (Chloe Zhao’s Nomadland), ಆರೋನ್​ ಸೋರ್ಕಿನ್​ ಅವರ ದಿ ಟ್ರಾಯಲ್​ ಆಫ್​ ಚಿಕಾಗೋ-7  (Aaron Sorkin’s The Trial of the Chicago 7) ಮತ್ತು ಎಮೆರಾಲ್ಡ್ ಫೆನೆಲ್ಸ್​ ಅವರ ಪ್ರಾಮಿಸಿಂಗ್​ ಯಂಗ್​ ವುಮನ್​ (Emerald Fennell’s Promising Young Woman).

ಆದರೆ ಇಲ್ಲಿ ಒಂದು ಟ್ವಿಸ್ಟ್ ಇದೆ. ಈ ಬಾರಿ ಕಾರ್ಯಕ್ರಮ ಈ ಹಿಂದಿನಂತೆ ನಡೆಯುತ್ತದೆಯೋ ಅಥವಾ online ನಲ್ಲಿ ಕಾರ್ಯಕ್ರಮ ನಡೆಯುತ್ತದೆಯೋ ಎಂಬ ವಿವರ ಇನ್ನೂ ಹೊರಬಿದ್ದಿಲ್ಲ. ಸದ್ಯಕ್ಕೆ ಇರುವ ಮಾಹಿತಿಯಂತೆ, ಕೊವಿಡ್​ ಮುನ್ನೆಚ್ಚರಿಕೆ ತೆಗೆದುಕೊಂಡು ಈ ಹಿಂದಿನಂತೆ ಕಾರ್ಯಕ್ರಮ ನಡೆಯುತ್ತದೆ ಎಂದು ಹೇಳಲಾಗಿದ್ದರೂ, ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.

ಇದನ್ನೂ ಓದಿ: ಬಾಲಿವುಡ್ ನಟ ರಣಬೀರ್ ಕಪೂರ್​ಗೆ ಕೊರೊನಾ ಪಾಸಿಟಿವ್; ಹೋಮ್ ಕ್ವಾರಂಟೈನ್​ನಲ್ಲಿ ಇದ್ದಾರೆ ಎಂದ ನೀತು ಕಪೂರ್

ಹಿಂದಿ ಭಾಷಿಕರಿಂದ ಅವಮಾನಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದ ಈ ನಟಿ ಇಂದು ಬಾಲಿವುಡ್​ನ ಸ್ಟಾರ್​ ಕಲಾವಿದೆ!

Published On - 5:33 pm, Thu, 11 March 21