AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆ ಬೆಲೆಯಲ್ಲಿ ಲ್ಯಾಪ್​​ಟಾಪ್​ ನೀಡಲಿದೆ ಜಿಯೋ! ಮಾರುಕಟ್ಟೆಯಲ್ಲಿ ಹೊಸ ಸಂಚಲನ

ಜಿಯೋ ಮೊಬೈಲ್​ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಕಾಲಿಟ್ಟಿತ್ತು. ಆಗ, ಸಾಕಷ್ಟು ಮಂದಿ ಈ ಮೊಬೈಲ್​ ಖರೀದಿಗೆ ಆದ್ಯತೆ ನೀಡಿದ್ದರು. ಈಗ ಲ್ಯಾಪ್​ಟಾಪ್​ ಕೂಡ ಕಡಿಮೆ ದರದಲ್ಲಿ ಸಿಗುವ ಸುದ್ದಿ ಹೊರ ಬಿದ್ದಿರುವುದರಿಂದ ಜನರು ಸಾಕಷ್ಟು ಕಾತುರರಾಗಿ ಕಾಯುತ್ತಿದ್ದಾರೆ.

ಕಡಿಮೆ ಬೆಲೆಯಲ್ಲಿ ಲ್ಯಾಪ್​​ಟಾಪ್​ ನೀಡಲಿದೆ ಜಿಯೋ! ಮಾರುಕಟ್ಟೆಯಲ್ಲಿ ಹೊಸ ಸಂಚಲನ
ಜಿಯೋ 888 ರೂ. ಪ್ಲ್ಯಾನ್: ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 888 ರೂ. ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆ ನೀಡಿದ್ದು, ಇದರ ವಾಲಿಡಿಟಿ 84 ದಿನಗಳು. ಈ ಪ್ಲ್ಯಾನ್​ನಲ್ಲೂ ಅನಿಯಮಿತ ಕರೆ ಹಾಗೂ ಪ್ರತಿ ದಿನ 2GB ಡೇಟಾ ಸಿಗಲಿದೆ. ಇನ್ನು ಬೋನಸ್ ಆಗಿ 5 ಜಿಬಿ 4 ಜಿ ಡೇಟಾವನ್ನು ಕೂಡ ನೀಡಲಿದೆ. ಅದರೊಂದಿಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಪ್ರವೇಶ ಪಡೆಯಬಹುದು.
ರಾಜೇಶ್ ದುಗ್ಗುಮನೆ
| Edited By: |

Updated on: Mar 11, 2021 | 4:54 PM

Share

ಮೊಟ್ಟ ಮೊದಲ ಬಾರಿಗೆ ಉಚಿತವಾಗಿ ಇಂಟರ್​ನೆಟ್​ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ ಕೀರ್ತಿ ರಿಲಯನ್ಸ್​ ಒಡೆತನದ ಜಿಯೋಗೆ ಸಲ್ಲುತ್ತದೆ. ನಂತರ ಕಡಿಮೆ ಬೆಲೆಯಲ್ಲಿ ಮೊಬೈಲ್​ ನೀಡುವ ಕೆಲಸವನ್ನು ಕೂಡ ಜಿಯೋ ಮಾಡಿತ್ತು. ಈಗ ಲ್ಯಾಪ್​​ಟಾಪ್​ ಕ್ಷೇತ್ರಕ್ಕೂ ಜಿಯೋ ಕಾಲಿಡಲು ಸಿದ್ಧತೆ ನಡೆಸಿದೆ! ಮೂಲಗಳ ಪ್ರಕಾರ, ಜಿಯೋ ಶೀಘ್ರವೇ ಕಡಿಮೆ ಬೆಲೆಯಲ್ಲಿ ಲ್ಯಾಪ್​​ಟಾಪ್​ ನೀಡಲಿದೆಯಂತೆ. JioBook ಹೆಸರಿನಲ್ಲಿ ಲ್ಯಾಪ್​ಟಾಪ್​​ಅನ್ನು ಮಾರುಕಟ್ಟೆಗೆ ಬಿಡಲು ಜಿಯೋ ಮುಂದಾಗಿದೆ. ಈ ಲ್ಯಾಪ್​​ಟಾಪ್​ ಫೋರ್ಕ್ಡ್​​ ಆ್ಯಂಡ್ರಾಯ್ಡ್​ ಆಧರಿಸಿ ಸಿದ್ಧಗೊಳ್ಳುತ್ತಿದೆ. ಜಿಯೋ ಆ್ಯಪ್​ಗಳು ಇದರಲ್ಲಿ ಇನ್​ಬಿಲ್ಟ್​ ಆಗಿ ಸೇವ್​ ಆಗಿರುತ್ತವೆ. ಅಲ್ಲದೆ, 4G LTE ಕೂಡ ಈ ಲ್ಯಾಪ್​ಟಾಪ್​ಗೆ ಸಪೋರ್ಟ್​ ಆಗಲಿದೆ.

ಜಿಯೋ ಮೊಬೈಲ್​ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಕಾಲಿಟ್ಟಿತ್ತು. ಆಗ, ಸಾಕಷ್ಟು ಮಂದಿ ಈ ಮೊಬೈಲ್​ ಖರೀದಿಗೆ ಮುಗಿಬಿದ್ದಿದ್ದರು. ಈಗ ಲ್ಯಾಪ್​ಟಾಪ್​ ಕೂಡ ಕಡಿಮೆ ದರದಲ್ಲಿ ಸಿಗುವ ಸುದ್ದಿ ಹೊರ ಬಿದ್ದಿರುವುದರಿಂದ ಜನರು ಸಾಕಷ್ಟು ಕಾತುರರಾಗಿ ಕಾಯುತ್ತಿದ್ದಾರೆ.

ಜಿಯೋ ಬುಕ್ ವಿಶೇಷತೆಗಳು ಹೀಗಿರಬಹುದೇ… ಜಿಯೋ ಬುಕ್​ ಯಾವ ರೀತಿಯಲ್ಲಿ ಇರಬಹುದು, ಅದರ ವೈಶಿಷ್ಟ್ಯಗಳೇನು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ, JioBook ಸ್ಕ್ರೀನ್​ 1,366×768 ರೆಸಲ್ಯೂಷನ್​ ಹೊಂದಿರಲಿದ್ದು, Qualcomm Snapdragon 665 ಎಸ್​ಒಸಿ ಇರಲಿದೆ. 2ಜಿಬಿ RAM 32 ಜಿಬಿ ಸ್ಟೋರೆಜ್​ ಅನ್ನು ಇದು ಹೊಂದಿರಲಿದೆ. ಇದರ ಜತೆಗೆ, ಲ್ಯಾಪ್​ಟಾಪ್​ನಲ್ಲಿ ಬ್ಲ್ಯೂಟೂತ್​ ಹಾಗೂ ವೈ-ಫೈ ಆಯ್ಕೆ ಕೂಡ ಸಿಗಲಿದೆ. ಈ ಲ್ಯಾಪ್​ಟಾಪ್​ನಲ್ಲಿ ಜಿಯೋಸ್ಟೋರ್​, ಜಿಯೋ ಮೀಟ್​, ಜಿಯೋ ಪೇಜ್​ಗಳು ಮೊದಲೇ ಇನ್​ಸ್ಟಾಲ್​ ಆಗಿರಲಿವೆ. ಇದರ ಜತೆಗೆ ಮೈಕ್ರೋಸಾಫ್ಟ್​ ಆ್ಯಪ್​ಗಳು ಕೂಡ ಇದರಲ್ಲಿ ಇನ್​ಸ್ಟಾಲ್​ ಮಾಡಿಕೊಳ್ಳಲು ಅವಕಾಶ ಇದೆ.

ಬೆಲೆ ವಿಚಾರಕ್ಕೆ ಬರುವುದಾದರೆ, ಈ ಲ್ಯಾಪ್​ಟಾಪ್​ಗಳು ಮಾರುಕಟ್ಟೆಗೆ ಕಡಿಮೆ ದರದಲ್ಲಿ ಸಿಗಲಿದೆ ಎಂಬ ಮಾಹಿತಿ ಅಷ್ಟೇ ಹೊರ ಬಿದ್ದಿದ್ದು, ಖಚಿತ ಬೆಲೆಯ ಬಗ್ಗೆ ತಿಳಿದಿಲ್ಲ. ಇದು ಯಾವಾಗ ಮಾರುಕಟ್ಟೆಗೆ ಬರುತ್ತದೆ ಎನ್ನುವ ಬಗ್ಗೆಯೂ ಸ್ಪಷ್ಟ ಚಿತ್ರಣವಿಲ್ಲ. ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಲ್ಯಾಪ್​ಟಾಪ್​ಗೆ ಬೇಡಿಕೆ ಹೆಚ್ಚಿದೆ. ಮನೆಯಿಂದ ಕೆಲಸ ಮಾಡಲು, ವಿದ್ಯಾರ್ಥಿಗಳಿಗೆ ಆನ್​ಲೈನ್​ ಶಿಕ್ಷಣ ಪಡೆಯಲು ಲ್ಯಾಪ್​ಟಾಪ್​ ಬಳಕೆ ಆಗುತ್ತಿದೆ. ಇದನ್ನು, ಜಿಯೋ ಗಮನಿಸಿದ್ದು, ಆದಷ್ಟು ಬೇಗ ಈ ಕ್ಷೇತ್ರಕ್ಕೆ ಲಗ್ಗೆ ಇಡುವ ಆಲೋಚನೆ ಸಂಸ್ಥೆಯದ್ದು.

ಇದನ್ನೂ ಓದಿ: WhatsApp: ವಾಟ್ಸ್​ಆ್ಯಪ್ ಬಳಕೆದಾರರಿಗೆ ಸಿಹಿಸುದ್ದಿ; ಡೆಸ್ಕ್​ಟಾಪ್​ ಆ್ಯಪ್​ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಸೌಲಭ್ಯ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ