AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್ ಬಳಕೆದಾರರಿಗೆ ಸಿಹಿಸುದ್ದಿ; ಡೆಸ್ಕ್​ಟಾಪ್​ ಆ್ಯಪ್​ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಸೌಲಭ್ಯ

WhatsApp Features : ಫೇಸ್​ಬುಕ್ ಒಡೆತನದ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್ ಖಾಸಗಿ ಸಂವಹನಕ್ಕೊಂದೇ ಅಲ್ಲದೇ, ಉದ್ಯೋಗ, ಉದ್ಯಮ ನಡೆಸಲು ಸಹ ಸಹಕಾರಿಯಾಗಿದೆ. ಸದ್ಯ ವಾಟ್ಸ್​ಆ್ಯಪ್ ವೆಬ್​ನಲ್ಲಿ ಈ ಸೌಲಭ್ಯ ನೀಡಲಾಗಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ವಾಟ್ಸ್​ಆ್ಯಪ್ ವೆಬ್​ನಲ್ಲೂ ಈ ಸೌಲಭ್ಯ ನೀಡಬೇಕೆಂಬ ಒತ್ತಾಯ ಗ್ರಾಹಕರಿಂದ ಕೇಳಿಬರುವುದಂತೂ ಗ್ಯಾರಂಟಿ.

WhatsApp: ವಾಟ್ಸ್​ಆ್ಯಪ್ ಬಳಕೆದಾರರಿಗೆ ಸಿಹಿಸುದ್ದಿ; ಡೆಸ್ಕ್​ಟಾಪ್​ ಆ್ಯಪ್​ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಸೌಲಭ್ಯ
WhatsApp
guruganesh bhat
| Edited By: |

Updated on: Mar 04, 2021 | 3:53 PM

Share

ನೀವು ಕಂಪ್ಯೂಟರ್​ನಲ್ಲಿ ವಾಟ್ಸ್​ಆ್ಯಪ್ ಬಳಕೆದಾರರೇ? ವಾಟ್ಸ್​ಆ್ಯಪ್ ಅಪ್ಲಿಕೇಶನ್ ಅನ್ನು ನಿಮ್ಮ ಕಂಪ್ಯೂಟರ್​ನಲ್ಲಿ ಅಳವಡಿಸಿಕೊಂಡು ವಾಟ್ಸ್​ಆ್ಯಪ್ ಬಳಸುತ್ತೀರೇ? ಕಂಪ್ಯೂಟರ್​ನಲ್ಲಿ ವಾಟ್ಸ್​ಆ್ಯಪ್ ಬಳಸುವಾಗ ವಿಡಿಯೋ ಕಾಲ್, ವಾಯ್ಸ್ ಕಾಲ್ ಮಾಡುವ ಸೌಲಭ್ಯ ಬೇಕಿತ್ತು ಎಂದು ಅನಿಸುತ್ತಿದ್ದರೆ ನಿಮಗೆ ಸಂತಸದ ಸುದ್ದಿಯೊಂದು ಕಾದಿದೆ.  ನೀವು ಬಳಸುವ ವಿಂಡೋಸ್ ಅಥವಾ ಆ್ಯಪಲ್ ಸಿಸ್ಟಮ್​ನಲ್ಲಿ ಬಳಸುವ ವಾಟ್ಸ್​ಆ್ಯಪ್​ನಲ್ಲೂ ವಿಡಿಯೋ ಕಾಲ್, ವಾಯ್ಸ್ ಕಾಲ್ ಮಾಡುವ ಹೊಸ ಸೌಲಭ್ಯವನ್ನು ವಾಟ್ಸ್​ಆ್ಯಪ್ ನೀಡಲಿದೆ.

ಸದ್ಯ ಒಮ್ಮೆ ಒಬ್ಬರಿಗೆ ಮಾತ್ರ ವಿಡಿಯೋ ಕಾಲ್, ವಾಯ್ಸ್ ಕಾಲ್ ಮಾಡುವ ಸೌಲಭ್ಯ ಒದಗಿಸಲಾಗಿದ್ದು, ಗ್ರೂಪ್ ವಿಡಿಯೋ ಕಾಲ್ ಮತ್ತು ವಾಯ್ಸ್ ಕಾಲ್​ಗೆ ಅವಕಾಶ ನೀಡಿಲ್ಲ. ಆದರೆ ಒಮ್ಮೆಗೆ 8 ಜನರಿಗೆ ವಿಡಿಯೋ ಕಾಲ್ ಅಥವಾ ವಾಯ್ಸ್ ಕಾಲ್ ಮಾಡಬಹುದಾಗಿದೆ. ಇನ್ನೂ ಹೆಚ್ಚು ಜನರು ಒಟ್ಟಿಗೆ ವಿಡಿಯೊ ಕಾಲ್​ ಮಾಡುವ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ ನೀಡುವ ಭರವಸೆಯನ್ನು ಕಂಪನಿ ವ್ಯಕ್ತಪಡಿಸಿದೆ.

ಈ ಸೌಲಭ್ಯ ಪಡೆಯಲು ವಾಟ್ಸ್​ಆ್ಯಪ್ ವೆಬ್​ಸೈಟ್​ನಿಂದ ವಾಟ್ಸ್​ಆ್ಯಪ್ ಆ್ಯಪ್​ನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್​ನಲ್ಲೂ ಅದೇ ಖಾತೆಯ ವಾಟ್ಸ್​ಆ್ಯಪ್ ಇರಿಸಿಕೊಂಡು, ಕಂಪ್ಯೂಟರ್​ನ ವಾಟ್ಸ್​ಆ್ಯಪ್​ನಲ್ಲಿ ಸ್ಕ್ಯಾನ್ ಮಾಡಿ ಓಪನ್ ಮಾಡಬೇಕು. ಈ ಮೂಲಕ ಕಂಪ್ಯೂಟರ್​ನಲ್ಲಿ ಆ್ಯಪ್​ ಮೂಲಕ ವಾಟ್ಸ್​ಆ್ಯಪ್ ಬಳಸಬಹುದು.

ಫೇಸ್​ಬುಕ್ ಒಡೆತನದ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್ ಖಾಸಗಿ ಸಂವಹನಕ್ಕೊಂದೇ ಅಲ್ಲದೇ, ಉದ್ಯೋಗ, ಉದ್ಯಮ ನಡೆಸಲು ಸಹ ಸಹಕಾರಿಯಾಗಿದೆ. ಸದ್ಯ ವಾಟ್ಸ್​ಆ್ಯಪ್ ವೆಬ್​ನಲ್ಲಿ ಈ ಸೌಲಭ್ಯ ನೀಡಲಾಗಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ವಾಟ್ಸ್​ಆ್ಯಪ್ ವೆಬ್​ನಲ್ಲೂ ಈ ಸೌಲಭ್ಯ ನೀಡಬೇಕೆಂಬ ಒತ್ತಾಯ ಗ್ರಾಹಕರಿಂದ ಕೇಳಿಬರುವುದಂತೂ ಗ್ಯಾರಂಟಿ.

ವಾಟ್ಸ್​ಆ್ಯಪ್ ವೆಬ್​ ಬಗ್ಗೆ ಇದೆ ಆತಂಕ

ವಾಟ್ಸ್​ಆ್ಯಪ್​​ ತನ್ನ ಪಾಲಿಸಿಯನ್ನು ಬದಲಾಯಿಸಿದ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಮಧ್ಯೆ ಸ್ಪಷ್ಟನೆ ನೀಡಿರುವ ಸಂಸ್ಥೆ ಯಾವುದೇ ಕಾರಣ ವೈಯಕ್ತಿಕ ಚ್ಯಾಟ್​ಗಳು ಸೋರಿಕೆ ಆಗುವುದಿಲ್ಲ ಎಂದು ಹೇಳಿತ್ತು. ಹೀಗಿರುವಾಗಲೇ ಗೂಗಲ್​ನಲ್ಲಿ ವಾಟ್ಸ್​ಆ್ಯಪ್ ಚಾಟ್​ ಸೋರಿಕೆ ಆಗಿರುವ ವಿಚಾರ ಬಯಲಾಗಿತ್ತು.

ವಾಟ್ಸ್​ಆ್ಯಪ್​ ವೆಬ್​ನಿಂದ ಕೆಲ ಚಾಟ್​ಗಳು ಲೀಕ್​ ಆಗಿರುವ ಬಗ್ಗೆ ವರದಿ ಆಗಿದೆ. ವೆಬ್​ನಲ್ಲಿರುವ ಸಮಸ್ಯೆಯಿಂದ ಈ ಸೋರಿಕೆ ಉಂಟಾಗಿದೆ. ಕೇವಲ ಒಂದು ಸರ್ಚ್​ನಿಂದ ಖಾಸಗಿ ಚ್ಯಾಟ್​ಗಳು ಸಾರ್ವಜನಿಕರಿಗೆ ಸಿಗುವಂತಾಗಿದೆ. ಇದು ವಾಟ್ಸ್​ಆ್ಯಪ್ ಭದ್ರತೆ ಬಗ್ಗೆ ಪ್ರಶ್ನೆ ಮಾಡಿದೆ.

ಒಂದು ಗೂಗಲ್​ ಸರ್ಚ್​​ನಿಂದ ವಾಟ್ಸ್​ಆ್ಯಪ್​ ಚಾಟ್ ಹಾಗೂ ಕಾಂಟ್ಯಾಕ್ಟ್​ಗಳು ಲಭ್ಯವಾಗುತ್ತಿದೆ. ಸೈಬರ್​ ಕಳ್ಳರು ಈ ಮಾಹಿತಿ ಬಳಕೆ ಮಾಡಿಕೊಂಡು ಸುಲಭವಾಗಿ ಫಿಶಿಂಗ್​ ನಡೆಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಆದರೆ ವಾಟ್ಸ್​ಆ್ಯಪ್ ವೆಬ್​ಗೂ ವಾಟ್ಸ್​ಆ್ಯಪ್ ಅಪ್ಲಿಕೇಶನ್​ಗೂ ವ್ಯತ್ಯಾಸಗಳಿದ್ದು, ಕಂಪ್ಯೂಟರ್​ನಲ್ಲಿ ವಾಟ್ಸ್​ಆ್ಯಪ್​ ಅಪ್ಲಿಕೇಶನ್​ ಬಳಸಿ ಸುಲಭವಾಗಿ ಸಂದೇಶ ವಿನಿಮಯ ಮಾಡಬಹುದಾಗಿದೆ. ಇದೀಗ ವಿಂಡೋಸ್ ಅಥವಾ ಆ್ಯಪಲ್ ಸಿಸ್ಟಮ್​ನಲ್ಲಿ ಬಳಸುವ ವಾಟ್ಸ್​ಆ್ಯಪ್​ನಲ್ಲೂ ವಿಡಿಯೋ ಕಾಲ್, ವಾಯ್ಸ್ ಕಾಲ್ ಮಾಡುವ ಹೊಸ ಸೌಲಭ್ಯವನ್ನು ವಾಟ್ಸ್​ಆ್ಯಪ್ ನೀಡಲಿದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್ ಹೊಸ ಪ್ರೈವೆಸಿ ಪಾಲಿಸಿಯಲ್ಲಿ ಭಾರತೀಯರಿಗೆ ತಾರತಮ್ಯ: ಕೇಂದ್ರ ಸರ್ಕಾರ

WhatsApp Privacy: ವಾಟ್ಸ್ಆ್ಯಪ್ ಗೌಪ್ಯತೆ ನೀತಿಯನ್ನು ಗ್ರಾಹಕರು ಪಾಲಿಸದೇ ಇದ್ದರೆ ಏನಾಗುತ್ತೆ?

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ