WhatsApp Privacy: ವಾಟ್ಸ್ಆ್ಯಪ್ ಗೌಪ್ಯತೆ ನೀತಿಯನ್ನು ಗ್ರಾಹಕರು ಪಾಲಿಸದೇ ಇದ್ದರೆ ಏನಾಗುತ್ತೆ?
WhatsApp Privacy Update: ಗ್ರಾಹಕರು ಮೇ 15ರೊಳಗೆ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳದೇ ಇದ್ದರೆ ವ್ಯಾಟ್ಸ್ಆ್ಯಪ್ ಖಾತೆ ಡಿಲೀಟ್ ಆಗುತ್ತದೆ. ಆದಾಗ್ಯೂ, ಹೊಸ ನೀತಿಯನ್ನು ನೀವು ಒಪ್ಪಿಕೊಳ್ಳುವವರೆಗೂ ವಾಟ್ಸ್ಆ್ಯಪ್ನ ಪೂರ್ತಿ ಚಟುವಟಿಕೆಗಳು ಲಭ್ಯವಾಗುವುದಿಲ್ಲ.
ವಾಟ್ಸ್ಆ್ಯಪ್ ಹೊಸ ಗೌಪ್ಯತೆ ನೀತಿಯನ್ನು ಜಾರಿ ಮಾಡಿದ್ದು ಅದನ್ನು ಒಪ್ಪಿಕೊಳ್ಳಲು ಪ್ರಸ್ತುತ ಗ್ರಾಹಕರಿಗೆ ಮೇ.15ರವರೆಗೆ ಕಾಲಾವಕಾಶ ಇದೆ. ಒಂದು ವೇಳೆ ಗ್ರಾಹಕರು ಈ ಗೌಪತ್ಯಾ ನೀತಿಯನ್ನು ಒಪ್ಪಿಕೊಳ್ಳದೇ ಇದ್ದರೆ ಏನಾಗುತ್ತದೆ? ಈ ಬಗ್ಗೆ ವಾಟ್ಸ್ಆ್ಯಪ್ ಸಂಸ್ಥೆ ತಮ್ಮ FAQ ವಿಭಾಗದಲ್ಲಿ ವಿವರಣೆ ನೀಡಿದೆ . ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಹೊಸ ಪ್ರೈವೆಸಿ ನೀತಿ ಜಾರಿಗೆ ತರಲು ಮುಂದಾಗಿತ್ತು. ಇದರನ್ವಯ ವಾಟ್ಸ್ಆ್ಯಪ್ ಬಳಕೆದಾರರ ಪ್ರಮುಖ ಮಾಹಿತಿಯನ್ನು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಜತೆ ಹಂಚಿಕೊಳ್ಳಲು ಅವಕಾಶವಿತ್ತು. ಆದರೆ, ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಕಾರಣ, ಹೊಸ ಪಾಲಿಸಿ ತಡವಾಗಿ ಜಾರಿಗೆ ಬರುತ್ತಿದೆ. ಹೊಸ ಪಾಲಿಸಿ ಫೆಬ್ರವರಿ 8ರಿಂದ ಜಾರಿಗೆ ಬರಬೇಕಿತ್ತು. ಆದರೆ, ಸಾಕಷ್ಟು ಮಂದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ವಾಟ್ಸ್ಆ್ಯಪ್ ಅನ್ಇನ್ಸ್ಟಾಲ್ ಮಾಡಿ ಸಿಗ್ನಲ್ ಮೆಸೆಂಜರ್ ಆ್ಯಪ್ನತ್ತ ಅನೇಕರು ವಾಲಿದ್ದರು. ಇದರಿಂದ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿ ವಾಟ್ಸ್ಆ್ಯಪ್ಗೆ ಎದುರಾಗಿತ್ತು. ಹೀಗಾಗಿ ವಾಟ್ಸಾಪ್ ಈ ಪಾಲಿಸಿ ಜಾರಿಗೊಳಿಸುವುದನ್ನು ಮೇ 15ರವರೆಗೆ ಮುಂದೂಡಿತ್ತು.
ಗೌಪ್ಯತೆ ನೀತಿ ಒಪ್ಪದೇ ಇದ್ದರೆ ಏನಾಗುತ್ತದೆ?
ಗ್ರಾಹಕರು ಮೇ 15ರೊಳಗೆ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳದೇ ಇದ್ದರೆ ವ್ಯಾಟ್ಸ್ಆ್ಯಪ್ ಖಾತೆ ಡಿಲೀಟ್ ಆಗುತ್ತದೆ. ಆದಾಗ್ಯೂ, ಹೊಸ ನೀತಿಯನ್ನು ನೀವು ಒಪ್ಪಿಕೊಳ್ಳುವವರೆಗೂ ವಾಟ್ಸ್ಆ್ಯಪ್ನ ಪೂರ್ತಿ ಚಟುವಟಿಕೆಗಳು ಲಭ್ಯವಾಗುವುದಿಲ್ಲ. ಅಂದರೆ ಕೆಲವು ಸಮಯದವರೆಗೆ ನಿಮಗೆ ವಾಟ್ಸ್ಆ್ಯಪ್ ಕರೆ ಮತ್ತು ನೋಟಿಫಿಕೇಷನ್ ಗಳು ಸಿಗುವುದಿಲ್ಲ. ವಾಟ್ಸ್ಆ್ಯಪ್ನಲ್ಲಿ ಸಂದೇಶಗಳನ್ನು ಕಳಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಹೀಗಿದ್ದರೂ ಮೇ 15ರ ನಂತರವೂ ವಾಟ್ಸ್ಆ್ಯಪ್ ಅಪ್ಡೇಟ್ ಸಾಧ್ಯವಾಗುತ್ತದೆ. ಮೇ 15ಕ್ಕಿಂತ ಮುನ್ನ ಅಂಡ್ರಾಯ್ಡ್ ಅಥವಾ ಐಫೋನ್ ಬಳಕೆದಾರರು ಚಾಟ್ ಹಿಸ್ಟರಿ ಎಕ್ಸ್ಪೋರ್ಟ್ ಮಾಡಿ, ಖಾತೆಯ ರಿಪೋರ್ಟ್ ಡೌನ್ ಲೋಡ್ ಮಾಡಿಕೊಳ್ಳಬಹುದು.
ಒಂದು ವೇಳೆ ಗ್ರಾಹಕರು ಅಂಡ್ರಾಯ್ಡ್, ಐಫೋನ್ ಅಥವಾ KaiOS ನಲ್ಲಿರುವ ವಾಟ್ಸ್ಆ್ಯಪ್ ಖಾತೆಯನ್ನು ಡಿಲೀಟ್ ಮಾಡುವುದಾದರೆ ಡಿಲೀಟ್ ಮಾಡಿದ ನಂತರ ಅದನ್ನು ವಾಪಸ್ ಪಡೆಯಲಾಗುವುದಿಲ್ಲ. ವಾಟ್ಸ್ಆ್ಯಪ್ ಸಂದೇಶ ಮತ್ತು ಮಾಹಿತಿ ಎಲ್ಲವೂ ಸಂಪೂರ್ಣವಾಗಿ ಡಿಲೀಟ್ ಆಗಲಿದ್ದು, ಎಲ್ಲ ಗ್ರೂಪ್ ಗಳಿಂದ ಈ ಖಾತೆ ತೆಗೆದುಹಾಕಲ್ಪಡುತ್ತದೆ. ಕಂಪನಿಯ ಮಾಹಿತಿ ಪ್ರಕಾರ ವಾಟ್ಸ್ಆ್ಯಪ್ ಬ್ಯಾಕ್ ಅಪ್ ಕೂಡಾ ಡಿಲೀಟ್ ಆಗುತ್ತದೆ.
ಹೊಸ ನೀತಿ ಬಗ್ಗೆ ತಿಳಿಯಲು ಮತ್ತು ಗೌಪ್ಯತೆ ನೀತಿ ಬಗ್ಗೆ ಗ್ರಾಹಕರಿಗೆ ಸ್ಪಷ್ಟವಾದ ಮಾಹಿತಿ ನೀಡಲು ವಾಟ್ಸ್ಆ್ಯಪ್ ಸಂಸ್ಥೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಹೇಳಿತ್ತು. ಇದೀಗ ಗ್ರಾಹಕರು ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್ಗಳನ್ನು ಇತರರಿಗೆ ಅಥವಾ ಬೇರೆ ಆ್ಯಪ್ ಗಳಿಗೆ ಲಿಂಕ್ ಕಳಿಸಿ ಶೇರ್ ಮಾಡಿಕೊಳ್ಳುವ ಅವಕಾಶ ಇದೆ. ಮುಂಬರುವ ವಾರಗಳಲ್ಲಿ ಮತ್ತಷ್ಟು ಅಪ್ ಡೇಟ್ ಗಳನ್ನು ವಾಟ್ಸ್ಆ್ಯಪ್ ಪರಿಚಯಿಸಲಿದೆ.
ಬೆಳವಣಿಗೆ ನಡೆದು ಬಂದ ಹಾದಿ ವಾಟ್ಸ್ಆ್ಯಪ್ ಜನವರಿ 4ರಂದು ಗೌಪ್ಯತೆ ನೀತಿ ಬದಲಾಯಿಸಿತ್ತು. ಬಳಕೆದಾರರಿಗೆ ಈ ಸಂಬಂಧ ಜನವರಿ 5ರಂದು ನೋಟಿಫಿಕೇಷನ್ ಕಳುಹಿಸಿತ್ತು. ಈ ನೋಟಿಫಿಕೇಷ್ನಲ್ಲಿ ಬದಲಾದ ಪಾಲಿಸಿ ಬಗ್ಗೆ ವಿವರಿಸಲಾಗಿತ್ತು. ಹೊಸ ನಿಯಮಗಳನ್ನು ಒಪ್ಪಿ (Accept) ಅಥವಾ ನಂತರ ಒಪ್ಪಿ (Accept later) ಎನ್ನುವ ಆಯ್ಕೆ ನೀಡಲಾಗಿತ್ತು. ಫೆಬ್ರುವರಿ 8ರವರೆಗೆ ಹೊಸ ನೀತಿ ಒಪ್ಪಿಕೊಳ್ಳಲು ಕಾಲಾವಕಾಶ ಇದೆ. ಫೆಬ್ರುವರಿ 8ರ ಒಳಗೆ ನೀವು ನೂತನ ನೀತಿ ಒಪ್ಪಬೇಕು. ಇಲ್ಲ ಎಂದಾದರೆ ಬಳಕೆದಾರರು ವಾಟ್ಸ್ಆ್ಯಪ್ ಬಳಸಲು ಸಾಧ್ಯವಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿತ್ತು. ಈ ನೀತಿಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗೌಪ್ಯತೆ ನೀತಿ ಒಪ್ಪಿಕೊಳ್ಳಲು ಮೇ. 15ರವರೆಗೆ ಗಡುವು ನೀಡಿತ್ತು.
ಗೌಪ್ಯತೆ ನೀತಿ ಬಗ್ಗೆ ವಾಟ್ಸ್ಆ್ಯಪ್ ಹೇಳಿದ್ದೇನು? ವಾಟ್ಸ್ಆ್ಯಪ್ ಪ್ರಕಟಿಸಿದ ಹೊಸ ಗೌಪ್ಯತೆ ನೀತಿಗಳ ಬಗ್ಗೆ ಕಂಪನಿ ಹೇಳುವುದೇನೆಂದರೆರೆ ಬಳಕೆದಾರರು ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಕಳುಹಿಸುವ ಸಂದೇಶಗಳಿಗೆ ಈ ನೀತಿ ಅನ್ವಯವಾಗುವುದಿಲ್ಲ. ಆದರೆ ವ್ಯಾವಹಾರಿಕ ಸಂದೇಶಗಳು (business messages) ಅಂದರೆ, ಸ್ನೇಹಿತರು ಅಥವಾ ಕುಟುಂಬದವರಿಗೆ ಕಳುಹಿಸುವ ಸಂದೇಶದ ಹೊರತಾಗಿರುವ ಸಂದೇಶಗಳನ್ನು ಫೇಸ್ ಬುಕ್ ಸಂಸ್ಥೆ ಓದುತ್ತದೆ. ವ್ಯಾವಹಾರಿಕ ಸಂದೇಶಗಳನ್ನು ಮಾತ್ರ ವ್ಯವಹಾರದ ಉದ್ದೇಶಕ್ಕಾಗಿ ಬಳಸುತ್ತದೆ. ಇತ್ತೀಚಿನ ಸ್ಪಷ್ಟೀಕರಣದಲ್ಲಿ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಸಂದೇಶಗಳು ಮತ್ತು ವ್ಯಾವಹಾರಿಕ ಸಂದೇಶಗಳ ನಡುವಿನ ವ್ಯತ್ಯಾಸ ಏನು ಎಂಬುದನ್ನು ಹೇಳಿದೆ. ಅದೇ ವೇಳೆ ಗೌಪ್ಯತೆ ನೀತಿಯು ಎರಡನೆಯದಕ್ಕೆ ಮಾತ್ರ ಸಂಬಂಧಿಸಿದೆ ಮತ್ತು ಹಿಂದಿನದು ಬದಲಾಗದೆ ಉಳಿಯಲಿದೆ.
ಇದನ್ನೂ ಓದಿ: WhatsApp: ನಿಮ್ಮ ಹಣಕ್ಕಿಂತ ಗೌಪ್ಯತೆ ಮುಖ್ಯ: ವಾಟ್ಸ್ಆ್ಯಪ್ಗೆ ಸುಪ್ರೀಂಕೋರ್ಟ್ ನೋಟಿಸ್
Published On - 12:09 pm, Wed, 24 February 21