WhatsApp: ನಿಮ್ಮ ಹಣಕ್ಕಿಂತ ಗೌಪ್ಯತೆ ಮುಖ್ಯ: ವಾಟ್ಸ್ಆ್ಯಪ್ಗೆ ಸುಪ್ರೀಂಕೋರ್ಟ್ ನೋಟಿಸ್
Privacy Policy: ಭಾರತದಲ್ಲಿ ಹೊಸ ಗೌಪ್ಯತಾ ನೀತಿ ಅನುಷ್ಠಾನಕ್ಕೆ ತರುವುದನ್ನು ತಡೆ ಹಿಡಿಯಬೇಕು ಎಂದು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜನರು ಗೌಪ್ಯತೆ ಬಗ್ಗೆ ಕಾಳಜಿ ವಹಿಸಿದ್ದಾರೆ. ಹಣಕ್ಕಿಂತಲೂ ನಾಗರಿಕರ ಗೌಪ್ಯತೆ ಮುಖ್ಯ ಎಂದಿದೆ.
ನವದೆಹಲಿ: ಹೊಸ ಗೌಪ್ಯತೆ ನೀತಿ ಬಗ್ಗೆ ವಾಟ್ಸ್ಆ್ಯಪ್ಗೆ ಸುಪ್ರೀಂಕೋರ್ಟ್ ಸೋಮವಾರ ನೋಟಿಸ್ ನೀಡಿದೆ. ವಾಟ್ಸ್ಆ್ಯಪ್ನಲ್ಲಿ ಭಾರತೀಯರಿಗಿಂತ ಹೆಚ್ಚಿನ ಗೌಪ್ಯತೆಯನ್ನು ಯುರೋಪಿಯನ್ನರಿಗೆ ನೀಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ಸರ್ಕಾರ ಮತ್ತು ವಾಟ್ಸ್ಆ್ಯಪ್ಗೆ ಸೂಚಿಸಿದೆ.
ಭಾರತದಲ್ಲಿ ಹೊಸ ಗೌಪ್ಯತಾ ನೀತಿ ಅನುಷ್ಠಾನಕ್ಕೆ ತರುವುದನ್ನು ತಡೆ ಹಿಡಿಯಬೇಕು ಎಂದು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜನರು ಗೌಪ್ಯತೆ ಬಗ್ಗೆ ಕಾಳಜಿ ವಹಿಸಿದ್ದಾರೆ. ಹಣಕ್ಕಿಂತಲೂ ನಾಗರಿಕರ ಗೌಪ್ಯತೆ ಮುಖ್ಯ . ಜನರು ಗೌಪ್ಯತೆ ಬಗ್ಗೆ ಆತಂಕಗೊಂಡಿದ್ದಾರೆ. ಅವರ ಗೌಪ್ಯತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಾಧೀಶ ಎಸ್.ಎ. ಬೋಬಡೆ ಅವರ ನೇತೃತ್ವದ ನ್ಯಾಯಪೀಠವು ಕರ್ಮಣ್ಯ ಸಿಂಗ್ ಸರೀನ್ ಅವರ ಮನವಿ ವಿಚಾರಣೆ ನಡೆಸಿ ಸರ್ಕಾರ ಮತ್ತು ವಾಟ್ಸ್ಆ್ಯಪ್ ಕಂಪನಿಗೆ ನೋಟಿಸ್ ನೀಡಿದೆ. ನಾಲ್ಕುವಾರಗಳ ನಂತರ ಮುಂದಿನ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ಹೊಸ ಪ್ರೈವೆಸಿ ಪಾಲಿಸಿಯಲ್ಲಿ ಭಾರತೀಯರಿಗೆ ತಾರತಮ್ಯ: ಕೇಂದ್ರ ಸರ್ಕಾರ
ಬಳಕೆದಾರರ ಮಾಹಿತಿಯನ್ನು ಹಂಚಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ವಾಟ್ಸ್ಆ್ಯಪ್, ವಿಶೇಷ ಡೇಟಾ ಸುರಕ್ಷಾ ಕಾನೂನು ಇರುವ ಐರೋಪ್ಯ ರಾಷ್ಟ್ರಗಳನ್ನು ಹೊರತು ಪಡಿಸಿ ಬಾಕಿ ಎಲ್ಲ ದೇಶಗಳಲ್ಲಿಯೂ ಒಂದೇ ಗೌಪ್ಯತಾ ನೀತಿ ಇದೆ. ಒಂದು ವೇಳೆ ಭಾರತದಲ್ಲಿಯೂ ಇದೇ ರೀತಿಯ ಕಾನೂನು ಇದ್ದರೆ ಇಲ್ಲಿಯೂ ಯುರೋಪ್ ರಾಷ್ಟ್ರಗಳಂತೆಯೇ ಗೌಪ್ಯತಾ ನೀತಿ ಇರುತ್ತಿತ್ತು ಎಂದು ಹೇಳಿದೆ. ಇದಕ್ಕೆ ಉತ್ತರಿಸಿದ ಸುಪ್ರೀಂಕೋರ್ಟ್, ಕಂಪನಿಯ ಮೌಲ್ಯಕ್ಕಿಂತ ಜನರು ಗೌಪ್ಯತೆ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದು ಹೇಳಿದೆ.
Published On - 6:51 pm, Mon, 15 February 21