Sign In

By signing in or creating an account, you agree with Associated Broadcasting Company's Terms & Conditions and Privacy Policy.

New Labour Laws: ಕೆಲಸಗಾರರಿಗೆ ಸಿಹಿಸುದ್ದಿ; 15 ನಿಮಿಷ ಹೆಚ್ಚು ದುಡಿದರೂ ಓಟಿ ಪರಿಗಣನೆಗೆ ಸಿದ್ಧವಾಗ್ತಿದೆ ಹೊಸ ಕಾಯ್ದೆ

ಕೇಂದ್ರ ಕಾರ್ಮಿಕ ಇಲಾಖೆ ಹೊಸ ಕಾನೂನು ಜಾರಿ ಮಾಡುವ ಬಗ್ಗೆ ಯೋಜನೆ ಹಾಕಿಕೊಂಡಿದೆ. ಶೀಘ್ರದಲ್ಲಿಯೇ ಕಾಯ್ದೆಯ ಕರಡು ಅಂತಿಮವಾಗುವ ನಿರೀಕ್ಷೆ ಇದೆ.

New Labour Laws: ಕೆಲಸಗಾರರಿಗೆ ಸಿಹಿಸುದ್ದಿ; 15 ನಿಮಿಷ ಹೆಚ್ಚು ದುಡಿದರೂ ಓಟಿ ಪರಿಗಣನೆಗೆ ಸಿದ್ಧವಾಗ್ತಿದೆ ಹೊಸ ಕಾಯ್ದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 7:59 PM

ದೆಹಲಿ: ಕಾರ್ಮಿಕರಿಗೆ ಸಂತಸ ನೀಡುವ ಸುದ್ದಿಯೊಂದು ಮುಂಬರುವ ಆರ್ಥಿಕ ವರ್ಷದಲ್ಲಿ ಜಾರಿಗೆ ಬರಲಿರುವ ಬಗ್ಗೆ ನಿರೀಕ್ಷೆ ಉಂಟಾಗಿದೆ. ಕೇಂದ್ರ ಕಾರ್ಮಿಕ ಇಲಾಖೆ ಹೊಸ ಕಾರ್ಮಿಕ ಕಾನೂನನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಶೀಘ್ರದಲ್ಲಿಯೇ ಕಾನೂನಿನ ಕರಡು ಅಂತಿಮ ಸ್ವರೂಪಕ್ಕೆ ಬರುವ ನಿರೀಕ್ಷೆ ಇದೆ. ನೂತನ ಕಾರ್ಮಿಕ ಕಾನೂನುಗಳ ಬಗ್ಗೆ ಜನರಿಗೆ ಇರುವ ಅನುಮಾನಗಳನ್ನು ಬಗೆಹರಿಸಲು ಕೂಡ ಸರ್ಕಾರ ಪ್ರಯತ್ನಿಸುತ್ತಿದೆ.

ನೂತನ ಕಾರ್ಮಿಕ ಕಾನೂನುಗಳ ಅನ್ವಯ, ಹೆಚ್ಚುವರಿ ಅವಧಿ ಕೆಲಸ (Overtime Work) ನಿರ್ವಹಿಸಿದರೆ ಕಂಪೆನಿಯು ಕೆಲಸಗಾರನಿಗೆ ಸೂಕ್ತ ಸಂಭಾವನೆ ನೀಡಬೇಕಾಗಿದೆ. ಅಂದರೆ, ಕಾರ್ಮಿಕನು ನಿಗದಿತ ಅವಧಿಗಿಂತ 15 ನಿಮಿಷ ಹೆಚ್ಚು ಕೆಲಸ ಮಾಡಿದರೂ, ಆಯಾ ಕಂಪೆನಿ ಅದನ್ನು ಪರಿಗಣಿಸಬೇಕಾಗಿದೆ. ಹೆಚ್ಚು ಸಂಬಳವನ್ನೂ ನೀಡಬೇಕಾಗಿದೆ.

ಈಗ ಚಾಲ್ತಿಯಲ್ಲಿರುವ ಕಾನೂನಿನಂತೆ, ಕಾರ್ಮಿಕನು ನಿಗದಿತ ಅವಧಿಗಿಂತ ಅರ್ಧ ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಕೆಲಸ ಮಾಡಿದರೆ ಅದನ್ನು ಹೆಚ್ಚುವರಿ ಕೆಲಸ (Overtime Duty) ಎಂದು ಪರಿಗಣಿಸಲಾಗುತ್ತಿತ್ತು. ಈಗ ಈ ನಿಯಮದಡಿ ಕಾರ್ಮಿಕ 15 ನಿಮಿಷ ಹೆಚ್ಚುವರಿ ಕೆಲಸ ಮಾಡಿದರೂ ಅದನ್ನು ಓವರ್​ಟೈಂ ಎಂದು ಪರಿಗಣಿಸಲಾಗುತ್ತದೆ.

ಮೂಲಗಳ ಪ್ರಕಾರ ಕಾರ್ಮಿಕ ಇಲಾಖೆ, ಹೊಸ ಕಾರ್ಮಿಕ ಕಾನೂನುಗಳ ಬಗ್ಗೆ ಎಲ್ಲಾ ಹೂಡಿಕೆದಾರರನ್ನು ಸಂಪರ್ಕಿಸಿ ಚರ್ಚಿಸಿದೆ. ಈ ತಿಂಗಳ ಅಂತ್ಯದೊಳಗೆ ಯೋಜನೆಯ ಹಂತಗಳು ಪೂರ್ಣಗೊಳ್ಳಲಿವೆ. ನಂತರ ಹೊಸ ಕಾನೂನುಗಳನ್ನು ಅಳವಡಿಸುವ ಕಾರ್ಯ ಆರಂಭವಾಗಲಿದೆ.

ಇದನ್ನೂ ಓದಿ: ರಜೆ ಕೇಳಿದ್ದಕ್ಕೆ 12 ವರ್ಷದಿಂದ ಕೆಲಸ ಮಾಡ್ತಿದ್ದ ಕಾರ್ಮಿಕರು ಏಕಾಏಕಿ ವಜಾ: ಮರುನೇಮಕಕ್ಕೆ ಆಗ್ರಹಿಸಿ ನೌಕರರ ಧರಣಿ

PF, ESI ಬಗ್ಗೆ ನೂತನ ಕಾನೂನುಗಳು ಏನು ಹೇಳುತ್ತವೆ? ಹೊಸ ಕಾರ್ಮಿಕ ಕಾನೂನುಗಳಂತೆ, ಕಂಪೆನಿಯು ಎಲ್ಲಾ ಕೆಲಸಗಾರರಿಗೆ ಕಾರ್ಮಿಕರ ಭವಿಷ್ಯ ನಿಧಿ (PF) ಹಾಗೂ ಆರೋಗ್ಯ ಸೇವೆ (ESI) ನೀಡಬೇಕಿದೆ. ಹೊರಗುತ್ತಿಗೆ ಅಥವಾ ಮೂರನೇ ಪಾರ್ಟಿಯಿಂದ ಕೆಲಸಗಾರರನ್ನು ಪಡೆಯಲಾಗಿದೆ ಎಂಬ ಕಾರಣ ನೀಡಿ, PF ಮತ್ತು ESI ಸೌಲಭ್ಯ ನಿರಾಕರಿಸುವಂತಿಲ್ಲ. ಹೊರಗುತ್ತಿಗೆ ಅಥವಾ ಮೂರನೇ ಪಾರ್ಟಿ ಮೂಲಕ ಕೆಲಸ ಮಾಡುವವರಿಗೂ ಪೂರ್ಣ ಸಂಬಳ ನೀಡಬೇಕಾಗಿದೆ.

ಇದನ್ನೂ ಓದಿ: New Labour Codes: ವಾರದ ನಾಲ್ಕು ದಿನ ಕೆಲಸ, ಈ ನಾಲ್ಕು ದಿನ ಕೆಲಸದ ಅವಧಿ ದೀರ್ಘ; ಶೀಘ್ರದಲ್ಲೇ ಬರಲಿದೆ ನೂತನ ಕಾರ್ಮಿಕ ಸಂಹಿತೆ

Published On - 7:46 pm, Mon, 15 February 21