New Labour Codes: ವಾರದ ನಾಲ್ಕು ದಿನ ಕೆಲಸ, ಈ ನಾಲ್ಕು ದಿನ ಕೆಲಸದ ಅವಧಿ ದೀರ್ಘ; ಶೀಘ್ರದಲ್ಲೇ ಬರಲಿದೆ ನೂತನ ಕಾರ್ಮಿಕ ಸಂಹಿತೆ

Union Ministry of Labour and Employment: ಕೇಂದ್ರ ಕಾರ್ಮಿಕ ಮತ್ತು ನೌಕರರ ಸಚಿವಾಲಯ ಜಾರಿಗೆ ತರಲಿರುವ ಹೊಸ ಕಾರ್ಮಿಕ ಸಂಹಿತೆಯಲ್ಲಿ ಕಾರ್ಮಿಕರಿಗೆ ವಾರದ ನಾಲ್ಕು ದಿನ ಕೆಲಸ ಮಾಡುವ ಅವಕಾಶವಿದ್ದು, ಕೆಲಸದ ಅವಧಿ ದೀರ್ಘವಾಗಿರಲಿದೆ.

New Labour Codes: ವಾರದ ನಾಲ್ಕು ದಿನ ಕೆಲಸ, ಈ ನಾಲ್ಕು ದಿನ ಕೆಲಸದ ಅವಧಿ ದೀರ್ಘ; ಶೀಘ್ರದಲ್ಲೇ ಬರಲಿದೆ ನೂತನ ಕಾರ್ಮಿಕ ಸಂಹಿತೆ
ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Feb 10, 2021 | 3:38 PM

ನವದೆಹಲಿ: ಕೇಂದ್ರ ಕಾರ್ಮಿಕ ಮತ್ತು ನೌಕರರ ಸಚಿವಾಲಯವು ನೂತನ ಕಾರ್ಮಿಕ ಸಂಹಿತೆ ಹೊರಡಿಸುವ ಸಿದ್ದತೆ ನಡೆಸುತ್ತಿದ್ದು ವಾರದ ನಾಲ್ಕು ದಿನ ಮಾತ್ರ ಕೆಲಸ ಮಾಡುವ ವ್ಯವಸ್ಥೆಯನ್ನು ಜಾರಿ ಮಾಡಲಿದೆ. ಕಂಪನಿಗಳಲ್ಲಿ ನೌಕರರು ವಾರದ ನಾಲ್ಕು ದಿನ ಮಾತ್ರ ಕೆಲಸ ಮಾಡುತ್ತಿದ್ದರೆ ಕೆಲಸದ ಅವಧಿಯೂ ದೀರ್ಘವಾಗಿರುತ್ತದೆ. ವಾರದಲ್ಲಿ 48 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಷ್ಟೇ ಅಲ್ಲದೆ ರಾಜ್ಯ ವಿಮೆ ಪ್ರಕಾರ ನೌಕರರಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ನೀಡುವ ವ್ಯವಸ್ಥೆಯನ್ನೂ ಸಂಹಿತೆಯಲ್ಲಿ ಸೇರಿಸಲಾಗಿದೆ.

ನೌಕರರ ಅನುಮತಿ ಪಡೆದು ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡಲು ಕಂಪನಿಗಳು ನೌಕರರಿಗೆ ಹೇಳಬಹುದು. ಇದರ ಜತೆಗೆ ನೌಕರರಿಗೆ 3 ದಿನ ಸಂಬಳ ಸಹಿತ ರಜೆ (paid leaves) ಇರುತ್ತದೆ ಎಂದು ಕಾರ್ಮಿಕ ಮತ್ತು ನೌಕರರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದ್ದಾರೆ.

ನಾವು ಈ ರೀತಿ ಕೆಲಸ ಮಾಡಬೇಕು ಎಂದು ನೌಕರರನ್ನು ಅಥವಾ ಕಂಪನಿಯವರನ್ನು ಒತ್ತಾಯಿಸುವುದಿಲ್ಲ. ಕೆಲವು ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದೇವೆ. ಕಾರ್ಮಿಕರ ಸಂಹಿತೆಯ ಕರಡು ಪ್ರತಿ ಈಗ ಅಂತಿಮ ಘಟ್ಟದಲ್ಲಿದ್ದು ಉತ್ತರ ಪ್ರದೇಶ, ಪಂಜಾಬ್, ಮಧ್ಯಪ್ರದೇಶ ಮೊದಲಾದ ರಾಜ್ಯಗಳು ಈ ವಾರ ಕರಡು ಪ್ರತಿ ಸಿದ್ಧಪಡಿಸಲಿವೆ.

ಕೆಲಸದ ದಿನಗಳು 5 ದಿನಕ್ಕಿಂತ ಕಡಿಮೆ ಇರಬೇಕು. ಕೆಲಸದ ದಿನ ನಾಲ್ಕು ಆಗಿದ್ದರೆ ಕಂಪನಿಯು ನೌಕರರಿಗೆ ಮೂರು ದಿನ ಸಂಬಳ ಸಹಿತ ರಜೆ ನೀಡಬೇಕು. ಉದ್ಯೋಗದ ಸುರಕ್ಷೆ, ಆರೋಗ್ಯ ಮತ್ತು ಕೆಲಸದ ರೀತಿ ಸಂಹಿತೆ 2020 ಕರಡು ಪ್ರಕಾರ ವಾರದಲ್ಲಿನ ಕೆಲಸದ ಅವಧಿ 48 ಗಂಟೆಗಳು ಆಗಿರುತ್ತದೆ. ಕೆಲಸದ ದಿನಗಳ ಬದಲಾವಣೆಗೆ ಕಂಪನಿ ಮತ್ತು ನೌಕರರು ಒಪ್ಪಿರಬೇಕು. ಇದಕ್ಕೆ ಒತ್ತಾಯ ಮಾಡಬಾರದು ಎಂದು ಚಂದ್ರ ಹೇಳಿದ್ದಾರೆ.

ಇದನ್ನೂ ಓದಿ:  ಕಾರ್ಮಿರನ್ನು ವಜಾ ಮಾಡಲು ವಿಚಾರಣೆ ಪ್ರಕ್ರಿಯೆ ಕಡ್ಡಾಯವಲ್ಲ: ಸುಪ್ರೀಂಕೋರ್ಟ್

ಆಹಾರ ವಸ್ತುಗಳನ್ನು ಗ್ರಾಹಕರಿಗೆ ಪೂರೈಸುವ ಸ್ವಿಗಿ, ಜೊಮ್ಯಾಟೊ ಮೊದಲಾದ ಕಂಪನಿಗಳ ನೌಕರರು, ಪ್ಲಾಟ್​ಫಾರಂ ಕಾರ್ಯಕರ್ತರು, ವಲಸೆ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ ಮತ್ತು ಇತರ ವ್ಯವಸ್ಥೆಗಳನ್ನು ನೀಡುವುದಕ್ಕಾಗಿ ಕಾರ್ಮಿಕರ ಸಚಿವಾಲಯ ಜೂನ್ 2021ರಲ್ಲಿ ವೆಬ್ ಪೋರ್ಟಲ್ ಅನಾವರಣ ಮಾಡಲಿದೆ. ಹೊಸ ನಿಯಮಗಳನ್ನು ರೂಪಿಸುವ ಕೆಲಸ ನಡೆದುಬರುತ್ತಿದ್ದು ಮುಂದಿನ ವಾರ ಅದು ಪೂರ್ಣಗೊಳ್ಳಲಿದೆ. ವೇತನ ಸಂಹಿತೆ, ಕೈಗಾರಿಕಾ ವ್ಯವಹಾರ, ಉದ್ಯೋಗದ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ರೀತಿ (OSH) ಮತ್ತು ಸಾಮಾಜಿಕ ಸುರಕ್ಷಾ ಸಂಹಿತೆ ಮೊದಲಾದ ಸಂಹಿತೆಗಳನ್ನು ಸಚಿವಾಲಯ ಶೀಘ್ರದಲ್ಲಿಯೇ ಪ್ರಕಟಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರ ಹೇಳಿದ್ದಾರೆ.

Published On - 6:45 pm, Tue, 9 February 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ