ಭಾರತೀಯರಿಗೆ ಅತಿಪ್ರಿಯವಾಗಿರುವ ತಿನಿಸ್ಯಾವುದು ಗೊತ್ತಾ?
ಕೊರೊನಾ ವೈರಸ್ ತನ್ನ ಕಬಂಧ ಬಾಹುಗಳನ್ನು ದೇಶಾದ್ಯಂತ ಚಾಚಿ ಜನರನ್ನು ಬಲಿ ಪಡೆಯುವುದು ಶುರುವಾದ ನಂತರ ಅದನ್ನು ನಿಯಂತ್ರಿಸಲು ಇತರ ದೇಶಗಳಂತೆ ಭಾರತಯದಲ್ಲೂ ಲಾಕ್ಡೌನ್ ಹೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಅವಧಿಯಲ್ಲಿ ಹೋಟೆಲ್ಗಳು ಮುಚ್ಚಿದ್ದವಾದರೂ ಆನಲೈನ್ ಸರ್ವಿಸ್, ಹೋಮ್ ಡೆಲಿವರಿ ಜಾರಿಯಲ್ಲಿತ್ತು. ಲಕ್ಷಾಂತರ ಜನ ಮನೆಗಳಲ್ಲೇ ಕೂತು ತಿಂಡಿ, ಲಂಚ್ ಮತ್ತು ಡಿನ್ನರ್ಗಳನ್ನು ಆರ್ಡರ್ ಮಾಡಿ ರುಚಿಕರವಾದ ಭಕ್ಷ್ಯಗಳನ್ನು ಭುಜಿಸಿದರು.. ಅಂದಹಾಗೆ, ಈ ಲಾಕ್ಡೌನ್ ಅವಧಿಯಲ್ಲಿ ಜನರು ಅತಿಹೆಚ್ಚು ಆರ್ಡರ್ ಮಾಡಿದ ತಿಂಡಿ ಅಥವಾ ಭಕ್ಷ್ಯ […]
ಕೊರೊನಾ ವೈರಸ್ ತನ್ನ ಕಬಂಧ ಬಾಹುಗಳನ್ನು ದೇಶಾದ್ಯಂತ ಚಾಚಿ ಜನರನ್ನು ಬಲಿ ಪಡೆಯುವುದು ಶುರುವಾದ ನಂತರ ಅದನ್ನು ನಿಯಂತ್ರಿಸಲು ಇತರ ದೇಶಗಳಂತೆ ಭಾರತಯದಲ್ಲೂ ಲಾಕ್ಡೌನ್ ಹೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಅವಧಿಯಲ್ಲಿ ಹೋಟೆಲ್ಗಳು ಮುಚ್ಚಿದ್ದವಾದರೂ ಆನಲೈನ್ ಸರ್ವಿಸ್, ಹೋಮ್ ಡೆಲಿವರಿ ಜಾರಿಯಲ್ಲಿತ್ತು. ಲಕ್ಷಾಂತರ ಜನ ಮನೆಗಳಲ್ಲೇ ಕೂತು ತಿಂಡಿ, ಲಂಚ್ ಮತ್ತು ಡಿನ್ನರ್ಗಳನ್ನು ಆರ್ಡರ್ ಮಾಡಿ ರುಚಿಕರವಾದ ಭಕ್ಷ್ಯಗಳನ್ನು ಭುಜಿಸಿದರು..
ಅಂದಹಾಗೆ, ಈ ಲಾಕ್ಡೌನ್ ಅವಧಿಯಲ್ಲಿ ಜನರು ಅತಿಹೆಚ್ಚು ಆರ್ಡರ್ ಮಾಡಿದ ತಿಂಡಿ ಅಥವಾ ಭಕ್ಷ್ಯ (ಆಹಾರ ಪದಾರ್ಥ) ಯಾವುದು ಅಂತ ನಿಮಗೆ ಗೊತ್ತಾ?
ಅದು ಬಿರಿಯಾನಿ!
ನಿಸ್ಸಂದೇಹವಾಗಿಯೂ ಹೌದು. ಅತಿ ಹೆಚ್ಚು ಆರ್ಡರ್ ಪಡೆದ ಆಹಾರಗಳಲ್ಲಿ ಬಿರಿಯಾನಿಗೆ ನಂಬರ್ 1 ಸ್ಥಾನ. ಆನ್ಲೈನ್ ಆಹಾರ ವಿತರಕ ಪ್ಲಾಟ್ಫಾರ್ಮ್ಗಳಲ್ಲಿ ಮುಂಚೂಣಿಯಲ್ಲಿರುವ ಸ್ವಿಗ್ಗಿ ಇತ್ತೀಚಿಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಈ ಸಂಸ್ಥೆಯು, ಲಾಕ್ಡೌನ್ ಸಮಯದಲ್ಲಿ ಐದೂವರೆ ಲಕ್ಷ ಬಿರಿಯಾನಿ ಆರ್ಡರ್ಗಳನ್ನು ಮನೆಮನೆಗಳಿಗೆ ತಲುಪಿಸಿದೆಯಂತೆ.
ಮತ್ತೊಂದು ಪ್ಲಾಟ್ಫಾರ್ಮ್ ಜೊಮ್ಯಾಟೊ ಗೊತ್ತಲ್ಲ? ಈ ಸಂಸ್ಥೆ ನೀಡಿರುವ ಅಂಕಿ–ಅಂಶಗಳನ್ನು ಗಮನಿಸಿದರೆ ಭಾರತೀಯರಲ್ಲಿ ಬಿರಿಯಾನಿ ಬಗ್ಗೆ ಎಷ್ಟು ಪ್ರೀತಿಯಿದೆಯೆನ್ನುವುದು ಸ್ಪಷ್ಟವಾಗುತ್ತದೆ. ಜೊಮ್ಯಾಟೊ, ಮಾರ್ಚ್ನಿಂದ ಜೂನ್ ನಡುವಿನ ಅವಧಿಯಲ್ಲಿ 44,30,008 ಬಿರಿಯಾನಿ ಆರ್ಡರ್ಗಳನ್ನು ಗ್ರಾಹಕರಿಗೆ ತಲುಪಿಸಿದೆಯಂತೆ.
ವ್ಹಾಹ್ ಬಿರಿಯಾನಿ ವ್ಹಾಹ್! ಏನು ನೀನು ಮಾಡಿರುವ ಮಾಯೆ!?
ಈ ಮೂರು ತಿಂಗಳ ಅವಧಿಯಲ್ಲಿ ಜೊಮ್ಯಾಟೊ ಸ್ವೀಕರಿಸಿದ್ದು ಹೆಚ್ಚುಕಡಿಮೆ 2.15 ಕೋಟಿ ಆರ್ಡರ್ಗಳಂತೆ.
ಅಂದಹಾಗೆ, ಈ ಸಂಸ್ಥೆಗಳು ನೀಡಿರುವ ಮಾಹಿತಿ ಪ್ರಕಾರ ಚಿಕನ್ ಬಿರಿಯಾನಿ ಭಾರತೀಯರಿಗೆ ಅತಿಹೆಚ್ಚು ಇಷ್ದವಾಗುವ ಆಹಾರ ತಿನಿಸಂತೆ. ಸತತವಾಗಿ ನಾಲ್ಕನೇ ಬಾರಿ ಚಿಕನ್ ಬಿರಿಯಾನಿ ಗ್ರಾಹಕರು ಮನಸಾರೆ ಬಯಸುವ ಸ್ವಾದಿಷ್ಟ ಊಟಗಳಲ್ಲಿ ಮೊದಲ ಸ್ಥಾನ ಗಳಿಸಿದೆ.
Published On - 4:01 pm, Wed, 26 August 20