ಈ ರಾಶಿಯವರ ಕುಟುಂಬದಲ್ಲಿ ಸ್ವಲ್ಪ ಅಶಾಂತಿ ಇರುತ್ತದೆ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ದ್ವಿತೀಯಾ ತಿಥಿ, ಸೋಮವಾರ ಒತ್ತಾಯದಿಂದ ಕೆಲಸ, ಅನಪೇಕ್ಷಿತರ ಜೊತೆ ಮಾತು, ಮಿತ್ರರ ಜೊತೆ ಯಾತ್ರೆ ಇವೆಲ್ಲ ಈ ದಿನ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ: ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಹರ್ಷಣ, ಕರಣ: ಭದ್ರ, ಸೂರ್ಯೋದಯ – 06 – 20 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭಕಾಲ: ರಾಹು ಕಾಲ 07:54 – 09:27, ಯಮಘಂಡ ಕಾಲ 10:59 – 12:33, ಗುಳಿಕ ಕಾಲ 14:06 – 15:39
ಮೇಷ ರಾಶಿ: ಯಾರದೋ ನೋವಿಗೆ ಸ್ಪಂದಿಸುವ ನೀವು ಮನೆಯವರ ಬಗ್ಗೆ ಭಾವನೆ ಇಲ್ಲ ಎಂಬುದನ್ನು ಆಪ್ತರಿಂದ ಹೇಳಿಸಿಕೊಳ್ಳುವಿರಿ. ಯಾರ ಮಾತುಗಳೂ ನಿಮಗೆ ಪಥ್ಯವಾದೀತು. ದ್ವಂದ್ವ ನಿಲುವನ್ನು ನೀವು ಸರಿ ಮಾಡಿಕೊಳ್ಳುವ ಅವಶ್ಯಕತೆ ಇರುವುದು. ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು. ಇಂದು ನಿಮ್ಮ ಜೀವನಕ್ಕೆ ಅವಶ್ಯಕವಾದ ವಸ್ತುವನ್ನು ಪಡೆಯಲು ಅಸತ್ಯವನ್ನು ಹೇಳುವಿರಿ. ಅಲ್ಪಾವಧಿಯ ಹೂಡಕೆಯಿಂದ ಅಲ್ಪ ಲಾಭ. ಇಂದು ನಿಮ್ಮ ತಂತ್ರಗಾರಿಕೆಯು ಫಲಿಸಬಹುದು. ಉದ್ಯಮವನ್ನು ಮಿತಿಮೀರಿದ ನಿರೀಕ್ಷೆಯಲ್ಲಿ ಮುಂದುವರಿಯುವುದು ಬೇಡ. ಸ್ಥಿರಾಸ್ತಿಗೆ ಹಣವನ್ನು ಹಾಕುವಿರಿ. ವಿಶ್ವಾಸದಲ್ಲಿ ಕೊರತೆ ಇರದು. ವ್ಯಾಪಾರದ ಕೆಲವು ನಿರ್ಧಾರಗಳಿಗೆ ಅಪರಿಚಿತರಿಂದ ಸಲಹೆಯು ಸಿಗುವುದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಕೆಲಸವನ್ನು ಇಂದು ಮನಸ್ಸಿನಿಂದ ಮಾಡಿ.
ವೃಷಭ ರಾಶಿ: ವಹಿಸಿಕೊಂಡ ವ್ಯವಹಾರದಲ್ಲಿ ಅಪಸವ್ಯದ ಕಾರ್ಯದ ಬೇಡ. ಸಮಸ್ಯೆಗೆ ಪರಿಹಾರವೆಂದು ಇನ್ನಷ್ಟು ಸಮಸ್ಯೆಯನ್ನು ಮಾಡಬಹುದು. ಆದರೆ ನಿಮ್ಮ ನಿರ್ಧಾರವು ಅಚಲವಾಗಿರಲಿ. ರಾಜಕಾರಣಿಗಳ ಭೇಟಿಯಾಗಿ ಜೀವನದಲ್ಲಿ ಹೊಸ ಮಾರ್ಗವನ್ನು ತುಳಿಯುವ ಅವಕಾಶ ನಿಮಗೆ ಸಿಗಲಿದೆ. ದೂರ ಪ್ರಯಾಣದಿಂದ ಪ್ರಯಾಸ. ಅನಾರೋಗ್ಯಕ್ಕೆ ಕಾರಣ. ಮನಸ್ಸು ಶುದ್ಧವಾಗಿದ್ದು ಪುರುಷಪ್ರಯತ್ನವೇ ಶ್ರೇಷ್ಠ ಎಂದು ನಂಬುವವರು ಇಂದು ನೀವಾಗುವಿರಿ. ಸ್ಥಿರಾಸ್ತಿಗೆ ಸಂಬಂಧಿಸಿದ ಕೌಟುಂಬಿಕ ವಿವಾದವನ್ನು ಮುಕ್ತಾಯ ಮಾಡಿಕೊಳ್ಳುವುದು ಉತ್ತಮ. ನೀವು ಹಳೆಯ ಸ್ನೇಹವು ಪುನಃ ನವೀಕರಣವಾಗುಉದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಿತ್ರರ ನಡುವೆ ವೈಮನಸ್ಯ ಬರಬಹುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಫಲರಾಗುವಿರಿ. ಯಾರನ್ನಾದರೂ ವೃಥಾ ಸಂಶಯಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ತೊಡಗುವಿಕೆ, ಮನಸ್ಸಿಗೆ ಅಲ್ಪ ಶಾಂತತೆ. ತಾಯಿಯ ಕಡೆಯಿಂದ ಲಾಭದ ಭರವಸೆ ಇರುತ್ತದೆ. ವಿವಾಹದ ಸಂಬಂಧವನ್ನು ನೀವು ತಳ್ಳಿಹಾಕುವಿರಿ.
ಮಿಥುನ ರಾಶಿ: ಕೈಯಲ್ಲಿ ದುಡ್ಡು ನಿಲ್ಲದು ಎಂಬ ಆತಂಕ ಬೇಡ. ತೆಗೆಯಲು ಕಷ್ಟವಾಗುವ ರೀತಿಯಲ್ಲಿ ಭದ್ರವಾಗಿ ಇರಿಸಿ. ಇನ್ನೊಬ್ಬರ ಗೋಜಿಗೆ ಹೋಗದೇ, ನಿಮ್ಮ ಗೋಜಿಗೆ ಬಂದವರನ್ನು ಸುಮ್ಮನೆ ಬಿಡುವ ಛಾತಿ ನಿಮ್ಮದಾಗಿರದು. ಎಲ್ಲರ ಜೊತೆ ಪ್ರೀತಿಯಿಂದ ಇರುವ, ವರ್ತಿಸುವ ಗುಣ ನಿಮ್ಮದು. ಅತಿಥಿಗಳಿಗೆ ಊಟೋಪಾಚರದಲ್ಲಿ ಗಮನ ಕೊಡುವಿರಿ. ಸಹಾಯವನ್ನು ಪಡೆದುಕೊಂಡವರ ಭೇಟಿಯಾಗಲಿದೆ. ಅವರಿಂದ ಗೌರವವಾದರು ಸಿಗಲಿವೆ. ಸಾಕಷ್ಟು ಸಂಪತ್ತು ಇದ್ದರೂ, ಕುಟುಂಬದಲ್ಲಿ ಸ್ವಲ್ಪ ಅಶಾಂತಿ ಇರುತ್ತದೆ. ಸ್ವಂತಕ್ಕೆ ಪ್ರಯೋಜನವಿಲ್ಲದ ಯಾವ ಕಾರ್ಯವನ್ನೂ ನೀವು ಮಾಡಲಾರಿರಿ. ಕೋಪಗೊಂಡು ಇಡೀ ದಿನವನ್ನು ಹಾಳುಮಾಡಿಕೊಳ್ಳುವಿರಿ. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು. ವಾಹನ ದುರಸ್ತಿಯಿಂದ ಧನನಷ್ಟ ಮತ್ತು ವಾಹನ ಮೇಲಿನ ನಂಬಿಕೆ ಹೋಗುವುದು. ಯಾರೆದುರೂ ನಿಮ್ಮ ಪರಾಕ್ರಮವನ್ನು ಪ್ರದರ್ಶಿಸುವುದು ಬೇಡ. ಸ್ನೇಹಿತರ ಸಹಕಾರವು ನಿಮಗೆ ಸಾಕು ಎನಿಸಬಹುದು.
ಕರ್ಕಾಟಕ ರಾಶಿ: ದೊಡ್ಡ ಕಾಮಗಾರಿಗಳನ್ನು ಮಾಡಿಸುವ ಜವಾಬ್ದಾರಿ ನಿಮ್ಮ ಮೇಲೆ ಬರುವುದು. ಇಂದು ಪ್ರಯಾಣದ ಆಯಾಸವು ಆಲಸ್ಯಕ್ಕೆ ಕಾರಣವಾಗುವುದು. ಮಾತನ್ನು ಆಡುವಾಗ ಎಚ್ಚರವಿರಲಿ. ಬೇರೆಯವರ ನಾಶವನ್ನು ಮಾಡಲು ಹೋಗಿ ನಿಮ್ಮದೇ ಯಶಸ್ಸು ನಾಶವಾಗಬಹುದು. ಎಲ್ಲವನ್ನೂ ನೀವು ಲಾಭದಾಯಕವನ್ನಾಗಿ ಮಾಡಿಕೊಳ್ಳುವಿರಿ. ಏನನ್ನಾದರೂ ಜನಬಲದ ಮೂಲಕ ಸಾಧಿಸುವುದು ಸುಲಭ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರಲಿದ್ದು ಎಲ್ಲ ಜೊತೆ ಸೌಹಾರ್ದವಾಗಿ ಇರುವಿರಿ. ನಿಮಗೆ ಸಿಕ್ಕ ಜವಾಬ್ದಾರಿಯಲ್ಲಿ ಪೂರ್ಣ ತೃಪ್ತಿ ಇರದು. ಯಾರ ಜೊತೆಯಾದರೂ ಬೆರೆಯಬೇಕು ಅನ್ನಿಸುವುದು. ನಿಮ್ಮ ಓದಿನ ದಾಖಲೆಗಳು ಕಾಣೆಯಾಗಬಹುದು. ಸಮಾಧಾನದ ಮನಃಸ್ಥಿತಿಯು ಉಂಟಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದು. ಆರ್ಥಿಕ ವಿಷಯಗಳಲ್ಲಿ ಪ್ರಯೋಜನವಿದೆ ಮತ್ತು ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಉತ್ಸಾಹವು ಹೆಚ್ಚಾಗುತ್ತದೆ
ಸಿಂಹ ರಾಶಿ: ಆಲಸ್ಯವೂ ನಿಮಗೆ ವರವಾಗಿ ಬರುವ ಸಾಧ್ಯತೆ ಇದೆ. ಇಂದು ನಿಮ್ಮ ಭೂಮಿಯ ವ್ಯವಹಾರದಲ್ಲಿ ಕುದುರಬಹುದು. ಹೊಸ ಉತ್ಸಾಹದ ದಿನವಾಗಿ ಇರಲಿದೆ. ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಗಮನವಿರಲಿ. ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ಮೊದಲ ವೇತನವನ್ನು ಪಡೆದು ಖುಷಿಪಡುವಿರಿ. ನಿಮ್ಮ ಉತ್ಸಾಹಕ್ಕೆ ಬರುವ ಅಡ್ಡಿಗಳನ್ನು ನೀವು ಸಹಿಸಲಾರಿರಿ. ನಿಮ್ಮ ಮೇಲಿನ ಪ್ರಕರಣಗಳು ಒಂದೊಂದಾಗಿ ಬಗೆಹರಿಯುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಸಮಯದೊಂದಿಗೆ ಚಲಿಸುವ ಮೂಲಕ ನೀವು ಪ್ರಗತಿ ಹೊಂದುತ್ತೀರಿ. ಮಿತ್ರರ ಜೊತೆ ಪ್ರವಾಸ ಹೋಗಬಹುದು. ಹಿರಿಯರಿಂದ ನಿರೀಕ್ಷಿತ ಲಾಭವು ಸಿಗಲಿದ್ದು ಸಂತೋಷವಾಗುವುದು. ಕಾರ್ಯ ವಿಳಂಬಕ್ಕೆ ಚಿಂತಿಸಿದೇ ಅದಕ್ಕೆ ಯೋಗ್ಯವಾದ ನ್ಯಾಯವನ್ನು ಒದಗಿಸಿ. ಮನೆಯ ನಿರ್ಮಾಣದ ಯೋಜನೆಯನ್ನು ರೂಪಿಸುವಿರಿ. ಆಕಸ್ಮಿಕ ಸುದ್ದಿಯಿಂದ ದುಃಖಿಸಬೇಕಾದೀತು. ದಾಂಪತ್ಯ ಸುಖವು ಹೆಚ್ಚಾಗುವುದು. ಸಂಕೀರ್ಣ ಕಾರ್ಯಗಳನ್ನು ಸರಳ ಮಾಡಿಕೊಂಡು ಕಾರ್ಯಗತಗೊಳಿಸಲಾಗುವುದು.
ಕನ್ಯಾ ರಾಶಿ: ನಿಮ್ಮ ನೋವಿಗೆ ನೀವೇ ಖೆಡ್ಡ ತೋಡಿಕೊಳ್ಳುವುದು ಬೇಡ. ಸಂಸಾರದ ತಲೆಬಿಸಿಗಳು ಶಾಶ್ವತವಲ್ಲ ಎಂಬುದು ಗೊತ್ತಾಗಲಿದೆ. ಇಂದು ನಿಮ್ಮ ಅಚಾತುರ್ಯದಿಂದ ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವು ಎದುರಾಗಲಿದೆ. ಸಂಗಾತಿಯ ಮುನಿಸಿಗೆ ನೀವು ಆಹಾರವಾಗುವಿರಿ. ಹೆಚ್ಚು ಲಾಭ ಪಡೆಯಲು ಹೋಗಿ ಯಾರಿಗಾದರೂ ಸಿಕ್ಕಿಹಾಕಿಕೊಳ್ಳುವಿರಿ. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಅನುಮಾನದ ಬುದ್ಧಿಯಿಂದಲೇ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಈ ಸಂದರ್ಭದಲ್ಲಿ ಮರುಮಾತನಾಡದೇ ಇರುವುದು ಒಳ್ಳೆಯದು. ಕೆಲವು ನಿಮಿಷಗಳಲ್ಲಿ ಇದು ಸರಿಯಾಗಲಿದೆ. ವಿವೇಚನಾ ರಾಹಿತ್ಯವೇ ನಿಮಗ ವಿದ್ಯಾರ್ಥಿಗಳು ಓದಿನಲ್ಲಿ ಮನಸ್ಸನ್ನು ಇಡಬಹುದು. ಪಿರ್ತಾರ್ಜಿತ ಆಸ್ತಿಯನ್ನು ಗೊಂದಲಗಳು ಇರಬಹುದು. ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಇಂದು ಶುಭಕರವಾಗಿದ್ದು ಅಹಿತಕರ ವಾತಾವರಣಕ್ಕೆ ಆಸ್ಪದವನ್ನು ಕೊಡಲಾರಿರಿ.