Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 14ರ ದಿನ ಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 14ರ ಸೋವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 14ರ ಸೋವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ತೀರ್ಥಯಾತ್ರೆ, ಪ್ರವಾಸಕ್ಕೆ ತೆರಳುವುದಕ್ಕೆ ಯೋಜನೆ- ಸಿದ್ಧತೆ ಮಾಡಿಕೊಳ್ಳಲು ಆರಂಭಿಸುತ್ತೀರಿ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಅಥವಾ ನೀವು ಇರುವ ಸ್ಥಳದಿಂದ ದೂರಕ್ಕೆ ತೆರಳುವುದಕ್ಕೆ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ. ಕ್ಯಾಟರಿಂಗ್ ಅಥವಾ ಅಡುಗೆ ಕಾಂಟ್ರಾಕ್ಟ್ ಅನ್ನು ವೃತ್ತಿಯಾಗಿ ತೆಗೆದುಕೊಂಡು ಇರುವಂಥವರು ಪಾತ್ರೆ- ಅಡುಗೆ ಸಲಕರಣೆಗಳನ್ನು ಖರೀದಿ ಮಾಡುವುದಕ್ಕೆ ದೊಡ್ಡ ಮೊತ್ತವನ್ನು ಮೀಸಲಿಡಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ಇದಕ್ಕಾಗಿ ಸಾಲ ಮಾಡುವ ಸಾಧ್ಯತೆಗಳು ಸಹ ಇವೆ. ಇನ್ನು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವಂಥವರು ಈಗಿರುವ ವಿಭಾಗ ಅಥವಾ ಪ್ರಾಜೆಕ್ಟ್ ನಿಂದ ಬೇರೆಯದಕ್ಕೆ ವರ್ಗಾವಣೆ ಆಗುವ ಯೋಗ ಇದೆ. ಇದು ನೀವಾಗಿಯೇ ಕೇಳಿಕೊಂಡ ಬದಲಾವಣೆ ಆಗಿರಬಹುದು ಅಥವಾ ಅನಿರೀಕ್ಷಿತವಾಗಿ ನಿಮ್ಮ ಮೇಲಧಿಕಾರಿಗಳೇ ತೆಗೆದುಕೊಂಡು ತೀರ್ಮಾನ ಆಗಿರಬಹುದು. ಇದರಿಂದ ಕೆಲವು ಸಮಯ ಒತ್ತಡವನ್ನು ಅನುಭವಿಸುವಂತೆ ಆಗಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಮನೆಗೆ ಸಾಕು ಪ್ರಾಣಿಗಳು ಅಥವಾ ಕೆಲವು ಪಕ್ಷಿಗಳನ್ನು ತರಬೇಕು ಎಂದು ಈ ದಿನ ತೀರ್ಮಾನವನ್ನು ಮಾಡುವ ಯೋಗ ಇದೆ. ಒಂದು ವರ್ಷದೊಳಗೆ ಇರುವಂಥ ಮಕ್ಕಳು ಇದ್ದಲ್ಲಿ ಆ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ಅದರಿಂದ ಚೇತರಿಕೆ- ಸುಧಾರಣೆ ಕಾಣಲಿದೆ. ಇದರಿಂದ ನಿಮಗೆ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ನಿಮ್ಮಲ್ಲಿ ಕೆಲವರು ಹಣ ಹೂಡಿಕೆ ಮಾಡಿ, ಕೆಲವು ಸಲಕರಣೆಗಳನ್ನು ಖರೀದಿಸುವುದಕ್ಕೆ ನಿರ್ಧಾರ ಮಾಡಬಹುದು. ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಲ್ಲಿ ಹಣಕಾಸು- ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಉದ್ಯೋಗ ರೀತಿಯಾಗಿ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಅಥವಾ ನಿಮ್ಮದಲ್ಲದ ತಪ್ಪಿಗೆ ವಿಚಾರಣೆ ಎದುರಿಸುತ್ತಿದ್ದಲ್ಲಿ ಆರೋಪದಿಂದ ಮುಕ್ತರಾಗಿ ಹೊರಬರುವಂಥ ಯೋಗ ಇದೆ. ಈ ಬಗ್ಗೆ ಮಾಹಿತಿಯಾದರೂ ದೊರೆಯಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನೀವು ಲೆಕ್ಕಾಚಾರ ಹಾಕಿಕೊಂಡು ಸಿದ್ಧ ಮಾಡಿಕೊಂಡಿರುವ ಬಜೆಟ್ ಒಳಗಾಗಿ ಅಂದುಕೊಂಡ ಕೆಲಸ- ಕಾರ್ಯ ಮುಗಿಯುವುದಿಲ್ಲ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗಲಿದೆ. ಈ ಮಧ್ಯೆ ನೀವು ಮಾಡಿದ್ದ ಹೂಡಿಕೆ ಕೂಡ ನಿರೀಕ್ಷೆ ಮಾಡಿದ ಪ್ರಮಾಣದಲ್ಲಿ ರಿಟರ್ನ್ಸ್ ನೀಡದೆ ಆತಂಕಕ್ಕೆ ಕಾರಣ ಆಗಲಿದೆ. ಯಾರ ಬಳಿ ಸಹಾಯ ಕೇಳಿದರೆ ಖಂಡಿತಾ ನೆರವು ಸಿಕ್ಕೇ ಸಿಗುತ್ತದೆ ಎಂದು ಭಾವಿಸಿರುತ್ತೀರೋ ಅಂಥವರೇ ಕಷ್ಟದಲ್ಲಿ ಇದ್ದಾರೆ ಎಂಬ ಮಾಹಿತಿ ನಿಮಗೆ ದೊರೆಯಲಿದೆ ಅಥವಾ ಅವರಾಗಿಯೇ ಹೇಳಲಿದ್ದಾರೆ. ಸಂಗೀತಗಾರರು, ಧಾರ್ಮಿಕ ಪ್ರವಚನಕಾರರು, ಪುರೋಹಿತರಿಗೆ ಕೈಯಿಂದ ಹಣ ಕಳೆದುಕೊಳ್ಳುವಂಥ ಯೋಗ ಕಂಡುಬರುತ್ತದೆ. ನೀವಾಗಿಯೇ ಯಾವುದೇ ಜವಾಬ್ದಾರಿಯನ್ನು ಮೈ ಮೇಲೆ ಎಳೆದುಕೊಳ್ಳಬೇಡಿ ಹಾಗೂ ಯಾವ ವಿಚಾರದಲ್ಲಿ ನಿಮಗೆ ಅನುಭವ ಇಲ್ಲವೋ ಅಥವಾ ಸಂಪೂರ್ಣ ವಿಶ್ವಾಸದಿಂದ ಮಾಡಿಕೊಡುವುದಾಗಿ ಹೇಳುವಷ್ಟು ಆತ್ಮವಿಶ್ವಾಸ ಇಲ್ಲವೋ ಅಂಥ ಕೆಲಸವನ್ನು ಒಪ್ಪಿಕೊಳ್ಳಬೇಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಸರ್ಕಾರಿ ಕಾಂಟ್ರ್ಯಾಕ್ಟ್ ಗಳನ್ನು ತೆಗೆದುಕೊಂಡು ಕೆಲಸ ಮಾಡಿಸುವವರಿಗೆ ಈಗ ಬರಬೇಕಾದ ಬಿಲ್ ನಲ್ಲಿ ಪೂರ್ಣ ಮೊತ್ತದ ಹಣ ಬಾರದಿರಬಹುದು. ಮುಖ್ಯವಾಗಿ ಎಷ್ಟು ಅವಧಿಯೊಳಗೆ ಅದು ಕೈ ಸೇರುತ್ತದೆ ಎಂದು ನೀವು ಅಂದುಕೊಂಡಿದ್ದಿರೋ ಅಷ್ಟರಲ್ಲಿ ಅದು ಬಾರದು ಎಂಬ ವಿಚಾರ ಆರ್ಥಿಕ ದೊಡ್ಡ ಒತ್ತಡ ಆಗಲಿದೆ. ಮನೆಯಲ್ಲಿ ಮಕ್ಕಳ ಮದುವೆ ವಿಚಾರವು ಬಹಳ ಪ್ರಾಶಸ್ತ್ಯ ಪಡೆದುಕೊಳ್ಳಲಿದ್ದು, ಕುಟುಂಬ ಸದಸ್ಯರು ನಿಮ್ಮ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ಈ ಹಿಂದೆ ನೀವು ತೆಗೆದುಕೊಂಡಂಥ ನಿರ್ಧಾರ ಹಾಗೂ ತೀರ್ಮಾನಗಳಿಂದಲೇ ಈಗಿನ ಪರಿಸ್ಥಿತಿಗೆ ಕಾರಣ ಎಂದು ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ಯಾರು ಇಟ್ಟಿಗೆ- ಸಿಮೆಂಟ್, ಉಕ್ಕಿನ ಮಾರಾಟದಲ್ಲಿ ತೊಡಗಿಕೊಂಡಿರುವಿರೋ ಅಂಥವರು ವ್ಯವಹಾರದ ವಿಸ್ತರಣೆ ಮಾಡಬೇಕು ಎಂದು ಆಲೋಚನೆ ಮಾಡಲಿದ್ದೀರಿ. ಪಿತ್ರಾರ್ಜಿತವಾಗಿ ಬಂದಂಥ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನು ಮಾರಾಟ ಮಾಡಿ, ಅದನ್ನು ವ್ಯಾಪಾರದಲ್ಲಿ ಹೂಡಿಕೆ ಮಾಡುವುದಕ್ಕೆ ತೀರ್ಮಾನಿಸುತ್ತೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನೀವು ನೀಡಿದ ಸಲಹೆ- ಸೂಚನೆಗಳಿಂದ ಉದ್ಯೋಗ ಸ್ಥಳದಲ್ಲಿ ಬಹಳ ಅನುಕೂಲಗಳು ಆಗಲಿವೆ. ಇದರಿಂದ ಮೇಲಧಿಕಾರಿಗಳು ಬಹಳ ಸಂತುಷ್ಟರಾಗಿ, ಮೆಚ್ಚುಗೆಯ ಮಾತುಗಳನ್ನು ಆಡಲಿದ್ದಾರೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಉತ್ತಮ ಸ್ಥಾನ- ಮಾನ, ವೇತನ ಹೆಚ್ಚಳ ಆಗುವ ಬಗ್ಗೆ ಸೂಚನೆಗಳು ದೊರೆಯಲಿವೆ. ಈ ಹಿಂದೆ ನೀವು ಶ್ರಮ ವಹಿಸಿ ಮಾಡಿದ್ದ ಕೆಲಸಕ್ಕೆ ಆಗ ಪ್ರತಿಫಲ ಸಿಕ್ಕಿಲ್ಲ ಎಂಬ ಬೇಸರ ಇದ್ದಲ್ಲಿ ಅದು ಕರಗಿ ಹೋಗುವಂಥ ಆಫರ್ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ನಿಮ್ಮ ಜತೆಗೆ ಕೆಲಸ ಮಾಡಿದ್ದವರು ಸಹಾಯ ಕೇಳಿಕೊಂಡು ಬರಲಿದ್ದಾರೆ. ಪಾರ್ಟ್ ಟೈಂ ಕೆಲಸ ಅನ್ನುವ ರೀತಿಯಲ್ಲಿ ತಮ್ಮ ಜೊತೆಗೆ ಇರುವಂತೆ ಕೇಳಿಕೊಳ್ಳುವ ಅವಕಾಶಗಳಿವೆ. ಎಲ್ಲ ಸೇರಿ ಹೇಳಬೇಕು ಅಂದರೆ ಆದಾಯ ಜಾಸ್ತಿ ಆಗುವ ಸೂಚನೆಗಳು ನಿಮಗೆ ದೊರೆಯಲಿವೆ. ಸಮಾಧಾನವಾಗಿ ಆಲೋಚಿಸಿದ ನಂತರವಷ್ಟೇ ನಿಮ್ಮ ನಿರ್ಧಾರವನ್ನು ತಿಳಿಸಿ. ಭವಿಷ್ಯದಲ್ಲಿ ಯಾವುದರಿಂದ ಹೆಚ್ಚು ಅನುಕೂಲ ಎಂಬ ಕಡೆಗೆ ಗಮನ ಇರಲಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿರ್ದಿಷ್ಟವಾದ ಸಾಮರ್ಥ್ಯ, ವಿದ್ಯೆ, ಕೆಲಸ ಗೊತ್ತಿರುವಂಥ ವ್ಯಕ್ತಿಗಳ ಹುಡುಕಾಟದಲ್ಲಿ ಇದ್ದೀರಿ ಅಂತಾದರೆ ಅಂಥವರು ನಿಮಗೆ ಸಿಗಲಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್, ವಕೀಲ ವೃತ್ತಿಯಲ್ಲಿ ತೊಡಗಿಕೊಂಡವರು ಈಗ ಬರುತ್ತಿರುವ ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿದ್ದೀರಿ. ಇನ್ನು ಮನೆಯಲ್ಲಿ ದೇವತಾ ಆರಾಧನೆಯನ್ನು ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಭವಿಷ್ಯಕ್ಕೆ ದೊಡ್ಡ ಜವಾಬ್ದಾರಿ ದೊರೆಯುವ ಕುರಿತು ಸೂಚನೆ ದೊರೆಯಲಿದೆ. ಯಾರು ಮರಕ್ಕೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಸಿಕೊಂಡವರೋ ಅಂಥವರಿಗೆ ದೀರ್ಘಾವಧಿಗೆ ಆದಾಯ ತರುವಂಥ ಅವಕಾಶಗಳು ತೆರೆದುಕೊಳ್ಳಲಿವೆ. ಮನೆಯ ಖರ್ಚು ಎಂಬ ಅಗತ್ಯಕ್ಕೋ ಅಥವಾ ಕುಟುಂಬ ಸದಸ್ಯರ ತುರ್ತಿಗಾಗಿಯೋ ಹೂಡಿಕೆ ಮಾಡಿದ್ದರಲ್ಲಿ ಸ್ವಲ್ಪವಾದರೂ ಮೊತ್ತ ಹಿಂತೆಗೆದುಕೊಳ್ಳುವ ನಿರ್ಧಾರ ಮಾಡುತ್ತೀರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಸಮಯ ಬಂದಾಗ ನಿರ್ಧಾರ ಮಾಡಿದರೆ ಆಯಿತು ಎಂದುಕೊಂಡು ಮುಂದಕ್ಕೆ ಹಾಕಿಕೊಂಡು ಬರುತ್ತಾ ಇದ್ದ ಕೆಲವು ತೀರ್ಮಾನಗಳನ್ನು ಈಗ ತೆಗೆದುಕೊಳ್ಳಲೇಬೇಕು ಎಂಬ ಸನ್ನಿವೇಶ ಸೃಷ್ಟಿಯಾಗಲಿದೆ. ಇದೊಮ್ಮೆ ಮಾತ್ರ ಸಹಾಯ ಮಾಡಿ ಎಂದು ಕೆಲವು ವ್ಯಕ್ತಿಗಳು ನಿಮ್ಮ ಬಳಿ ಬರಲಿದ್ದಾರೆ. ನಿಮ್ಮ ಅಗತ್ಯಕ್ಕಾಗಿ ಎಂದು ಕೂಡಿಟ್ಟಿದ್ದ ಹಣದ ಬಗ್ಗೆ ಯಾವುದೇ ಕಾರಣಕ್ಕೂ ಪ್ರಸ್ತಾವ ಮಾಡದಿರುವುದು ಕ್ಷೇಮ. ಅಂದರೆ ಮಕ್ಕಳ ಶಿಕ್ಷಣ, ಮದುವೆ ಅಥವಾ ನಿಮ್ಮದೇ ಆಪತ್ಕಾಲಕ್ಕೆ ಇರಲಿ ಎಂದು ಉಳಿತಾಯ ಮಾಡಿಟ್ಟುಕೊಂಡಿರುವ ಹಣದ ಬಗ್ಗೆ ಹೇಳದಿರುವುದು ಒಳ್ಳೆಯದು. ಸೋದರ- ಸೋದರಿಯರ ಅನಾರೋಗ್ಯದ ವಿಚಾರ ಆತಂಕಕ್ಕೆ ಕಾರಣ ಆಗಬಹುದು. ತುರ್ತಾಗಿ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲೇಬೇಕಾದ ಸನ್ನಿವೇಶ ಒದಗಿಬರಲಿದೆ. ಒಂದು ವೇಳೆ ನಿಮಗೆ ಅವರ ಜೊತೆಗೆ ಅಭಿಪ್ರಾಯ ಭೇದ ಅಥವಾ ಮನಸ್ತಾಪಗಳೇ ಇದ್ದರೂ ಅದನ್ನು ಮರೆತು, ಸಹಾಯ ಮಾಡುವುದಕ್ಕೆ ಪ್ರಯತ್ನಿಸಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಸ್ವಂತಕ್ಕೆ ಇರಲಿ ಎಂದುಕೊಂಡು ಖರೀದಿಸಿದ್ದ ವಸ್ತುವೋ ಅಥವಾ ಉಪಕರಣವನ್ನೋ ನಿಮಗೆ ಬಹಳ ಆಪ್ತರಾದವರೇ ಕೇಳಿಕೊಂಡು ಬರಲಿದ್ದಾರೆ. ಈಗ ಅವರಿಗೆ ಅದನ್ನು ಕೊಡಬೇಕೋ ಅಥವಾ ಇಲ್ಲ ಎನ್ನಬೇಕೋ ಎಂಬ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದೆ ಪರಿತಪಿಸುವಂತೆ ಆಗುತ್ತದೆ. ಇನ್ನು ಮನೆ ದೇವರು ಅಥವಾ ನೀವು ವಾಸವಿರುವ ಸ್ಥಳದ ವ್ಯಾಪ್ತಿಯಲ್ಲಿ ಇರುವಂಥ ದೇಗುಲಗಳಿಂದ ವಾರ್ಷಿಕೋತ್ಸವ- ಜೀರ್ಣೋದ್ಧಾರ ಹೀಗೆ ಏನಾದರೊಂದು ಕಾರಣಕ್ಕೆ ದೇಣಿಗೆಯೋ ಸಹಾಯವನ್ನೋ ಕೇಳಿಕೊಂಡು ಬರುವ ಸಾಧ್ಯತೆಯಿದ್ದು, ಯಥಾಶಕ್ತಿ ನೆರವನ್ನು ನೀಡಿ. ಒಂದು ವೇಳೆ ನೀವು ಈಗಾಗಲೇ ಮಾತನ್ನು ನೀಡಿದ್ದಿರಿ, ಕಾರಣಾಂತರಗಳಿಂದ ಅದರಂತೆ ನಡೆದುಕೊಳ್ಳಲು ಆಗಿಲ್ಲ ಎಂದಾದರೆ ಈ ದಿನ ಆ ಮಾತನ್ನು ಪೂರೈಸುವುದು ಒಳ್ಳೆಯದು. ಮಕ್ಕಳ ಮದುವೆಗೆ ಇರಲಿ ಎಂದುಕೊಂಡು ನೀವು ಕೂಡಿಡುತ್ತಾ ಬರುತ್ತಿದ್ದ ಹಣದಲ್ಲಿ ಸ್ವಲ್ಪ ಮೊತ್ತವನ್ನಾದರೂ ತೆಗೆದುಕೊಳ್ಳಬೇಕಾದ ಸ್ಥಿತಿ ನಿಮ್ಮಲ್ಲಿ ಕೆಲವರಿಗೆ ಉದ್ಭವಿಸಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಈ ದಿನ ಸಣ್ಣದಾದರೂ ಸರಿ, ಸುಳ್ಳು ಹೇಳುವುದಕ್ಕೆ ಹೋಗಬೇಡಿ. ಯಾರಿಗೋ ಸಂತೋಷ ಆಗುತ್ತದೆ ಅಂತಲೋ ಅಥವಾ ಮನವೊಲಿಸಬೇಕು ಎಂಬ ಕಾರಣಕ್ಕೋ ನೀವೇನಾದರೂ ಸುಳ್ಳನ್ನು ಹೇಳಿದಲ್ಲಿ ಆ ನಂತರ ಬಹಳ ಪರಿತಪಿಸುವಂತೆ ಆಗಲಿದೆ. ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧಿಗಳ ಮೂಲಕವಾಗಿ ರೆಫರೆನ್ಸ್ ಬರುವ ಯೋಗವಿದೆ. ದಿಢೀರನೇ ಪ್ರಯಾಣಗಳು ನಿಗದಿ ಆದಲ್ಲಿ ನೀವು ಯಾವ ಉದ್ದೇಶಕ್ಕೆ ತೆರಳುತ್ತಿದ್ದೀರಿ ಅದು ಪೂರ್ತಿ ಆಗುತ್ತದೆಯೇ ಎಂಬ ಬಗ್ಗೆ ಒಮ್ಮೆ ಅವಲೋಕನ ಮಾಡಿಕೊಂಡು, ಆ ನಂತರವೇ ಹೊರಡಿ. ವಿದ್ಯಾರ್ಥಿಗಳಿಗೆ ಭಾರೀ ಗೊಂದಲ ಏರ್ಪಡುವ ಯೋಗ ಕಂಡುಬರುತ್ತಿದೆ. ಯಾರ ಮಾತನ್ನು ನೀವು ನಂಬಿ, ಮುಂದಕ್ಕೆ ಹೆಜ್ಜೆ ಇಟ್ಟಿರುತ್ತೀರೋ ಅವರೇ ತಮ್ಮ ಉದ್ದೇಶ- ಮಾತಿನಿಂದ ಹಿಂದಕ್ಕೆ ಸರಿದು ಬಿಡುವ ಸಾಧ್ಯತೆ ಇದೆ. ಈ ದಿನ ಸಾಧ್ಯವಾದಲ್ಲಿ ನರಸಿಂಹ ದೇವರ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದುಕೊಳ್ಳಿ.