ಈ ನಕ್ಷತ್ರದಲ್ಲಿ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಿದರೆ ಆ ಮಗುವಿಗೆ ಈ ಗುಣ ಬರುವುದು ಖಂಡಿತ
ಆಷಾಢ ಮಾಸ ಎಂಬ ಹೆಸರು ಬರಲು ಕಾರಣ ಈ ನಕ್ಷತ್ರವೂ ಹೌದು. ಎಲ್ಲ ಶುಭಕಾರ್ಯಗಳಿಗೂ ಈ ನಕ್ಷತ್ರದ ದಿನವನ್ನು ಬಳಸುತ್ತಾರೆ. ಅದರಲ್ಲಿಯೂ ಸಣ್ಣ ಮಕ್ಕಳ ಅನ್ನಪ್ರಾಶನ ಸಂಸ್ಕಾರಕ್ಕೆ ಉತ್ತಮವಾದ ನಕ್ಷತ್ರ. ಈ ನಕ್ಷತ್ರದಲ್ಲಿ ಅನ್ನಪ್ರಾಶನ ಅಂದರೆ ಮಗುವಿಗೆ ಮೊದಲ ಊಟದ ಪ್ರಾರಂಭ. ಅಂದು ತಿಂದರೆ, ತಿಂದ ಆಹಾರ ಸೌಮ್ಯಗುಣವನ್ನು ವರ್ಧಿಸುತ್ತದೆ. ಇಂತಹ ಅಪರೂಪದ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು ಹೇಗೆ ಇರುತ್ತಾರೆ? ಅವರ ಸಂಪತ್ತು, ಗುಣ, ನಡತೆಗಳು ಹೇಗಿರಲಿವೆ ಇಲ್ಲಿದೆ ನೋಡಿ.

ಬೇ ಬೋ ದ ಜಿ ಎಂಬ ನಾಮಾಕ್ಷರವನ್ನು ಉಳ್ಳ ನಕ್ಷತ್ರ ಉತ್ತರಾಷಾಢಾ (Uttara Ashada Nakshatra). ಇಪ್ಪತ್ತೊಂದನೇ ನಕ್ಷತ್ರ (Nakshatra). ಧನು ಹಾಗೂ ಮಕರ ರಾಶಿಗಳಲ್ಲಿ (Sagittarius and Capricorn) ಹಂಚಿಕೆಯಾಗಿರುವ ನಕ್ಷತ್ರವಿದು. ಇದರ ದೇವತೆ ವಿಶ್ವೇದೇವ. ಮನುಷ್ಯ ಗಣಕ್ಕೆ ಸೇರಿದ ನಕ್ಷತ್ರ ಇದಾಗಿದೆ. ಕಫ ಈ ರಾಶಿಯ ಪ್ರಕೃತಿ. ಆಕಾಶದಲ್ಲಿ ಮಂಚದ ಆಕಾರದಲ್ಲಿ ಎರಡು ನಕ್ಷತ್ರಗಳು ಕ್ರಾಂತಿವೃತ್ತದ ಸಮೀಪ ಗೋಚರಿಸಿದರೆ ಅದೇ ಉತ್ತರಾಷಾಢಾ ನಕ್ಷತ್ರ. ಆಷಾಢ ಮಾಸ ಎಂಬ ಹೆಸರು ಬರಲು ಕಾರಣ ಈ ನಕ್ಷತ್ರವೂ ಹೌದು. ಎಲ್ಲ ಶುಭಕಾರ್ಯಗಳಿಗೂ ಈ ನಕ್ಷತ್ರದ ದಿನವನ್ನು ಬಳಸುತ್ತಾರೆ. ಅದರಲ್ಲಿಯೂ ಸಣ್ಣ ಮಕ್ಕಳ ಅನ್ನಪ್ರಾಶನ ಸಂಸ್ಕಾರಕ್ಕೆ ಉತ್ತಮವಾದ ನಕ್ಷತ್ರ. ಈ ನಕ್ಷತ್ರದಲ್ಲಿ ಅನ್ನಪ್ರಾಶನ ಅಂದರೆ ಮಗುವಿಗೆ ಮೊದಲ ಊಟದ ಪ್ರಾರಂಭ. ಅಂದು ತಿಂದರೆ, ತಿಂದ ಆಹಾರ ಸೌಮ್ಯಗುಣವನ್ನು ವರ್ಧಿಸುತ್ತದೆ. ಇಂತಹ ಅಪರೂಪದ ನಕ್ಷತ್ರ ಇದು.
ಈ ನಕ್ಷತ್ರದಲ್ಲಿ ಜನಿಸಿದವರು ಹೇಗೆ ಇರುತ್ತಾರೆ? ಅವರ ಸಂಪತ್ತು, ಗುಣ, ನಡತೆಗಳು ಹೇಗಿರಲಿವೆ ಎನ್ನುವುದನ್ನು ನೋಡೋಣ.
- ವಿನೀತ : ಇವರಿಗೆ ಜ್ಞಾನ ವೃದ್ಧರು ಹಾಗೂ ವಯೋವೃದ್ಧರನ್ನು ಕಂಡರೆ ಗೌರವ, ಪ್ರೀತಿ. ಅವರ ಸೇವೆಯನ್ನು ಮಾಡುವ ಆಸಕ್ತಿ ಇರಲಿದೆ. ಹಾಗೆಯೇ ತಗ್ಗಿ ಬಗ್ಗಿ ನಡೆಯುವ ಸ್ವಭಾವವಿರುವುದು.
- ಬಹುಮಿತ್ರ :ಈ ನಕ್ಷತ್ರದವರಿಗೆ ಮಿತ್ರರು ಅಧಿಕ. ಒಳ್ಳೆಯ ಹಾಗು ಕೆಟ್ಟ ಮಿತ್ರರ ಸಹವಾಸವಾಗುವುದು. ಹಣ ಧನಸಂಗ್ರಹಕ್ಕಿಂತ ಜನಸಂಗ್ರಹವೇ ಅಧಿಕ. ಆದರೆ ಸಂಗದಲ್ಲಿ ಎಚ್ಚರಿಕೆ ಬೇಕು.
- ಕೃತಜ್ಞತೆ :ಮಾಡಿದ ಒಳ್ಳೆಯ ಕಾರ್ಯವನ್ನು ನೆನಪಿನಲ್ಲಿರುವುದೇ ಕೃತಜ್ಞತೆ. ಇವರು ಪ್ರತಿಯಾಗಿ ಉಪಕಾರಸ್ಮರಣೆಯಿಂದ ಸಹಾಯವನ್ನು ಮಾಡುವರು.
- ಧಾರ್ಮಿಕತೆ : ದೇವರಿಗೆ ಸಂಬಂಧಿದ ಪುಣ್ಯ ಕ್ಷೇತ್ರದ ದರ್ಶನ, ಪ್ರಯಾಣ ಇಷ್ಟವಾಗುವುದು. ಸ್ವತಃ ಧಾರ್ಮಿಕ ಆಚರಣೆಗಳನ್ನು ತಮಗೆ ತಿಳಿದ ರೀತಿಯಲ್ಲಿ ಮಾಡುವರು. ಸರಿಯಾದ ಮಾರ್ಗದರ್ಶನ ಪಡೆದು ಮಾಡಿದರೆ ಉತ್ತಮ.
- ದೊಡ್ಡ ದೇಹ : ಇವರ ದೇಹವು ಮಾಂಸಖಂಡಗಳಿಂದ ಮುಖ, ಕೈ, ಕಾಲುಗಳು ತುಂಬಿ ಸುಂದರವಾಗಿಯೂ ದೊಡ್ಡ ಆಕಾರದಲ್ಲಿಯೂ ಕಾಣಿಸುವುದು. ಗುರು ಅಥವಾ ಶನಿಯ ಆಧಿಪತ್ಯದಲ್ಲಿ ಬರುವ ಕಾರಣ ದೇಹವು ಬೃಹದಾಕಾರವಾಗಿ ಆಗುವುದು.
- ದಯಾವಾನ್ : ಪರರ ವಿಚಾರದಲ್ಲಿ ಕರುಣೆ. ಕಷ್ಟ, ದುಃಖದಲ್ಲಿ ಇರುವವರಿಗೆ ಸ್ಪಂದಸಿವ ಮನೋಭಾವ ಬರುವುದು. ಪ್ರಾಣಿ, ಮನುಷ್ಯ, ಪಕ್ಷಿಗಳ ಮೇಲೆ ದಯೆ ಮೂಡುವುದು.
- ಕುಟುಂಬ ನಿರ್ವಹಣೆ : ಮನೆಯಲ್ಲಿ ಯಾರೇ ದೊಡ್ಡವರು ಚಿಕ್ಕವರಿದ್ದರೂ ಕುಟುಂಬ ಜವಾಬ್ದಾರಿ ಇವರ ಮೇಲೆ ಬೀಳುವುದು. ಜ್ಞಾನ, ಚುರುಕುತನ, ಕೌಶಲವು ಇವರಿಗೆ ಅನಾಯಾಸವಾಗಿ ಜವಾಬ್ದಾರಿ ಬರುವಂತೆ ಮಾಡುತ್ತದೆ.
– ಲೋಹಿತ ಹೆಬ್ಬಾರ್ – 8762924271
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
–