IPL 2025: ಸುಲಭ ಕ್ಯಾಚ್ ಬಿಟ್ಟ ಕೊಹ್ಲಿ; ತಂಡಕ್ಕೆ 24 ರನ್ ದಂಡ; ವಿಡಿಯೋ ನೋಡಿ
Virat Kohli: ಜೈಪುರದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಕ್ಯಾಚ್ ಕೈಬಿಟ್ಟಿದ್ದರಿಂದ ರಾಜಸ್ಥಾನ 24 ರನ್‌ಗಳನ್ನು ಹೆಚ್ಚುವರಿಯಾಗಿ ಗಳಿಸಿತು. ಇದರ ಲಾಭ ಪಡೆದ ಧ್ರುವ್ ಜುರೆಲ್ 23 ಎಸೆತಗಳಲ್ಲಿ 35 ರನ್ ಗಳಿಸಿ ಅಜೇಯರಾಗಿ ಮರಳಿದರು. ಕೊಹ್ಲಿ ಅವರ ಈ ತಪ್ಪು ಆರ್‌ಸಿಬಿಗೆ ಭಾರೀ ಹೊಡೆತವನ್ನು ನೀಡಿತು.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ರಾಜಸ್ಥಾನ ಮೊದಲು ಬ್ಯಾಟಿಂಗ್ ಮಾಡಿ 173 ರನ್ ಕಲೆಹಾಕಿದೆ. ತಂಡದ ಪರ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಅವರಲ್ಲದೆ, ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಪ್ರಮುಖ ಕೊಡುಗೆಗಳನ್ನು ನೀಡಿದರು. ಇದಕ್ಕೆ ಪ್ರಮುಖ ಕಾರಣ ಆರ್‌ಸಿಬಿಯ ಕಳಪೆ ಫೀಲ್ಡಿಂಗ್ ಎಂದರೆ ತಪ್ಪಾಗಲಾರದು.
ವಾಸ್ತವವಾಗಿ ಸ್ಪಿನ್ನರ್ ಸುಯಾಶ್ ಶರ್ಮಾ ಬೌಲಿಂಗ್ ಮಾಡಿದ 17 ನೇ ಓವರ್ನ ಐದನೇ ಎಸೆತದಲ್ಲಿ ಜುರೆಲ್ ಸಿಕ್ಸರ್ ಬಾರಿಸಿದರು. ನಂತರ ಮುಂದಿನ ಎಸೆತದಲ್ಲಿ ಮತ್ತೆ ಸಿಕ್ಸರ್ ಹೊಡೆಯಲು ಪ್ರಯತ್ನಿಸಿದರು ಆದರೆ ಈ ಬಾರಿ ಅವರು ವಿಫಲರಾದರು. ಲಾಂಗ್ ಆಫ್ ಬೌಂಡರಿಯಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಸುಲಭವಾದ ಕ್ಯಾಚ್ ಹಿಡಿದರು. ಇದು ಎಂತಹ ಕ್ಯಾಚ್ ಆಗಿತ್ತು ಎಂದರೆ ಕೊಹ್ಲಿ 10 ರಲ್ಲಿ 9 ಬಾರಿ ಅಥವಾ ಕಣ್ಣು ಮುಚ್ಚಿಕೊಂಡು ಹಿಡಿಯಬಹುದಿತ್ತು, ಆದರೆ ಈ ಬಾರಿ ಚೆಂಡು ಅವರ ಕೈಯಿಂದ ಜಾರಿತು. ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ದಾಖಲೆ ಹೊಂದಿರುವ ಕೊಹ್ಲಿಯಿಂದ ಇಂತಹ ತಪ್ಪನ್ನು ಯಾರೂ ನಿರೀಕ್ಷಿಸಿರಲಿಲ್ಲ. ಕೊಹ್ಲಿ ಮಾಡಿದ ಈ ತಪ್ಪಿನಿಂದಾಗಿ ತಂಡವು 24 ರನ್ಗಳ ದಂಡ ತೆತ್ತಬೇಕಾಯಿತು.
ಕೊಹ್ಲಿ ಕ್ಯಾಚ್ ಕೈಬಿಟ್ಟಾಗ, ಜುರೆಲ್ ಕೇವಲ 11 ರನ್ ಗಳಿಸಿ ಆಟವಾಡುತ್ತಿದ್ದರು. ಇದರ ಸಂಪೂರ್ಣ ಲಾಭ ಪಡೆದ ಜುರೆಲ್ 2 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ ಒಟ್ಟು 24 ರನ್ ಗಳಿಸಿದರು. ಜುರೆಲ್ ಅವರ ಈ ಆಟದಿಂದಾಗಿ ರಾಜಸ್ಥಾನ್ 20 ಓವರ್‌ಗಳಲ್ಲಿ 173 ರನ್ ಕಲೆಹಾಕಿತು. ಕೇವಲ 11 ರನ್‌ಗಳಿಗೆ ಔಟಾಗುವುದರಿಂದ ಪಾರಾದ ಜುರೆಲ್, 23 ಎಸೆತಗಳಲ್ಲಿ 35 ರನ್ ಗಳಿಸಿ ಅಜೇಯರಾಗಿ ಮರಳಿದರು. ಅಂದರೆ ಕೊಹ್ಲಿ ಮಾಡಿದ ಒಂದು ತಪ್ಪಿನಿಂದಾಗಿ ಬೆಂಗಳೂರು 24 ರನ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಡಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ