ಷೇರು ಮಾರುಕಟ್ಟೆ ಭಾರೀ ಇಳುವರಿ ಕೊಟ್ಟಿದ್ದು 2017-18 ನೇ ಸಾಲಿನಲ್ಲಿ. ಆಗ 81 ಕಂಪನಿಗಳು 98,984 ಕೋಟಿ ರೂಪಾಯಿ ಸಂಗ್ರಹಿಸಿದವು. ವರ್ಷದಿಂದ ವರ್ಷಕ್ಕೆ IPO ಗಳು ಸಂಗ್ರಹಿಸುತ್ತಿರುವ ಬಂಡವಾಳದ ಮೊತ್ತ ಹೆಚ್ಚಾಗುತ್ತಾ ಸಾಗುತ್ತಿದೆ. ಇದರಿಂದ 1990ರ ದಶಕದಲ್ಲಿನ ಅಲ್ಪ ಸಂಖ್ಯೆಗಳನ್ನು ಮರೆಯುವಂತಿದೆ. 2010ರ ದಶಕದ ಬಳಿಕ ಈ ವಿದ್ಯಮಾನ ಮತ್ತಷ್ಟು ಗಟ್ಟಿಗೊಂಡಿದೆ.
Harley-Davidson: FY2022 ರಲ್ಲಿ ಹಾರ್ಲೆ 601 ಮೋಟಾರ್ಸೈಕಲ್ಗಳನ್ನು ಮಾರಾಟ ಮಾಡಿದೆ. ಅದರಲ್ಲಿ 531 ಯುನಿಟ್ಗಳು 1,000 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ದ್ವಿಚಕ್ರ ವಾಹನ ವಿಭಾಗದಲ್ಲಿ ಮಾರಾಟವಾಗಿವೆ.
ಕಳೆದ ಅಕ್ಟೋಬರ್ನಿಂದ ದೇಶದ ವಿವಿಧೆಡೆ ಸಿಎನ್ಜಿ ದರ ನಿಯಮಿತವಾಗಿ ಹೆಚ್ಚಾಗುತ್ತಿದೆ.
ಅನೈತಿಕ ವಹಿವಾಟು ಆರೋಪದ ಮೇಲೆ ಇಬ್ಬರು ಫಂಡ್ ಮ್ಯಾನೇಜರ್ಗಳನ್ನು ಆ್ಯಕ್ಸಿಸ್ ಮ್ಯೂಚುವಲ್ ಫಂಡ್ನ ಆಡಳಿತ ಮಂಡಳಿಅಮಾನತು ಮಾಡಿದೆ.
ನೀವು ಸಹ ವಿವಿಧ ಅಂಶಗಳು ಮತ್ತು ಆಯ್ಕೆಗಳೊಂದಿಗೆ ಕಾರು ಖರೀದಿಯಲ್ಲಿ ಗೊಂದಲಗೊಂಡಿದ್ದರೆ ಅದನ್ನು ಕೊನೆಗೊಳಿಸಲು ನಾವು ನಿಮಗೆ ಭಾರತೀಯ ಬೇಸ್ಟ್ ಕಾರುಗಳ ಬಗ್ಗೆ ಪರಿಚಯಿಸುತ್ತಿದ್ದೇವೆ ಮುಂದೆ ಓದಿ.
ಕ್ಷಮೆ ಕೋರುವುದರ ಜೊತೆಗೆ ಇನ್ನು ಮುಂದೆ ಸ್ವತಃ ಯಾವುದೇ ಪ್ರಕರಣಗಳನ್ನು ದಾಖಲಿಸುವುದಿಲ್ಲ ಹಾಗೂ ಬೇರೆಯವರು ಮೊಕದ್ದಮೆ ದಾಖಲಿಸಲು ನೆರವನ್ನೂ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Reliance Jio 4G Digital Life: ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವವರು ಈಗ ಜಿಯೋ ಡಿಜಿಟಲ್ ಲೈಫ್ ಅನ್ನು ಇನ್ನಷ್ಟು ಅನುಕೂಲಕರವಾಗಿ ಅನುಭವಿಸಬಹುದು. ಜಿಯೋದ ಕೈಗೆಟುಕುವ ದರದ ಯೋಜನೆಗಳ ಪ್ರಯೋಜನ ಪಡೆಯಬಹುದು.
ಇದ್ದಕ್ಕಿದ್ದಂತೆ ರೆಪೊದರವನ್ನು ಶೇ 4.40ರಷ್ಟು ಹೆಚ್ಚಿಸಿದ ಆಘಾತ ಸಹಿಸಿಕೊಳ್ಳದ ಷೇರುಪೇಟೆ ಕುಸಿತ ದಾಖಲಿಸಿತು.
ಉತ್ತಮ ಮೈಲೇಜ್ ಹೊಂದಿರುವ ಈ ದ್ವಿಚಕ್ರ ವಾಹನಗಳು ಅಗ್ರಸ್ಥಾನದಲ್ಲಿವೆ. ಅಂತಹ ಬೈಕ್ಗಳನ್ನು ಹುಡುಕುವವರಿಗಾಗಿ, ನಾವು ಭಾರತದಲ್ಲಿನ ಟಾಪ್ 5 ಅತ್ಯಂತ ಕೈಗೆಟುಕುವ ಇಂಧನ ಸಮರ್ಥ ಬೈಕ್ಗಳ ಪಟ್ಟಿಯನ್ನು ನೀಡಿದ್ದೇವೆ ಮುಂದೆ ಓದಿ.
ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಸಿಲಿಂಡರ್ (Commercial Liquefied Petrolium Gas - LPG) ಬೆಲೆಯನ್ನು ₹ 102 ಹೆಚ್ಚಿಸಿದೆ.
ಟಾಟಾ ಮೋಟಾರ್ಸ್ನ ಅವಿನ್ಯಾ ಅನಾವರಣಗೊಳಿಸಲಾಗಿದೆ. ಇದು ಎಲೆಕ್ಟ್ರಿಕ್ ಕಾರು. 30 ನಿಮಿಷ ಚಾಋ್ಜ್ ಮಾಡಿದರೆ 500 ಕಿಲೋಮಿಟರ್ ಚಲಿಸಬಹುದು.
ಹಾಲಿನ ದರ: KMF Nandini Milk Price Hike: ಪ್ರತಿ ಲೀಟರ್ ಹಾಲಿಗೆ ₹ 3 ಹೆಚ್ಚಿಸಬೇಕು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಸಲ್ಲಿಸಿದ್ದಾರೆ.
ಬ್ಯಾಟರಿ ಸೆಲ್ಗಳನ್ನು ಬಳಸುವಾಗ ಜಾಗರೂಕರಾಗಿರಿ ಮತ್ತು ಉತ್ಪನ್ನಗಳಲ್ಲಿ ದೋಷಗಳಿದ್ದರೆ ಹಿಂಪಡೆಯಲು ಸಚಿವರು ಇವಿ ತಯಾರಕರನ್ನು ಒತ್ತಾಯಿಸಿದ್ದಾರೆ. ಬ್ಯಾಟರಿ ಸೆಲ್ನಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಗಡ್ಕರಿ ಹೇಳಿದ್ದಾರೆ.
Elon Musk Acquires Twitter: ವಿಶ್ವದ ಪ್ರಮುಖ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಖರೀದಿಸಿದ್ದಾರೆ.
ಬೆಂಗಳೂರು ಸಮಿಟ್ ತಾಂತ್ರಿಕ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವಲ್ಲಿ ಇಂದಿನ ಸಭೆ ಫಲಪ್ರದವಾಗಿದೆ. ಮುಂಬರುವ ದಿನಗಳಲ್ಲಿ ವಿವಿಧ ಕೈಗಾರಿಕಾ ವಲಯಗಳಿಗೂ ಸರ್ಕಾರ ಇಂಬು ನೀಡಲಿದೆ. ಬೆಂಗಳೂರನ್ನು ವಿಶ್ವದಲ್ಲಿಯೇ ನಂ.1 ಸಿಲಿಕಾನ್ ಸಿಟಿ ಮಾಡುವ ಚಿಂತನೆ ಸರ್ಕಾರಕ್ಕಿದೆ. ಬೆಂಗಳೂರಿನ ಹೊರವಲಯಗಳಲ್ಲಿಯೂ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಗಿದ
ಕೇವಲ ಓಲಾ ಅಷ್ಟೇ ಅಲ್ಲ. ಇತ್ತೀಚೆಗೆ ನಡೆದ ಬೆಂಕಿ ಅವಘಡಗಳ ಕಾರಣದಿಂದ ಒಕಿನಾವಾ ಅಟೋಟೆಕ್ ತನ್ನ 3000 ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ವಾಪಸ್ ಪಡೆದಿದೆ. ಹಾಗೇ, ಪ್ಯೂರ್ ಇವಿ ಕೂಡ 2000 ದ್ವಿಚಕ್ರ ವಾಹನಗಳನ್ನು ಹಿಂಪಡೆದಿದೆ.
Isha Ambani: ಪ್ರಸ್ತುತ ವರ್ಷದ ದ್ವಿತೀಯಾರ್ಧದಲ್ಲಿ ಮೊದಲ ಸ್ವದೇಶ್ ಮಳಿಗೆ ಆರಂಭವಾಗುವ ನಿರೀಕ್ಷೆಯಿದೆ. ಇದರಲ್ಲಿ ಕರಕುಶಲ ಉಡುಪುಗಳು, ಕೈಮಗ್ಗದ ಸಾಮಗ್ರಿಗಳು, ಕೃಷಿ ಉತ್ಪನ್ನಗಳು ಮತ್ತು ಇತರ ಸಾಮಗ್ರಿಗಳು ಇರಲಿದ್ದು, ಇವುಗಳನ್ನು ನೇರವಾಗಿ ಕಲಾವಿದರಿಂದಲೇ ಖರೀದಿಸಲಾಗಿರುತ್ತದೆ. ಭಾರತೀಯ ಕರಕುಶಲ ಸಾಮಗ್ರಿಗಳಿಗೆ ಸ್ವದೇಶದ ಜಾಗತಿಕ ಮಾರ್ಕೆಟ್ ಪ್ಲೇಸ್ ಕೂಡ ಆಗಿರುತ್ತದೆ.
ಟ್ರಾಯ್ ಪ್ರಕಾರ, ವೊಡಾಫೋನ್ ಐಡಿಯಾ ಮಾರ್ಚ್ ತಿಂಗಳಲ್ಲಿ 8.2 ಎಂಬಿಪಿಎಸ್ ಸರಾಸರಿ ಅಪ್ಲೋಡ್ ವೇಗ ಹೊಂದಿದ್ದು, ಈ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. 7.3 ಎಂಬಿಪಿಎಸ್ ವೇಗ ಇರುವ ರಿಲಯನ್ಸ್ ಜಿಯೋ ನಂತರದ ಸ್ಥಾನದಲ್ಲಿದ್ದರೆ, ಭಾರ್ತಿ ಏರ್ಟೆಲ್ 6.1 ಹಾಗೂ ಬಿಎಸ್ಎನ್ಎಲ್ 5.1 ಎಂಬಿಪಿಎಸ್ ವೇಗದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಈ ವಿಶ್ವ ದರ್ಜೆಯ ತ್ರಿಸ್ಟಾರ್ ಹೋಟೆಲ್ನಲ್ಲಿ 100 ಕೊಠಡಿಗಳಿರಲಿದ್ದು ಅವುಗಳಲ್ಲಿ 96 ಡಿಲಕ್ಸ್ ಕೊಠಡಿಗಳು, 4 ಸೂಟ್ ರೂಮ್ಸ್, ಪಾರ್ಕಿಂಗ್, ಜಿಮ್, ಓಪನ್ ರೆಸ್ಟೋರೆಂಟ್, ಸ್ಪಾ, ಈಜುಕೊಳ ಸೇರಿದಂತೆ ಇತರೆ ಸೌಲಭ್ಯಗಳು ಒಳಗೊಂಡಿರಲಿವೆ. ಕಮಲಾಪುರ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ಜೂಯಲಾಜಿಕಲ್ ಪಾರ್ಕ್ ಹತ್ತಿರದ 15 ಎಕರೆ ಜಾಗದಲ್ಲಿ ಈ ವಿಶ್ವ ದರ್ಜೆಯ ತ್ರೀಸ್ಟಾರ್ ಹೋಟಲ್ ತಲೆಎತ್ತಲಿದೆ.