Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸ್​ಆ್ಯಪ್ ಹೊಸ ಪ್ರೈವೆಸಿ ಪಾಲಿಸಿಯಲ್ಲಿ ಭಾರತೀಯರಿಗೆ ತಾರತಮ್ಯ: ಕೇಂದ್ರ ಸರ್ಕಾರ

ಭಾರತೀಯ ವಾಟ್ಸ್​ಆ್ಯಪ್ ಬಳಕೆದಾರರು ಸಾಮಾಜಿಕ ಜಾಲತಾಣದ ಹೊಸ ಪ್ರೈವೆಸಿ ಪಾಲಿಸಿ ವಿಚಾರದಲ್ಲಿ, ಏಕಪಕ್ಷೀಯವಾಗಿ ಬದಲಾವಣೆಗೆ ಒಳಗಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ,

ವಾಟ್ಸ್​ಆ್ಯಪ್ ಹೊಸ ಪ್ರೈವೆಸಿ ಪಾಲಿಸಿಯಲ್ಲಿ ಭಾರತೀಯರಿಗೆ ತಾರತಮ್ಯ: ಕೇಂದ್ರ ಸರ್ಕಾರ
ವಾಟ್ಸ್​ಆ್ಯಪ್ ಹಾಕಿರುವ ಸ್ಟೇಟಸ್
Follow us
TV9 Web
| Updated By: ganapathi bhat

Updated on:Apr 06, 2022 | 8:42 PM

ದೆಹಲಿ: ವಾಟ್ಸ್​ಆ್ಯಪ್ ತನ್ನ ಹೊಸ ಗೌಪ್ಯತಾ ನೀತಿ (ಪ್ರೈವೆಸಿ ಪಾಲಿಸಿ) ವಿಚಾರವಾಗಿ, ಭಾರತೀಯ ಬಳಕೆದಾರರನ್ನು ಯುರೋಪಿಯನ್ ಬಳಕೆದಾರರಿಗಿಂತ ಭಿನ್ನವಾಗಿ ಕಾಣುತ್ತಿದೆ. ಈ ವಿಚಾರ ಸರ್ಕಾರದ ಗಮನಕ್ಕೂ ಬಂದಿದೆ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ಭಾರತೀಯ ವಾಟ್ಸ್​ಆ್ಯಪ್ ಬಳಕೆದಾರರು ಸಾಮಾಜಿಕ ಜಾಲತಾಣದ ಹೊಸ ಪ್ರೈವೆಸಿ ಪಾಲಿಸಿ ವಿಚಾರದಲ್ಲಿ, ಏಕಪಕ್ಷೀಯವಾಗಿ ಬದಲಾವಣೆಗೆ ಒಳಗಾಗಿದ್ದಾರೆ. ಕೇವಲ ಭಾರತೀಯ ಬಳಕೆದಾರರನ್ನು ಕೇಂದ್ರೀಕರಿಸಿ, ಫೇಸ್​ಬುಕ್ ಈ ರೀತಿ ವರ್ತಿಸಿರುವುದು ನಮ್ಮ ಕಾಳಜಿಗೆ ಕಾರಣ ಎಂದು ಸರ್ಕಾರ ಹೈಕೋರ್ಟ್​ಗೆ ಹೇಳಿಕೆ ನೀಡಿದೆ.

ಈ ಕುರಿತಾಗಿ, ನ್ಯಾಯಮೂರ್ತಿ ಸಂಜೀವ್ ಸಚ್​ದೇವ ಮುಂದೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಹೇಳಿಕೆ ನೀಡಿದ್ದಾರೆ. ಫೇಸ್​ಬುಕ್ ಒಡೆತನದ, ವಾಟ್ಸ್​ಆ್ಯಪ್​ನ  ಹೊಸ ಗೌಪ್ಯತಾ ನೀತಿಗಳ ಬಗ್ಗೆ ವಿಚಾರಣೆ ನಡೆಸುವ ವೇಳೆ ಈ ಮಾಹಿತಿ ನೀಡಲಾಗಿದೆ.

ಭಾರತೀಯ ವಾಟ್ಸ್​ಆ್ಯಪ್ ಬಳಕೆದಾರರಿಗೆ, ತಮ್ಮ ಮಾಹಿತಿಯನ್ನು (ಡಾಟಾ) ಫೇಸ್​ಬುಕ್​ನ ಇತರ ಕಂಪೆನಿಗಳೊಂದಿಗೆ ಹಂಚಿಕೊಳ್ಳುವ ವಿಚಾರದಲ್ಲಿ ಆಯ್ಕೆ ನೀಡಿಲ್ಲ. ವಾಟ್ಸ್​ಆ್ಯಪ್ ನೀತಿಯನ್ನು ಒಪ್ಪಿಕೊಳ್ಳಬೇಕು ಅಥವಾ ಬಳಕೆ ನಿಲ್ಲಿಸಬೇಕು ಎಂಬ ಎರಡೇ ಆಯ್ಕೆಗಳು ಬಳಕೆದಾರರ ಎದುರು ಇದೆ. ಇದು ಸರಿಯಲ್ಲ ಎಂದು ವಿಚಾರಣೆಯ ವೇಳೆ ಚೇತನ್ ಶರ್ಮಾ ಹೇಳಿದ್ದಾರೆ. ಈ ನೀತಿಯು, ಬಳಕೆದಾರರ ಮಾಹಿತಿ ಗೌಪ್ಯತೆ ಹಾಗೂ ಮಾಹಿತಿ ಸುರಕ್ಷತೆಯನ್ನು ಉಲ್ಲಂಘಿಸಿದಂತೆ ಎಂದು ಶರ್ಮಾ ಕೋರ್ಟ್​ಗೆ ತಿಳಿಸಿದ್ದಾರೆ.

ಈ ಬಗ್ಗೆ ಸರ್ಕಾರ ಕಾಳಜಿ ವಹಿಸಿದೆ ಹಾಗೂ ಈ ವಿಚಾರವನ್ನು ಈಗಾಗಲೇ ಪರಿಶೀಲನೆ ನಡೆಸುತ್ತಿದೆ. ಹೆಚ್ಚಿನ ಮತ್ತು ಸೂಕ್ತ ಮಾಹಿತಿಗಳಿಗಾಗಿ ಸರ್ಕಾರ, ಫೇಸ್​ಬುಕ್ ಜೊತೆ ಸಂವಹನ ನಡೆಸಿರುವುದಾಗಿ ಶರ್ಮಾ ಮಾಹಿತಿ ನೀಡಿದ್ದಾರೆ. ಫೇಸ್​ಬುಕ್ ಪರ ವಾದಿಸುತ್ತಿರುವ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ಸಂವಹನ ಸಂದೇಶವನ್ನು ಸ್ವೀಕರಿಸಿದ್ದೇವೆ ಮತ್ತು ಪ್ರತಿಕ್ರಿಯಿಸುತ್ತೇವೆ ಎಂದು ಕೋರ್ಟ್​ನಲ್ಲಿ ಹೇಳಿಕೆ ನೀಡಿದ್ದಾರೆ. ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 1ಕ್ಕೆ ಮುಂದೂಡಿದೆ.

ವಾಟ್ಸ್​ಆ್ಯಪ್ ಹೊಸ ನೀತಿಯಿಂದ ಸಂವಿಧಾನದ ಆಶಯ ಉಲ್ಲಂಘನೆ: ದೆಹಲಿ ಹೈಕೋರ್ಟ್​ಗೆ ಅರ್ಜಿ

ವಾಟ್ಸಾಪ್​​-ಟೆಲಿಗ್ರಾಂ-ಸಿಗ್ನಲ್​: ಯಾವ ಆ್ಯಪ್​ ಹೆಚ್ಚು ಸೇಫ್​? ಇಲ್ಲಿದೆ ವಿವರ

Published On - 4:03 pm, Mon, 25 January 21

ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ