AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hathras Case: ಪತ್ರಕರ್ತ ಸಿದ್ದಿಕ್ ಕಪ್ಪನ್​ಗೆ ಸುಪ್ರೀಂಕೋರ್ಟ್​ನಿಂದ ಮಧ್ಯಂತರ ಜಾಮೀನು

Siddique Kappan: ಹಾಥರಸ್ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಕಪ್ಪನ್ ಅವರನ್ನು ಬಂಧಿಸಿದ್ದ ಪೊಲೀಸರು ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ 1967 ಅಡಿಯಲ್ಲಿ ಪ್ರಕರಣದ ದಾಖಲಿಸಿದ್ದರು.

Hathras Case: ಪತ್ರಕರ್ತ ಸಿದ್ದಿಕ್ ಕಪ್ಪನ್​ಗೆ ಸುಪ್ರೀಂಕೋರ್ಟ್​ನಿಂದ ಮಧ್ಯಂತರ ಜಾಮೀನು
ಸಿದ್ದಿಕ್ ಕಪ್ಪನ್
ರಶ್ಮಿ ಕಲ್ಲಕಟ್ಟ
| Updated By: shruti hegde|

Updated on: Feb 15, 2021 | 5:12 PM

Share

ದೆಹಲಿ: ಹಾಥರಸ್ ( Hathras) ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ವೇಳೆ ಬಂಧನಕ್ಕೊಳಗಾಗಿದ್ದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ನೀಡಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅಮ್ಮನನ್ನು ನೋಡಲು ಅನುಮತಿ ನೀಡಬೇಕು ಎಂದ ಸಿದ್ದಿಕ್ ಕಪ್ಪನ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಕೇರಳದಲ್ಲಿರುವ ಅಮ್ಮನನ್ನು ಭೇಟಿ ಮಾಡಲು ಕಪ್ಪನ್ ಅವರಿಗೆ 5 ದಿನಗಳ ಅನುಮತಿ ನೀಡಿರುವ ಸುಪ್ರೀಂಕೋರ್ಟ್, ಸಂಬಂಧಿಕರು, ವೈದ್ಯರು, ಕುಟುಂಬದ ಸದಸ್ಯರು ಹೊರತು ಪಡಿಸಿ ಮಾಧ್ಯಮ ಮತ್ತು ಸಾರ್ವಜನಿಕರೊಂದಿಗೆ ಮಾತನಾಡುವಂತಿಲ್ಲ ಎಂದು ಆದೇಶಿಸಿದೆ.

2020 ಅಕ್ಟೋಬರ್ 5ರಂದು ಉತ್ತರಪ್ರದೇಶ ಪೊಲೀಸರು ಕಪ್ಪನ್ ಅವರನ್ನು ಬಂಧಿಸಿದ್ದರು. ಕೇರಳದ ಕಾರ್ಯನಿರತ ಪತ್ರಕರ್ತ ಸಂಘ ( KUWJ) ಪ್ರಕಾರ ಹಾಥರಸ್ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಕಪ್ಪನ್ ಅವರನ್ನು ಬಂಧಿಸಿದ್ದ ಪೊಲೀಸರು ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ 1967 ಅಡಿಯಲ್ಲಿ ಪ್ರಕರಣದ ದಾಖಲಿಸಿದ್ದರು.

ಜನವರಿ 22 ರಂದು ಪ್ರಕರಣದ ವಿಚಾರಣೆ ನಡೆದಾಗ ಕಪ್ಪನ್ ಅವರ ಅಮ್ಮ 90ರ ಹರೆಯದ ಖದೀಜಾ ಕುಟ್ಟಿ ಅವರನ್ನು ಭೇಟಿ ಮಾಡಬೇಕು ಎಂದು ಮನವಿ ಮಾಡಿದ್ದರು. ಹೀಗಾಗಿ ಅಮ್ಮನ ಜತೆ ವಿಡಿಯೊ ಸಂವಾದ ಮಾಡಲು ಅನುಮತಿ ನೀಡಲಾಗಿತ್ತು. ಉತ್ತರ ಪ್ರದೇಶ ಸರ್ಕಾರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದರು.

ಇದನ್ನೂ ಓದಿ: ರೇಪ್ ಮಾಡಿ, ನಾಲಿಗೆ ಕಟ್ ಮಾಡಿದ ಪಾಪಿಗಳಿಗೆ ಶಿಕ್ಷೆ ಯಾವಾಗ?

ಕೇರಳದ ಕಾರ್ಯನಿರತ ಪತ್ರಕರ್ತ ಸಂಘ ಸಲ್ಲಿಸಿದ ಹೊಸ ಮನವಿಯಲ್ಲಿ ‘ಖದೀಜಾ ಕುಟ್ಟಿಯವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಲೇ ಇದೆ. ಪ್ರಜ್ಞಾವಸ್ಥೆಗೆ ಮರಳಿದಾಗ ಆಕೆ ಮಗನನ್ನು ಭೇಟಿ ಮಾಡಬೇಕು ಎಂದು ಕೇಳುತ್ತಿದ್ದಾರೆ. ಮಗನನ್ನು ಭೇಟಿಯಾಗಬೇಕು ಎಂಬುದು ಅಮ್ಮನ ಕೊನೆಯ ಆಸೆ’ ಎಂದು ಹೇಳಿದೆ.

ಸಿದ್ದಿಕ್ ಅವರ ಅಮ್ಮನ ಆರೋಗ್ಯ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಮಗ ಜೈಲಿನಲ್ಲಿದ್ದಾನೆ ಎಂದು ತಿಳಿದಾಗಿನಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದೆ. ಅವರಿಗೆ ಅಲ್ಜೈಮರ್ ಕಾಯಿಲೆ ಇದೆ. ಅವರಿಗೆ ಸ್ವಲ್ಪ ನೆನಪು ಬಂದಾಗ ನನ್ನ ಮಗ ಎಲ್ಲಿ ಎಂದು ಕೇಳುತ್ತಿದ್ದಾರೆ ಎಂದು ಸಿದ್ದಿಕ್ ಅವರ ಪತ್ನಿ ರೈಹಾನಾ ಹೇಳಿದ್ದಾರೆ.