AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

QR Code Scam: OLXನಲ್ಲಿ ಸೋಫಾ ಕೊಳ್ಳುವುದಾಗಿ ಹೇಳಿ ಅರವಿಂದ್ ಕೇಜ್ರಿವಾಲ್ ಪುತ್ರಿಗೆ ಮೋಸ ಮಾಡಿದ ಆರೋಪಿಗಳು ಅರೆಸ್ಟ್

QR Code Scam: ಸಜೀದ್, ಕಪಿಲ್ ಮತ್ತು ಮನ್ವೇಂದ್ರ ಎಂಬುವವರು ಸೆರೆಸಿಕ್ಕಿದ್ದು, ಇ-ಕಾಮರ್ಸ್​ ಸೈಟ್​ನಲ್ಲಿ ನಕಲಿ ಖಾತೆ ತೆರೆದು ಜನರಿಗೆ ಟೋಪಿ ಹಾಕುತ್ತಿದ್ದ ಇನ್ನೊಬ್ಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

QR Code Scam: OLXನಲ್ಲಿ ಸೋಫಾ ಕೊಳ್ಳುವುದಾಗಿ ಹೇಳಿ ಅರವಿಂದ್ ಕೇಜ್ರಿವಾಲ್ ಪುತ್ರಿಗೆ ಮೋಸ ಮಾಡಿದ ಆರೋಪಿಗಳು ಅರೆಸ್ಟ್
ಅರವಿಂದ್​ ಕೇಜ್ರಿವಾಲ್, ಹರ್ಷಿತಾ ಕೇಜ್ರಿವಾಲ್
Skanda
| Edited By: |

Updated on: Feb 15, 2021 | 5:30 PM

Share

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಕಳೆದ ವಾರವಷ್ಟೇ ಸುದ್ದಿಯಾಗಿದ್ದರು. OLXನಲ್ಲಿ ಸೋಫಾ ಮಾರಲು ಹೋಗಿ ₹34 ಸಾವಿರ ಕಳೆದುಕೊಂಡಿದ್ದ ಹರ್ಷಿತಾ, QR Code Scamಗೆ ಒಳಗಾಗಿದ್ದರು. ಆದರೆ ಇದೀಗ ಅವರಿಗೆ ಮೋಸ ಮಾಡಿದ ಆರೋಪದ ಮೇಲೆ ಮೂವರು ಕಿರಾತಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಜೀದ್, ಕಪಿಲ್ ಮತ್ತು ಮನ್ವೇಂದ್ರ ಎಂಬುವವರು ಸೆರೆಸಿಕ್ಕಿದ್ದು, ಇ-ಕಾಮರ್ಸ್​ ಸೈಟ್​ನಲ್ಲಿ ನಕಲಿ ಖಾತೆ ತೆರೆದು ಜನರಿಗೆ ಟೋಪಿ ಹಾಕುತ್ತಿದ್ದ ಇನ್ನೊಬ್ಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪ್ರಕರಣ ಏನು? ಅರವಿಂದ್ ಕೇಜ್ರಿವಾಲ್ ಮಗಳು ಹರ್ಷಿತಾ OLXನಲ್ಲಿ ಸೋಫಾ ಮಾರುವುದಾಗಿ ಜಾಹೀರಾತು ನೀಡಿದ್ದಾರೆ. ಅದನ್ನು ಗಮನಿಸಿದ ಖದೀಮರು ಸೋಫಾವನ್ನು ತಾವೇ ಕೊಳ್ಳುವುದಾಗಿ ಹೇಳಿ ಆಕೆಗೆ ಉಪಾಯವಾಗಿ ಬಲೆ ಬೀಸಿದ್ದಾರೆ. ಸೋಫಾಕ್ಕೆ ತಗಲುವ ಮೊತ್ತವನ್ನು ಆನ್​ಲೈನ್ ಮೂಲಕ ಪಾವತಿಸುತ್ತೇವೆ. ಆ ಹಣವನ್ನು ಪಡೆಯಲು QR Code ಸ್ಕ್ಯಾನ್ ಮಾಡಿಕೊಳ್ಳಿ ಎಂದ ಖದೀಮರು ಯಾವತ್ತಿನಂತೆ ತಮ್ಮ ದಾಳ ಎಸೆದಿದ್ದಾರೆ. ಅದನ್ನರಿಯದ ಹರ್ಷಿತಾ ಕೇಜ್ರಿವಾಲ್ ಎರಡು ಬಾರಿ ಕೋಡ್ ಸ್ಕ್ಯಾನ್ ಮಾಡಿದ್ದು, ಮೊದಲು ₹20,000 ಹಾಗೂ ಎರಡನೆಯ ಬಾರಿ ₹14,000 ಸೇರಿದಂತೆ ಒಟ್ಟು ₹34,000 ಕಳೆದುಕೊಂಡಿದ್ದಾರೆ. ಹೀಗೆ ಕ್ಯೂಆರ್​ ಕೋಡ್ ಸ್ಕ್ಯಾನ್ ಮಾಡಿದರೆ ತಮ್ಮ ಅಕೌಂಟಿನಿಂದಲೇ ಹಣ ಕಡಿತವಾಗುತ್ತದೆ ಎಂದು ಗೊತ್ತಾಗುವಷ್ಟರಲ್ಲೇ ಆ ಮೊತ್ತ ಖದೀಮರ ಖಾತೆ ಸೇರಿದೆ. ನಂತರ ಆ ಬಗ್ಗೆ ದೂರು ದಾಖಲಿಸಿದ್ದ ಪರಿಣಾಮ ಮೂವರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: OLXನಲ್ಲಿ ಸೋಫಾ ಮಾರಲು ಹೋಗಿ 34 ಸಾವಿರ ರೂಪಾಯಿ ಕಳೆದುಕೊಂಡ ಅರವಿಂದ್ ಕೇಜ್ರಿವಾಲ್ ಮಗಳು

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ