Greta Thunberg Toolkit case: ಗಣರಾಜ್ಯೋತ್ಸವದ ದಿನ ಗಲಭೆ ಸೃಷ್ಟಿಸಲು ಮೊದಲೇ ಝೂಮ್ ಮೀಟಿಂಗ್ ನಡೆಸಲಾಗಿತ್ತು: ದೆಹಲಿ ಪೊಲೀಸರಿಂದ ಸ್ಫೋಟಕ ಮಾಹಿತಿ

Greta Thunberg Toolkit Case : ಬೆಂಗಳೂರಿನ ಯುವ ಹವಾಮಾನ ಹೋರಾಟಗಾರ್ತಿ ಬಂಧನಪ್ರೋ ಖಲಿಸ್ತಾನಿ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್​ನ ಸ್ಥಾಪಕ ಎಂ.ಒ.ಧನಿವಾಲ್ ಬೆಂಗಳೂರು ಮೂಲದ 21ರ ಹರೆಯದ ದಿಶಾ ರವಿ ಮತ್ತು ನಿಖಿತಾ ಜಾಕೋಬ್​ರನ್ನು ಝೂಮ್ ಮೂಲಕ ಸಂಪರ್ಕಿಸಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Greta Thunberg Toolkit case: ಗಣರಾಜ್ಯೋತ್ಸವದ ದಿನ ಗಲಭೆ ಸೃಷ್ಟಿಸಲು ಮೊದಲೇ ಝೂಮ್ ಮೀಟಿಂಗ್ ನಡೆಸಲಾಗಿತ್ತು: ದೆಹಲಿ ಪೊಲೀಸರಿಂದ ಸ್ಫೋಟಕ ಮಾಹಿತಿ
ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಹಿಂಸಾಚಾರ
Follow us
guruganesh bhat
|

Updated on: Feb 15, 2021 | 4:48 PM

ದೆಹಲಿ:ಗಣರಾಜ್ಯೋತ್ಸವದಂದು ಸಾಮಾಜಿಕ ಜಾಲತಾಣಗಳಲ್ಲಿ ಗಲಭೆ ಸೃಷ್ಟಿಸಲು ಜನವರಿ 11ರಂದೇ ಝೂಮ್ ಮೀಟಿಂಗ್ ಮೂಲಕ ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಪ್ರೋ ಖಲಿಸ್ತಾನಿ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್​ನ ಸ್ಥಾಪಕ ಮೊ ಧಲಿವಾಲ್ ವಕೀಲೆ-ಕಾರ್ಯಕರ್ತೆ ನಿಖಿತಾ ಜಾಕೋಬ್​ರನ್ನು ಸಂಪರ್ಕಿಸಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪ್ರೋ ಖಲಿಸ್ತಾನಿ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್​ನ ಸ್ಥಾಪಕ ಮೊ ಧಲಿವಾಲ್ ಬೆಂಗಳೂರು ಮೂಲದ 21ರ ಹರೆಯದ ದಿಶಾ ರವಿ ಮತ್ತು ನಿಖಿತಾ ಜಾಕೋಬ್​ರನ್ನು ಝೂಮ್ ಮೂಲಕ ಸಂಪರ್ಕಿಸಿದ್ದರು. ಗಣರಾಜ್ಯೋತ್ಸವದ ದಿನವೇ ಸಾಮಾಜಿಕ ಜಾಲತಾಣಗಳ ಮೂಲದ ವಿಶ್ವದಾದ್ಯಂತ ಭಾರತದ ಆಡಳಿತ ವಿರೋಧಿ ಅಲೆ ಮೂಡಿಸುವಂತೆ ಸಂಚಲನ ಸೃಷ್ಟಿಸಲು ಯೋಜನೆ ರೂಪಿಸಿದ್ದರು. ಈ ಕುರಿತು ಹಲವು ಸ್ಕ್ರೀನ್​ಶಾಟ್​ಗಳು ಮತ್ತು ಆಧಾರಗಳನ್ನು ಸಂಗ್ರಹಿಸಿದ ನಂತರವೇ ದೆಹಲಿ ಕೋರ್ಟ್ ಮೂಲಕ ಸರ್ಚ್ ವಾರಂಟ್ ಸಲ್ಲಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಗ್ರೇಟಾ ಥನ್​ಬರ್ಗ್ ಜತೆ ವಾಟ್ಸ್​ಆ್ಯಪ್ ಚಾಟ್ ಮಾಡಿದ್ದ ದಿಶಾ ರವಿ ಫೆಬ್ರವರಿ 4ರಂದು ಗಲಭೆ ಕುರಿತು ಟೂಲ್ ಕಿಟ್ ತಯಾರಿಸಿದ್ದು, ಮೊಬೈಲ್​ನಲ್ಲಿದ್ದ ಡಾಟಾ ಡಿಲೀಟ್ ಮಾಡಿದ್ದಾರೆ. ಆದರೂ, ದಿಶಾ ರವಿಯಿಂದ ವಶಕ್ಕೆ ಪಡೆದ 1 ಫೋನ್​, 2 ಲ್ಯಾಪ್​ಟಾಪ್​ಗಳಲ್ಲಿ ಭಾರತದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಕೆಡಿಸಲು ಸಂಚು ರೂಪಿಸಿದ್ದರ ಕುರಿತು ಸಾಕ್ಷ್ಯ ದೊರೆತಿದ್ದಾಗಿ ಎಂದು ಅವರು ತಿಳಿಸಿದ್ದಾರೆ.

“ಕೆಲಕಾಲ ನಾವು ಏನನ್ನೂ ಹೇಳದೇ ಸುಮ್ಮನೇ ಇರೋಣ.‌ನಾನು ವಕೀಲರ ಜೊತೆಗೆ ಚರ್ಚೆ ಮಾಡುತ್ತೇನೆ. ನಮ್ಮ ವಿರುದ್ಧ UAPA ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು” ಎಂದು ಗ್ರೇಟಾ ಥನ್​ಬರ್ಗ್​ಗೆ ದಿಶಾ ರವಿ ವಾಟ್ಸ್​ಆ್ಯಪ್​ ಸಂದೇಶ ಕಳುಹಿಸಿದ್ದರು. ನಂತರ ಹಳೆಯ ಟೂಲ್​​ಕಿಟ್​ನ್ನು ಗ್ರೇಟಾ ಥನ್​ಬರ್ಗ್ ಡಿಲೀಟ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Greta Thunberg Toolkit Case | ಬೆಂಗಳೂರಿನ ಯುವ ಹವಾಮಾನ ಹೋರಾಟಗಾರ್ತಿ ಬಂಧನ

ಗ್ರೇಟಾ ಥನ್​ಬರ್ಗ್​ ಹಂಚಿಕೊಂಡ ಟೂಲ್​ಕಿಟ್​ನ್ನು ಶಂತನು ಎಂಬ ವ್ಯಕ್ತಿ ರಚಿಸಿದ್ದು, ದಿಶಾ ರವಿ, ನಿಖಿತಾ ಜಾಕೋಬ್ ಸೇರಿ ಇನ್ನಿತರರು ಸಂಪಾದನೆ ಮಾಡುವ ಆಪ್ಶನ್ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Greta Thunberg Toolkit: ದಬ್ಬಾಳಿಕೆಯಿಂದ ಬಂಧಿಸದಿರುವಂತೆ ತಡೆಯಾಜ್ಞೆ ನೀಡಿ; ಬಾಂಬೆ ಹೈಕೋರ್ಟ್ ಮೊರೆ ಹೋದ ವಕೀಲೆ ನಿಖಿತಾ ಜಾಕೋಬ್

ಗ್ರೇಟಾ ಥನ್​ಬರ್ಗ್ ಹಂಚಿಕೊಂಡ ‘ಟೂಲ್​ಕಿಟ್’ನಲ್ಲಿ ಗಣರಾಜ್ಯೋತ್ಸವದ ದಿನದಂದು ಟ್ವಿಟರ್​ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ನಂತರ ಅಳಿಸಿಹಾಕಿದ್ದರು. ಇದರ ನಂತರ ಗ್ರೇಟಾ ಥನ್​ಬರ್ಗ್ ಟೂಲ್​ಕಿಟ್ ಪ್ರಕರಣ ದೇಶದಲ್ಲಿ ಬಾರಿ ಸಂಚಲನ ಸೃಷ್ಟಿಸುತ್ತಿದ್ದು, ರೈತ ಚಳುವಳಿಯನ್ನು ಖಲಿಸ್ತಾನ ಪರ ಹೋರಾಟಕ್ಕೆ ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಪುಷ್ಟಿ ಒದಗಿತ್ತು. ಈ ಎಲ್ಲ ವಿದ್ಯಮಾನಗಳಿಗೆ ರೈತ ಸಂಘಟನೆಗಳು ಮತ್ತು ನಾಯಕರು ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಇದೀಗ ಕುತೂಹಲ ಸೃಷ್ಟಿಸಿದೆ.

ಇದನ್ನೂ ಓದಿ: Greta Thunberg toolkit | ಕೇಂದ್ರ ಸರ್ಕಾರಕ್ಕೆ ಭಯ ಶುರುವಾಗಿದೆ; ದಿಶಾ ರವಿ ಬಂಧನ ಖಂಡಿಸಿದ ರಾಹುಲ್ ಗಾಂಧಿ