Greta Thunberg toolkit | ಕೇಂದ್ರ ಸರ್ಕಾರಕ್ಕೆ ಭಯ ಶುರುವಾಗಿದೆ; ದಿಶಾ ರವಿ ಬಂಧನ ಖಂಡಿಸಿದ ರಾಹುಲ್ ಗಾಂಧಿ

Greta Thunberg toolkit: ಕೇಂದ್ರ ಸರ್ಕಾರವೇ ಭಯಗೊಂಡು ಹೋರಾಟಗಾರರನ್ನು ಬಂಧಿಸುತ್ತಿದೆಯೇ ಹೊರತು, ದೇಶ ಭಯಗೊಂಡಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Greta Thunberg toolkit | ಕೇಂದ್ರ ಸರ್ಕಾರಕ್ಕೆ ಭಯ ಶುರುವಾಗಿದೆ; ದಿಶಾ ರವಿ ಬಂಧನ ಖಂಡಿಸಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ, ಸಂಸದ ರಾಹುಲ್​ ಗಾಂಧಿ
Follow us
guruganesh bhat
|

Updated on:Feb 15, 2021 | 1:50 PM

ದೆಹಲಿ: 21 ವರ್ಷದ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ (Disha Ravi) ಬಿಡುಗಡೆಗೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಆಗ್ರಹಿಸಿದ್ದಾರೆ. ಭಾರತವನ್ನು ಇನ್ನೂ ಮೌನದಿಂದಿರುವಂತೆ ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ಸ್ವತಃ ಭಯಗೊಂಡು, ಹೋರಾಟಗಾರರನ್ನು ಬಂಧಿಸುತ್ತಿದೆಯೇ ಹೊರತು, ದೇಶ ಭಯಗೊಂಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. (Greta Thunberg toolkit)

ಅಲ್ಲದೇ ದಿಶಾ ರವಿ‌ ಬಂಧನ ಖಂಡಿಸಿ ವಿವಿಧ ಕಾಂಗ್ರೆಸ್ ನಾಯಕರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಸದಸ್ಯರಾದ ಜೈರಾಮ್ ರಮೇಶ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರಾಜೀವ್​ಗೌಡ ಆಗ್ರಹಿಸಿದ್ದಾರೆ. ದಿಶಾ ರವಿ ಬಂಧನ ಪ್ರಜಾಪ್ರಭುತ್ವದ ಹತ್ಯೆ ತೀವ್ರವಾಗ್ತಿರೋದನ್ನು ತೋರಿಸುತ್ತಿದ್ದು, ಭಾರತದ ಯುವ ಜನಾಂಗವನ್ನು ಮೌನವಾಗಿರುವಂತೆ ಮಾಡಲು ಸಾಧ್ಯವಿಲ್ಲ. ಯುವಜನಾಂಗಕ್ಕೆ ಹೆಚ್ಚಿನ ಶಕ್ತಿ ಸಿಗಲಿ ಎಂದು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರು ಏನಂದ್ರು?

ದಿಶಾ ರವಿ ಬಗ್ಗೆ ಸಂಸದ ಪಿ.ಸಿ.ಮೋಹನ್ ಟ್ವೀಟ್ ಮಾಡಿದ್ದು, ದಿಶಾ ರವಿಯನ್ನು ಭಯೋತ್ಪಾದಕರಾದ ಬುರ್ಹಾನ್ ವಾನಿ, ಅಜ್ಮಲ್​ ಕಸಬ್​​ಗೆ ಹೋಲಿಸಿದ್ದಾರೆ. ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆಯಾಗಷ್ಟೇ ಇರಲಿದ್ದು, ಬುರ್ಹಾನ್, ಕಸಬ್​ ಸಹ 21 ವರ್ಷಕ್ಕೆ ಉಗ್ರ ಕೃತ್ಯವೆಸಗಿದ್ದರು. ಎಂದು ಸಂಸದ ಪಿ.ಸಿ. ಮೋಹನ್ ಟ್ವೀಟ್ ಮಾಡಿದ್ದಾರೆ.

ದೇಶದ ಕಾನೂನಿನ ಎದುರು ಎಲ್ಲರೂ ಸಮಾನರು. ದಿಶಾ ರವಿ ಪ್ರಕರಣದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ಯಾರೇ ಅಪರಾಧ ಮಾಡಿದರೂ ಕಾನೂನಿನಡಿ ಅದು ಅಪರಾಧವೇ ಎಂದು ಅವರು ದಿಶಾ ರವಿ ಬಂಧನದ ಕುರಿತು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಹ ದಿಶಾ ರವಿ ಬಂಧನವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Disha Ravi: ಟೂಲ್​ ಕಿಟ್​ ಪ್ರಕರಣ; ಐದು ದಿನ ಪೊಲೀಸ್​ ಕಸ್ಟಡಿಗೆ ದಿಶಾ ರವಿ

Greta Thunberg Toolkit | ಗ್ರೇಟಾ ಥನ್​ಬರ್ಗ್ ಟೂಲ್​ಕಿಟ್ ಪ್ರಕರಣ; ವಕೀಲೆ ನಿಖಿತಾ ಜಾಕೋಬ್​ಗೆ ಜಾಮೀನುರಹಿತ ವಾರೆಂಟ್ ಜಾರಿಗೊಳಿಸಿದ ಕೋರ್ಟ್

Published On - 1:01 pm, Mon, 15 February 21