Uttarakhand Glacier Burst: ಇಲ್ಲಿಯವರೆಗೆ 54 ಮೃತದೇಹಗಳು ಪತ್ತೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ
Uttarakhand: ಚಮೋಲಿ ಜಿಲ್ಲೆಯ ಜೋಷಿಮಠದಲ್ಲಿರುವ ತಪೋವನ್ ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಹೇಳಿದೆ.
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮ ಕುಸಿತ ದುರಂತದಲ್ಲಿ ಇಲ್ಲಿಯವರೆಗೆ 54 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸೋಮವಾರ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 174 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚಮೋಲಿ ಪೊಲೀಸರು ಹೇಳಿದ್ದಾರೆ.
ಹಿಮಾಲಯದದಲ್ಲಿ ಹಿಮನದಿ ಸ್ಫೋಟಗೊಂಡ ಪರಿಣಾಮ ಹಿಮಪಾತವಾಗಿ ಧೌಲಿಗಂಗಾ, ಅಲಕಾನಂದ ನದಿಯಲ್ಲಿ ಪ್ರವಾಹವುಂಟಾಗಿತ್ತು. ಈ ಪ್ರವಾಹದಲ್ಲಿ ಜಲವಿದ್ಯುತ್ ಯೋಜನೆ ಮತ್ತು 5 ಸೇತುವೆಗಳು ಕೊಚ್ಚಿಹೋಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಸೇನಾಪಡೆ, ಅರೆ ಸೇನಾಪಡೆ ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
A total of 53 bodies recovered so far; rescue operation underway at Tapovan Tunnel in Joshimath, Chamoli: State Disaster Response Force (SDRF)#UttarakhandDisaster
— ANI (@ANI) February 15, 2021
ಚಮೋಲಿ ಜಿಲ್ಲೆಯ ಜೋಷಿಮಠದಲ್ಲಿರುವ ತಪೋವನ್ ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಸುರಂಗದಿಂದ ಮೃತದೇಹಗಳನ್ನು ಹೊರಕ್ಕೆ ತರುವುದು ಕಷ್ಟವಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಕಮಾಂಡೆಂಟ್ ಪಿ.ಕೆ.ತಿವಾರಿ ಹೇಳಿದ್ದಾರೆ.
ಇದನ್ನೂ ಓದಿ : Uttarakhand Glacier Burst: ಏರಿಕೆಯಾಗುತ್ತಲೇ ಇದೆ ಹಿಮಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ; ಇಂದು 12 ಮೃತದೇಹಗಳು ಪತ್ತೆ
ಇಂಡೊ-ಟಿಬೆಟನ್ ಗಡಿ ಪೊಲೀಸರ ಪಡೆ ರೈನಿ ಎಂಬಲ್ಲಿ ಭಾನುವಾರ 6 ಮೃತದೇಹಗಳನ್ನು ಹೊರತೆಗೆದಿದೆ. ಅಲ್ಲಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರದ ತಪೋವನ್- ವಿಷ್ಣುಗಡ್ ಹೈಡಲ್ ಯೋಜನೆಗೆ ಹೆಚ್ಚು ಹಾನಿಯಾಗಿದೆ. ಅಲ್ಲಿದ್ದ ಅಣೆಕಟ್ಟು ಸಂಪೂರ್ಣ ಕೊಚ್ಚಿಹೋಗಿದೆ.