Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttarakhand Glacier Burst: ಏರಿಕೆಯಾಗುತ್ತಲೇ ಇದೆ ಹಿಮಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ; ಇಂದು 12 ಮೃತದೇಹಗಳು ಪತ್ತೆ

ನಿನ್ನೆ SDRF ತಂಡ ರೈನಿ ಗ್ರಾಮದ ಬಳಿ, 4200 ಮೀಟರ್​ ಎತ್ತರದಲ್ಲಿರುವ ಸರೋವರಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದೆ. ಸರೋವರದಿಂದ ನೀರು ನಿರಂತರವಾಗಿ ಹೊರಹೋಗುತ್ತಿದೆ ಎಂದು ಡಿಜಿಪಿ ಅಶೋಕ್​ ಕುಮಾರ್​ ತಿಳಿಸಿದ್ದಾರೆ.

Uttarakhand Glacier Burst: ಏರಿಕೆಯಾಗುತ್ತಲೇ ಇದೆ ಹಿಮಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ; ಇಂದು 12 ಮೃತದೇಹಗಳು ಪತ್ತೆ
Uttarakhand glacier disaster ರಕ್ಷಣಾ ಕಾರ್ಯಾಚರಣೆ ಚಿತ್ರ
Follow us
Lakshmi Hegde
|

Updated on:Feb 14, 2021 | 6:34 PM

ದೆಹಲಿ: ಉತ್ತರಾಖಂಡದಲ್ಲಿ ಫೆ.7ರಂದು ಘಟಿಸಿದ ಹಿಮಕುಸಿತದಲ್ಲಿ ಸಾವನ್ನಪ್ಪಿದರ ಸಂಖ್ಯೆ 50ಕ್ಕೆ ಏರಿಕೆಯಾಗಿದ್ದು, ಇನ್ನೂ 154 ಮಂದಿ ಪತ್ತೆಯಾಗಿಲ್ಲ. ಇವತ್ತು ಒಂದೇ ದಿನ 12 ಮೃತದೇಹಗಳನ್ನು ತಪೋವನ ಸುರಂಗದಿಂದ ಹೊರಗೆ ತೆಗೆಯಲಾಗಿದೆ. ಅಂದು ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತದಿಂದ ಧೌಲಿಗಂಗಾ ನದಿ ಉಕ್ಕಿ ಹರಿದು ಅಪಾರ ಹಾನಿಯನ್ನುಂಟು ಮಾಡಿದೆ. ರಿಷಿಗಂಗಾ ಜಲವಿದ್ಯುತ್​ ಶಕ್ತಿ ಯೋಜನೆ ಕೊಚ್ಚಿಕೊಂಡು ಹೋಗಿತ್ತು. ತಪೋವನದ ಬಳಿ ಸುರಂಗ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದ 160ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆಯಾಗಿದ್ದರು. ರಕ್ಷಣಾ ತಂಡಗಳು ಏಳುದಿನಗಳಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿಯವರೆಗೆ 50 ಮೃತದೇಹಗಳು ಸಿಕ್ಕಿವೆ.

ಚಮೋಲಿಯ ಜೋಶಿಮಠ್​ದಲ್ಲಿರುವ ತಪೋವನ ಸುರಂಗಮಾರ್ಗದಲ್ಲಿ ಡ್ರಿಲ್ಲಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಹೊಸ ಮಶಿನ್​ವೊಂದನ್ನೂ ಕೂಡ ಇಲ್ಲಿಗೆ ತರಲಾಗಿದೆ. ಇಂದು ಬೆಳಗ್ಗೆ ಎರಡು ಮೃತದೇಹಗಳು ಸುರಂಗದ ಬಳಿ ಸಿಕ್ಕಿದ್ದವು. ಮಧ್ಯಾಹ್ನದ ಹೊತ್ತಿಗೆ ಈ ಸಂಖ್ಯೆ 4ಕ್ಕೆ ಏರಿತು. ಹಾಗೇ 2 ಮೃತದೇಹಗಳು ರೈನಿ ಗ್ರಾಮದ ಬಳಿ ಸಿಕ್ಕಿವೆ. ಸುರಂಗದ ಬಳಿಯಷ್ಟೇ ಅಲ್ಲದೆ, ಧೌಲಿಗಂಗಾ ನದಿ ದಡದಲ್ಲಿ, ರೈನಿ ಸುತ್ತಲಿನ ಬ್ಯಾರೇಜ್​ ತಾಣಗಳಲ್ಲಿ ಕೂಡ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರು ಮೃತದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: Uttarakhand glacier burst ತುಂಡಾದ ರೀತಿಯಲ್ಲಿ.. ರಿಷಿಗಂಗಾ ಪವರ್ ಪ್ರಾಜೆಕ್ಟ್​ ಇಂಜಿನಿಯರ್​ನ​ ಮೃತದೇಹ ಪತ್ತೆ

ಇನ್ನು ನಿನ್ನೆ SDRF ತಂಡ ರೈನಿ ಗ್ರಾಮದ ಬಳಿ, 4200 ಮೀಟರ್​ ಎತ್ತರದಲ್ಲಿರುವ ಸರೋವರಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದೆ. ಸರೋವರದಿಂದ ನೀರು ನಿರಂತರವಾಗಿ ಹೊರಹೋಗುತ್ತಿದೆ. ಇದು ಅಪಾಯಕಾರಿವಲಯವಲ್ಲ. ಇಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲು ಸ್ಥಳವೊಂದನ್ನು ಗುರುತಿಸಲಾಗಿದೆ ಎಂದು ಉತ್ತರಾಖಂಡ್​ ಡಿಜಿಪಿ ಅಶೋಕ್​ ಕುಮಾರ್​ ತಿಳಿಸಿದ್ದಾರೆ.

ಇದನ್ನೂ ಓದಿ: Explainer | ಉತ್ತರಾಖಂಡ್​ನಲ್ಲಿ ಹಠಾತ್ ಪ್ರವಾಹ: ಏನಿದು ಹಿಮಕುಸಿತ? ಹೇಗೆ ಸಂಭವಿಸುತ್ತೆ?

Published On - 6:23 pm, Sun, 14 February 21

50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ