Uttarakhand glacier burst ತುಂಡಾದ ರೀತಿಯಲ್ಲಿ.. ರಿಷಿಗಂಗಾ ಪವರ್ ಪ್ರಾಜೆಕ್ಟ್ ಇಂಜಿನಿಯರ್ನ ಮೃತದೇಹ ಪತ್ತೆ
ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ರಿಷಿಗಂಗಾ ಪವರ್ ಪ್ರಾಜೆಕ್ಟ್ನ ಇಂಜಿನಿಯರ್ ಬಶರತ್ ಅಹ್ಮದ್ ಜರ್ಗರ್ ಅವರ ಮೃತದೇಹ ಪತ್ತೆಯಾಗಿದೆ. ರೇಣಿಗ್ರಾಮದಲ್ಲಿ ಶೋಧಕಾರ್ಯದ ವೇಳೆ ತುಂಡಾದ ರೀತಿಯಲ್ಲಿ 53 ವರ್ಷದ ಬಶರತ್ ಅಹ್ಮದ್ ಶವ ಪತ್ತೆಯಾಗಿದೆ.
ದೆಹರಾದೂನ್: ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ರಿಷಿಗಂಗಾ ಪವರ್ ಪ್ರಾಜೆಕ್ಟ್ನ ಇಂಜಿನಿಯರ್ ಬಶರತ್ ಅಹ್ಮದ್ ಜರ್ಗರ್ ಅವರ ಮೃತದೇಹ ಪತ್ತೆಯಾಗಿದೆ. ರೇಣಿಗ್ರಾಮದಲ್ಲಿ ಶೋಧಕಾರ್ಯದ ವೇಳೆ ತುಂಡಾದ ರೀತಿಯಲ್ಲಿ 53 ವರ್ಷದ ಬಶರತ್ ಅಹ್ಮದ್ ಶವ ಪತ್ತೆಯಾಗಿದೆ. Uttarakhand Glacier burst
JCBಯಿಂದ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬಶರತ್ ಅವರ ಮೃತದೇಹ ಪತ್ತೆಯಾಗಿದೆ. ಹಿಮಕುಸಿತದಲ್ಲಿ ಕೊಚ್ಚಿ ಹೋದ 5 ದಿನಗಳ ಬಳಿಕ ಪವರ್ ಪ್ರಾಜೆಕ್ಟ್ನ ಇಂಜಿನಿಯರ್ ಆಗಿದ್ದ ಬಶರತ್ ಅವರ ಮೃತದೇಹ ಪತ್ತೆಯಾಗಿದೆ.
ಬಶರತ್ ಅಹ್ಮದ್ ಮೂಲತಃ ಕಾಶ್ಮೀರದವರು. ಕಳೆದು 2 ವರ್ಷಗಳಿಂದ ಯೋಜನೆಯ ನಿರ್ವಹಣೆ ಮಾಡುತ್ತಿದ್ದ ಕುಂದನ್ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ, ಮೃತನ ಕುಟುಂಬಸ್ಥರು ಬಶರತ್ ಅವರ ಅಂತ್ಯಕ್ರಿಯೆಯನ್ನು ಕಾಶ್ಮೀರದಲ್ಲಿ ನೆರವೇರಿಸಲು ನಿರ್ಧರಿಸಿದ್ದಾರೆ.
Published On - 7:26 pm, Fri, 12 February 21