ಇಂದು ಚೆನ್ನೈಗೆ ಹೋಗಿದ್ದ ನರೇಂದ್ರ ಮೋದಿ ಮ್ಯಾಚ್ ನೋಡಿದ್ರಾ? ಸ್ಟೇಡಿಯಂ ಫೋಟೊ ಟ್ವೀಟ್​​​ ಮಾಡಿದ ಪ್ರಧಾನಿ

ಇಂದು ಮೋದಿ ಅವರು ತಮಿಳುನಾಡಿಗೆ ತೆರಳಿದ್ದಾರೆ. ಈ ವೇಳೆ ನಾನಾ ರೀತಿಯ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ.

ಇಂದು ಚೆನ್ನೈಗೆ ಹೋಗಿದ್ದ ನರೇಂದ್ರ ಮೋದಿ ಮ್ಯಾಚ್ ನೋಡಿದ್ರಾ? ಸ್ಟೇಡಿಯಂ ಫೋಟೊ ಟ್ವೀಟ್​​​ ಮಾಡಿದ ಪ್ರಧಾನಿ
ಮೋದಿ ಹಾಕಿರುವ ಚೆನ್ನೈ ಸ್ಟೇಡಿಯಂ
Follow us
ರಾಜೇಶ್ ದುಗ್ಗುಮನೆ
|

Updated on: Feb 14, 2021 | 8:12 PM

ಪ್ರಧಾನಿ ನರೇಂದ್ರ ಅವರು ಇಂದು ಚೆನ್ನೈಗೆ ಭೇಟಿ ನೀಡಿದ್ದರು. ನಾನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅಚ್ಚರಿ ಎಂಬಂತೆ, ಭಾರತ-ಇಂಗ್ಲೆಂಡ್​ ಟೆಸ್ಟ್​ ನಡೆಯುತ್ತಿರುವ ಚೆನ್ನೈ ಎಂ.ಎ. ಚಿದಂಬರಂ ಸ್ಟೇಡಿಯಂನ ಫೋಟೊ ಹಾಕಿಕೊಂಡಿದ್ದಾರೆ. ಹಾಗಾದರೆ, ಅವರೇನಾದರೂ ಕ್ರಿಕೆಟ್​ ಮ್ಯಾಚ್​ ನೋಡೋಕೆ ಹೋಗಿದ್ದರಾ? ಇಲ್ಲ. ವಿಮಾನದಲ್ಲಿ ಸಾಗುವಾಗ ತೆಗೆದ ಸ್ಟೇಡಿಯಂ ಚಿತ್ರವನ್ನು ಮೋದಿ ಪೋಸ್ಟ್​ ಮಾಡಿದ್ದಾರೆ ಅಷ್ಟೇ.

ಇಂದು ಮೋದಿ ಅವರು ತಮಿಳುನಾಡಿಗೆ ತೆರಳಿದ್ದಾರೆ. ಈ ವೇಳೆ ನಾನಾ ರೀತಿಯ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಚೆನ್ನೈಗೆ ತೆರಳುವಾಗ ವಿಮಾನದಿಂದ ಚಿದಂಬರಂ ಸ್ಟೇಡಿಯಂನ ಚಿತ್ರವನ್ನು ಕ್ಲಿಕ್ಕಿಸಿರುವ ಮೋದಿ ಟ್ವಿಟ್ಟರ್​ನಲ್ಲಿ ಹಾಕಿಕೊಂಡಿದ್ದಾರೆ. ಚೆನ್ನೈನಲ್ಲಿ ನಡೆದ ಆಸಕ್ತಿದಾಯಕ ಟೆಸ್ಟ್ ಪಂದ್ಯದ ನೋಟ ಎಂದು ಮೋದಿ ಕ್ರೀಡಾಂಗಣದ ಚಿತ್ರದೊಂದಿಗೆ ಬರೆದಿದ್ದಾರೆ.

ಕಳೆದ ಬಾರಿ ಮನ್​ ಕಿ ಬಾತ್​ನಲ್ಲಿ ಮಾತನಾಡಿದ್ದ ಮೋದಿ ಟೀಂ ಇಂಡಿಯಾಗೆ ಶುಭಾಶಯ ತಿಳಿಸಿದ್ದರು. ಈ ತಿಂಗಳು ಕ್ರಿಕೆಟ್​ನಿಂದ ನಾವು ಒಳ್ಳೆಯ ಸುದ್ದಿ ಪಡೆದಿದ್ದೇವೆ. ನಮ್ಮ ಕ್ರಿಕೆಟ್ ತಂಡವು ಆರಂಭಿಕ ತೊಂದರೆ ಅನುಭವಿಸಿತ್ತು. ನಂತರ ಉತ್ತಮ ಕಂಬ್ಯಾಕ್​ ಮಾಡಿ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದಿತು. ತಂಡದ ಪರಿಶ್ರಮ ಪ್ರೇರೆಪಿಸುವಂತಿದೆ ಎಂದಿದ್ದರು.

ಇದನ್ನೂ ಓದಿ: Rishab Pant: ಆಹಾ ಅದೆಂತಹ ಅದ್ಭುತ ಕ್ಯಾಚ್​!: ಟ್ರೋಲಿಗರಿಗೆ ಉತ್ತರ ನೀಡುತ್ತಲೇ ಇದ್ದಾರೆ ರಿಷಬ್​ ಪಂತ್​

ಎರಡನೇ ಟೆಸ್ಟ್​ನಲ್ಲಿ ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಟೀಂ ಇಂಡಿಯಾ 329ರನ್​ ಗಳಿಸಿತ್ತು. ಇದನ್ನು ಬೆನ್ನುಹತ್ತಿದ ಇಂಗ್ಲೆಂಡ್​ ಕೇವಲ 161ರನ್​​ಗಳಿಗೆ ಆಲ್​ಔಟ್​ ಆಗಿತ್ತು. ಸದ್ಯ, ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ, 54 ರನ್​ಗಳಿಗೆ ಒಂದು ವಿಕೆಟ್​ ಕಳೆದುಕೊಂಡಿದೆ. ಈ ಮೂಲಕ 249 ರನ್​​ಗಳ ಮುನ್ನಡೆ ಕಾಯ್ದುಕೊಂಡಿದೆ.

ಇದನ್ನೂ ಓದಿ: PM Modi in Tamil Nadu: ಅರ್ಜುನ್ ಟ್ಯಾಂಕ್ ಸೇನೆಗೆ ಹಸ್ತಾಂತರ; ತಮಿಳುನಾಡು ರೈತರ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ