Greta Thunberg “Toolkit” Case | ಬೆಂಗಳೂರಿನ ಯುವ ಹವಾಮಾನ ಹೋರಾಟಗಾರ್ತಿ ಬಂಧನ

ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿದ್ಧವಾಗಿದ್ದ ಹೋರಾಟದ ರೂಪರೇಷೆವನ್ನು ಬೇರೆಯವರಿಗೆ ಕಳುಹಿಸಿದ್ದು ರೈತರ ಪ್ರತಿಭಟನೆ ವೇಳೆ ‌‌ಕುಮ್ಮಕ್ಕು ನೀಡಿದ ಆರೋಪ ಬೆಂಗಳೂರು ಮೂಲದ ಹೋರಾಟಗಾರ್ತಿ ದಿಶಾ ರವಿ ಮೇಲೆ ಕೇಳಿ ಬಂದಿದ್ದು ದೆಹಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

Greta Thunberg Toolkit Case | ಬೆಂಗಳೂರಿನ ಯುವ ಹವಾಮಾನ ಹೋರಾಟಗಾರ್ತಿ ಬಂಧನ
ಗ್ರೇಟಾ ಥನ್ ಬರ್ಗ್ (ಎಡ) ದಿಶಾ ರವಿ (ಬಲ)
Follow us
ಆಯೇಷಾ ಬಾನು
|

Updated on:Feb 14, 2021 | 12:19 PM

ಬೆಂಗಳೂರು: ಸ್ವೀಡಿಶ್​ ಹವಾಮಾನ ಹೋರಾಟಗಾರ್ತಿ  ಗ್ರೇಟಾ ಥನ್​ ಬರ್ಗ್​ ಮತ್ತು ಇತರರು ಭಾರತದ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದ,  “ಟೂಲ್​ಕಿಟ್​”ನ್ನು  ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿದ್ದ ಆರೋಪದಡಿ ಬೆಂಗಳೂರಿನ “ಫ್ರೈಡೇ ಫಾರ್ ಫ್ಯೂಚರ್” ಅಭಿಯಾನದ ಸಂಸ್ಥಾಪಕರಲ್ಲಿ ಒಬ್ಬರಾದ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.  ಈ ಬಗ್ಗೆ NDTVಯಲ್ಲಿ ವರದಿಯಾಗಿದೆ.

ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿದ್ಧವಾಗಿದ್ದ ಹೋರಾಟದ ರೂಪರೇಷೆವನ್ನು ಬೇರೆಯವರಿಗೆ ಕಳುಹಿಸಿದ್ದು ರೈತರ ಪ್ರತಿಭಟನೆ ವೇಳೆ ‌‌ಕುಮ್ಮಕ್ಕು ನೀಡಿದ ಆರೋಪ ಬೆಂಗಳೂರು ಮೂಲದ ಹೋರಾಟಗಾರ್ತಿ ದಿಶಾ ರವಿ ಮೇಲೆ ಕೇಳಿ ಬಂದಿದ್ದು ದೆಹಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ದಿಶಾ ರವಿ, ಬೆಂಗಳೂರಿನ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಮೌಂಟ್​ ಕಾರ್ಮಲ್​ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಳೆ. ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿವೆ. ಖಲಿಸ್ತಾನಿ ಗುಂಪಿನ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂದು ಕರೆದುಕೊಳ್ಳುವ ಸಂಸ್ಥೆಯಿಂದ ಈ ಟೂಲ್​ಕಿಟ್ ಸೃಷ್ಟಿಯಾಗಿದೆ ಎಂದು ಈ ಹಿಂದೆ ದೆಹಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.

ಫೆಬ್ರವರಿ 4ರಂದು ಸ್ವೀಡಿಶ್​ ಹವಾಮಾನ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ಮಾಡಿದ್ದ ಟೂಲ್​ಕಿಟ್ ಟ್ವೀಟ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಗಣರಾಜ್ಯೋತ್ಸವದಂದು ರೈತರ  ಟ್ರ್ಯಾಕ್ಟರ್​  ರ‍್ಯಾಲಿಯಲ್ಲಿ ನಡೆದ ಹಿಂಸಾಚಾರದ ನಂತರ ಇವರ ಈ ಟ್ವೀಟ್ ಪ್ರತಿಭಟನೆಯ ಬಗ್ಗೆ ಜಾಗತಿಕ ಗಮನವನ್ನು ಸೆಳೆಯಲು ಸಹಾಯಕವಾಗಿತ್ತು.

Greta Thunberg

ಗ್ರೇಟಾ ಥನ್ ಬರ್ಗ್

Disha ravi

ದಿಶಾ ರವಿ

ಇದನ್ನೂ ಓದಿ: Nobel Peace Prize 2021 ನೊಬೆಲ್ ಶಾಂತಿ ಪ್ರಶಸ್ತಿ: 2021ರಲ್ಲಿ ಕಣದಲ್ಲಿರುವ ಪ್ರಮುಖರು ಯಾರು?

Published On - 11:42 am, Sun, 14 February 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್