AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nobel Peace Prize 2021 ನೊಬೆಲ್ ಶಾಂತಿ ಪ್ರಶಸ್ತಿ: 2021ರಲ್ಲಿ ಕಣದಲ್ಲಿರುವ ಪ್ರಮುಖರು ಯಾರು?

ವಿಶ್ವ ಆರೋಗ್ಯ ಸಂಸ್ಥೆಯ ಹೆಸರು ಸಹ ನೊಬೆಲ್ ಪುರಸ್ಕಾರ ಪಡೆಯುವ ಸ್ಪರ್ಧಿಗಳ ಪಟ್ಟಿಯಲ್ಲಿದೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಬಡರಾಷ್ಟ್ರಗಳಿಗೆ ನೀಡಿದ ನೆರವಿನ ಹಿನ್ನೆಲೆಯಲ್ಲಿ WHO ಸಂಘಟನೆಯ ಹೆಸರನ್ನು ಸೂಚಿಸಲಾಗಿದೆ.

Nobel Peace Prize 2021 ನೊಬೆಲ್ ಶಾಂತಿ ಪ್ರಶಸ್ತಿ: 2021ರಲ್ಲಿ ಕಣದಲ್ಲಿರುವ ಪ್ರಮುಖರು ಯಾರು?
ನೊಬೆಲ್ ಪುರಸ್ಕಾರ
guruganesh bhat
| Edited By: |

Updated on: Feb 02, 2021 | 3:02 PM

Share

2021ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ (Nobel Peace Prize ) ಜಾಗತಿಕವಾಗಿ ಹಲವರ ಹೆಸರು ನಾಮನಿರ್ದೇಶನಗೊಂಡಿದೆ. 53 ಸಾವಿರ ನಾಗರಿಕರಿಗೆ ಮತದಾನದ ಹಕ್ಕುಗಳಿಗಾಗಿ ಹೋರಾಡಿದ ಸ್ಟೇಸಿ ಅಬ್ರಾಮ್ಸ್, ಡೊನಾಲ್ಡ್ ಟ್ರಂಪ್ ಅಳಿಯ ಜೇರ್ಡ್ ಕುಷ್ನರ್, ನಿರಾಶ್ರಿತರ ಪರ ಕೆಲಸ ಮಾಡುತ್ತಿರುವ ಅಮೆರಿಕನ್ ನೇಷನ್ ಹೈಕಮಿಷನರ್ ಫಾರ್ ರೆಪ್ಯೂಜಿಸ್, ನ್ಯಾಟೋ ಹೆಸರುಗಳು ಮುಂಚೂಣಿಯಲ್ಲಿವೆ. ಕಳೆದ ರವಿವಾರವಷ್ಟೇ ನಾಮನಿರ್ದೇಶನದ ಅವಧಿ ಮುಕ್ತಾಯಗೊಂಡಿತ್ತು.

ಸ್ಟೇಸಿ ಅಬ್ರಹಾಂ ಅಮೆರಿಕದ ಬುಡಕಟ್ಟು ಜನಾಂಗಗಳ ಪರ ಹೋರಾಟದಲ್ಲಿ ಮುನ್ನೆಲೆಯಲ್ಲಿ ಕೇಳುವ ಹೆಸರಾಗಿದ್ದು, ವಕೀಲರಾಗಿ, ಲೇಖಕರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಇಸ್ರೇಲ್ ಯುಎಇ ನಡುವಿನ ಶಾಂತಿ ಒಪ್ಪಂದ ಏರ್ಪಡಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಅಮೆರಿಕಾ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ ಹಲವರ ಹೆಸರು ಶಾಂತಿ ಪುರಸ್ಕಾರದ ಪಟ್ಟಿಯಲ್ಲಿದೆ.

ಫ್ರಾಯಡೇ ಫಾರ್ ಫ್ಯೂಚರ್, ಗ್ರೇಟಾ ಥನ್​ಬರ್ಗ್

16ರ ಬಾಲೆ ಗ್ರೇಟಾ ಥನ್​ಬರ್ಗ್ ಹವಾಮಾನ ಬದಲಾವಣೆ ನಂತರ ಹೋರಾಟದ ನಂತರ ಆರಂಭವಾದ ಫ್ರಾಯಡೇ ಫಾರ್ ಫ್ಯೂಚರ್ ಸಂಘಟನೆಯ ಹೆಸರು ಸಹ ಜಾಗತಿಕ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದೆ. ಶುಕ್ರವಾರಗಳಂದು ತಮ್ಮ ಶಾಲೆಗಳಿಗೆ ರಜಾ ಹಾಕಿ ಹವಾಮಾನ ಬದಲಾವಣೆಯನ್ನು ತಡೆಗಟ್ಟುವ ಕುರಿತು ಈ ಸಂಸ್ಥೆ ಕೆಲಸ ಮಾಡುತ್ತಿದೆ. ಗ್ರೆಟಾ ಥನ್​ಬರ್ಗ್ ಹೆಸರು ಸಹ ಈಗಾಗಲೇ ನಾಮನಿರ್ದೇಶನಗೊಂಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಹೆಸರು ಸಹ ನೊಬೆಲ್ ಪುರಸ್ಕಾರ ಪಡೆಯುವ ಸ್ಪರ್ಧಿಗಳ ಪಟ್ಟಿಯಲ್ಲಿದೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಬಡರಾಷ್ಟ್ರಗಳಿಗೆ ನೀಡಿದ ನೆರವಿನ ಹಿನ್ನೆಲೆಯಲ್ಲಿ WHO ಸಂಘಟನೆಯ ಹೆಸರನ್ನು ಸೂಚಿಸಲಾಗಿದೆ.

ನಾಗರಿಕ ಹಕ್ಕುಗಳ ಪರ IUSTITIA ಎಂಬ ಪೋಲ್ಯಾಂಡ್​ನ ನ್ಯಾಯಮೂರ್ತಿಗಳ ಸಂಘಟನೆ ಸಹ ಕಣದಲ್ಲಿದೆ. ಪಶ್ಚಿಮ ಸಹರಾ ಪ್ರಾಂತ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಹೋರಾಡುತ್ತಿರುವ ಅಮಿನೇಚು ಹೈದರ್ ಅವರು ಸಹ ಈ ಪಟ್ಟಿಯಲ್ಲಿದ್ದು, ‘ಸಹರಾದ ಗಾಂಧಿ’ ಎಂದೇ ಅವರು ಖ್ಯಾತರಾಗಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಸೇನಾ ಕ್ರಾಂತಿ.. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ಬಂಧನ