Amazon CEO ಹುದ್ದೆಯಿಂದ ಕೆಳಗಿಳಿಯಲು ಸ್ಥಾಪಕ ಜೆಫ್ ಬೈಜೋಸ್ ನಿರ್ಧಾರ
Amazon.com Inc ಅಮೇಜಾನ್.ಕಾಮ್ ಇಂಕ್ ಮಂಗಳವಾರ ಸಂಸ್ಥಾಪಕ ಜೆಫ್ ಬೆಜೋಸ್ ಸಿಇಒ ಹುದ್ದೆಯಿಂದ ಕೆಳಗಿಳಿಯುವ ಬಗ್ಗೆ ತಿಳಿಸಿದೆ. ಕಂಪನಿಯು ತನ್ನ ತ್ರೈಮಾಸಿಕದಲ್ಲಿ 125 ಬಿಲಿಯನ್ ಡಾಲರ್ ವಸ್ತು ಮಾರಾಟ ಮಾಡಿದೆ...
ಜಗತ್ತಿನ ಅತಿ ದೊಡ್ಡ ಇ-ಕಾಮರ್ಸ್ ದೈತ್ಯ ಸಂಸ್ಥೆ ಅಮೇಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿಯಲು ಅಮೇಜಾನ್ ಕಂಪನಿಯ ಸ್ಥಾಪಕ ಜೆಫ್ ಬೈಜೋಸ್ Jeff Bezos ನಿರ್ಧಾರ ಮಾಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ತ್ಯಜಿಸುವುದಾಗಿ ಜೆಫ್ ಮಂಗಳವಾರ ತಿಳಿಸಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ 125 ಬಿಲಿಯನ್ ಡಾಲರ್ ವಸ್ತು ಮಾರಾಟ ಮಾಡಿ ಅಮೇಜಾನ್ ಕಂಪನಿ ನಿರೀಕ್ಷೆಗೂ ಮೀರಿದ ವಹಿವಾಟು ನಡೆಸಿತ್ತು.
Amazon.com Inc ಅಮೇಜಾನ್.ಕಾಮ್ ಇಂಕ್ ಮಂಗಳವಾರ ಸಂಸ್ಥಾಪಕ ಜೆಫ್ ಬೆಜೋಸ್ ಸಿಇಒ ಹುದ್ದೆಯಿಂದ ಕೆಳಗಿಳಿಯುವ ಬಗ್ಗೆ ತಿಳಿಸಿದೆ. ಕಂಪನಿಯು ತನ್ನ ತ್ರೈಮಾಸಿಕದಲ್ಲಿ 125 ಬಿಲಿಯನ್ ಡಾಲರ್ ವಸ್ತು ಮಾರಾಟ ಮಾಡಿದೆ. ಮೂರನೇ ತ್ರೈಮಾಸಿಕದಲ್ಲಿ ಆಗಿರುವ ಈ ಪರಿವರ್ತನೆಯಿಂದಾಗಿ ಪ್ರಸ್ತುತ ಕ್ಲೌಡ್ ಕಂಪ್ಯೂಟಿಂಗ್ ಮುಖ್ಯಸ್ಥ ಆಂಡಿ ಜಾಸ್ಸಿ ಅಮೇಜಾನ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
‘ಅಮೇಜಾನ್ ಇಂದು ಏನಾಗಿದೆಯೊ ಅದಕ್ಕೆ ಅದರ ಆವಿಷ್ಕಾರ ಕಾರಣ’ ಇದೀಗ ನಾನು ಅಮೇಜಾನ್ನಲ್ಲಿ ಅದರ ಸೃಜನಶೀಲತೆಯ ಉತ್ತುಂಗವನ್ನು ನೋಡುತ್ತಿದ್ದೇನೆ. ಪರಿವರ್ತನೆಗೆ ಇದು ಸೂಕ್ತ ಸಮಯವಾಗಿದೆ. ಸಿಇಒ ಹುದ್ದೆಯನ್ನು ಜೆಸ್ಸಿಗೆ ಹಸ್ತಾಂತರಿಸುವ ಮೂಲಕ ಮೂರನೇ ತ್ರೈಮಾಸಿಕದಲ್ಲಿ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಪರಿವರ್ತನೆಯಾಗಲಿದೆ ಎಂದು ಜೆಫ್ ಹೇಳಿದ್ದಾರೆ.
Published On - 8:44 am, Wed, 3 February 21