AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

Households with Piped Natural Gas facility would not get LPG supply: ಸರ್ಕಾರವು ಎಲ್​ಪಿಜಿ ಸಪ್ಲೈ ಮತ್ತು ಡಿಸ್ಟ್ರಿಬ್ಯೂಶನ್ ಆರ್ಡರ್​ನಲ್ಲಿ ತಿದ್ದುಪಡಿ ಮಾಡಿದೆ. ಕೊಳವೆ ನೈಸರ್ಗಿಕ ಅನಿಲ ಅಥವಾ ಪಿಎನ್​ಜಿ ಸೌಲಭ್ಯ ಇರುವವರಿಗೆ ಎಲ್​ಪಿಜಿ ಸಿಗುವುದಿಲ್ಲ. ಪಿಎನ್​ಜಿ ಮತ್ತು ಎಲ್​ಎನ್​ಜಿ ಎರಡನ್ನೂ ಬಳಸುತ್ತಿರುವ ಕುಟುಂಬಗಳು, ಎಲ್​ಪಿಜಿ ಸಂಪರ್ಕವನ್ನು ಮರಳಿಸಬೇಕಾಗುತ್ತದೆ.

ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ
ಪಿಎನ್​ಜಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 15, 2026 | 12:04 PM

Share

ನವದೆಹಲಿ, ಮಾರ್ಚ್ 15: ಸರ್ಕಾರವು ಎಲ್​ಪಿಜಿ ಪೂರೈಕೆಯಲ್ಲಿ ತೊಂದರೆ ಆಗಿಲ್ಲ ಎಂದು ಹೇಳುತ್ತಿದ್ದರೂ ಗ್ಯಾಸ್ ಸಿಲಿಂಡರ್ (LPG cylinder) ಸಿಗುವುದು ತಡವಾಗುತ್ತಿರುವುದು ಹೌದು. ಜನರೂ ಕೂಡ ಎಂದಿಗಿಂತ ಹೆಚ್ಚು ಬೇಗ ಎಲ್​ಪಿಜಿ ಗ್ಯಾಸ್ ಬುಕಿಂಗ್ ಮಾಡುತ್ತಿರುವುದೂ ಹೌದು. ಇದೇ ವೇಳೆ, ಎಲ್​ಪಿಜಿ ಪೂರೈಕೆ ಮತ್ತು ವಿತರಣೆ ನಿಯಂತ್ರಣ ಆದೇಶದಲ್ಲಿ (LPG supply and distribution order) ಸರ್ಕಾರ ಬದಲಾವಣೆ ಮಾಡಿದೆ. ಪೈಪ್ಡ್ ಗ್ಯಾಸ್ ಅಥವಾ ಪಿಎನ್​ಜಿ (PNG- Piped Natural Gas) ಸೌಲಭ್ಯ ಹೊಂದಿರುವ ಜನರಿಗೆ ಎಲ್​ಪಿಜಿ ಸಿಗದಂತೆ ಕಾನೂನು ಬದಲಾಯಿಸಲಾಗಿದೆ.

ಇದರಂತೆ ಪಿಎನ್​ಜಿ ಸಂಪರ್ಕ ಇರುವ ಮನೆಗಳಿಗೆ ಹೊಸ ಎಲ್​ಪಿಜಿ ಸಂಪರ್ಕ ಸಿಗೋದಿಲ್ಲ. ಈಗಾಗಲೇ ಎಲ್​ಪಿಜಿ ಕೆನೆಕ್ಷನ್ ಹೊಂದಿರುವ ಪಿಎನ್​ಜಿ ಗ್ರಾಹಕರಿಗೆ ಎಲ್​ಪಿಜಿ ಸಿಲಿಂಡರ್ ಪೂರೈಕೆ ಸಿಗೋದಿಲ್ಲ. ಸದ್ಯ ಪಿಎನ್​ಜಿ ಮತ್ತು ಎಲ್​ಪಿಜಿ ಎರಡೂ ಸಂಪರ್ಕ ಹೊಂದಿರುವ ಕುಟುಂಬಗಳು ತಮ್ಮ ಎಲ್​ಪಿಜಿ ಸೌಲಭ್ಯವನ್ನು ಬಿಟ್ಟುಕೊಡಬೇಕಾಗುತ್ತದೆ.

ಇದನ್ನೂ ಓದಿ: ಗ್ಯಾಸ್​ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?

ಭಾರತದಲ್ಲಿ ಒಂದೂವರೆ ಕೋಟಿಗೂ ಅಧಿಕ ಮನೆಗಳು ಪೈಪ್ಡ್ ನ್ಯಾಚುರಲ್ ಗ್ಯಾಸ್ ಅಥವಾ ಪಿಎನ್​ಜಿ ಕನೆಕ್ಷನ್ ಹೊಂದಿವೆ. ಸದ್ಯದ ತೈಲ ಬಿಕ್ಕಟ್ಟಿನಲ್ಲಿ ಸರ್ಕಾರವು ಗೃಹಬಳಕೆಯ ಪಿಎನ್​ಜಿ ಸಂಪರ್ಕಗಳಿಗೆ ಪೂರೈಕೆ ಮಾಡಲು ಮೊದಲ ಆದ್ಯತೆ ಕೊಡುತ್ತಿದೆ. ಹೀಗಾಗಿ, ಪಿಎನ್​ಜಿ ಗ್ರಾಹಕರು ಗ್ಯಾಸ್ ಕೊರತೆ ಬಗ್ಗೆ ಹೆಚ್ಚು ಕಳವಳಪಡುವ ಅವಶ್ಯಕತೆ ಇಲ್ಲ.

ಸದ್ಯ ಪಿಎನ್​ಜಿ ದರಗಳು ಪ್ರತೀ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಪಿಎನ್​ಜಿ ಗ್ಯಾಸ್​ಗೆ 45 ರೂನಿಂದ 60 ರೂವರೆಗೂ ಇವೆ. ಜಿಎಐಎಲ್​ನ ಪಿಎನ್​ಜಿ ದರ ಬೆಂಗಳೂರಿನಲ್ಲಿ ಒಂದು ಎಸ್​ಸಿಎಂಗೆ 52 ರೂ ಇದೆ. ಒಂದು ಎಸ್​ಸಿಎಂ ಎಂದರೆ ಅಂದಾಜು 800 ಗ್ರಾಮ್ ಇರುತ್ತದೆ. ವಿದ್ಯುತ್ ದರದ ರೀತಿ ಪಿಎನ್​ಜಿ ಕನೆಕ್ಷನ್​ನಲ್ಲಿ ನೀವು ಬಳಸುವ ಗ್ಯಾಸ್ ಪ್ರಮಾಣದ ಮೇಲೆ ಬಿಲ್ ಬರುತ್ತದೆ.

ಸರ್ಕಾರ ಸದ್ಯ ಎಲ್​ಪಿಜಿ ಗ್ರಾಹಕರನ್ನು ಪಿಎನ್​ಜಿ ಸಂಪರ್ಕಕ್ಕೆ ವರ್ಗವಾಗುವಂತೆ ಮನವೊಲಿಸುವ ಕೆಲಸ ಮಾಡುತ್ತಿದೆ. ಸದ್ಯ ಎಲ್ಲಾ ನಗರ ಮತ್ತು ಪ್ರದೇಶಗಳಲ್ಲಿ ಪಿಎನ್​ಜಿ ನೆಟ್ವರ್ಕ್ ಇಲ್ಲ. ನೀವಿರುವ ಪ್ರದೇಶದಲ್ಲಿ ಪಿಎನ್​ಜಿ ಸಂಪರ್ಕ ಲಭ್ಯ ಇದ್ದರೆ ಅದನ್ನು ಹೊಂದುವುದು ಉತ್ತಮ. ಸರ್ಕಾರವು ಇಂಥ 60 ಲಕ್ಷ ಮನೆಗಳನ್ನು ಗುರುತಿಸಿದ್ದು, ಅವು ಪಿಎನ್​ಜಿ ಸಂರ್ಪಕ ಪಡೆಯಲು ಅವಕಾಶ ಇರುತ್ತದೆ.

ಇದನ್ನೂ ಓದಿ: LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂಪಾಯಿಗೆ ಏರಿಕೆ?

ಭಾರತದಲ್ಲಿ ಸದ್ಯ 32 ಕೋಟಿಗೂ ಅಧಿಕ ಎಲ್​ಪಿಜಿ ಗ್ರಾಹಕರಿದ್ದಾರೆ. ಭಾರತಕ್ಕೆ ಬೇಕಅದ ಶೇ. 60ರಷ್ಟು ಎಲ್​ಪಿಜಿಯನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಈ ಆಮದಿತ ಎಲ್​ಪಿಜಿಯಲ್ಲಿ ಶೇ. 90ರಷ್ಟವು ಈಗ ಯುದ್ಧವಾಗುತ್ತಿರುವ ಗಲ್ಫ್ ರಾಷ್ಟ್ರಗಳಿಂದ ಬರಬೇಕು. ಹೀಗಾಗಿ, ಎಲ್​ಪಿಜಿ ಪೂರೈಕೆ ಭಾರತದಲ್ಲಿ ವ್ಯತ್ಯಯ ಆಗಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ