Greta Thunberg Toolkit: ದಬ್ಬಾಳಿಕೆಯಿಂದ ಬಂಧಿಸದಿರುವಂತೆ ತಡೆಯಾಜ್ಞೆ ನೀಡಿ; ಬಾಂಬೆ ಹೈಕೋರ್ಟ್ ಮೊರೆ ಹೋದ ವಕೀಲೆ ನಿಖಿತಾ ಜಾಕೋಬ್

Greta Thunberg toolkit Case: ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಪೇಜ್​ಗಳು ತಮ್ಮ ಫೋಟೊ ಮತ್ತು ಮಾಹಿತಿಯನ್ನು ಇಟ್ಟುಕೊಂಡು ಅಪಪ್ರಚಾರದಲ್ಲಿ ನಿರತವಾಗಿವೆ. ಇದರಿಂದ ತಮ್ಮ ವ್ಯಕ್ತಿತ್ವಕ್ಕೆ ಕುಂದು ಉಂಟಾಗುತ್ತಿದ್ದು, ಈ ಎಲ್ಲ ಕ್ರಮಗಳಿಗೂ ತಡೆ ಒಡ್ಡುವಂತೆ ಕೋರಿ ಮನವಿ ಮಾಡಿದ್ದಾರೆ.

Greta Thunberg Toolkit: ದಬ್ಬಾಳಿಕೆಯಿಂದ ಬಂಧಿಸದಿರುವಂತೆ ತಡೆಯಾಜ್ಞೆ ನೀಡಿ; ಬಾಂಬೆ ಹೈಕೋರ್ಟ್ ಮೊರೆ ಹೋದ ವಕೀಲೆ ನಿಖಿತಾ ಜಾಕೋಬ್
ಸ್ವತಃ ವಕೀಲೆ ಆಗಿರುವ ನಿಖಿತಾ ಜಾಕೋಬ್, ಸುಳ್ಳು ಮತ್ತು ಕ್ಷುಲ್ಲಕ ಆರೋಪದಡಿ ತಮ್ಮನ್ನು ಸಿಲುಕಿಸುವ ಸಂಚು ಹೂಡಲಾಗಿದ್ದು, ಬಂಧಿಸದಿರುವಂತೆ ಆಜ್ಞೆ ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ.
Follow us
guruganesh bhat
|

Updated on: Feb 15, 2021 | 3:47 PM

ಮುಂಬೈ: ಗ್ರೇಟಾ ಥನ್​ಬರ್ಗ್ ಟೂಲ್​ಕಿಟ್ ಪ್ರಕರಣದಲ್ಲಿ ಜಾಮೀನು ರಹಿತ ವಾರಂಟ್ ಜಾರಿಯಾಗುತ್ತಿದ್ದಂತೆ ವಕೀಲೆ ನಿಖಿತಾ ಜಾಕೋಬ್ (Nikita Jacob) ಬಾಂಬೆ ಹೈಕೋರ್ಟ್​ನ (Bombay High Court) ಮೊರೆ ಹೋಗಿದ್ದಾರೆ. ನಾಲ್ಕು ವಾರಗಳ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಅವರು, ಈ ಅವಧಿಯಲ್ಲಿ ಯಾರೂ ಸಹ ದಬ್ಬಾಳಿಕೆಯಿಂದ ತಮ್ಮನ್ನು ಬಂಧಿಸದಿರುವಂತೆ ಆಜ್ಞೆ ನೀಡುವಂತೆ ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. (Greta Thunberg toolkit Case)

ತಮ್ಮ ಮನವಿಯಲ್ಲಿ, ಗ್ರೇಟಾ ಥನ್​ಬರ್ಗ್​ ಟೂಲ್​ಕಿಟ್​ಗೆ ಸಂಬಂಧಿಸಿ ತಮಗೆ ಯಾವುದೇ ಸಂಬಂಧವಿಲ್ಲ ಎಂದಿರುವ ಅವರು, ಟೂಲ್​ಕಿಟ್ ಮೂಲಕ ದೇಶದಲ್ಲಿ ಗಲಭೆ ಹರಡುವ ರಾಜಕೀಯ, ಧಾರ್ಮಿಕ ಅಥವಾ ಆರ್ಥಿಕ ಉದ್ದೇಶವನ್ನೂ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಪೇಜ್​ಗಳು ತಮ್ಮ ಫೋಟೊ ಮತ್ತು ಮಾಹಿತಿಯನ್ನು ಇಟ್ಟುಕೊಂಡು ಅಪಪ್ರಚಾರದಲ್ಲಿ ನಿರತವಾಗಿವೆ. ಇದರಿಂದ ತಮ್ಮ ವ್ಯಕ್ತಿತ್ವಕ್ಕೆ ಕುಂದು ಉಂಟಾಗುತ್ತಿದ್ದು, ಈ ಎಲ್ಲ ಕ್ರಮಗಳಿಗೂ ತಡೆ ಒಡ್ಡುವಂತೆ ಕೋರಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Disha Ravi | ಗ್ರೇಟಾ ಥನ್​ಬರ್ಗ್​ ಪೋಸ್ಟ್ ಮಾಡಿದ್ದ ಟೂಲ್​ಕಿಟ್​ನಲ್ಲಿ ಏನಿತ್ತು? ಅದನ್ನು ಹಂಚಿದ್ದ ದಿಶಾ ರವಿ ಯಾರು?

ಸ್ವತಃ ವಕೀಲೆ ಆಗಿರುವ ನಿಖಿತಾ ಜಾಕೋಬ್, ಸುಳ್ಳು ಮತ್ತು ಕ್ಷುಲ್ಲಕ ಆರೋಪದಡಿ ತಮ್ಮನ್ನು ಸಿಲುಕಿಸುವ ಸಂಚು ಹೂಡಲಾಗಿದ್ದು, ಬಂಧಿಸದಿರುವಂತೆ ಆಜ್ಞೆ ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ. ಫೆಬ್ರವರಿ 12ರಂದು ನಿಖಿತಾ ಜಾಕೋಬ್ ಮನೆಗೆ ಭೇಟಿ ನೀಡಿದ್ದ ದೆಹಲಿ ಪೊಲೀಸರು ವಿಚಾರಣೆಗೆ ಸಹಕರಿಸುವಂತೆ ಕೇಳಿದ್ದರು. ಅಂದು ಒಪ್ಪಿಗೆ ನೀಡಿದ್ದ ನಿಖಿತಾ ಜಾಕೋಬ್ ನಂತರ ಭೂಗತರಾಗಿದ್ದರು ಎಂದು ದೆಹಲಿ ಪೊಲೀಸರು ಆರೋಪ ಮಾಡಿದ್ದರು. ದೆಹಲಿ ಪೊಲೀಸರ ಮನವಿ ಆಲಿಸಿದ್ದ ದೆಹಲಿ ಕೋರ್ಟ್​ ಜಾಮೀನು ರಹಿತ ಬಂಧನ ವಾರಂಟ್​ನ್ನು ಹೊರಡಿಸಿತ್ತು. ಇದು ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿತ್ತು.