AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Farmers Protest: ರೈತ ಸಾವಿನ ಬಗ್ಗೆ ಸಚಿವ ಜೆ.ಪಿ. ದಲಾಲ್ ಹೇಳಿಕೆ; ಪ್ರತಿಕೃತಿ ದಹಿಸಿ ಚಳುವಳಿಗಾರರ ಆಕ್ರೋಶ

Farmers Protest: ಜೆ.ಪಿ. ದಲಾಲ್ ನೀಡಿರುವ ಈ ಹೇಳಿಕೆ ವಿರುದ್ಧ ಹರ್ಯಾಣದಲ್ಲಿ ಜನಾಕ್ರೋಶ ಹೆಚ್ಚಿದೆ. ರಾಜ್ಯ ಹೆದ್ದಾರಿಯ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿರುವ ರೈತರು ದಲಾಲ್ ಪ್ರತಿಕೃತಿಯನ್ನು ದಹಿಸಿದ್ದಾರೆ.

Farmers Protest: ರೈತ ಸಾವಿನ ಬಗ್ಗೆ ಸಚಿವ ಜೆ.ಪಿ. ದಲಾಲ್ ಹೇಳಿಕೆ; ಪ್ರತಿಕೃತಿ ದಹಿಸಿ ಚಳುವಳಿಗಾರರ ಆಕ್ರೋಶ
ಮುಂದುವರಿದ ರೈತ ಹೋರಾಟ
TV9 Web
| Edited By: |

Updated on:Apr 06, 2022 | 7:59 PM

Share

ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ರೈತರ ಬಗ್ಗೆ ಬೇಜಾವ್ದಾಬರಿ ಹೇಳಿಕೆ ನೀಡಿರುವ, ರಾಜ್ಯ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಜೆ.ಪಿ. ದಲಾಲ್ ವಿರುದ್ಧ ಹರ್ಯಾಣದ ವಿವಿಧೆಡೆಗಳಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ. ದಲಾಲ್ ಪ್ರತಿಕೃತಿಯನ್ನು ದಹಿಸುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವೀಡಿಯೋ ಒಂದರಲ್ಲಿ, ರೈತ ಚಳುವಳಿಯಲ್ಲಿ ಭಾಗಿಯಾಗಿ ಮೃತಪಟ್ಟ ರೈತರು ಮನೆಯಲ್ಲೇ ಉಳಿದಿದ್ದರೂ ಸಾವನ್ನಪ್ಪುತ್ತಿದ್ದರು ಎಂದು ಹೇಳಿದ್ದರು. ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಸುಮಾರು 200 ರೈತರು ಮೃತಪಟ್ಟಿರುವ ಬಗ್ಗೆ ಮಾಧ್ಯಮವೊಂದು ಕೇಳಿದ್ದ ಪ್ರಶ್ನೆಗೆ ದಲಾಲ್ ಹೀಗೆ ಉತ್ತರಿಸಿದ್ದರು.

‘ಒಂದರಿಂದ ಎರಡು ಲಕ್ಷ ಮಂದಿ ರೈತರಲ್ಲಿ, ಆರು ತಿಂಗಳ ಅವಧಿಯಲ್ಲಿ 200 ಜನರು ಸಾಯುವುದಿಲ್ಲವೇ? ಹೋರಾಟದಲ್ಲಿ ಪಾಲ್ಗೊಂಡು ಮೃತರಾದವರು ಮನೆಯಲ್ಲಿದ್ದರೂ ಮರಣ ಹೊಂದುತ್ತಿದ್ದರು’ ಎಂದು ದಲಾಲ್ ಮಾತನಾಡಿದ್ದರು. ಈ ಹೇಳಿಕೆ ನೀಡಿದ ಬಳಿಕ ದಲಾಲ್, ‘ನನ್ನ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ತಿರುಚಲಾಗಿದೆ. ಅಪಾರ್ಥ ಕಲ್ಪಿಸಲಾಗಿದೆ. ಅದರಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ರೈತರಿಗಾಗಿ ಕೆಲಸ ಮಾಡುವುದನ್ನು ನಾನು ಮುಂದುವರಿಸುತ್ತೇನೆ. ಯಾರಾದರೂ ಸಾವನ್ನಪ್ಪುವುದು ನೋವಿನ ಸಂಗತಿ’ ಎಂದು ಸ್ಪಷ್ಟೀಕರಣ ನೀಡಿದ್ದರು.

ಜೆ.ಪಿ. ದಲಾಲ್ ನೀಡಿರುವ ಈ ಹೇಳಿಕೆ ವಿರುದ್ಧ ಹರ್ಯಾಣದಲ್ಲಿ ಜನಾಕ್ರೋಶ ಹೆಚ್ಚಿದೆ. ರಾಜ್ಯ ಹೆದ್ದಾರಿಯ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿರುವ ರೈತರು ದಲಾಲ್ ಪ್ರತಿಕೃತಿಯನ್ನು ದಹಿಸಿದ್ದಾರೆ. ಆಲ್ ಇಂಡಿಯಾ ಕಿಸಾನ್ ಸಭಾ (AIKS) ಹರ್ಯಾಣ ವಿಭಾಗ ಕಾರ್ಯದರ್ಶಿ, ದಯಾನಂದ್ ಪೂನಿಯಾ ದಲಾಲ್ ಹೇಳಿಕೆಯನ್ನು ಖಂಡಿಸಿದ್ದಾರೆ. ಜೆ.ಪಿ. ದಲಾಲ್ ಪ್ರತಿಭಟನಾ ನಿರತ ರೈತರ ಸಾವನ್ನು ಗೇಲಿ ಮಾಡಿದ್ದಾರೆ. ರೈತರ ಹೋರಾಟವನ್ನು ಅವಮಾನ ಮಾಡಲು ಕೂಡ ಪ್ರಯತ್ನಿಸಿದ್ದಾರೆ ಎಂದು ಪೂನಿಯಾ ತಿಳಿಸಿದ್ದಾರೆ. ಹರ್ಯಾಣ ಭಿವಾನಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ರೈತ ಸಚಿವರ ಪ್ರತಿಕೃತಿ ದಹಿಸಿರುವ ಕುರಿತು ದಯಾನಂದ್ ಪೂನಿಯಾ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Farmers Protest: ರೈತ ಹೋರಾಟ ಸಂಘಟನೆಗೆ ಹರ್ಯಾಣದಲ್ಲಿ ‘ಮಹಾಪಂಚಾಯತ್’; ಸಹಸ್ರಾರು ರೈತರು ಭಾಗಿ

ರೈತರ ಹೋರಾಟ ಆರಂಭವಾದ ಬಳಿಕ, ಒಂದಿಲ್ಲೊಂದು ರೀತಿಯಲ್ಲಿ ಜೆ.ಪಿ. ದಲಾಲ್ ರೈತ ವಿರೋಧಕ್ಕೆ ಗುರಿಯಾಗುತ್ತಿದ್ದಾರೆ. ವಿವಾದಾತ್ಮಕ ಹೇಳಿಕೆಗಳ ಮೂಲಕ ರೈತ ಸಮುದಾಯದ ಆಕ್ರೋಶ ಎದುರಿಸುತ್ತಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿನ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವು 80 ದಿನಗಳನ್ನು ದಾಟಿ ಸಾಗುತ್ತಿದೆ. ಹೊಸ ಕೃಷಿ ಕಾನೂನುಗಳು ಬಂಡವಾಳಶಾಹಿಗಳಿಗೆ ಅನುಕೂಲಕರ, ರೈತರಿಗಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಹೊಸ ಕೃಷಿ ಕಾಯ್ದೆಗಳನ್ನು ಅಳವಡಿಸುವುದರಿಂದ ಕನಿಷ್ಠ ಬೆಂಬಲ ಬೆಲೆಗೆ (MSP) ಯಾವುದೇ ಕುತ್ತು ಉಂಟಾಗುವುದಿಲ್ಲ. ಮಂಡಿ ವ್ಯವಸ್ಥೆಗೂ ತೊಡಕಿಲ್ಲ. ಈ ವಿಷಯವಾಗಿ ಹರ್ಯಾಣದಲ್ಲಿ ಪ್ರತಿಭಟನೆ ನಡೆಸುವುದು ಅನಾವಶ್ಯಕ ಎಂದು ಜೆ.ಪಿ. ದಲಾಲ್ ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: Farmers Protest: ದೇಶವ್ಯಾಪಿ ರೈತ ಹೋರಾಟ, 40 ಲಕ್ಷ ಟ್ರ್ಯಾಕ್ಟರ್​ಗಳ ಚಳುವಳಿ: ರಾಕೇಶ್ ಟಿಕಾಯತ್

Published On - 2:56 pm, Mon, 15 February 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್