ಸುಶಾಂತ್​ ಸಹೋದರಿ ಮೀತು ಸಿಂಗ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡಿದ ಬಾಂಬೆ ಹೈಕೋರ್ಟ್​

ಸುಶಾಂತ್​ ಸಿಂಗ್ ಮಾಜಿ ಪ್ರಿಯತಮೆ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಆಘಾತಕಾರಿ ವಿಚಾರವನ್ನು ಬಿಚ್ಚಿದ್ದರು. ಸುಶಾಂತ್​ ಸಿಂಗ್​ಗೆ ನಿಷೇಧಿತ ಔಷಧಗಳನ್ನು ನೀಡಲು ಸಹೋದರಿಯರು ಡಾ. ತರುಣ್ ಕುಮಾರ್ ಜತೆ ಶಾಮೀಲಾಗಿದ್ದರು ಎಂದು ರಿಯಾ ಆರೋಪಿಸಿದ್ದರು.

ಸುಶಾಂತ್​ ಸಹೋದರಿ ಮೀತು ಸಿಂಗ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡಿದ ಬಾಂಬೆ ಹೈಕೋರ್ಟ್​
ಸುಶಾಂತ್​ ಸಿಂಗ್​
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Feb 15, 2021 | 3:26 PM

ಮುಂಬೈ: ದೇಶವ್ಯಾಪಿ ಸಂಚಲನ ಸೃಷ್ಟಿಸಿದ್ದ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಸಹೋದರಿ ಮೀತು ಸಿಂಗ್​ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವನ್ನು ಬಾಂಬೇ ಹೈಕೋರ್ಟ್​ ವಜಾ ಮಾಡಿದೆ. ಅವರ ಮತ್ತೋರ್ವ ಸಹೋದರಿಯಾದ ಪ್ರಿಯಾಂಕಾ ಸಿಂಗ್​ ವಿರುದ್ಧ ತನಿಖೆ ಮುಂದುವರಿಸಬಹುದು ಎಂದು ಕೋರ್ಟ್​ ಹೇಳಿದೆ.

ಸುಶಾಂತ್​ ಸಿಂಗ್ ಮಾಜಿ ಪ್ರಿಯತಮೆ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಆಘಾತಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದರು. ಸುಶಾಂತ್​ ಸಿಂಗ್​ಗೆ ನಿಷೇಧಿತ ಔಷಧಗಳನ್ನು ನೀಡಲು ಸಹೋದರಿಯರು ಡಾ. ತರುಣ್ ಕುಮಾರ್ ಜತೆ ಶಾಮೀಲಾಗಿದ್ದರು ಎಂದು ರಿಯಾ ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡಿದ್ದರು. ಈ ಪ್ರಕರಣ ರದ್ದು ಮಾಡುವಂತೆ ಸುಶಾಂತ್​ ಸಹೋದರಿಯರು ಬಾಂಬೆ ಹೈಕೋರ್ಟ್​ಗೆ ಮನವಿ ಮಾಡಿದ್ದರು.

 ಪ್ರಿಯಾಂಕಾ ಸಿಂಗ್ ವಿರುದ್ಧ ಕೇಳಿ ಬಂದ ಆರೋಪದಲ್ಲಿ ಹುರುಳಿದೆ ನ್ಯಾಯಮೂರ್ತಿ ಎಸ್​.ಎಸ್​. ಶಿಂಧೆ ಹಾಗೂ ಎಂಎಸ್​​ ಕಾರ್ನಿಕ್​ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿ ಜನವರಿ 7ರಂದು ತೀರ್ಪನ್ನು ಕಾಯ್ದಿರಿಸಿತ್ತು. ಈ ತೀರ್ಪನ್ನು ಇಂದು ನೀಡಲಾಗಿದೆ. ಪ್ರಿಯಾಂಕಾ ಸಿಂಗ್ ವಿರುದ್ಧ ಕೇಳಿ ಬಂದ ಆರೋಪದಲ್ಲಿ ಹುರುಳಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಹೀಗಾಗಿ, ಅವರ ವಿರುದ್ಧದ ತನಿಖೆ ಮುಂದುವರಿಯಬೇಕು. ಇದಕ್ಕೆ ಯಾವುದೇ ಅಡೆತಡೆ  ಉಂಟಾಗಬಾರದು ಎಂದು ಪೀಠ ಹೇಳಿದೆ. ಇದೇ ವೇಳೆ, ಮೀತು ಸಿಂಗ್​ ವಿರುದ್ಧದ ಪ್ರಕರಣವನ್ನು ರದ್ದು ಮಾಡಿದೆ.

ಕಳೆದ ವರ್ಷ ಜೂನ್​ 14ರಂದು ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆತ್ಮಹತ್ಯೆ ಹಿಂದೆ ಬಾಲಿವುಡ್​ ಮಂದಿಯ ಕೈವಾಡವಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ದೊಡ್ಡ ದೊಡ್ಡ ನಿರ್ಮಾಪಕರ ಹೆಸರು ಕೂಡ ಇದಕ್ಕೆ ತಳುಕು ಹಾಕಿಕೊಂಡಿತ್ತು.

ಇದನ್ನೂ ಓದಿ: ಸುಶಾಂತ್​ ಸಿಂಗ್​ ಸಂಬಂಧಿ ಹತ್ಯೆ ಯತ್ನ; ಬೈಕ್​ ಮೇಲೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು