Modipara vs Didir Doot: ಪಶ್ಚಿಮ ಬಂಗಾಳದಲ್ಲಿ ಆ್ಯಪ್ ಫೈಟ್! ಬಿಡುಗಡೆ ಆಯ್ತು ಮೋದಿ-ಮಮತಾ ಅಪ್ಲಿಕೇಶ್ನಗಳು!
ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿರುವ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕರು,ಕಾರ್ಯಕರ್ತರು ಆ್ಯಪ್ ಡೌನ್ಲೋಡ್ ಮಾಡುವಂತೆ ಕೋರುತ್ತಿದ್ದಾರೆ.
ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೇರಿದ ನಂತರ ಡಿಜಿಟಲ್ ಇಂಡಿಯಾದ ಕನಸನ್ನು ಜನರ ಮುಂದಿಟ್ಟರು. ಅದರ ಪರಿಣಾಮವಾಗಿ ಇಂದು ನಿಧಾನವಾಗಿ ಭಾರತ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅಂತಯೇ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ಚುನಾವಣೆಯ ಪ್ರಚಾರಕ್ಕೆ ಡಿಜಿಟಲೀಕರಣದ ಆಯಾಮ ನೀಡಿದ್ದಾರೆ. ಮೋದಿ, ಮೋದಿಪರ (ಮೋದಿಯ ನೆರೆಹೊರೆಯವರು) ಆ್ಯಪ್ ಬಿಡುಗಡೆ ಮಾಡಿದ್ದಾರೆ. ಇದು ಮಮತಾ ಬ್ಯಾನರ್ಜಿ ಬಿಡುಗಡೆ ಮಾಡಿರುವ, ದೀದಿರ್ ದೂತ್ (ದಿದಿಯ ಮೆಸೆಂಜರ್) ಆ್ಯಪ್ಗೆ ಕೌಂಟರ್ ಎನ್ನಲಾಗುತ್ತಿದೆ.
ಡಿಜಿಟಲೀಕರಣದ ಮಂತ್ರ ಪಠಿಸುತ್ತಾ ಮಮತಾ ಬ್ಯಾನರ್ಜಿ ಫೆಬ್ರವರಿ 4ರಂದು ದೀದಿರ್ ದೂತ್ ಆ್ಯಪ್ ರಿಲೀಸ್ ಮಾಡಿದ್ದರು. ಮೂರು ದಿನಗಳ ಹಿಂದೆ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಈ ವೇಳೆ ಮೋದಿಪರ ಆ್ಯಪ್ ಬಿಡುಗಡೆ ಮಾಡಿದ್ದರು.
ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿರುವ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕರು,ಕಾರ್ಯಕರ್ತರು ಆ್ಯಪ್ ಡೌನ್ಲೋಡ್ ಮಾಡುವಂತೆ ಕೋರುತ್ತಿದ್ದಾರೆ. ಅಷ್ಟೇ ಅಲ್ಲ, ಈ ಆ್ಯಪ್ನ ವಿಶೇಷತೆ ಹಾಗೂ ಆ್ಯಪ್ ಬಳಕೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ, ಕೆಲವೇ ದಿನಗಳಲ್ಲಿ ಈ ಆ್ಯಪ್ಗಳು ಲಕ್ಷಾಂತರ ಡೌನ್ಲೋಡ್ ಕಂಡಿವೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ಐದು ರೂಪಾಯಿ ಊಟ, ‘ಮಾ’ ಯೋಜನೆ ಜಾರಿಗೆ ತಂದ ಮಮತಾ
ರಾಜಕೀಯ ಪಂಡಿತ ಪ್ರಶಾಂತ್ ಕಿಶೋರ್ ಈ ಬಾರಿ ಟಿಎಂಸಿ ಪ್ರಚಾರಕ್ಕೆ ತಂತ್ರಗಾರಿಕೆ ರೂಪಿಸಿದ್ದಾರೆ. ಅವರು ಈ ಆ್ಯಪ್ ಐಡಿಯಾದ ಜನಕ. ಈಗ ಬಿಜೆಪಿ ಕೂಡ ತಾವೇನು ಹಿಂದೆ ಬಿದ್ದಿಲ್ಲ ಎನ್ನುವ ರೀತಿಯಲ್ಲಿ ಆ್ಯಪ್ ಪರಿಚಯಿಸಿದೆ.
ಪಶ್ಚಿಮ ಬಂಗಾಳ ಚುನಾವಣೆಗೂ ಮೊದಲೇ ಮಮತಾಗೆ ಶಾಕ್ ಮೇಲೆ ಶಾಕ್ ಉಂಟಾಗುತ್ತಿದೆ. ಟಿಎಂಸಿ ಸಾಕಷ್ಟು ನಾಯಕರು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇದು ಮಮತಾಗೆ ಭಾರೀ ಹಿನ್ನಡೆ ಉಂಟು ಮಾಡುತ್ತಿದೆ.
Published On - 2:10 pm, Mon, 15 February 21