Uttarakhand Glacier Burst: ಈ ದುರಂತದಲ್ಲಿ ಕೇವಲ ಮನುಷ್ಯರು ಮಾತ್ರ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿಲ್ಲ. ಬದಲಿಗೆ ಅಲ್ಲಿ ವಾಸಿಸುತ್ತಿದ್ದ ಪ್ರಾಣಿ, ಪಕ್ಷಿಗಳು ಸಹ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ತೀರದ ನೋವಿನೊಂದಿಗೆ, ಕಳೆದುಕೊಂಡವರನ್ನು ಹುಡುಕುತ್ತಾ ದಿನ ಕಳೆಯುತ್ತೀವೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮ ಕುಸಿತ ದುರಂತದಲ್ಲಿ ಇಲ್ಲಿಯವರೆಗೆ 54 ಮೃತದೇಹಗಳನ್ನು ಹೊರತೆಗೆಯಲಾಗಿದೆ.
1 / 7
ಸೋಮವಾರ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 174 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚಮೋಲಿ ಪೊಲೀಸರು ಹೇಳಿದ್ದಾರೆ.
2 / 7
ಆದರೆ ಈ ದುರಂತದಲ್ಲಿ ಕೇವಲ ಮನುಷ್ಯರು ಮಾತ್ರ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿಲ್ಲ. ಬದಲಿಗೆ ಅಲ್ಲಿ ವಾಸಿಸುತ್ತಿದ್ದ ಪ್ರಾಣಿ ಪಕ್ಷಿಗಳು ಸಹ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ತೀರದ ನೋವಿನೊಂದಿಗೆ, ಕಳೆದುಕೊಂಡವರನ್ನು ಹುಡುಕುತ್ತಾ ದಿನ ಕಳೆಯುತ್ತೀವೆ.
3 / 7
ಹಿಮ ಕುಸಿತ ದುರಂತದಲ್ಲಿ ಪ್ರಾಣಿಗಳು ಸಹ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ. ದುರಂತ ನಡೆಯುವ ಜಾಗದಲ್ಲಿ ವಾಸಿಸುತ್ತಿದ್ದ ಈ ನಾಯಿ ತನ್ನ ಮೂರು ಮಕ್ಕಳನ್ನು ಹುಡುಕುತ್ತಾ 7 ದಿನಗಳ ಕಾಲ ಅಲ್ಲಿಯೇ ಸುತ್ತಾಡುತ್ತಿದೆ.
4 / 7
ಸತತ 7 ದಿನಗಳಿಂದ ಊಟ ಮುಟ್ಟದೆ ತನ್ನ ಮರಿಗಳಿಗಾಗಿ ಜೀವ ಸವೆಸುತ್ತಿರುವ ಈ ನಾಯಿ, ತನ್ನ ಮರಿಗಳು ಇದ್ದ ಜಾಗದಲ್ಲಿ ಪದೇ ಪದೇ ಓಡಾಡುತ್ತಾ, ಕಳೆದುಹೋಗಿರುವ ತನ್ನ ಮರಿಗಳಿಗಾಗಿ ಕಣ್ಣೀರು ಸುರಿಸುತ್ತಿದೆ.
5 / 7
ತಪೋವನ್ ಸುರಂಗದ ಬಳಿ ತನ್ನ ಮರಿಗಳಿಗೆ ಜನ್ಮ ನೀಡಿದ್ದ ಈ ನಾಯಿ, ದುರಂತದ ನಡೆದ ನಂತರ ಹಗಲು ರಾತ್ರಿ ತನ್ನ ಮಕ್ಕಳಿಗಾಗಿ ಹಂಬಲಿಸುತ್ತಿದೆ.
6 / 7
ಈ ನಾಯಿಯ ಮೂರು ಮಕ್ಕಳ ಬಹುಶಃ ದುರಂತದ ಅವಶೇಷಗಳ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದೆ.