Disha Ravi: ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡದೆ ದಿಶಾ ರವಿಯನ್ನು ಅರೆಸ್ಟ್ ಮಾಡಿದ ದೆಹಲಿ ಪೊಲೀಸರು; ಮನೆಯ ಬಳಿ ಏನೇನೆಲ್ಲಾ ಆಯ್ತು?

ಬೆಂಗಳೂರು: ರೈತರ ಪ್ರತಿಭಟನೆಗೆ ಸಂಬಂಧಪಟ್ಟಂತೆ ಸ್ವೀಡಿಶ್​ ಪರಿಸರವಾದಿ ಗ್ರೇಟಾ​ ಥನ್​ಬರ್ಗ್​ ಹಂಚಿಕೊಂಡಿದ್ದ ಟೂಲ್​ಕಿಟ್ ಪ್ರಸಾರದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೆಂಗಳೂರಿನ ಫ್ರೈಡೇ ಫಾರ್ ಫ್ಯೂಚರ್ ಸಂಸ್ಥೆ ಸಹ ಸಂಸ್ಥಾಪಕಿ ದಿಶಾ ರವಿಯವರನ್ನು ದೆಹಲಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಶನಿವಾರ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿರುವ ದಿಶಾ ರವಿ ಮನೆಗೆ ತೆರಳಿದ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದು ಫ್ಲೈಟ್​​ನಲ್ಲಿ ದೆಹಲಿಗೆ ಕರೆದುಕೊಂಡು ಹೋಗಿದ್ದಲ್ಲದೆ, ಪಟಿಯಾಲ ಕೋರ್ಟ್​ಗೂ ಹಾಜರುಪಡಿಸಿದ್ದರು. ದಿಶಾ ರವಿಯನ್ನು ಐದು ದಿನ ದೆಹಲಿ ಪೊಲೀಸರ ವಶಕ್ಕೆ ನೀಡಿ ಕೋರ್ಟ್​ ಆದೇಶ […]

Disha Ravi: ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡದೆ ದಿಶಾ ರವಿಯನ್ನು ಅರೆಸ್ಟ್ ಮಾಡಿದ ದೆಹಲಿ ಪೊಲೀಸರು; ಮನೆಯ ಬಳಿ ಏನೇನೆಲ್ಲಾ ಆಯ್ತು?
ದಿಶಾ ರವಿ
Follow us
Lakshmi Hegde
|

Updated on: Feb 15, 2021 | 2:24 PM

ಬೆಂಗಳೂರು: ರೈತರ ಪ್ರತಿಭಟನೆಗೆ ಸಂಬಂಧಪಟ್ಟಂತೆ ಸ್ವೀಡಿಶ್​ ಪರಿಸರವಾದಿ ಗ್ರೇಟಾ​ ಥನ್​ಬರ್ಗ್​ ಹಂಚಿಕೊಂಡಿದ್ದ ಟೂಲ್​ಕಿಟ್ ಪ್ರಸಾರದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೆಂಗಳೂರಿನ ಫ್ರೈಡೇ ಫಾರ್ ಫ್ಯೂಚರ್ ಸಂಸ್ಥೆ ಸಹ ಸಂಸ್ಥಾಪಕಿ ದಿಶಾ ರವಿಯವರನ್ನು ದೆಹಲಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಶನಿವಾರ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿರುವ ದಿಶಾ ರವಿ ಮನೆಗೆ ತೆರಳಿದ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದು ಫ್ಲೈಟ್​​ನಲ್ಲಿ ದೆಹಲಿಗೆ ಕರೆದುಕೊಂಡು ಹೋಗಿದ್ದಲ್ಲದೆ, ಪಟಿಯಾಲ ಕೋರ್ಟ್​ಗೂ ಹಾಜರುಪಡಿಸಿದ್ದರು. ದಿಶಾ ರವಿಯನ್ನು ಐದು ದಿನ ದೆಹಲಿ ಪೊಲೀಸರ ವಶಕ್ಕೆ ನೀಡಿ ಕೋರ್ಟ್​ ಆದೇಶ ಹೊರಡಿಸಿದೆ.

ಆದರೆ ಒಂದು ಮಹತ್ವದ ಸಂಗತಿಯೆಂದರೆ ಇಷ್ಟೆಲ್ಲ ಆಗುವವರೆಗೂ ಬೆಂಗಳೂರು ನಗರ ಪೊಲೀಸರಿಗೆ ಈ ಬಗ್ಗೆ ಏನೇನೂ ಗೊತ್ತಿರಲೇ ಇಲ್ಲ !… ದಿಶಾ ರವಿಯನ್ನು ಅರೆಸ್ಟ್ ಮಾಡಲು ಸಕಲ ಸಿದ್ಧತೆಯೊಂದಿಗೆ ಬಂದಿದ್ದ ದೆಹಲಿ ಪೊಲಿಸರು ಈ ಬಗ್ಗೆ ಸ್ಥಳೀಯ ಠಾಣೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡರಲಿಲ್ಲ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ದಿಶಾ ರವಿ ಚಲನವಲನದ ಬಗ್ಗೆ ದೆಹಲಿ ಪೊಲೀಸರು ಗಮನ ಇಟ್ಟಿದ್ದರು. ಶನಿವಾರ ಮಧ್ಯಾಹ್ನ 12ಗಂಟೆ ಹೊತ್ತಿಗೆ ದೆಹಲಿಯಿಂದ ಐವರು ಪೊಲೀಸ್ ಸಿಬ್ಬಂದಿ ಆಗಮಿಸಿದ್ದರು. ಇವರಲ್ಲಿ ಇಬ್ಬರು ಮಹಿಳಾ ಪೊಲೀಸರು ಇದ್ದರು. ಇವರು ಬೇರೆಲ್ಲೂ ಹೋಗದೆ ಸೀದಾ ದಿಶಾ ವಾಸವಾಗಿರುವ ಚಿಕ್ಕಬಾಣಾವರದ ಅಬ್ಬಿಗೇರೆಗೆ ತೆರಳಿದರು. ಹಾಗೇ ದಿಶಾ ಮನೆಯ ಬಳಿ ಹೋದ ದೆಹಲಿ ಪೊಲೀಸರು ಒಮ್ಮೆಲೇ ಆಕೆಯ ಮನೆಗೆ ನುಗ್ಗಲಿಲ್ಲ. ಬದಲಿಗೆ ದಿಶಾ ಫೋನ್ ಟ್ರ್ಯಾಕ್​ ಮಾಡುವ ಮೂಲಕ, ಅವರು ಮನೆಯಲ್ಲೇ ಇದ್ದಾರಾ? ಎಂಬುದನ್ನು ಪರಿಶೀಲನೆ ಮಾಡಿಕೊಂಡಿದ್ದಾರೆ.

ಅದರಲ್ಲೂ ಮೊದಲು ಮೂವರು ಪೊಲೀಸರು ದಿಶಾ ಮನೆ ಇರುವ ಏರಿಯಾಕ್ಕೆ ತೆರಳಿದ್ದಾರೆ. ಆಕೆಯ ಮನೆ ಎಲ್ಲಿದೆ ಎಂಬುದನ್ನೂ ಸರಿಯಾಗಿ ನೋಡಿಕೊಂಡಿದ್ದಾರೆ. ಸುತ್ತಮುತ್ತ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಂತರ ಅಲ್ಲಿಂದ ವಾಪಸ್​ ಹೋಗಿ, ತಮ್ಮೊಂದಿಗೆ ಬಂದಿದ್ದ ಇಬ್ಬರು ಮಹಿಳಾ ಸಿಬ್ಬಂದಿಯನ್ನು ಕರೆದುಕೊಂಡು ಬಂದು ದಿಶಾ ಮನೆಯ ಬಾಗಿಲು ಬಡಿದಿದ್ದಾರೆ. ಇದೆಲ್ಲ ಪ್ರಕ್ರಿಯೆಗಳು ಮುಗಿದು, ಆಕೆಯನ್ನು ಅರೆಸ್ಟ್ ಮಾಡುವ ಹೊತ್ತಿಗೆ ಸಂಜೆ ಸುಮಾರು 5ಗಂಟೆಯಾಗಿತ್ತು ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

ಮನೆಯೊಳಗೆ ಬಿಡಲಿಲ್ಲ ಇನ್ನು ಮನೆಯ ಎದುರು ಬಂದ ಪೊಲೀಸರನ್ನು ದಿಶಾ ಮತ್ತು ಆಕೆಯ ತಾಯಿ ಒಮ್ಮೆಲೇ ಮನೆಯೊಳಕ್ಕೆ ಬಿಡಲಿಲ್ಲ. ನಂತರ ದೆಹಲಿ ಪೊಲೀಸರು ತಮ್ಮ ಐಡಿ ಕಾರ್ಡ್​ ತೋರಿಸಿದ್ದಾರೆ. ಹಾಗೇ, ದೆಹಲಿ ಕೋರ್ಟ್​ ನೀಡಿದ್ದ ಅರೆಸ್ಟ್ ವಾರೆಂಟ್ ಪ್ರತಿಯನ್ನೂ ದಿಶಾಗೆ ತೋರಿಸಿದ್ದಾರೆ. ಇಷ್ಟಾದ ಮೇಲೆ ಪೊಲೀಸರನ್ನು ಮನೆಯೊಳಗೆ ಬಿಡಲಾಗಿದೆ ಎನ್ನಲಾಗಿದೆ. ಹಾಗೇ, ದಿಶಾರನ್ನು ಬಂಧಿಸಿದ ನಂತರ ಪೊಲೀಸರು ಆಕೆಯ ಲ್ಯಾಪ್​ಟಾಪ್​, ಮೊಬೈಲ್​ಗಳನ್ನೂ ಪರಿಶೀಲನೆ ಮಾಡಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳನ್ನೂ ಇನ್ನೊಬ್ಬ ಪೊಲೀಸ್​ ಸಿಬ್ಬಂದಿ ರೆಕಾರ್ಡ್​ ಮಾಡಿದ್ದಾರೆ. ತಮ್ಮ ಮಗಳು ದಿಶಾರನ್ನು ದೆಹಲಿ ಕ್ರೈಂ ಬ್ರ್ಯಾಂಚ್​ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂಬ ದಾಖಲೆಗೆ ದಿಶಾ ತಾಯಿ ಮಂಜುಳಾ ಬಳಿ ಸಹಿ ಕೂಡ ಮಾಡಿಸಿಕೊಂಡಿದ್ದಾರೆ.

ಇಷ್ಟೆಲ್ಲ ಆಗಿ ದಿಶಾರನ್ನು ಏರ್​ಪೋರ್ಟ್​ಗೆ ಕರೆದುಕೊಂಡು ಹೋಗಿ, ಅಲ್ಲಿಂದ ದೆಹಲಿಗೆ ತೆರಳಿದ ಬಳಿಕವಷ್ಟೇ, ಸೋಲದೇವನಹಳ್ಳಿ ಠಾಣೆಗೆ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅದಾದ ನಂತರ ಹೊಯ್ಸಳ ಪೊಲೀಸ್​ ಟೀಂ ದಿಶಾ ಮನೆಯ ಬಳಿ ಧಾವಿಸಿದೆ.

Disha Ravi: ಟೂಲ್​ ಕಿಟ್​ ಪ್ರಕರಣ; ಐದು ದಿನ ಪೊಲೀಸ್​ ಕಸ್ಟಡಿಗೆ ದಿಶಾ ರವಿ