AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಪ್ ಮಾಡಿ, ನಾಲಿಗೆ ಕಟ್ ಮಾಡಿದ ಪಾಪಿಗಳಿಗೆ ಶಿಕ್ಷೆ ಯಾವಾಗ?

ದೆಹಲಿ: ಅತ್ಯಾಚಾರ.. ಬಲಾತ್ಕಾರ.. ಮಾನಭಂಗ.. ಶೀಲಭಂಗ ಅನ್ನೋ ಪದಗಳು ನಮ್ಮ ದೇಶದ್ಲಲಿ ಇತ್ತೀಚೆಗೆ ಕಾಮನ್ ಆಗ್ಬಿಟ್ಟಿವೆ. ದೇಶದಲ್ಲಿ ಎಂತಹದ್ದೇ ದೊಡ್ಡ ಕಾನೂನು ಜಾರಿಗೆ ತಂದ್ರೂ ನಾಯಿಕೊಡೆಗಳಂತೆ ಕಾಮಿಗಳು ತಲೆ ಎತ್ತುತ್ತಲೇ ಇದ್ದಾರೆ. ಅಟ್ಟಹಾಸ ಮೆರೆಯುತ್ತಿದ್ದಾರೆ. ಗಲ್ಲು, ಶೂಟ್‌ಔಟ್‌ನಂತಹ ಶಿಕ್ಷೆಗಳಿಗೆ ಕಾಮಿಗಳು ಬಗ್ಗುತ್ತಿಲ್ಲ. ಅದರಲ್ಲೂ ಉತ್ತರಪ್ರದೇಶದಲ್ಲಿ ಕಾಮುಕರು ಅಟ್ಟಹಾಸ ಮೆರೆದಿದ್ದು, ನಾಗರೀಕ ಸಮಾಜವೇ ನಲುಗಿದೆ. ಭಯಾನಕ ರೇಪ್ ಅಂಡ್ ಮರ್ಡರ್‌ಗೆ ಮನುಷ್ಯಕುಲವೇ ತಲೆತಗ್ಗಿಸುವಂತೆ ಮಾಡಿದೆ‌. 15 ದಿನ ಜೀವನ್ಮರಣ ಹೋರಾಟ ಮಾಡಿ ಪ್ರಾಣ ಬಿಟ್ಟ ಸಂತ್ರಸ್ತೆ! ನಿಜಕ್ಕೂ ರತ್ತ […]

ರೇಪ್ ಮಾಡಿ, ನಾಲಿಗೆ ಕಟ್ ಮಾಡಿದ ಪಾಪಿಗಳಿಗೆ ಶಿಕ್ಷೆ ಯಾವಾಗ?
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Oct 01, 2020 | 8:08 AM

Share

ದೆಹಲಿ: ಅತ್ಯಾಚಾರ.. ಬಲಾತ್ಕಾರ.. ಮಾನಭಂಗ.. ಶೀಲಭಂಗ ಅನ್ನೋ ಪದಗಳು ನಮ್ಮ ದೇಶದ್ಲಲಿ ಇತ್ತೀಚೆಗೆ ಕಾಮನ್ ಆಗ್ಬಿಟ್ಟಿವೆ. ದೇಶದಲ್ಲಿ ಎಂತಹದ್ದೇ ದೊಡ್ಡ ಕಾನೂನು ಜಾರಿಗೆ ತಂದ್ರೂ ನಾಯಿಕೊಡೆಗಳಂತೆ ಕಾಮಿಗಳು ತಲೆ ಎತ್ತುತ್ತಲೇ ಇದ್ದಾರೆ. ಅಟ್ಟಹಾಸ ಮೆರೆಯುತ್ತಿದ್ದಾರೆ. ಗಲ್ಲು, ಶೂಟ್‌ಔಟ್‌ನಂತಹ ಶಿಕ್ಷೆಗಳಿಗೆ ಕಾಮಿಗಳು ಬಗ್ಗುತ್ತಿಲ್ಲ. ಅದರಲ್ಲೂ ಉತ್ತರಪ್ರದೇಶದಲ್ಲಿ ಕಾಮುಕರು ಅಟ್ಟಹಾಸ ಮೆರೆದಿದ್ದು, ನಾಗರೀಕ ಸಮಾಜವೇ ನಲುಗಿದೆ. ಭಯಾನಕ ರೇಪ್ ಅಂಡ್ ಮರ್ಡರ್‌ಗೆ ಮನುಷ್ಯಕುಲವೇ ತಲೆತಗ್ಗಿಸುವಂತೆ ಮಾಡಿದೆ‌.

15 ದಿನ ಜೀವನ್ಮರಣ ಹೋರಾಟ ಮಾಡಿ ಪ್ರಾಣ ಬಿಟ್ಟ ಸಂತ್ರಸ್ತೆ! ನಿಜಕ್ಕೂ ರತ್ತ ಕೊತ ಕೊತ ಕುದಿಯುತ್ತೆ. ಪಾಪಿಗಳು ಕೈಗೆ ಸಿಕ್ಕರೇ ನಾವು ಸಾಯಿಸಿ ಬಿಡೋಣ ಅನ್ನುವಷ್ಟು ಸಿಟ್ಟು ಬರುತ್ತೆ. ನಮ್ ದೇಶದ ಕಾನೂನು, ವ್ಯವಸ್ಥೆ ಮೇಲೆ ಅಸಹ್ಯ ಹುಟ್ಟುತ್ತೆ. ಹೌದು, ಸೆ .14ರಂದು ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯಲ್ಲಿ ಅನಾಗರೀಕ ಘಟನೆ ಸಂಭವಿಸಿತ್ತು. ನಾಲ್ವರು ಕಾಮ ಪಿಶಾಚಿಗಳು 18 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ದರು.

ಗ್ಯಾಂಗ್ ರೇಪ್ ಬಳಿಕ ಉಸಿರುಕಟ್ಟಿಸುವ ಪ್ರಯತ್ನ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಕೆಯ ನಾಲಗೆ ಕೂಡ ಕತ್ತರಿಸಿ, ಬೆನ್ನು ಮೂಳೆ ಮುರಿದಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಆಸ್ಪತ್ರೆಯಿಂದ ಏಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೊನ್ನೆ ಸಂತ್ರಸ್ತೆ ಮೃತಪಟ್ಟಿದ್ದಾಳೆ.

ಕುಟುಂಬಸ್ಥರಿಗೆ ಶವ ಕೊಡದೆ ಸುಟ್ಟ ಪೊಲೀಸರು! ಯುವತಿಯ ಮೇಲಿನ ಅತ್ಯಾಚಾರ ಖಂಡಿಸಿ ಉತ್ತರಪ್ರದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ‌. ಅನೇಕ ದಲಿತ ಸಂಘಟನೆಯವರು ಮತ್ತು ಆಕೆಯ ಕುಟುಂಬಸ್ಥರು ಆಸ್ಪತ್ರೆಯ ಎದುರೇ ಪ್ರತಿಭಟನೆ ನಡೆಸಿದ್ದಾರೆ. ಈ ಮಧ್ಯೆ ಪೊಲೀಸ್ರು ಮಾತ್ರ ಯುವತಿಯ ಶವ ಕುಟುಂಬಸ್ಥರಿಗೆ ಕೊಡದೆ ಶವವನ್ನು ಸುಟ್ಟುಹಾಕಿದ್ದಾರೆ. ನಿನ್ನೆ ಬೆಳಗ್ಗಿನ ಜಾವ 2-30ಕ್ಕೆ ಪೊಲೀಸರು ನೇತೃತ್ವದಲ್ಲಿಯೇ ಶವ ಸಂಸ್ಕಾರ ಮಾಡಲಾಗಿದೆ‌. ಪೊಲೀಸರ ನಿರ್ಧಾರಕ್ಕೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಅತ್ಯಾಚಾರ ನಡೆದು 15 ದಿನಗಳ ಬಳಿಕ ತನಿಖೆಗೆ ಆದೇಶ ಗ್ಯಾಂಗ್ ರೇಪ್ ನಡೆದು 14 ದಿನವಾದ್ರೂ ಸಮ್ಮನಿದ್ದ ಸಿಎಂ ಯೋಗಿ ಆದಿತ್ಯನಾಥ್ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ. ಏಳು ದಿನಗಳ ಒಳಗಾಗಿ ತನಿಖೆಯ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಯೋಗಿಗೆ ಪ್ರಧಾನಿ ಫೋನ್‌ ಮಾಡಿ ತರಾಟೆ ಪ್ರಕರಣ ದೇಶಾದ್ಯಂತ ಸುದ್ದಿಯಾಗುತ್ತಿದೆ. ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಿವೆ. ಈ ಮಧ್ಯೆ ನಿನ್ನೆ ಸಿಎಂ ಯೋಗಿ ಆದಿತ್ಯನಾಥ್ ಗೆ ಪ್ರಧಾನಿ ಮೋದಿ ಕರೆ ಮಾಡಿ ತರಾಟೆಗೆ ತೆಗದುಕೊಂಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇನ್ನು ಅತ್ಯಾಚಾರಿಗಳೆಂದು ಗುರುತಿಸಲಾಗಿರುವ ಸಂದೀಪ್, ರಾಮು, ಲವಕುಶ್ ಮತ್ತು ರವಿಯನ್ನ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಮೃತಳ ಕುಟುಂಬಕ್ಕೆ 25 ಲಕ್ಷ ರೂ.ಆರ್ಥಿಕ ನೆರವು. ಶಾಲಾ ಶಿಕ್ಷಕರ ಮಟ್ಟದ ಸರ್ಕಾರಿ ಉದ್ಯೋಗ ನೀಡುವುದಾಗಿ ಯೋಗಿ ಭರವಸೆ ನೀಡಿದ್ದಾರೆ.

ಮಗಳ ರೇಪ್‌ ಌಂಡ್‌ ಮರ್ಡರ್‌ನಿಂದ ಆಘಾತಗೊಂಡಿರೋ ಕುಟಂಬ ಆಕೆಯನ್ನ ನೆನೆದು ಕಣ್ಣೀರಿಡ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗ್ಬೇಕು ಅಂತ ಆಗ್ರಹಿಸಿದೆ. ತಮ್ಮ ಕಾಮದಾಹಕ್ಕೆ ಯುವತಿಗೆ ಚಿತ್ರಹಿಂಸೆ ನೀಡಿ ಅಟ್ಟಹಾಸ ಮೆರೆದು ಜೀವ ಹೋಗುವಂತೆ ಮಾಡಿದ ಪರಮ ಪಾಪಿಗಳಿಗೆ ಅದೆಂಥಾ ಶಿಕ್ಷೆ ಕೊಟ್ರೂ ಕಡಿಮೇನೇ.

Published On - 7:07 am, Thu, 1 October 20