ವಿಡಿಯೋ ಸಾಂಗ್ ಬಿಡುಗಡೆ ಬಗ್ಗೆ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದು, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲೂ ಬಿಡುಗಡೆಗೊಳಿಸುವುದಾಗಿ ಮಾಹಿತಿ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಯುವರತ್ನ ಚಿತ್ರ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದು, ನಾಳೆ ಬಿಡುಗಡೆಯಾಗುತ್ತಿರುವ ಊರಿಗೊಬ್ಬ ರಾಜ ಹಾಡಿಗೆ ರಮ್ಯಾ ಬೆಹರಾ ಜೊತೆಗೆ ಸ್ವತಃ ಪುನೀತ್ ರಾಜ್ಕುಮಾರ್ ಧ್ವನಿಯಾಗಿರುವುದು ಕಾಯುವಿಕೆಗೆ ಮತ್ತಷ್ಟು ಮೆರಗು ತುಂಬಿದೆ.
ಊರಿಗೊಬ್ಬ ರಾಜ ಹಾಡಿನ ಸಾಹಿತ್ಯವನ್ನು ಚಿತ್ರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರೇ ರಚಿಸಿದ್ದು, ತಮನ್.ಎಸ್ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಊರಿಗೊಬ್ಬ ರಾಜ ಮತ್ತು ತೆಲುಗಿನಲ್ಲಿ ಊರಿಕೊಕ್ಕ ರಾಜ ಹಾಡು ಬಿಡುಗಡೆಯಾಗುತ್ತಿದ್ದು, ಕನ್ನಡದ ಹಾಡು ಹೊಂಬಾಳೆ ಯೂಟ್ಯೂಬ್ ಚಾನೆಲ್ನಲ್ಲಿ ತೆರೆಕಾಣಲಿದೆ. ಯುವರತ್ನ ಸಿನಿಮಾದಲ್ಲಿ ಪುನೀತ್ ಜೊತೆಗೆ ಧನಂಜಯ್, ಸಯೇಶ ಸೈಗಲ್, ವಸಿಷ್ಠ ಸಿಂಹ, ದಿಗಂತ್, ಸೋನು ಗೌಡ, ರಂಗಾಯಣ ರಘು, ಸುಧಾರಾಣಿ, ಸಾಯಿಕುಮಾರ್, ಅಚ್ಯುತ್ ಕುಮಾರ್, ಕುರಿ ಪ್ರತಾಪ್, ರಾಧಿಕಾ ಶರತ್ ಕುಮಾರ್, ಪ್ರಕಾಶ್ ಬೆಳವಾಡಿ, ಪ್ರಕಾಶ್ ರಾಜ್, ಗುರುದತ್, ರವಿಶಂಕರ್ ಗೌಡ, ರಾಜೇಶ್ ನಟರಂಗ್, ಅವಿನಾಶ್, ನಾಗಭೂಷಣ್, ತಾರಕ್ ಪೊನ್ನಪ್ಪ, ಯಮುನಾ ಶ್ರೀನಿಧಿ, ಸುಧಿ, ಅರುಣ್ ಗೌಡ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.
ಊರಿಗೊಬ್ಬ ರಾಜ
ಊರಿಕೊಕ್ಕ ರಾಜ (ತೆಲುಗು ಪೋಸ್ಟರ್)
Get ready to groove for a fun filled video song #OorigobbaRaaja/#OorikokkaRaaja on Feb 25th at 3:33 PM.#Yuvarathnaa @PuneethRajkumar @VKiragandur @hombalefilms @MusicThaman @sayyeshaa @Dhananjayaka @AlwaysJani @iamRamyaBehara @Karthik1423 #HombaleMusic pic.twitter.com/cCMGM49FTT
— Santhosh Ananddram (@SanthoshAnand15) February 23, 2021
ಇದನ್ನೂ ಓದಿ: ಪ್ರಿಯಾಂಕ ಉಪೇಂದ್ರ ನಟನೆಯ ‘1980 ಟೀಸರ್’ ರಿಲೀಸ್
ಬ್ರಾಹ್ಮಣ ಸಮುದಾಯಕ್ಕೆ ನೋವುಂಟುಮಾಡಿರುವ ದೃಶ್ಯವನ್ನು ನಾಳೆಯೊಳಗೆ ತೆಗೆಯುತ್ತೇವೆ: ಪೊಗರು ನಿರ್ದೇಶಕ ನಂದಕಿಶೋರ್