Pogaru: ಫಿಲ್ಮ್ ಚೇಂಬರ್‌ಗೆ ಧ್ರುವ ಅಭಿಮಾನಿಗಳ ಮುತ್ತಿಗೆ
Dhruva Sarja Fans: ಯುಟ್ಯೂಬರ್ ಚಿರು ಭಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳು ಧ್ರುವ ಹಾಗೂ ಪೊಗರು ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾನೆ. ಅವನು ಫಿಲ್ಮ್ ಚೇಂಬರ್‌ಗೆ ಬಂದು ಕ್ಷಮೆ ಕೇಳಬೇಕು. ಇಲ್ಲ ಎಂದರೆ ಚಿರು ಭಟ್ ಮನೆಗೆ ಮುತ್ತಿಗೆ ಹಾಕುತ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಪೊಗರು ಚಿತ್ರದ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಿದ ಹಿನ್ನೆಲೆ ಫಿಲ್ಮ್ ಚೇಂಬರ್‌ಗೆ ಧ್ರುವ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಪಾತ್ರಕ್ಕೆ ತಕ್ಕಂತೆ ಸಿನಿಮಾ ಮಾಡಬೇಕಾಗುತ್ತದೆ. ಅದು ಬೇಕಂತ ಮಾಡಿರೋದಲ್ಲ. ಎಲ್ಲೋ ಒಂದು ಕಡೆ ತಪ್ಪು ಆಗಿರಬಹುದು. ಅವರು ಕ್ಷಮೆ ಕೂಡ ಕೇಳಿದ್ದಾರೆ. ಆದರೆ ಈ ಸಣ್ಣ ಪುಟ್ಟ ತುಣುಕು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ ಪ್ರಚಾರ ಮಾಡಲಾಗುತ್ತಿದೆ. ನಾಲ್ಕು ವರ್ಷ ಸಿನಿಮಾ ತಂಡ ಕಷ್ಟ ಪಟ್ಟಿದೆ. ಬ್ರಾಹ್ಮಣ ಸಂಘದವರು ಎಂದು ಇನ್ನು ಮುಂದಾದರೂ ಈ ಬಗ್ಗೆ ಚಕಾರ ಎತ್ತಬಾರದು ಎಂದು ಧ್ರುವ ಅಭಿಮಾನಿಗಳು ವಿನಂತಿಸಿಕೊಂಡಿದ್ದಾರೆ.
ಕ್ಷಮೆ ಕೇಳಿದ ಮೇಲೂ ಚಿತ್ರದ ಬಗ್ಗೆ ಅಪ ಪ್ರಚಾರ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಧ್ರುವ ಸರ್ಜಾ ಅಭಿಮಾನಿಗಳು ನಿರ್ದೇಶಕ ರವಿ ಶ್ರೀವತ್ಸವ ವಿರುದ್ಧ ಗರಂ ಆಗಿದ್ದಾರೆ. ಅಲ್ಲದೇ ಯುಟ್ಯೂಬರ್ ಚಿರು ಭಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳು ಧ್ರುವ ಹಾಗೂ ಪೊಗರು ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾನೆ. ಅವನು ಫಿಲ್ಮ್ ಚೇಂಬರ್‌ಗೆ ಬಂದು ಕ್ಷಮೆ ಕೇಳಬೇಕು. ಇಲ್ಲ ಎಂದರೆ ಚಿರು ಭಟ್ ಮನೆಗೆ ಮುತ್ತಿಗೆ ಹಾಕುತ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್.ಎಂ ಸುರೇಶ್ ಚಿರು ಭಟ್ಗೆ ಕರೆ ಮಾಡಿದ್ದಾರೆ.
ವಿವಾದವೇನು? ಭಾರಿ ನಿರೀಕ್ಷೆಯಲ್ಲಿದ್ದ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಫೆಬ್ರವರಿ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ವಿವಾದಕ್ಕೂ ಗುರಿಯಾಗಿತ್ತು. ಈ ಚಿತ್ರದಲ್ಲಿ ಅರ್ಚಕರನ್ನು ಹಾಗೂ ಪುರೋಹಿತರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿತ್ತು. ಈ ರೀತಿ ಬ್ರಾಹ್ಮಣರನ್ನು ಚಿತ್ರದಲ್ಲಿ ಅವಹೇಳನಕಾರಿಯಾಗಿ ತೋರಿಸುವುದು ಸರಿಯಲ್ಲ. ಅಂತಹ ದೃಶ್ಯಗಳನ್ನು ತಕ್ಷಣವೇ ತೆಗೆಯಬೇಕೆಂದು ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಆಗ್ರಹಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಪೊಗರು ಸಿನಿಮಾ ಕುರಿತು ಹಲವರು ಕಿಡಿಕಾರಿದ್ದರು.
ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ನಿರ್ದೇಶಕ ನಂದ ಕಿಶೋರ್ ಯಾವುದೇ ಸಮಾಜದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಉದ್ದೇಶ ನಮಗಿಲ್ಲ. ತಿಳಿದೇ ತಪ್ಪಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ ಎಂದು ವಿಡಿಯೋವೊಂದರಲ್ಲಿ ತಿಳಿಸಿದ್ದರು.
ಬ್ರಾಹ್ಮಣ ಸಮುದಾಯದ ಕುರಿತು ವಿವಾದ ದೃಶ್ಯಗಳು ಇದ್ದ ಹಿನ್ನೆಲೆ ಸಮುದಾಯದವರಿಂದ ತೀವ್ರ ಪ್ರತಿಭಟನೆ ನಡೆದಿತ್ತು. ಸುಮುದಾಯದ ಒತ್ತಾಯದ ಮೇರೆಗೆ ಪೊಗರು ಚಿತ್ರ ತಂಡ ವಿವಾದಿತ ದೃಶ್ಯಗಳಿಗೆ ಕತ್ತರಿ ಹಾಕಿದೆ. ಆದರೆ ಇಂದು ಆಕ್ಷೇಪ ವ್ಯಕ್ತಪಡಿಸಿದ ಧ್ರುವ ಸರ್ಜಾ ಅಭಿಮಾನಿಗಳು ಈ ರೀತಿ ಪಾತ್ರಕ್ಕೆ ತಕ್ಕಂತೆ ಸಿನಿಮಾ ಮಾಡಬೇಕಾಗುತ್ತದೆ. ಅದು ಬೇಕಂತ ಮಾಡಿರೋದಲ್ಲ. ಎಲ್ಲೋ ಒಂದು ಕಡೆ ತಪ್ಪು ಆಗಿರಬಹುದು. ಅವರು ಕ್ಷಮೆ ಕೂಡ ಕೇಳಿದ್ದಾರೆ. ಆದರೆ ಈ ಸಣ್ಣ ಪುಟ್ಟ ತುಣುಕು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ ಪ್ರಚಾರ ಮಾಡಲಾಗುತ್ತಿದೆ. ಇದು ತಪ್ಪು ಎಂದು ಫಿಲ್ಮ್ ಚೇಂಬರ್‌ಗೆ ಮುತ್ತಿಗೆ ಹಾಕಿದ್ದಾರೆ.
ತಮಿಳುನಾಡಿನಿಂದ ಬಂದ ಅಭಿಮಾನಿಗಳು ಧ್ರುವ ಸರ್ಜಾ ಅವರ ಬಗ್ಗೆ ಅಪ ಪ್ರಚಾರ ಮಾಡಿರುವ ಚಿರು ಭಟ್ ಕ್ಷಮೆ ಕೇಳಬೇಕೆಂದು ತಮಿಳುನಾಡಿನ ಅಭಿಮಾನಿಗಳು ಆಗ್ರಹಿಸಿದ್ದಾರೆ. ಆಗಮಿಸಿದ ಸುಮಾರು 40 ಕ್ಕೂ ಹೆಚ್ಚು ತಮಿಳುನಾಡಿನ ಅಭಿಮಾನಿಗಳು ತಮಿಳುನಾಡಿನಲ್ಲಿ ಕನ್ನಡ ಪೊಗರು ಚಿತ್ರವನ್ನು ಭರ್ಜರಿಯಾಗಿ ರಿಲೀಸ್ ಮಾಡಿದ್ದೇವೆ. ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಮಯದಲ್ಲಿ ಚಿತ್ರದ ಬಗ್ಗೆ ಅಪ ಪ್ರಚಾರ ಮಾಡಬಾರದೆಂದು ಹೇಳಿದರು.
ಇದನ್ನೂ ಓದಿ
Pogaru | ‘ಪೊಗರು’ ಸಿನಿಮಾ ವಿವಾದಕ್ಕೆ ತೆರೆ: ಚಿತ್ರದಲ್ಲಿನ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ
Pogaru | ಹಿಂದೂಗಳನ್ನ ಅವಮಾನಿಸೋದು ಫ್ಯಾಷನ್ ಆಗಿಬಿಟ್ಟಿದೆ -ಪೊಗರು ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶ
Published On - 12:36 pm, Wed, 24 February 21